Asianet Suvarna News Asianet Suvarna News

ಮುಖಕ್ಕೆ ಹೊಡೆದ ಹಾಗೆ ಮಾತನಾಡೋ, ಸೂಕ್ಷ್ಮತೆ ಇಲ್ಲದ ಮಂದಿಯಿಂದ ದೂರವಿದ್ದರೆ ಒಳ್ಳೇದು!

ಎಷ್ಟೋ ಜನ ಸೂಕ್ಷ್ಮರಾಗಿರುವುದಿಲ್ಲ. ಅವರು ಬಹಳ ಸುಲಭವಾಗಿ ಮತ್ತೊಬ್ಬರನ್ನು ಕುಗ್ಗಿಸಿ ಮಾತನಾಡುತ್ತಾರೆ. ನೇರವಾಗಿ ಮುಜುಗರ ಸೃಷ್ಟಿಸುತ್ತಾರೆ. ಅಂಥವರೊಂದಿಗೆ ಒಡನಾಡುವಾಗ ಎಚ್ಚರಿಕೆ ಅಗತ್ಯ.
 

Some people have lack of sense do not take them seriously sum
Author
First Published Oct 2, 2023, 11:06 AM IST

ದಿನನಿತ್ಯದ ಜೀವನದಲ್ಲಿ ನಾವು ಎಷ್ಟೋ ಜನರನ್ನು ಭೇಟಿಯಾಗುತ್ತಿರುತ್ತೇವೆ. ಕೆಲವರನ್ನು ಭೇಟಿಯಾದ ಸ್ವಲ್ಪ ಸಮಯದಲ್ಲೇ “ಇವರೆಂಥ ಮನುಷ್ಯರು’ ಎನಿಸಿಬಿಡುತ್ತಾರೆ. ಅವರಲ್ಲಿ ಸೂಕ್ಷ್ಮತೆ ಇರುವುದಿಲ್ಲ. ಮುಜುಗರದ ಪ್ರಶ್ನೆಗಳನ್ನೂ ನೇರವಾಗಿ ಕೇಳುವುದು, ಒರಟಾದ ಭಾಷೆ, ಅವರು ಉಪಯೋಗಿಸುವ ಶಬ್ದಗಳೆಲ್ಲವೂ ಕಿರಿಕಿರಿ ಮೂಡಿಸಬಲ್ಲವು. ಆದರೆ, ಅವರ ಸ್ವಭಾವವೇ ಹಾಗೆ. ಅವರಿಗೆ ಒಂಚೂರೂ ಸೂಕ್ಷ್ಮ ಭಾವನೆಗಳು ಅರ್ಥವಾಗುವುದಿಲ್ಲ. ಹೀಗಾಗಿ, ಮೇಲ್ನೋಟಕ್ಕೆ ಅವರು ಕೆಟ್ಟವರು ಎನಿಸಿಬಿಡುವ ಅಪಾಯವೂ ಇದೆ. ಆದರೆ, ಖಂಡಿತವಾಗಿ ಅವರು ಕೆಟ್ಟವರಾಗಿ ಇರೋದಿಲ್ಲ. ಕೇವಲ ಸೂಕ್ಷ್ಮತೆ ಇಲ್ಲದಿರುವ ವ್ಯಕ್ತಿಗಳಾಗಿರುತ್ತಾರೆ. ಆದರೆ, ಇವರೂ ಅನೇಕ ಬಾರಿ ನಮ್ಮ ಮನಸ್ಸಿಗೆ ಸಾಕಷ್ಟು ಘಾಸಿ ಮಾಡಬಲ್ಲರು. ಇಂಥವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿರುವುದಿಲ್ಲ. ಸಾಮಾನ್ಯವಾಗಿ ಅವರು ಆಡುವ ಮಾತುಗಳು ಹೀಗಿರುತ್ತವೆ. ಅವುಗಳನ್ನು ಅರಿತುಕೊಂಡು ಮನಸ್ಸಿಗೆ ತೆಗೆದುಕೊಳ್ಳದಿದ್ದರಾಯಿತು.
•    ನಾ ಮೊದಲೇ ಹೇಳಿದ್ನಲ್ಲ!
ಕೆಲವು ವಿಚಾರಗಳು (Things) ಸೂಕ್ಷ್ಮವಾಗಿರುತ್ತವೆ. ಮತ್ತೊಬ್ಬರ ಎದುರು ಅವುಗಳನ್ನು ತೋರ್ಪಡಿಸಿಕೊಳ್ಳುವುದು ಮೂರ್ಖತನವಾಗಿರುತ್ತದೆ. ಆದರೆ, ಇವರು ಹಾಗಲ್ಲ. ಎಲ್ಲರೆದುರೇ ನಿಮ್ಮ ಬಳಿ “ನಾ ಆಗಲೇ ಹೇಳಿಲ್ವಾ? ಮೊದಲೇ ಹೇಳಿದ್ನಲ್ಲ?’ ಎನ್ನುವ ಮಾತುಗಳನ್ನಾಡಿ ನಿಮ್ಮನ್ನು ಮುಜುಗರಕ್ಕೆ ಸಿಲುಕಿಸುತ್ತಾರೆ. ಇವರ ಮಾತುಗಳನ್ನು ನೀವು ಗಂಭೀರವಾಗಿ (Serious) ತೆಗೆದುಕೊಂಡರೆ ತೀವ್ರ ಕಿರಿಕಿರಿ (Irritation) ಉಂಟಾಗುವುದು ಗ್ಯಾರೆಂಟಿ. ನೀವು ಏನಾದರೊಂದು ಸಮಸ್ಯೆಯಿಂದ (Problems) ಕುಸಿದು ಕುಳಿತ ಸಮಯದಲ್ಲೂ ಇವರು “ನಾನು ನಿಂಗೆ ಮೊದಲೇ ಹೇಳಿದ್ದೆ ಅಲ್ವಾ?’ ಎಂದೇ ಹೇಳುತ್ತಾರೆ. ಆಗ ಮಾತಿನ ಧಾಟಿ (Tone) ಬೇರೆಯಾಗಿರಬಹುದು ಅಷ್ಟೆ. 

ಪ್ರೀತಿಯ ಸೆಕ್ಸ್ ಜೀವನಕ್ಕೆ ಅತ್ಯಗತ್ಯ ಅನ್ಯೋನ್ಯತೆ, ಆಗಲೇ ಬಾಂಧವ್ಯವೂ ಹೆಚ್ಚೋದು!

•    ನೀನು ಸಿಕ್ಕಾಪಟ್ಟೆ ಸೂಕ್ಷ್ಮ (Sensitive)!
ಮಾತುಕತೆಯನ್ನು ಅಂತ್ಯಗೊಳಿಸುವ ವಾಕ್ಯ ಇದು. ಈ ಮಾತು ಮತ್ತೊಬ್ಬರ ಅನಿಸಿಕೆಗಳನ್ನು (Opinion) ತಳ್ಳಿ ಹಾಕುವಂಥದ್ದು. ನೀವು ಅವರ ಮಾತುಗಳನ್ನು ಒಪ್ಪಿಕೊಂಡಿಲ್ಲ ಎನ್ನುವುದನ್ನು ಇದು ತಿಳಿಸುತ್ತದೆ. ಯಾರಿಗೂ ತಮ್ಮ ಭಾವನೆಗಳನ್ನು ಅಗೌರವದಿಂದ (Disrespect) ಕಾಣುವುದು ಇಷ್ಟವಿರುವುದಿಲ್ಲ ಅಲ್ಲವೇ? 

•    ಇದೆಲ್ಲ ದೊಡ್ಡ ವಿಷಯವಾ?
ಹೇಳುವುದನ್ನು ಹೇಳಿ, ಮಾಡುವುದನ್ನು ಮಾಡಿ ಕೊನೆಗೆ, “ಇದೆಲ್ಲ ದೊಡ್ಡ ವಿಚಾರವೇ ಅಲ್ಲ, ತಲೆಕೆಡಿಸಿಕೊಳ್ಳಬೇಡ’ ಎನ್ನುವವರಿದ್ದಾರೆ. ಆದರೆ, ಅಂತಹ ಸಮಯದಲ್ಲಿ ಹಾನಿಯಾಗುವುದು ನಿಮಗಾಗಿರುತ್ತದೆ. ಅಲ್ಲದೇ, ಯಾರಾದರೂ ನಿಮ್ಮ ಬಳಿ ತಮ್ಮ ಭಾವನೆಗಳನ್ನು (Feelings) ಹೇಳಿಕೊಂಡಾಗಲೂ ಇಂತಹ ಮಾತನ್ನು ಆಡಬಾರದು. ಇದರಿಂದ ಅವರ ಭಾವನೆಗಳಿಗೆ ನೀವು ಬೆಲೆ ನೀಡುತ್ತಿಲ್ಲ ಎನ್ನುವ ಭಾವನೆ ಮೂಡುತ್ತದೆ. 

•    ಆತ/ಆಕೆ ಸ್ಟುಪಿಡ್ (Stupid)
ಮಾನವನ ಮಿದುಳು ನೆಗೆಟಿವ್ (Negative) ಶಬ್ದಗಳಿಗೆ ತೀವ್ರವಾಗಿ ಸ್ಪಂದಿಸುತ್ತದೆ, ಬಹುಬೇಗ ಹಿಡಿದಿಟ್ಟುಕೊಳ್ಳುತ್ತದೆ. ಯಾರ ಕುರಿತಾದರೂ ಮಾತನಾಡುವಾಗ ಅಪ್ಪಿತಪ್ಪಿಯೂ “ಆತ ಮೂರ್ಖ, ವಿಚಿತ್ರ’ ಇಂತಹ ಶಬ್ದಗಳನ್ನು ಆಡಬಾರದು. ಇದು ಗಂಭೀರವಾದ ಪ್ರಭಾವ (Effect) ಬೀರಬಲ್ಲ ಶಬ್ದ. ಮತ್ತೊಬ್ಬರ ಬಗ್ಗೆ ಅಗೌರವವನ್ನು ತೋರಿಸುವುದಲ್ಲದೇ ಹೇಳುವವವರ  ಸಣ್ಣತನವನ್ನೂ ಬಯಲು ಮಾಡುತ್ತದೆ. ಇಷ್ಟು ಕಠೋರವಾಗಿ ಇನ್ನೊಬ್ಬರ ಬಗ್ಗೆ ಮಾತನಾಡುವುದು ಎಳ್ಳಷ್ಟೂ ಸೂಕ್ಷ್ಮತೆ ನಿಮ್ಮಲ್ಲಿ ಇಲ್ಲದಿರುವುದನ್ನು ಸೂಚಿಸುತ್ತದೆ.

Personality Tips: ಈ ಜನ ಇದ್ದಾರಲ್ಲ? ಭಾರೀ ಜಾಣರು, ಒತ್ತಡವನ್ನು ಸುಲಭವಾಗಿ ಎದುರಿಸ್ತಾರೆ!

•    ಡೋಂಟ್ ಕೇರ್ (Don’t Care)
ಈ ವಾಕ್ಯವು ಭಾವನಾತ್ಮಕವಾಗಿ ಗೋಡೆಯನ್ನು (Wall) ನಿರ್ಮಿಸುತ್ತದೆ. ಏಕೆಂದರೆ, ಇದು ನೀವು ಬೇರೊಬ್ಬರ ಮಾತುಗಳನ್ನು, ವಿಚಾರಗಳನ್ನು ತಿಳಿದುಕೊಳ್ಳಲು, ಅಳವಡಿಸಿಕೊಳ್ಳಲು ಸಿದ್ಧರಿಲ್ಲ ಎನ್ನುವುದು ಸೂಚಿಸುತ್ತದೆ. ಕೆಲವರು ಸುಮ್ಮನೆ ಮಾತಿನ ಮಧ್ಯೆ ಕೊಚ್ಚಿಕೊಳ್ಳುವವರಂತೆ ಎಲ್ಲದಕ್ಕೂ “ಐ ಡೋಂಟ್ ಕೇರ್’ ಎನ್ನುತ್ತಿರುತ್ತಾರೆ. ಬೇರೊಬ್ಬರ ಬಗ್ಗೆ ಗೌರವವಿಲ್ಲದ ಧೋರಣೆಯನ್ನು ಇದು ತೋರ್ಪಡಿಸುತ್ತದೆ.

•    ಎಲ್ಲ ನಿನ್ನ ತಲೆಯಲ್ಲಿದೆ
ಯಾವುದೇ ಪರಿಸ್ಥಿತಿಯನ್ನು (Situation) ಪ್ರತಿಯೊಬ್ಬರೂ ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ. ಬೇರೊಬ್ಬರು ಯೋಚನೆ ಮಾಡಿದ ವಿಧಾನ ತಪ್ಪು, ನಾವು ಮಾಡಿದ್ದುದು ಸರಿ ಎನ್ನಲು ಬರುವುದಿಲ್ಲ. ಮತ್ತೊಬ್ಬರನ್ನು ಅವಮಾನಿಸುವವರಂತೆ ಈ ಮೇಲಿನ ವಾಕ್ಯ ಹೇಳಿದರೆ, ಅವರು ಎದುರಿಸುತ್ತಿರುವ ಪರಿಸ್ಥಿತಿಯೇ ಸುಳ್ಳು ಎಂದಂತೆ ಆಗುತ್ತದೆ.  
 

Follow Us:
Download App:
  • android
  • ios