ಏಕಾಂಗಿತನಕ್ಕೆ ಪರಿಹಾರ ನಿಮ್ಮಲ್ಲೇ ಇದೆ, ನಿಮ್ಮ ಜೊತೆ ನೀವೇ ಫ್ರೆಂಡ್‌ಶಿಪ್ ಮಾಡಿಕೊಳ್ಳಿ!
ಬೇರೊಂದು ವ್ಯಕ್ತಿಯ ಸಾಂಗತ್ಯದಿಂದ ನಿಮ್ಮ ಜೀವನದ ಏಕಾಂಗಿತನವನ್ನು ತುಂಬಲು ಸಾಧ್ಯವೇ ಇಲ್ಲ. ಹಾಗೆ ನೀವು ಮಾಡಿದರೂ ಸಹ, ಅದು ಬಹಳ ಕಾಲದವರೆಗೆ ನಿಲ್ಲುವುದಿಲ್ಲ. ಸ್ವಲ್ಪ ಕಾಲಕ್ಕಾಗಿ ನೀವು ಒಬ್ಬಂಟಿಗರಾಗಿ, ಸುಖವಾಗಿರುವುದನ್ನು ಕಲಿತಾಗ, ನೀವು ಏಕಾಂಗಿ ಎಂದು ನಿಮಗೆ ಅನಿಸುವುದೇ ಇಲ್ಲ.
-ಶ್ರೀ ಶ್ರೀ ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಬೆಂಗಳೂರು
ಇಂದು ಜಗತ್ತಿನಲ್ಲಿ ಏಕಾಂಗಿತನದ ಸಾಂಕ್ರಾಮಿಕವುಂಟಾಗಿದೆ. ಅನೇಕರಿಗೆ, ತಾವು ಪ್ರೀತಿಸ್ಪಡುತ್ತಿಲ್ಲ ಎಂಬ ಭಾವನೆಯಿದೆ. ಆದರೆ, ನಿಜ ಏನು ಗೊತ್ತಾ? ನಿಮ್ಮನ್ನು ಪ್ರೀತಿಸುವ ಸಂಗತಿಗಳು ನಿಮ್ಮ ಸುತ್ತಮುತ್ತ ಸಾಕಷ್ಟಿವೆ. ಈ ಭೂಮಿ, ಈ ಗಾಳಿ ನಿಮ್ಮನ್ನು ಆತ್ಮೀಯವಾಗಿ ಹಿಡಿದಿಟ್ಟುಕೊಂಡಿದೆ. ಈ ಭೂಮಿ ನಿಮ್ಮನ್ನು ಪ್ರೀತಿಸುತ್ತದೆ, ಆದ್ದರಿಂದ ನಿಮ್ಮನ್ನು ನೇರವಾಗಿ ಹಿಡಿದಿಟ್ಟುಕೊಂಡಿದೆ. ಈ ಭೂಮಿಯ ಪ್ರೇಮದ ಶಕ್ತಿಯೇ ಗುರುತ್ವಾಕರ್ಷಣ ಶಕ್ತಿ. ಭಗವಂತ ನಿಮ್ಮನ್ನು ಬಹಳ ಪ್ರೀತಿಸುತ್ತಾನೆ. ಇದನ್ನು ನೀವು ಅರಿತಾಕ್ಷಣ, ನೀವು ಏಕಾಂಗಿತನವನ್ನು ಅನುಭವಿಸುವುದೇ ಇಲ್ಲ. ಏಕಮುಖವಾದ ಪ್ರೇಮದ ಅತಿ ದೊಡ್ಡ ಸಂತ್ರಸ್ತನೆಂದರೆ, ಭಗವಂತ! ಭಗವಂತ ನಿಮ್ಮನ್ನು ಎಷ್ಟುಪ್ರೀತಿಸುತ್ತಾನೆ, ಆದರೆ ನೀವು ಅದನ್ನು ಗುರುತಿಸುವುದೇ ಇಲ್ಲ.
ಬೇರೊಂದು ವ್ಯಕ್ತಿಯ ಸಾಂಗತ್ಯದಿಂದ ನಿಮ್ಮ ಜೀವನದ (Life) ಏಕಾಂಗಿತನವನ್ನು ತುಂಬಲು ಸಾಧ್ಯವೇ ಇಲ್ಲ. ಹಾಗೆ ನೀವು ಮಾಡಿದರೂ ಸಹ, ಅದು ಬಹಳ ಕಾಲದವರೆಗೆ ನಿಲ್ಲುವುದಿಲ್ಲ. ಸ್ವಲ್ಪ ಕಾಲಕ್ಕಾಗಿ ನೀವು ಒಬ್ಬಂಟಿ(Alone)ಗರಾಗಿ, ಸುಖವಾಗಿರುವುದನ್ನು ಕಲಿತಾಗ, ನೀವು ಏಕಾಂಗಿ ಎಂದು ನಿಮಗೆ ಅನಿಸುವುದೇ ಇಲ್ಲ.
International Friendship Day 2023: ಸ್ನೇಹಿತರ ದಿನದ ಆಚರಣೆ ಯಾವಾಗ, ಮಹತ್ವವೇನು?
ತಮ್ಮದೇ ಸಾಂಗತ್ಯವನ್ನು ಆನಂದಿಸುವವರು, ಬೇಸರಿಕೆಯನ್ನು ತರಿಸುವಂತಹ ವ್ಯಕ್ತಿತ್ವವನ್ನು (Personality) ಹೊಂದಲು ಸಾಧ್ಯವೇ ಇಲ್ಲ. ನಿಮ್ಮದೇ ಸಂಘದಿಂದ ನಿಮಗೆ ಬೇಸರಿಕೆಯಾದರೆ, ಇನ್ನು ಇತರರಿಗೆ ನೀವು ಎಷ್ಟುಬೇಸರಿಕೆಯನ್ನು ತರಿಸುವವರಾಗುತ್ತೀರಿ! ದೂರದಿಂದ ಎಲ್ಲಾ ಸಾಂಗತ್ಯವೂ ಚೆನ್ನಾಗಿಯೇ ಇದೆಯೆಂದು ಅನಿಸುತ್ತದೆ.
ಏಕಾಂಗಿತನ ನೀಗುವುದು ಹೇಗೆ?
ಸದಾಕಾಲ ಜನರೊಡನೆಯೇ ಇರುವವರು ಏಕಾಂಗಿತನದ ಸೌಖ್ಯಕ್ಕಾಗಿ ಬಯಸುತ್ತಾರೆ. ಸದಾ ಏಕಾಂಗಿಗಳಾಗಿರುವವರು, ಯಾವ ಸಂಘವೂ ಇಲ್ಲದೆ ಹೆಚ್ಚು ಏಕಾಂಗಿತನವನ್ನು ಅನುಭವಿಸುತ್ತಾರೆ. ತಮಗೂ ಸಮತೋಲನ ಸಿಗಬಹುದೇ ಎಂದು ಎದುರು ನೋಡುತ್ತಿರುತ್ತಾರೆ. ತಪ್ಪಿಸಿಕೊಂಡು ಹಿಮಾಲಯಗಳಿಗೆ ಓಡಿಹೋಗಿ ಎಂದು ನಾವು ಹೇಳುತ್ತಿಲ್ಲ. ಆದರೆ ಆಗಿಂದಾಗ, ನಿಮ್ಮ ಅತಿ ಅಪ್ತರಿಂದ, ನೀವು ಬಹಳವಾಗಿ ನೆಚ್ಚಿಕೊಂಡಿರುವವರಿಂದ ಸ್ವಲ್ಪ ಅಂತರವನ್ನು (Distance) ಕಾಯ್ದುಕೊಳ್ಳಿ. ಪ್ರತಿದಿನ ಕೆಲ ನಿಮಿಷಗಳವರೆಗೆ ಜಗತ್ತನ್ನು ಮತ್ತು ಅದರೊಳಗಿರುವ ಎಲ್ಲದ್ದನ್ನೂ ದೂರವಿಟ್ಟು ನಿಮ್ಮೊಡನೆಯೇ ಇರಿ, ಧ್ಯಾನ ಮಾಡಿ. ಆಗ ನೀವು ಒಬ್ಬಂಟಿಗರಾಗಿದ್ದರೂ ಏಕಾಂಗಿತನವನ್ನು ಅನುಭವಿಸುವುದಿಲ್ಲ.
ಸೇವೆ ಮಾಡುವುದು ಮತ್ತು ಇತರರಿಗೆ ಉಪಯುಕ್ತವಾಗಿರವುದು, ಏಕಾಂಗಿತನದಿಂದ ಹೊರಬರುವ ಶಕ್ತಿಶಾಲಿಯಾದ ದಾರಿ. ನೀವು ಮಾಡುವ ಸೇವೆಯು ನಿಮ್ಮಲ್ಲಿ ಅಪಾರ ಬದಲಾವಣೆಗಳನ್ನು ತರಬಲ್ಲದು.
Happy Friendship Day: ಸ್ನೇಹಿತರಿಗೆ ಶುಭಾಶಯ ತಿಳಿಸೋದನ್ನು ಮರೀಬೇಡಿ
ದುಃಖಕ್ಕೆ ಕಾರಣ ನಿಮ್ಮ ಗಡಿ, ಸೀಮಿತತೆ
ಪ್ರತಿ ಸಲ ನೀವು ಏಕಾಂಗಿತನವನ್ನು ಅನುಭವಿಸಿದಾಗೆಲ್ಲಾ ನೀವು ಸೃಷ್ಟಿಸಿಕೊಂಡಿರುವ ಗಡಿಗಳ ಅರಿವನ್ನು ತಂದುಕೊಳ್ಳಿ. ನಿಮ್ಮ ಸೀಮಿತತೆಗಳು ಹಾಗೂ ನಿಮ್ಮ ಗಡಿಗಳೇ ನಿಮ್ಮ ದುಃಖದ ನಿಜಕಾರಣ. ಕೃತಜ್ಞರಾಗಿ, ಶಾಂತಿಗಾಗಿ ಪ್ರಾರ್ಥಿಸಿ. ಆ ಕ್ಷಣವೇ, ಪರಿಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ, ಮುಗುಳ್ನಗುತ್ತೀರಿ ಮತ್ತು ಆ ಪರಿಸ್ಥಿತಿಯಿಂದ ದಾಟಿ ಹೊರಬಲ್ಲಿರಿ.
ನಿಮ್ಮನ್ನು ಉತ್ಸಹಭರಿತರಾಗಿ, ವಿಶ್ವಾಸದಿಂದ ತುಂಬಿರುವವರಂತೆ ನಿಮ್ಮನ್ನು ಒತ್ತಾಯಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಅಪ್ರಯೋಜಕರು ಎಂದು ನಿಮಗೆ ಅನಿಸಿದಾಗೆಲ್ಲಾ ಪ್ರಾರ್ಥನೆ ಮಾಡಿ ಶರಣಾಗಿ. ಆಗ ನಿಮ್ಮ ವಿಶ್ವಾಸ ಮತ್ತು ಉತ್ಸಾಹ ಮರಳಿ ಬರುತ್ತಿರುವುದನ್ನು ಕಾಣುವಿರಿ. ಅತೀವ ಸಂತೋಷವಾಗಿರಲಿ, ಅತೀವ ದುಃಖವಾಗಿರಲಿ, ಇವುಗಳಿಂದ ಸ್ಪರ್ಶಿತರಾಗದಿರುವಂತಹ ಭಾಗ ನಮ್ಮಲ್ಲಿದೆ. ನಾವು ಯಾರನ್ನೇ ಭೇಟಿ ಮಾಡಲಿ, ಅವರೆಲ್ಲರೂ ಸಂತೋಷವಾಗಿದ್ದು, ಸಂತೋಷ (Happiness)ವನ್ನು ಹೊರಸೂಸಬೇಕು ಎಂಬ ಬಯಕೆ ನಿಮ್ಮದಾಗಿರಬೇಕು.
ನಿಮ್ಮ ಏಕಾಂಗಿತನದಿಂದ ಹೊರಬರಲು ನಿಮ್ಮಂತೆಯೇ ಸಮಾನ ಆಸಕ್ತಿಗಳನ್ನು ಹಂಚಿಕೊಳ್ಳುವವರೊಡನೆ ಸ್ನೇಹ (Friendship)ವನ್ನು ಬೆಳೆಸುತ್ತೀರಿ. ಆದರೆ ಜ್ಞಾನದಲ್ಲಿ ಪರಸ್ಪರ ಉತ್ಥಾಪಿಸಿಕೊಳ್ಳುವಂತಹ ಸ್ನೇಹಿತರನ್ನು ಕಾಣುವುದು ಅತಿ ವಿರಳ. ಜೀವನದಲ್ಲಿ ಕಷ್ಟಕಾಲ ಬಂದಾಗ ಆ ಕಷ್ಟಕಾಲವು ನಿಮ್ಮಿಂದ ಉತ್ತಮವಾದುದನ್ನೇ ಹೊರತರುತ್ತದೆ. ಕಾಲವು ಒಳ್ಳೆಯದಾಗಿದ್ದಾಗ, ಜಗತ್ತಿನ ಉತ್ತಮವಾದದ್ದೇ ನಿಮಗೆ ಕೊಡಲ್ಪಡುತ್ತದೆ. ಜೀವನವು ಇವೆರಡರ ಮಿಶ್ರಣ.
ಏಕಾಂಗಿತನ ಕೂಡ ತಾತ್ಕಾಲಿಕ
ನೀವು ಪೂರ್ಣವಾಗಿ ಬೇರ್ಪಟ್ಟಿರುವಿರಿ ಎಂದು ನಿಮಗೆ ಅನಿಸಿದಾಗ, ಸಂಬಂಧಪಡಿಸಿಕೊಳ್ಳಲು ಒದ್ದಾಡಬೇಡಿ ಅಥವಾ ಹೋರಾಡಬೇಡಿ. ಸುಮ್ಮನೆ ವಿಶ್ರಮಿಸಿ. ನಿದ್ದೆ ಮಾಡುತ್ತಿರುವಾಗ ನಿಮ್ಮ ಅತಿ ಆಪ್ತರಿಂದಲೂ ಪೂರ್ಣವಾಗಿ ಬೇರ್ಪಟ್ಟಿರುತ್ತೀರಿ. ನಿದ್ದೆಯಲ್ಲಿ ನೀವು ಏಕಾಂಗಿಗಳಾಗಿಯೇ ಇರುತ್ತೀರಿ. ಇಡೀ ಜಗತ್ತು (World) ಕೇವಲ ಒಂದು ಕನಸು ಎಂದು ಅರಿತಾಗ ಮುಗುಳ್ನಗುತ್ತೀರಿ.
ಜಗತ್ತೆಲ್ಲವೂ ನೀರಿನ ಮೇಲಿನ ಗುಳ್ಳೆಗಳಂತೆ, ಅಶಾಶ್ವತ. ಸ್ವಲ್ಪ ಹಿಂದಿರುಗಿ ನೋಡಿ. ನೀವು ಭೇಟಿ ಮಾಡಿದ ಅನೇಕರು, ಆಟವಾಡಿದ ಜೊತೆಗಾರರು, ನಡೆದ ಸಂತೋಷಮಯವಾದ, ದುಃಖಮಯವಾದ ಘಟನೆಗಳೆಲ್ಲವೂ, ಹತ್ತು ವರ್ಷಗಳ ಹಿಂದೆ ನಡೆದ ಯಾವುದೂ ಈಗಿಲ್ಲ. ಅವೆಲ್ಲವೂ ಹೊರಟುಹೋಗಿವೆ. ಈ ಎಲ್ಲಾ ದುಃಖಗಳೂ, ಏಕಾಂಗಿತನವೂ ಅದೇ ರೀತಿಯಾಗಿಯೇ ಹೊರಟುಹೋಗುತ್ತವೆ ಎಂದು ತಿಳಿಯಿರಿ. ಎಲ್ಲವೂ ಹೇಗಿದ್ದರೂ ಅಶಾಶ್ವತ, ನೀವು ಮಾತ್ರ ಶಾಶ್ವತ. ಆದ್ದರಿಂದ, ಎಲ್ಲದ್ದರೊಡನೆಯೂ ಸಂಬಂಧಪಡಿಸಿಕೊಳ್ಳುವ ಅವಶ್ಯಕತೆಯಾದರೂ ಏನು? ಬೇರ್ಪಟ್ಟಭಾವವೆದ್ದಾಗ, ದುಃಖಪಡಬೇಡಿ. ಅದನ್ನು ಒಂದು ಮುಗುಳ್ನಗೆಯಿಂದ ಸ್ವೀಕರಿಸಿ. ಆ ಸಮಯದಲ್ಲಿ ಕುಳಿತು ಧ್ಯಾನ ಮಾಡಿ. ಆಗ ನೀವೆಷ್ಟುಕೇಂದ್ರೀಕೃತರಾಗುತ್ತೀರೆಂದರೆ, ನಿಮ್ಮ ಅಂತರಾಳದಿಂದ ಅಪಾರ ಬಲ ನಿಮ್ಮಲ್ಲಿ ಏಳುತ್ತದೆ.