Valentine Day: ಪುರುಷ ಬೆಂಕಿಯಾದ್ರೆ ಮಹಿಳೆ ನೀರು, ವ್ಯಾಲಂಟೈನ್ ಡೇ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ವಿಷ್ಯ

ಫೆಬ್ರವರಿ 14 ಪ್ರೇಮಿಗಳ ದಿನ. ಇದು ಎಲ್ಲರಿಗೂ ತಿಳಿದಿದೆ. ಆದ್ರೆ ಈ ವ್ಯಾಲಂಟೈನ್ ಯಾರು? ಭಾರತದ ಕಾಮಸೂತ್ರ ಬರೆದ ಮಹರ್ಷಿ ವಾತ್ಸಾಯನರಿಗೂ ವ್ಯಾಲಂಟೈನ್ ಗೂ ಸಂಬಂಧವಿದ್ಯಾ? ಅದಕ್ಕೆಲ್ಲ ಉತ್ತರ ಇಲ್ಲಿದೆ. 
 

Valentine Day And India Where Maharishi Vatsyayana Wrote The Book Kamasutra

ಇಂದು ವ್ಯಾಲಂಟೈನ್ ಡೇ. ಪ್ರೇಮಿಗಳು ಪರಸ್ಪರ ಪ್ರೇಮ ನಿವೇದನೆ ಮಾಡ್ತಾ ಹಬ್ಬ ಆಚರಿಸ್ತಾರೆ. ಆದ್ರೆ ಯುರೋಪಿನಲ್ಲಿ ಪ್ರೇಮಿಗಳ ದಿನ ಆಚರಿಸುವ ಮೊದಲೇ ಮಹರ್ಷಿ ವಾತ್ಸಯನ ಭಾರತದಲ್ಲಿ ಕಾಮಸೂತ್ರವನ್ನು ರಚಿಸಿದ್ದರು. ಅವರು ಪುರುಷರು ಮತ್ತು ಮಹಿಳೆಯರ ಲೈಂಗಿಕತೆಯ ಬಗ್ಗೆ ಸಂಪೂರ್ಣ ಗ್ರಂಥವನ್ನು ಬರೆದಿದ್ದರು. ನಾವಿಂದು ಕಾಮಸೂತ್ರ ಹಾಗೂ ನಂತ್ರದ ದಿನಗಳಲ್ಲಿ ವ್ಯಾಲಂಟೈನ್ ಡೇ ಹೇಗೆ ಆಚರಣೆಗೆ ಬಂತು ಎಂಬುದನ್ನು ನಿಮಗೆ ಹೇಳ್ತೆವೆ.

ಕಾಮಸೂತ್ರ (Kamasutra) ದಲ್ಲಿ ವಾತ್ಸಾಯನ (Vatsayan) ಹೇಳಿದ್ದೇನು? : ಪುರುಷ ಮತ್ತು ಮಹಿಳೆಯ ಲೈಂಗಿಕತೆಯ ನಡುವೆ ಸಾಕಷ್ಟು ವ್ಯತ್ಯಾಸವಿದೆ. ವಾತ್ಸಯನ ತನ್ನ ಪುಸ್ತಕ ಕಾಮಸೂತ್ರದಲ್ಲಿ ಈ ಬಗ್ಗೆ ವಿವರಿಸಿದ್ದಾರೆ. ಪುರುಷ ಬೆಂಕಿಯಂತೆ, ಆತ ಉರಿಯುವಷ್ಟು ಬೇಗ ಆರಿ ಹೋಗುತ್ತಾನೆ. ಮತ್ತೊಂದೆಡೆ  ಮಹಿಳೆಯ ಲೈಂಗಿಕತೆ (sex)ಯು ನೀರಿನಂತೆ. ಅದು ನಿಧಾನವಾಗಿ ಅಲೆಯಂತೆ ಏರುತ್ತದೆ ಮತ್ತು ಶಾಂತವಾಗಲು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಇದನ್ನು ಜನರು ಅರ್ಥಮಾಡಿಕೊಳ್ಳದ ಕಾರಣ ಸಂಭೋಗದಲ್ಲಿ ಸಮಸ್ಯೆಯಾಗುತ್ತದೆ. ಇದೇ ಕಾರಣಕ್ಕೆ ಈಗಿನ ವೈದ್ಯರು ಫೋರ್ ಪ್ಲೇ ಸಲಹೆಯನ್ನು ಜನರಿಗೆ ನೀಡ್ತಾರೆ. ವಾತ್ಸಾಯನ ತಮ್ಮ ಕಾಮಸೂತ್ರದಲ್ಲಿ ಎರಡನೇ ಶತಮಾನದಲ್ಲಿಯೇ ಸ್ಪರ್ಶ ಹಾಗೂ ಸಂಭೋಗದ ಮಧ್ಯೆ ಇರುವ ಮಹತ್ವವನ್ನು ಹೇಳಿದ್ದರು. ಇದಲ್ಲದೆ ಮಹಿಳೆ ಹಾಗೂ ಪುರುಷರ ಮಧ್ಯೆ ಜಗಳವಾಗ್ಬೇಕು ಎಂದು ಕಾಮಸೂತ್ರದಲ್ಲಿ ಹೇಳಲಾಗಿದೆ. ಮಹಿಳೆ ತನ್ನ ಕೋಪವನ್ನು ವ್ಯಕ್ತಪಡಿಸಬಹುದು. ಸಿಟ್ಟಿನಲ್ಲಿ ಆಭರಣಗಳನ್ನು ಕಿತ್ತೆಸೆಯಬಹುದು. ಪುರುಷನಾದವನು ಆಕೆ ಪಾದಗಳಿಗೆ ಶರಣಾಗಿ ಆಕೆಯನ್ನು ಸಂತೈಸಬಹುದು. ಆದ್ರೆ ಇದೆಲ್ಲವೂ ಮನೆಯೊಳಗೆ ಇರಬೇಕು ಎನ್ನುತ್ತಾರೆ ವಾತ್ಸಾಯನ. 

Valentine Day : 40 ವರ್ಷ ದಾಟಿದ್ಮೇಲೆ ಹೀಗಿರಲಿ ನಿಮ್ಮ ಪ್ರೇಮಿಗಳ ದಿನ

ವಾತ್ಸಾಯನದ ನಂತ್ರ ಶಿಲ್ಪಿಗಳ ಕೈನಲ್ಲಿ ಮೂಡಿದ ಪ್ರೇಮಕಥೆ : ವಾತ್ಸಾಯನ ಕಾಮಸೂತ್ರ ಬರೆದ ಅದೆಷ್ಟೋ ವರ್ಷಗಳ ನಂತ್ರ ಅಜಂತಾ - ಎಲ್ಲೋರಾ ಗುಹೆಗಳಲ್ಲಿ ಪ್ರೀತಿಯ ಕೆತ್ತನೆಯನ್ನು ನಾವು ನೋಡ್ಬಹುದು. ದೈಹಿಕ ಸಂಬಂಧವನ್ನು ಪ್ರೀತಿಯೊಂದಿಗೆ ಬೆಸೆದ ಅನೇಕ ಶಿಲ್ಪಕಲೆ ಅಲ್ಲಿದೆ. ಅದನ್ನು ನೋಡಿ ಈಗ್ಲೂ ವಿದೇಶಿಗರು ಬೆರಗಾಗ್ತಾರೆ. 

ಯುರೋಪ್ ನಲ್ಲಿದೆ ವ್ಯಾಲಂಟೈನ್ (Valentine) ಡೇ ಇತಿಹಾಸ : ಯುರೋಪ್ ನಲ್ಲಿ ವ್ಯಾಲಂಟೈನ್ ಎಂಬ ಸಂತನಿದ್ದನು. ಮಹರ್ಷಿ ವಾತ್ಸಾಯನ ಹಾಗೂ ಸಂತ ವ್ಯಾಲಂಟೈನ್ ನಡುವೆ ನೇರ ಸಂಬಂಧವಿಲ್ಲದೆ ಹೋದ್ರೂ ಭಾರತದ ದೃಷ್ಟಿಯಲ್ಲಿ ಇಬ್ಬರನ್ನು ನೋಡಿದ್ರೆ ಇಬ್ಬರ ಮಧ್ಯೆ ಸಂಬಂಧ ಹೆಣೆಯಬಹುದು.

ಸಂತ ವ್ಯಾಲಂಟೈನ್ ಯಾರು ? : 270ನೇ ಇಸವಿಯಲ್ಲಿ ರೋಮ್ ನಲ್ಲಿ ಪ್ರೀತಿ ಮತ್ತು ಮದುವೆಯ ವಿರುದ್ಧ ಸಾಮ್ರಾಜ್ಯಶಾಹಿ ತೀರ್ಪು ಇತ್ತು. ಸೈನಿಕರಿಗೆ ಪ್ರೀತಿ ಮತ್ತು ಮದುವೆ ನಿಷಿದ್ಧವಾಗಿತ್ತು. ಇದು ಸೈನ್ಯವನ್ನು ದುರ್ಬಲಗೊಳಿಸುತ್ತದೆ ಎಂದು ಕಿಂಗ್ ಕ್ಲಾಡಿಯಸ್ ನಂಬಿದ್ದನು. ಹಾಗಾಗಿ ಆತ ಮದುವೆಯನ್ನು ವಿರೋಧಿಸಿದ್ದನು. ಆದ್ರೆ ಇಲ್ಲಿದ್ದ ಸಂತ ವ್ಯಾಲಂಟೈನ್ ಇದಕ್ಕೆ ವಿರುದ್ಧವಾಗಿದ್ದ. ಆತ ಮದುವೆ, ಪ್ರೀತಿಯನ್ನು ಪ್ರೋತ್ಸಾಹಿಸುತ್ತಿದ್ದ. ಅನೇಕರಿಗೆ ಮದುವೆ ಮಾಡಿಸಿದ್ದ. ರಾಜನ ವಿರುದ್ಧ ತಿರುಗಿನಿಂತ ವ್ಯಾಲಂಟೈನ್ ಗೆ ಗಲ್ಲು ಶಿಕ್ಷೆಯಾಯ್ತು.  

Valentine's Day; ಹುಡುಗಿಯರನ್ನು ಡೇಟ್‌ಗೆ ಕರೆದೊಯ್ದು ಒಂಟಿತನ ಓಡಿಸೋ ಈತ 'ಬಾಡಿಗೆ ಬಾಯ್‌ಫ್ರೆಂಡ್'!

ಅನೇಕರ ಪ್ರೀತಿಯನ್ನು ಉಳಿಸಿದ್ದ ವ್ಯಾಲಂಟೈನ್ ಗಲ್ಲಿಗೇರಿದ್ದು ಜನರ ಕಣ್ಣಲ್ಲಿ ನೀರು ತರಿಸಿತ್ತು. ಈ ಸುದ್ದಿ ಎಲ್ಲೆಡೆ ಹರಡಿತು. ಈಗ ಫೆಬ್ರವರಿ 14ರಂದು ವ್ಯಾಲಂಟೈನ್ ಡೇ ಆಚರಣೆ ಮಾಡಲಾಗ್ತಿದೆ. 
ವಾತ್ಸಾಯನ ಕಾಮಸೂತ್ರದ ಮೂಲಕ ಮಾನವ ಲೈಂಗಿಕತೆಯ ಉತ್ತುಂಗವನ್ನು ತಲುಪುವ ಮಾರ್ಗವನ್ನು ಹೇಳಿದ್ದರೆ, ಸಂತ ವ್ಯಾಲೆಂಟೈನ್‌ನ ಸಾವು ಪ್ರೇಮಿಗಳಿಗೆ ಪ್ರೀತಿ ವ್ಯಕ್ತಪಡಿಸುವ ದಿನಾಂಕ ನೀಡಿದೆ.
ಭಾರತದಲ್ಲಿ ಈಗ್ಲೂ ಪ್ರೇಮಿಗಳ ದಿನವನ್ನು ಪಾಶ್ಚಿಮಾತ್ಯ ಸಂಸ್ಕೃತಿ ಎಂದೇ ನಂಬಲಾಗುತ್ತದೆ. ಈ ಬಗ್ಗೆ ಅನೇಕ ಸಂಸ್ಥೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಸೇಂಟ್ ವ್ಯಾಲೆಂಟೈನ್ಸ್ ಡೇ ಪುರುಷರು ಮತ್ತು ಮಹಿಳೆಯರ ನಡುವಿನ ಪ್ರೀತಿಯನ್ನು ಮಾತ್ರವಲ್ಲ, ಮದುವೆಯನ್ನೂ ಸಹ ಪ್ರತಿಪಾದಿಸಿದೆ. ಭಾರತದಲ್ಲಿ ಇದನ್ನು ಪ್ರಣಯದ ದೃಷ್ಟಿಯಿಂದ ಮಾತ್ರ ನೋಡಲಾಗ್ತಿದೆ.

Latest Videos
Follow Us:
Download App:
  • android
  • ios