Onlyfansನಲ್ಲಿ ವಧುವಿನ ಖಾತೆ! ಈ ಹುಡ್ಗಿ ಜೊತೆ ಮದ್ವೆಯೇ ಬೇಡವೆಂದ ವರ!

ಓನ್ಲಿ ಫ್ಯಾನ್ಸ್ ಅನ್ನೋದು ಆನ್‌ಲೈನ್ ಪ್ಲಾಟ್‌ಫಾರ್ಮ್. ಜನರು ಮಾಸಿಕ ಚಂದಾದಾರಿಕೆ ಪಡೆಯಬೇಕು ಇದಕ್ಕೆ. ಈ ತಾಣದಲ್ಲಿ ವಯಸ್ಕರ ವಿಷಯ ಜನಪ್ರಿಯವಾಗಿದ್ದು, ಒಂದು ನಿಶ್ಚಿತಾರ್ಥ ಮುರಿದು ಬೀಳುವಂತೆ ಮಾಡಿದೆ. 
 

Wedding Called Off After Woman Exposes Brides Onlyfans Account roo

ಸತ್ಯ ಯಾವಾಗ್ಲೂ ಕಹಿಯಾಗಿರುತ್ತದೆ. ಹಾಗೇ ಅದು ಹೊರಬರುವುದು ಕೂಡ ಕೊನೆ ಗಳಿಗೆಯಲ್ಲಿ. ಅನೇಕ ಬಾರಿ ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಟ್ಟ ವ್ಯಕ್ತಿ ಎಲ್ಲರ ಮುಂದೆ ವಿಲನ್ ಆಗ್ತಾನೆ. ಹಳೆಯ ಓನ್ಲಿ ಫ್ಯಾನ್ಸ್ ಖಾತೆಯನ್ನು ಬಹಿರಂಗಪಡಿಸುವ ಮೂಲಕ ತನ್ನ ಅತ್ತಿಗೆಯಾಗಬೇಕಿದ್ದವಳ ನಿಶ್ಚಿತಾರ್ಥದ ಪಾರ್ಟಿಯನ್ನೇ ಹಾಳು ಮಾಡಿದ್ದಾಳೆ. ನಂತರ ಮಹಿಳೆಯೊಬ್ಬರಿಗೂ ಈ ಸತ್ಯ ಅರಿವಿಗೆ ಬಂದಿದೆ.

ನಿಶ್ಚಿತಾರ್ಥಕ್ಕೆ ಬಂದ ಮಹಿಳೆ, ಸುಮ್ಮನಿರದೆ ನಿಶ್ಚಿತಾರ್ಥ (Engagement) ಮಾಡಿಕೊಳ್ತಿದ್ದ ಹುಡುಗನನ್ನು ಮುಕ್ತ ಕಂಠದಿಂದ ಹೊಗಳಿದ್ದಾಳೆ. ಆದ್ರೆ ಆಕೆ ಹೊಗಳಿಕೆಗೆ ಯಾವ ವಿಷ್ಯ ಬಳಸಿದ್ದಳೋ ಅದು ಮುಚ್ಚಿಟ್ಟ ವಿಷ್ಯವಾಗಿತ್ತು. ಅದು ವರನ ಮುಂದೆ ಬಹಿರಂಗವಾಗ್ತಿದ್ದಂತೆ ನಿಶ್ಚಿತಾರ್ಥದ ಮನೆಯ ವಾತಾವರಣವೇ ಬದಲಾಗಿ ಹೋಯಿತು. ರೆಡ್ಡಿಟ್‌ನಲ್ಲಿ ಮಹಿಳೆ, ನಿಶ್ಚಿತಾರ್ಥದಲ್ಲಿ ನಡೆದ ಘಟನೆಯನ್ನು ಹೇಳಿದ್ದಾಳೆ. ಅತ್ತಿಗೆ ನಿಶ್ಚಿತಾರ್ಥಕ್ಕೆ ನನಗೆ ಆಹ್ವಾನ ಬಂದಿತ್ತು. ಅದ್ರಂತೆ  ನಾನು ಪತಿ ಜೊತೆ ಅಲ್ಲಿಗೆ ಹೋಗಿದ್ದೆ. ನಿಶ್ಚಿತಾರ್ಥ ಮಾಡಿಕೊಳ್ತಿದ್ದ, ಅತ್ತಿಗೆಯ ಬಾವಿ ಪತಿಯನ್ನು ಹೊಗಳ್ದೆ. ಅತ್ತಿಗೆ ಕೈ ಹಿಡಿಯಲಿರುವ ನೀವು ಮುಕ್ತ ಸ್ವಭಾವದವರು. ಯಾಕೆಂದ್ರೆ ಅತ್ತಿಗೆ ಓನ್ಲಿ ಫ್ಯಾನ್ಸ್ (Only fans) ಖಾತೆಯನ್ನು ಹೊಂದಿದ್ದರು, ಅಲ್ಲಿ ಸಾಕಷ್ಟು ಕ್ರೇಜಿ (Crazy) ಫಾಲೋವರ್ಸ್ ಇದ್ದರು ಎಂದು ನಾನು ಅವರ ಮುಂದೆ ಹೇಳ್ದೆ, ಎಂದು ಹೇಳಿ ಕೊಂಡಿದ್ದಾಳೆ.

ಆದ್ರೆ ಅಲ್ಲೇ ಆಗಿದ್ದು ಯಡವಟ್ಟು. ಬಾವಿ ಪತಿಗೆ, ಹೆಂಡತಿಯಾಗುವವಳ ಓನ್ಲಿ ಫ್ಯಾನ್ಸ್ ಖಾತೆ ಬಗ್ಗೆ ತಿಳಿದಿರಲಿಲ್ಲವಂತೆ. ಹಾಗಾಗಿ ಅಲ್ಲೊಂದು ದೊಡ್ಡ ನಾಟಕವೇ ನಡೀತು. ಅತ್ತಿಗೆ ಅಳ್ತಾ ಪಾರ್ಟಿಯಿಂದ ಹೊರಗೆ ಹೋದ್ರೆ, ಬಂದಿದ್ದ ಸಂಬಂಧಿಕರೆಲ್ಲ ಪೆಚ್ಚಾಗಿ ನೋಡ್ತಿದ್ದರು.  

ನಿಮ್ದೂ ಅರೇಂಜ್ಡ್ ಮ್ಯಾರೇಜಾ? ಹೀಗ್ ಮಾಡಿದ್ರೆ ಸಂಗಾತಿ ಮನ ಗೆಲ್ಲೋದು ಸುಲಭ!

ವಾಸ್ತವವಾಗಿ, ವಧು ತನ್ನ ಹಳೆ ಓನ್ಲಿ ಫ್ಯಾನ್ಸ್ ಖಾತೆಯನ್ನು ಗುಪ್ತವಾಗಿಟ್ಟಿದ್ದರು. ಈ ಬಗ್ಗೆ ವರನಿಗೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ. ಅಳ್ತಾ ಹೋಗ್ತಿದ್ದ ವಧುವನ್ನು, ನನ್ನ ಪತಿ ಹಿಂಬಾಲಿಸಲು ಯತ್ನಿಸಿದರು. ಆದ್ರೆ ಆಕೆಯ ಅಣ್ಣ ತಮ್ಮಂದಿರು ಅದಕ್ಕೆ ಆಸ್ಪದವೇ ಕೊಡಲಿಲ್ಲ. ಕೋಪಗೊಂಡ ಪತಿಯೂ ನಿನ್ನಿಂದಲೇ ನಿಶ್ಚಿತಾರ್ಥದಲ್ಲಿ ಇಷ್ಟೆಲ್ಲ ಗಲಾಟೆಯಾಯ್ತೆಂದು ನನ್ನ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದ. ಸತ್ಯವನ್ನು ಅತ್ತಿಗೆ ಮೊದಲೇ ಹೇಳಿದ್ರೆ ಇವೆಲ್ಲ ನಡೆಯುತ್ತಲೇ ಇರಲಿಲ್ಲ. ವರನ ಮುಂದೆ ಮುಕ್ತವಾಗಿದ್ರೆ ಇಂಥದ್ದೊಂದು ಅನಾಹುತ ಸಂಭವಿಸುತ್ತಲೇ ಇರಲಿಲ್ಲ, ಎಂಬುವುದು ನನ್ನ ವಾದ. ಆದ ನನ್ನ ಗಂಡ ತೆಪ್ಪಗಾಗಿದ್ದು ಮಾತ್ರವಲ್ಲ, ನಾನೂ ಆ ಸ್ಥಲದಿಂದ ಕಾಲ್ಕಿತ್ತೆ.

ಇತ್ತ ಕಡೆ, ವರನ ಕುಟುಂಬದವರು ಸುಮ್ಮನಾಗ್ಲಿಲ್ಲ. ಮದುವೆ ಮುರಿದುಕೊಂಡು ಪಾರ್ಟಿಯಿಂದ ಹೊರಗೆ ಹೋದ್ರು. ಇದಕ್ಕೆಲ್ಲ ನಾನು ಕಾರಣ ಅಂತಾ, ಪತಿ ಕುಟುಂಬದವರು ನನ್ನನ್ನು ಬೈದ್ರು. ಗತಕಾಲದ ವಿಷ್ಯವನ್ನು ಬಹಿರಂಗಪಡಿಸುವ ಅಗತ್ಯವೇನಿತ್ತು ಎಂದು ನನ್ನನ್ನು ಇನ್ನೂ ದೂಷಿಸುತ್ತಿದ್ದಾರೆ.

ಅಬ್ಬಾ ನೋಡಿದ್ರೇನೆ ಭಯವಾಗುತ್ತೆ..ಚಲಿಸುವ ರೈಲಿನಲ್ಲಿ ಜೋಡಿಯಿಂದ ಇದೆಂಥಾ ಹುಚ್ಚಾಟ..!

ಮನೆಗೆ ಬಂದ ಪತಿ, ಕ್ಷಮೆ ಕೇಳುವಂತೆ ನನ್ನನ್ನು ಒತ್ತಾಯಿಸುತ್ತಿದ್ದಾನೆ. ನಾನೇಕೆ ಕ್ಷಮೆ ಕೇಳ್ಬೇಕು ನನಗೆ ತಿಳಿಯುತ್ತಿಲ್ಲ. ಸತ್ಯವನ್ನು ಮುಚ್ಚಿಟ್ಟಿದ್ದು ಅವರ ತಪ್ಪು. ನನ್ನ ಪ್ರಕಾರ, ಸಂಬಂಧ ಸತ್ಯದ ಮೇಲೆ ಶುರುವಾಗ್ಬೇಕು. ಕ್ಷಮೆ ಕೇಳಿದ್ರೆ ಅವರ ತಪ್ಪುದಾರಿ ನಡೆಯನ್ನು ನಾನು ಪ್ರೋತ್ಸಾಹಿಸಿದಂತಾಗುತ್ತದೆ. ನಾನು ಕ್ಷಮೆ ಕೇಳ್ಬೇಕಾ, ನೀವು ಏನು ಹೇಳ್ತೀರಿ?.

ರೆಡ್ಡಿಟ್ ನ ಈ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮದೇನೂ ತಪ್ಪಿಲ್ಲ. ಓನ್ಲಿ ಫ್ಯಾನ್ಸ್ ಖಾತೆ ಬಗ್ಗೆ ಹೇಳುವಾಗ ನಿಮ್ಮ ಉದ್ದೇಶ ಕೆಟ್ಟದಿರಲಿಲ್ಲ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ತನ್ನನ್ನು ಮದುವೆಯಾಗಲಿರುವ ಹುಡುಗನಿಗೆ ಓನ್ಲಿ ಫ್ಯಾನ್ಸ್ ಖಾತೆಯಿತ್ತು ಎಂಬುದನ್ನು ಮುಚ್ಚಿಟ್ಟಿದ್ದು ನನ್ನ ಪ್ರಕಾರ ವಿಚಿತ್ರವೆನ್ನಿಸುತ್ತದೆ ಎಂದು ಇನ್ನೊಬ್ಬರು ಬರೆದಿದ್ದಾರೆ. 
 

Latest Videos
Follow Us:
Download App:
  • android
  • ios