Valentines Day: ಭಗ್ನ ಪ್ರೇಮಿಗಳಿಗೆ ವ್ಯಾಲಂಟೈನ್ ಆಫರ್ ನೀಡಿದ ಕಂಪನಿ
ಪ್ರೇಮಿಗಳ ದಿನ ಭಗ್ನ ಪ್ರೇಮಿಗಳಿಗೆ ಕರಾಳ ದಿನ. ಹಳೆ ನೆನಪು, ವಸ್ತುಗಳು ಹೃದಯವನ್ನು ಕಾಡುತ್ತವೆ. ಅವರ ನೋವು ಅರಿತ ಕಂಪನಿಯೊಂದು ವಿಶೇಷ ಆಫರ್ ನೀಡ್ತಿದೆ. ನಿಮ್ಮ ನೋವುಗಳನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ಹೊಸ ಬದುಕು ಶುರು ಮಾಡಲು ಇದು ನೆರವಾಗಲಿದೆ.
ವಿಶ್ವದಾದ್ಯಂತ ಪ್ರೇಮಿಗಳ ದಿನಾಚರಣೆಗೆ ತಯಾರಿ ನಡೆದಿದೆ. ಫೆಬ್ರವರಿ ತಿಂಗಳಿನಲ್ಲಿ ಪ್ರೇಮಿಗಳ ಮುಖದಲ್ಲೊಂದು ಹೊಳಪನ್ನು ನೀವು ನೋಡ್ಬಹುದು. ಅಂಗಡಿಗಳು ತರಹೇವಾರು ಉಡುಗೊರೆಗಳಿಂದ ಕೂಡಿದ್ರೆ ಪ್ರೇಮಿಗಳು ಈ ಗಿಫ್ಟ್ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮಿಗಳ ವಾರದ ಒಂದೊಂದೇ ದಿನ ನೆನಪು ಮಾಡಿಕೊಂಡು, ವಿಶ್ ಮಾಡ್ತಾ, ಅದಕ್ಕೆ ತಕ್ಕಂತೆ ಉಡುಗೊರೆ ನೀಡ್ತಾ ಎಂಜಾಯ್ ಮಾಡ್ತಿದ್ದಾರೆ. ಸಂಗಾತಿ ಇರೋರಿಗೆ ಇದು ಹಬ್ಬ. ಸಂಗಾತಿ ಸಿಕ್ಕೇ ಇಲ್ಲ ಎನ್ನುವವರು ಸಂಗಾತಿ ಹುಡುಕಾಟದಲ್ಲಿ, ಮಾಮೂಲಿ ದಿನ ಕಳೆಯುತ್ತಿದ್ದಾರೆ. ಅದೇ ಸಂಗಾತಿ ಜೊತೆ ಒಂದಿಷ್ಟು ದಿನ ಕಳೆದು, ಒಂದೆರಡು ವ್ಯಾಲಂಟೈನ್ಸ್ ಡೇ ಆಚರಿಸಿ, ಈಗ ಒಂಟಿಯಾಗಿರೋರು ಮಾತ್ರ ಅದೇ ನೋವಿನಲ್ಲಿರುತ್ತಾರೆ. ಹಿಂದಿನ ದಿನಗಳ ನೆನಪು ಅವರನ್ನು ಕಾಡುತ್ತಿರುತ್ತದೆ. ಸಂಗಾತಿ ನೀಡಿದ ಉಡುಗೊರೆ, ಪತ್ರಗಳು, ಟೆಕ್ಸ್ಟ್ ಮೆಸ್ಸೇಜ್ ಆಗಾಗ ಕಾಡಿ, ನೋವು ಕೊಡುತ್ತಿರುತ್ತದೆ. ಅವರ ನೆನಪಿನಿಂದ ಹೇಗೆ ಹೊರಗೆ ಬರೋದು ಎನ್ನುವ ಪ್ರಶ್ನೆ ಅವರನ್ನು ಕಾಡುತ್ತಿದೆ. ಭಗ್ನ ಪ್ರೇಮಿಗಳ ಈ ನೋವನ್ನು ಅನೇಕರು ಅರಿತಿದ್ದಾರೆ. ಅವರಿಗೆ ನೆಮ್ಮದಿ ನೀಡಲು ತಮ್ಮಲ್ಲಾದ ಪ್ರಯತ್ನ ಮಾಡ್ತಿದ್ದಾರೆ. ಕೆಲ ಕಂಪನಿಗಳು ಇದನ್ನೇ ಬಂಡವಾಳ ಮಾಡಿಕೊಂಡಿವೆ. ಅವರ ನೋವು ತಣಿಸುವ ವ್ಯವಹಾರ ಶುರು ಮಾಡಿದೆ. ಚಿತ್ರ ವಿಚಿತ್ರ ಆಫರ್ ಗಳನ್ನು ಕಂಪನಿಗಳು ನೀಡುತ್ತಿವೆ.
ಫ್ಲಶ್ ಔಟ್ (Flush Out) ಆಫರ್ : ಭಗ್ನ ಪ್ರೇಮಿಗಳ ನೋವನ್ನು ಕಡಿಮೆ ಮಾಡಲು ಹೂ ಗಿವ್ಸ್ ಎ ಕ್ರ್ಯಾಪ್ ಹೆಸರಿನ ಕಂಪನಿಯೊಂದು ಮುಂದಾಗಿದೆ. ಬ್ರೇಕ್ ಅಪ್ (Break up) ಆದ ಸಂಬಂಧವನ್ನು ಮರೆತು ಮುಂದೆ ಸಾಗಲು ಇದು ಅವಕಾಶ ನೀಡುತ್ತಿದೆ. ಪ್ರೀತಿ (Love) ಯಲ್ಲಿ ಮೋಸ ಹೋದವರಿಗೆ ಮತ್ತು ನಂತರ ಅವರ ಸಂಬಂಧಗಳು ಮುರಿದು ಬಿದ್ದವರಿಗೆ ಈ ಕಂಪನಿ ಆಫರ್ ನೀಡುತ್ತಿದೆ.
ಹನಿಮೂನ್ ಬೆಡ್ರೂಮ್ ಫೋಟೋ ಶೇರ್ ಮಾಡಿ ಹಲ್ಚಲ್ ಸೃಷ್ಟಿಸಿದ್ದ ನಟಿಯಿಂದ 2ನೇ ಗಂಡನಿಗೂ ಡಿವೋರ್ಸ್?
ಹೂ ಗಿವ್ಸ್ ಎ ಕ್ರ್ಯಾಪ್ ವಾಸ್ತವವಾಗಿ ಮರುಬಳಕೆಯ ಟಾಯ್ಲೆಟ್ ಪೇಪರ್ ಕಂಪನಿಯಾಗಿದೆ. ಇದು ನಿಮ್ಮ ಮಾಜಿ ಪ್ರೇಮಿಗಳ ಉಡುಗೊರೆ, ನೆನಪನ್ನು ಫ್ಲಾಶ್ ಮಾಡುವ ಅವಕಾಶ ನೀಡುತ್ತಿದೆ. ಕಂಪನಿಯು ಹಳೆಯ ಪ್ರೇಮ ಪತ್ರಗಳು, ಕಾರ್ಡ್‌ಗಳು ಅಥವಾ ವಾಟ್ಸಾಪ್ ಚಾಟ್‌ಗಳ ಪ್ರಿಂಟ್‌ಔಟ್‌ಗಳನ್ನು ಟಾಯ್ಲೆಟ್ ರೋಲ್‌ಗಳಾಗಿ ಪರಿವರ್ತಿಸುವ ಮೂಲಕ ಮಾರಾಟ ಮಾಡುತ್ತಿದೆ. ಇದರಿಂದ ಜನರು ಅದನ್ನು ಬಳಸಿಕೊಳ್ಳಬಹುದು ಮತ್ತು ತಮ್ಮ ಹಳೆಯ ಕೆಟ್ಟ ನೆನಪುಗಳನ್ನು ಸಹ ಹೊರಹಾಕಬಹುದು.
Valentines Day: ಪ್ರೇಮಿಗಳ ದಿನದಂದು ಜೈಲೂಟ ತಿನ್ನುವ ಅವಕಾಶ
ಕಂಪನಿ ತನ್ನ ಪ್ಲಾನ್ ಗೆ ನಿಮ್ಮ ಮಾಜಿಯನ್ನು ಪ್ಲಾಶ್ ಮಾಡಿ ಎಂದು ಹೆಸರಿಟ್ಟಿದೆ. ನಿಮ್ಮ ಕೆಟ್ಟ ಮೆಮೊರಿ, ಡ್ರಾಯರ್‌ನಲ್ಲಿ ಬಿದ್ದಿರುವ ನಿಮ್ಮ ಪ್ರೇಮ ಪತ್ರಗಳನ್ನು ನಮಗೆ ಮೇಲ್ ಮಾಡಿ ಮತ್ತು ನಾವು ಅವುಗಳನ್ನು ಪ್ರಚಾರಕ್ಕೆ ಬಳಸ್ತೇವೆ. ಅವುಗಳನ್ನು ಟಾಯ್ಲೆಟ್ ಪೇಪರ್ ಆಗಿ ಪರಿವರ್ತಿಸುತ್ತೇವೆ ಎಂದು ಕಂಪನಿ ಹೇಳಿದೆ. ಕೆಟ್ಟ ನೆನಪುಗಳನ್ನು ಟಾಯ್ಲೆಟ್ ನಲ್ಲಿ ಇಡುವುದು ಒಳ್ಳೆಯದು ಹಾಗೂ ಅದ್ರ ಜಾಗ ಕೂಡ ಅದೇ ಆಗಿದೆ ಎಂದು ಕಂಪನಿ ಜಾಹೀರಾತಿನಲ್ಲಿ ಹೇಳಿದೆ.
ನೀವು, ಮಾಜಿ ಪ್ರೇಮಿಗಳ ಪತ್ರ, ಉಡುಗೊರೆ, ಮೇಲ್, ಮೆಸ್ಸೇಜ್ ಗಳನ್ನು ಹೊಂದಿದ್ದರೆ, ಅವರ ನೆನಪಿನಿಂದ ಹೊರ ಬರಲು ಇದು ಸರಿಯಾದ ಮಾರ್ಗ ಎಂದು ಭಾವಿಸಿದ್ರೆ ಈ ವಿಧಾನವನ್ನು ಬಳಸಬಹುದು. ಕಂಪನಿಗೆ ನಿಮ್ಮಲ್ಲಿರುವ ಪ್ರೇಮ ಪತ್ರವನ್ನು ಕಳುಹಿಸಿ. ನಂತ್ರ ಅದನ್ನು ಟಾಯ್ಲೆಟ್ ಪೇಪರ್ ರೀತಿಯಲ್ಲಿ ಬಳಸಿ ಫ್ಲಶ್ ಮಾಡಿ. ಕಂಪನಿಯು ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನಲ್ಲಿ ಶಾಖೆ ಹೊಂದಿದೆ. ಜನರು ತನ್ನ ವಿಳಾಸಗಳಿಗೆ ಕಳುಹಿಸುವ ಪ್ರೇಮ ಪತ್ರಗಳನ್ನು ಕಂಪನಿ ಸ್ವೀಕರಿಸುತ್ತಿದೆ. ಫೆಬ್ರವರಿ 29 ರವರೆಗೆ ಪತ್ರಗಳನ್ನು ಕಳುಹಿಸುವ ಅವಕಾಶವನ್ನು ಕಂಪನಿ ನೀಡಿದೆ.