Asianet Suvarna News Asianet Suvarna News

ಪ್ರೀತಿ ಹುಟ್ಟದೇ 7 ಮಕ್ಕಳಾದ್ವಾ? ಬಾಣಂತನದಲ್ಲೇ ಓಡಿ ಹೋದ ಪತ್ನಿ

ದಾಂಪತ್ಯದಲ್ಲಿ ಪ್ರೀತಿ ಮುಖ್ಯ. ಈ ಪ್ರೀತಿಗೆ ವಯಸ್ಸಿನ ಮಿತಿ ಮಾತ್ರವಲ್ಲ ಯಾವುದೇ ಕಟ್ಟುಪಾಡಿಲ್ಲ. ಮೊದಲು ಪತಿಯೇ ಪ್ರೇಮಿ ಎನ್ನುವ ಅನೇಕರು ನಂತ್ರ ಪತಿಗೆ ಕೈಕೊಟ್ಟು ಪ್ರೀತಿ ಹಿಂದೆ ಓಡ್ತಾರೆ.
 

Viral News- Mother Of Seven Children With Lover Husband Asks Rajasthan Police For Help roo
Author
First Published Aug 16, 2023, 1:24 PM IST

ಕೆಲವೊಂದು ಸಂಬಂಧಗಳು ವಿಚಿತ್ರವೆನ್ನಿಸುತ್ತವೆ. ಅವುಗಳ ಬಗ್ಗೆ ತರ್ಕ ಮಾಡ್ತಾ ಹೋದ್ರೆ ಕೊನೆ ಸಿಗೋದು ಕಷ್ಟ. ಮನೆ, ಸಂಸಾರ, ಮಕ್ಕಳಾದ್ಮೇಲೂ ವಯಸ್ಸಾದ ಮಹಿಳೆಯರು ಇನ್ನೊಬ್ಬರ ಜೊತೆ ಓಡಿ ಹೋಗೋದಿದೆ. ಪತಿ ಜೊತೆ ಸುಖ ಸಂಸಾರ ಮಾಡ್ತಿದ್ದಾಳೆ ಅಂತಾ ನೋಡಿದೋರು ಅಂದುಕೊಂಡಿರ್ತಾರೆ. ಆದ್ರೆ ಪತ್ನಿ ಮನಸ್ಸು ಮತ್ತೆಲ್ಲೋ ಓಡಿರುತ್ತೆ. ಇಡೀ ದಿನ ಮನೆ, ಮಕ್ಕಳನ್ನು ನೋಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡ ಅದೆಷ್ಟೊ ಮಹಿಳೆಯರು ಹೊಸ ಪ್ರೀತಿ ಅರಸಿ ಹೋಗ್ತಾರೆ. ಕೆಲವರು ಪತಿಗೆ ತಿಳಿಯದೆ ನಿರಂತರ ಮೋಸ ಮಾಡಿದ್ರೆ ಮತ್ತೆ ಕೆಲವರು ಎಲ್ಲ ಬಿಟ್ಟು ಪ್ರೇಮಿ ಜೊತೆ ಓಡಿ ಹೋಗ್ತಾರೆ. ಈಗ ರಾಜಸ್ಥಾನದಲ್ಲೂ ಇಂಥಹದ್ದೇ ಒಂದು ಘಟನೆ ನಡೆದಿದೆ. 

ರಾಜಸ್ಥಾನ (Rajasthan)ದ ಭರತ್‌ಪುರ ಜಿಲ್ಲೆಯಲ್ಲಿ ಏಳು ಮಕ್ಕಳ ತಾಯಿ ತನ್ನ 20 ವರ್ಷದ ಪ್ರೇಮಿಯೊಂದಿಗೆ ಓಡಿ ಹೋಗಿದ್ದಾಳೆ. ನಾವು ಮೊದಲೇ ಹೇಳಿದಂತೆ ಇಲ್ಲಿ ಕಾಡುವ ಮೊದಲ ಪ್ರಶ್ನೆ, ಏಳು ಮಕ್ಕಳಾದ್ರೂ ಪತಿ ಮೇಲೆ ಪ್ರೀತಿ (love) ಹುಟ್ಟಲಿಲ್ವಾ ಅನ್ನೋದು. ಅದೇನೇ ಇರಲಿ, ಪತ್ನಿ ಓಡಿ ಹೋದ್ಮೇಲೆ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪತ್ನಿ ಓಡಿ ಹೋಗಿರೋದು ಮತ್ತಾರ ಜೊತೆಯೂ ಅಲ್ಲ ಪತಿಯ ಸ್ನೇಹಿತ (Friend ) ನ ಜೊತೆ. 

ಸೀಮಾ, ಅಂಜು ಆಯ್ತು, ಪ್ರಿಯಕರನಿಗಾಗಿ ಗಂಡ, ಮಕ್ಕಳನ್ನು ಬಿಟ್ಟು ಕುವೈತ್‌ಗೆ ಪರಾರಿಯಾದ ರಾಜಸ್ಥಾನದ ಮಹಿಳೆ!

ಭಾರತ್‌ಪುರದ ಉದ್ಯೋಗ್ ನಗರ ಪೊಲೀಸ್ ಠಾಣೆಯಲ್ಲಿ ಈಗ ಪ್ರಕರಣ ದಾಖಲಾಗಿದೆ. ಪತಿ ಪಿತಮ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಪಿತಮ್ ನನ್ನ ಮಕ್ಕಳು ಮತ್ತು ಪತ್ನಿ ಸುನೀತಾ ಜೊತೆ ಭರತ್‌ಪುರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನಂತೆ. ಆತ ಕೂಲಿ ಕೆಲಸ ಮಾಡ್ತಿದ್ದ. ಆತನ ಜೊತೆ ಕೂಲಿ ಕೆಲಸಕ್ಕೆ ಬರ್ತಿದ್ದ ಮಹೇಶ್ ಮೇಲೆ ಸುನಿತಾಗೆ ಪ್ರೀತಿ ಚಿಗುರಿದೆ.
ಸುನಿತಾ ಹಾಗೂ ಮಹೇಶ್ ಪ್ರೇಮ ಪ್ರಸಂಗ ಅನೇಕ ದಿನಗಳಿಂದ ನಡೆಯುತ್ತಿತ್ತಂತೆ. ಎರಡು ತಿಂಗಳ ಹಿಂದೆ ಪತಿ ಹಾಗೂ ಮಕ್ಕಳನ್ನು ಬಿಟ್ಟು ಸುನಿತಾ, ಮಹೇಶ್ ಜೊತೆ ಓಡಿ ಹೋಗಿದ್ದಾಳೆ. 7 ಮಕ್ಕಳನ್ನು ನೋಡಿಕೊಂಡು, ಕೂಲಿ ಕೆಲಸ ಮಾಡೋದು ಪಿತಮ್ ಗೆ ಕಷ್ಟವಾಗಿದೆ.  ಪಿತಮ್,  6 ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿನ ತಂದೆ. ಗಂಡು ಮಗುವಿಗೆ ಈಗಷ್ಟೆ 6 ತಿಂಗಳಾಗಿದೆ. ಅಷ್ಟು ಚಿಕ್ಕ ಮಗುವನ್ನು ಇಟ್ಕೊಂಡು ಕೂಲಿ ಕೆಲಸಕ್ಕೆ ಹೋಗಲಾಗ್ತಿಲ್ಲ. ಮಕ್ಕಳ ಹೊಟ್ಟೆ ಹೊರೆಯೋದು ಕಷ್ಟವಾಗಿದೆ ಎಂದು ಪಿತಮ್ ಹೇಳಿದ್ದಾನೆ. ಆದಷ್ಟು ಬೇಗ ಪತ್ನಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾನೆ.   

ಗಂಡ ಹೆಂಡ್ತಿ ಸಂಬಂಧ ಗಟ್ಟಿಯಾಗಿರ್ಬೇಕು ಅಂದ್ರೆ … ಈ ಸುಳ್ಳು ಹೇಳೋದು ತಪ್ಪಲ್ಲ

ಮಕ್ಕಳಾದ್ಮೇಲೆ ಸಣ್ಣ ವಯಸ್ಸಿನ ಹುಡುಗರ ಜೊತೆ ವಯಸ್ಸಾದ ಮಹಿಳೆ ಓಡಿ ಹೋಗಿದ್ದು ಇದೇ ಮೊದಲಲ್ಲ. ಈ ಬಗ್ಗೆ ಅನೇಕ ಸುದ್ದಿಗಳು ಬರ್ತಿರುತ್ತವೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ವಿಶ್ವಾಸ ಬಹಳ ಮುಖ್ಯ.  ಇದಿಲ್ಲದೆ ಸಂಸಾರ ಸುಖವಾಗಿರಲು ಸಾಧ್ಯವಿಲ್ಲ. ವೈವಾಹಿಕ ಜೀವನವನ್ನು ಹಾಳುಮಾಡುವಲ್ಲಿ ಮೂರನೇ ವ್ಯಕ್ತಿಯ ಪಾತ್ರ ಕೂಡ ಪ್ರಮುಖವಾಗಿರುತ್ತದೆ. ಮೂರನೇ ವ್ಯಕ್ತಿ ಆಕರ್ಷಕವಾಗಿದ್ದರೆ, ಪತಿಗಿಂತ ಹೆಚ್ಚು ಕಾಳಜಿ, ಪ್ರೀತಿ ತೋರಿಸುತ್ತಿದ್ದಾನೆಂದು ಭಾಸವಾದ್ರೆ ಮಹಿಳೆ ಆತನಿಗೆ ತನ್ನ ಮನಸ್ಸು ನೀಡಲು ಶುರು ಮಾಡ್ತಾಳೆ. ಇದರಿಂದಾಗಿ ಸಂತೋಷದ ಜೀವನ ದುಃಖದಿಂದ ತುಂಬುತ್ತದೆ. 

ಮಹಿಳೆ ತನ್ನ ಪತಿಯಿಂದ ಭಾವನಾತ್ಮಕ ತೃಪ್ತಿಯನ್ನು ಪಡೆಯದಿದ್ದಾಗ ವಿವಾಹೇತರ ಸಂಬಂಧ ಬೆಳೆಸುವುದು ಹೆಚ್ಚು ಎನ್ನುತ್ತಾರೆ ತಜ್ಞರು. ಇದಲ್ಲದೆ ಪತಿ ಬೇರೆ ವ್ಯಕ್ತಿ ಹಿಂದೆ ಹೋಗಲು ಅನೇಕ ಕಾರಣವಿರುತ್ತದೆ. ಈಗಿನ ದಿನಗಳಲ್ಲಿ ಪತಿಯ ಆರ್ಥಿಕ ಪರಿಸ್ಥಿತಿ, ಮಾನಸಿಕ ಹೊಂದಾಣಿಕೆ ಕೊರತೆ,  ಚಿಕ್ಕ ವಯಸ್ಸಿನ ಹುಡುಗರ ಮೇಲಿನ ಆಕರ್ಷಣೆ ಸೇರಿದಂತೆ ಅನೇಕ ಕಾರಣಕ್ಕೆ ವಿವಾಹೇತರ ಸಂಬಂಧ ಶುರುವಾಗುತ್ತದೆ.
 

Follow Us:
Download App:
  • android
  • ios