ಅಬ್ಬಬ್ಬಾ... ಅನಕೊಂಡ ಹಾವನ್ನು ಭುಜದ ಮೇಲೆ ಹೊರೋದಾ? ಈತನ ಸಾಹಸ ಎಂಥದ್ದು?
ಅನಕೊಂಡ ಹಾವನ್ನು ಮೈಮೇಲೆ ಹೊರುವುದು ಸುಲಭವಲ್ಲ. ನೂರಾರು ಕೆಜಿ ತೂಕವಿರುವ ಹಾವನ್ನು ಭುಜಗಳ ಮೇಲೆ ಹೊತ್ತ ವೀಡಿಯೋ ಪ್ರಕಟಿಸಿರುವ ಮೈಕ್ ಹಾಲ್ ಸ್ಟಾನ್ ಬಗ್ಗೆ ಇದೀಗ ಮೆಚ್ಚುಗೆಯ ಹೊಳೆ ಹರಿದಿದೆ.
ಅನಕೊಂಡ... ಹೆಸರು ಕೇಳಿದರೆ ಮೈ ನಡುಕ ಹುಟ್ಟುತ್ತದೆ. ಇದರ ಗಾತ್ರದ ಬಗ್ಗೆ ಭಯಂಕರವಾದ ಕಲ್ಪನೆಯಿದೆ. ಏಕೆಂದರೆ, ಈ ಹಾವನ್ನು ನಮ್ಮ ಚಲನಚಿತ್ರಗಳಲ್ಲಿ ಅತಿರೋಚಕವಾಗಿ ತೋರಿಸಲಾಗಿದೆ. ಇದರ ಹೆಸರಿನಲ್ಲೇ ಹಲವು ಚಲನಚಿತ್ರಗಳು ಬಿಡುಗಡೆಯಾಗಿವೆ. ಇವುಗಳನ್ನು ನೋಡದಿರುವವರು ವಿರಳ. ಈ ಹಾವಿನ ಹೆಸರಿನಲ್ಲೇ ಅದೆಷ್ಟು ಮೈ ನವಿರೇಳಿಸುವಂತಹ ಕಾರ್ಟೂನ್ ಗಳು ಬಂದಿವೆಯೋ ಲೆಕ್ಕವಿಲ್ಲ. ಹೀಗಾಗಿ, ಅನಕೊಂಡ ಹಾವು ವಿಶ್ವಾದ್ಯಂತ ಜನಪ್ರಿಯವಾಗಿದೆ. ಅಸಲಿಗೆ ಅನಕೊಂಡ ಹಾವು ಈ ಭೂಮಿಯ ಮೇಲೆ ಇರುವ ಅತಿದೊಡ್ಡ ಹಾವು. ಚಲನಚಿತ್ರಗಳಲ್ಲಿ ತೋರಿಸಿರುವಂತೆ ಇಲ್ಲವಾದರೂ ಅದರ ಗಾತ್ರ ನಾವು ನೋವು ಸಾಮಾನ್ಯವಾಗಿ ಕಾಣುವ ಹಾವಿನಂತಲ್ಲ. ದಕ್ಷಿಣ ಅಮೆರಿಕ ಭಾಗದಲ್ಲಿರುವ ಬ್ರೆಜಿಲ್, ಈಕ್ವೆಡಾರ್, ಕೋಲಂಬಿಯಾ, ದಕ್ಷಿಣ ಅರ್ಜೆಂಟೀನಾದ ಕಾಡುಗಳಲ್ಲಿ ಕಂಡುಬರುತ್ತದೆ. ಅನಕೊಂಡ ಹಾವಿನಲ್ಲಿ ನಾಲ್ಕು ಪ್ರಭೇದಗಳನ್ನು ಇದುವರೆಗೆ ಗುರುತಿಸಲಾಗಿದೆ. ಈ ಹಾವು ವಿಷಕಾರಿಯಲ್ಲ. ಕಚ್ಚುವುದೇ ಕಡಿಮೆ, ಒಂದೊಮ್ಮೆ ಕಚ್ಚಿದರೂ ವಿಷವಿರುವುದಿಲ್ಲ. ತನ್ನ ಬೇಟೆಯನ್ನು ಸುತ್ತುವರಿದು ಉಸಿರುಗಟ್ಟಿಸಿ ಸಾಯಿಸಿ, ನುಂಗುತ್ತದೆ. ಸಾಮಾನ್ಯವಾಗಿ 9 ಮೀಟರ್ ಉದ್ದವಿದ್ದು, ನಸು ಹಸಿರು ಬಣ್ಣ ಹೊಂದಿರುತ್ತವೆ. ಮೈಮೇಲೆ ದೊಡ್ಡದಾದ ಕಪ್ಪು ಚುಕ್ಕಿಗಳಿರುತ್ತವೆ. ಒಟ್ಟಿನಲ್ಲಿ ಬೃದಹಾಕಾರದ ಈ ಹಾವನ್ನು ನೋಡಿದರೆ ಭಯದ ಅಲೆಗಳು ನಮ್ಮಲ್ಲಿ ಮೂಡುವುದು ನಿಶ್ಚಿತ. ಆದರೆ, ಇಂತಹ ಹಾವನ್ನು ಸಹ ಮನುಷ್ಯ ತನ್ನ ಸಹವಾಸದಲ್ಲಿ ಇರಿಸಿಕೊಳ್ಳುವುದಿದೆ.
ಅನಕೊಂಡ (Anaconda) ಹಾವಿನೊಂದಿಗೆ ಆಟವಾಡುವ (Play) ಮಕ್ಕಳ ವೀಡಿಯೋಗಳನ್ನು ನೀವು ನೋಡಿರಬಹುದು. ಅದು ಹೇಗೋ ಗೊತ್ತಿಲ್ಲ, ದಕ್ಷಿಣ ಅಮೆರಿಕದ (South America) ಕೆಲವು ಪ್ರದೇಶದಲ್ಲಿ ಅನಕೊಂಡ ಹಾವಿನೊಂದಿಗೆ ಮಕ್ಕಳು ಚೆಲ್ಲಾಟವಾಡುತ್ತವೆ. ಹಾಗೆಯೇ, ಅನೇಕ ರೂಪದರ್ಶಿಗಳು ಈ ಹಾವಿನೊಂದಿಗೆ ಸರಸವಾಡುತ್ತ ಫೋಟೊಶೂಟ್ ಮಾಡಿಸಿಕೊಳ್ಳುವುದಿದೆ. ಒಟ್ಟಿನಲ್ಲಿ ಅನಕೊಂಡ ಹಾವು (Snake) ನೋಡಲು ದೊಡ್ಡದಾಗಿದ್ದರೂ ಮನುಷ್ಯನಿಗೆ ತೀರ ಅಪರಿಚಿತವಾಗಿಲ್ಲ. ಹಾಗೆಯೇ, ಇದು ಮನುಷ್ಯನನ್ನು ಬೇಟೆಯಾಡುವುದು ಕಡಿಮೆ. ಇದರೊಂದಿಗಿನ ಮುಖಾಮುಖಿ ಅಪಾಯಕಾರಿ ಆಗಬಹುದಾದರೂ ಮನುಷ್ಯನಿಗೆ ತೀವ್ರ ಹಾನಿಯುಂಟು ಮಾಡಿದ್ದು ಕಡಿಮೆಯೇ ಎನ್ನಬಹುದು.
ಶ್ವಾನದ ರೋಚಕ ಫೀಲ್ಡಿಂಗ್, ಬ್ಯೂಟಿಫುಲ್ ಕ್ಯಾಚ್: ಬಿಸಿಸಿಐನಿಂದ ಪಕ್ಕಾ ಕಾಲ್ ಬರುತ್ತೆ ಎಂದ ನೆಟ್ಟಿಗರು
ಹಾವನ್ನು ಹೊತ್ತ ಮೈಕ್
ಸರೀಸೃಪಗಳ ಪ್ರಿಯರೆಂದೇ ಕರೆಸಿಕೊಳ್ಳುವ ಮೈಕ್ ಹಾಲ್ ಸ್ಟಾನ್ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಯಾವಾಗಲೂ ವಿವಿಧ ಪ್ರಾಣಿಗಳೊಂದಿಗಿನ (Animal) ಫೋಟೊಗಳನ್ನು (Photo) ಶೇರ್ (Share) ಮಾಡಿಕೊಳ್ಳುವುದು ಕಂಡುಬರುತ್ತದೆ. ಹಲವು ಸರೀಸೃಪಗಳೊಂದಿಗೆ (Reptile) ಇರುವ ಚಿತ್ರಗಳನ್ನು ಅವರು ಪ್ರಕಟಿಸುತ್ತಾರೆ. ಕೆಟ್ಟ ವಿಷಕಾರಿ ಹಾವು ಸೇರಿದಂತೆ ಮೊಸಳೆಗಳೊಂದಿಗೂ ಅವರು ಚಿತ್ರಗಳನ್ನು ಶೇರ್ ಮಾಡುತ್ತಾರೆ. ಈ ಬಾರಿಯ ಅವರ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಹೆಚ್ಚು ಸಂಚಲನ ಸೃಷ್ಟಿಸಿದೆ. ಈ ಬಾರಿ ಅವರು ಹಸಿರು ಅನಕೊಂಡ ಹಾವನ್ನು ಭುಜದ ಮೇಲೆ ಹೊತ್ತುಕೊಂಡಿರುವ ವೀಡಿಯೋವನ್ನು ಶೇರ್ ಮಾಡಿದ್ದಾರೆ.
ಈ ವೀಡಿಯೋದಲ್ಲಿ ಮೈಕ್ ಅತ್ಯಂತ ವಿಶ್ವಾಸದಿಂದ ಅನಕೊಂಡ ಹಾವನ್ನು ಹೊತ್ತಿರುವುದು ಕಂಡುಬರುತ್ತದೆ, ಬೃಹತ್ ಹಾವನ್ನು ತಮ್ಮ ಭುಜಗಳ ಮೇಲೆ ಹೊತ್ತಿರುವುದು ಅವರಿಗೂ ಸ್ವತಃ ಥ್ರಿಲ್ ಆಗಿದೆ. ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದ ಹಾಗೆಯೇ, ಸಿಕ್ಕಾಪಟ್ಟೆ ಮೆಚ್ಚುಗೆ ಬಂದಿದೆ. ಮೈಕ್ ಹಾಲ್ ಸ್ಟಾನ್ ಅವರ ಧೈರ್ಯವನ್ನು (Brave) ಎಲ್ಲರೂ ಕೊಂಡಾಡಿದ್ದಾರೆ.
ಅಬ್ಬಾ ತೂಕ
ಅನಕೊಂಡ ಹಾವು ಸಾಕಷ್ಟು ಭಾರ (Weight) ವಿರುತ್ತದೆ. ದೊಡ್ಡ ಗಾತ್ರದ ಅನಕೊಂಡ ಸುಮಾರು 250 ಕೆಜಿಯವರೆಗೂ ತೂಗುತ್ತದೆ. ಮೈಕಲ್ ಅವರು ಹೊತ್ತುಕೊಂಡಿರುವ ಅನಕೊಂಡ ಅಷ್ಟು ತೂಕದ್ದಲ್ಲವಾದರೂ ತೀರ ಕಡಿಮೆಯೇನೂ ಇರುವುದಿಲ್ಲ. ಹೀಗಾಗಿ, ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಮಂದದೃಷ್ಟಿ: ಜನಿಸಿ ವರ್ಷಗಳ ಬಳಿಕ ಮೊದಲ ಬಾರಿ ಅಮ್ಮನ ನೋಡಿದ ಕಂದನ ರಿಯಾಕ್ಷನ್ ನೋಡಿ
ಬಹಳಷ್ಟು ಜನ “ನೀವು ಸಿಕ್ಕಾಪಟ್ಟೆ ಧೈರ್ಯವಂತರು’ ಎಂದು ಹೇಳಿದ್ದಾರೆ. ಹಲವರು ಎಚ್ಚರಿಕೆಯನ್ನೂ ನೀಡಿದ್ದಾರೆ. “ಈ ಹಾವು ಸುಂದರವಾಗಿದೆ, ಆದರೆ ಅಪಾಯಕಾರಿಯೂ ಆಗಿದೆ, ಹುಷಾರು’ ಎಂದು ಹೇಳಿದ್ದಾರೆ. ಒಬ್ಬರು, “ನೀವು ಇಂತಹ ಪ್ರಾಣಿಗಳೊಂದಿಗೆ ಕೆಲಸ ಮಾಡುವುದನ್ನು ಭಾರೀ ಇಷ್ಟಪಡುತ್ತೀರಿ. ನನಗೆ ಸಾಧ್ಯವಿಲ್ಲ’ ಎಂದು ಹೇಳಿದ್ದರೆ, ಮತ್ತೊಬ್ಬರು, “ಇಂತಹ ಪ್ರಾಣಿಗಳೊಂದಿಗೆ ಒಡನಾಡುವುದು ಡೇಂಜರಸ್’ ಎಂದು ಹೇಳಿದ್ದಾರೆ.