ದಾರಿಯಲ್ಲಿ ಚಂದದ ವಸ್ತುವೋ, ಬಟ್ಟೆಯೋ ಕಂಡರೆ ಅದನ್ನು ಕೊಳ್ಳಬೇಕು ಎಂದು ಅನಿಸುವುದು ಸಹಜ. ಅವಿವಾಹಿತರಾಗಿದ್ದರೆ ತಕ್ಷಣ ಕೊಂಡುಕೊಳ್ಳುತ್ತಾರೆ. ಇನ್ನು ವಿವಾಹಿತರು ಬೇಡ ಬೇಡ ಅನ್ನುತ್ತಲೇ ಖರೀದಿ ಮಾಡಿಬಿಡುತ್ತಾರೆ.

ನಮ್ಮ ಸುತ್ತಲಿರೋರನ್ನು ಸಂತೋಷವಾಗಿಡುವುದು ಹೀಗೆ!

ಕೆಲವರು ಆಮೇಲೆ ತಮ್ಮ ಸಂಗಾತಿಯೊಂದಿಗೆ ಈ ವಿಷಯ ಹಂಚಿಕೊಳ್ಳುತ್ತಾರೆ ಅದೂ ಅರ್ಧಂಬರ್ಧ! ಆದರೆ ಮೂವರಲ್ಲಿ ಒಬ್ಬ ವಿವಾಹಿತರು ಇಂಥ ವಿಷಯಗಳನ್ನು ತಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ. ಅಷ್ಟೇ ಅಲ್ಲ ಅದನ್ನು ಮುಚ್ಚಿಡಲು ಸುಳ್ಳು ಹೇಳುತ್ತಾರಂತೆ. ಅದಕ್ಕಾಗಿ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸದೆ ನಗದನ್ನೇ ಬಳಸುತ್ತಾರಂತೆ. ಅಥವಾ ತಮ್ಮದೇ ಸ್ವಂತ ಡೆಬಿಟ್‌ ಕಾರ್ಡ್‌ ಬಳಸಿ ಖರೀದಿಸುತ್ತಾರಂತೆ.

ಸಂಕೋಚಕ್ಕೆ ಬಸುರಾಗಬೇಡಿ, NO ಎನ್ನೋದ ಕಲಿತು ಬಿಡಿ!

ಬೋಸ್ಟನ್‌ ಕಾಲೇಜಿನ ಮಾರ್ಕೆಟಿಂಗ್‌ ಪ್ರೊಫೆಸರ್‌ ಹ್ರಿಸ್ತಿನಾ ನಿಕೊಲೊವಾ ನೇತೃತ್ವದಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಜರ್ನಲ್‌ ಆಫ್‌ ಇಂಟರ್‌ ನ್ಯಾಷನಲ್‌ ಕನ್ಸೂಮರ್‌ ರೀಸಚ್‌ರ್‍ನಲ್ಲಿ ಇದು ಪ್ರಕಟವಾಗಿದೆ. ಸಮಾಜದಲ್ಲಿ ಲೈಂಗಿಕ ದ್ರೋಹದ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ, ಆದರೆ ಈ ರೀಯ ಆರ್ಥಿಕ ದ್ರೋಹದ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಕಾರಣಕ್ಕಾಗಿ ಈ ಸಮೀಕ್ಷೆ ನಡೆಸಲಾಗಿತ್ತಂತೆ.