ಅಕ್ಸಿಯಂ ಮಿಷನ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಶುಭಾಂಶು ಶುಕ್ಲಾ ಅವರ ಸಾಧನೆಯ ಹಿಂದಿನ ಪ್ರೇರಣೆ ಮತ್ತು ಪ್ರೀತಿಯ ಕಥೆ. ಲಕ್ನೋದಿಂದ ಬಾಹ್ಯಾಕಾಶದವರೆಗಿನ ಅವರ ಪ್ರಯಾಣದಲ್ಲಿ ಪತ್ನಿ ಕಾಮ್ನಾ ಮಿಶ್ರಾ ಅವರ ಪಾತ್ರ.

ಕ್ಸಿಯಂ ಮಿಷನ್‌ ಮೂಲಕ ಭಾರತದ ಶುಭಾಂಶು ಶುಕ್ಲಾ ಹೊಸ ಸಾಧನೆ ಮಾಡಿದ್ದಾರೆ. 41 ವರ್ಷಗಳ ಬಳಿಕ ಭಾರತೀಯನೊಬ್ಬ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮಟ್ಟಿದ್ದಾರೆ. ಇಲ್ಲಿ ಅವರು 14 ದಿನಗಳ ಕಾಲ ಹಲವು ಸಂಶೋಧನೆಗಳಲ್ಲಿ ಭಾಗಿಯಾಗಿದ್ದಾರೆ. ಇಡೀ ದೇಶ ಅವರ ಸಾಧನೆಗೆ ಸಂಭ್ರಮ ಪಡುತ್ತಿದ್ದರೆ, ಒಬ್ಬರು ಮಾತ್ರ ಈ 14 ದಿನಗಳನ್ನು ಚಡಪಡಿಕೆಯಲ್ಲಿಯೇ ಕಳೆಯಲಿದ್ದಾರೆ. ಆಕೆ ಕಾಮ್ನಾ ಮಿಶ್ರಾ. ಬಾಲ್ಯದಿಂದಲೂ ಆಕೆಯನ್ನು ಕಂಡಿರುವ ಶುಭಾಂಶು ಶುಕ್ಲಾ, ತಮ್ಮ ಈವರೆಗಿನ ಸಾಧನೆಗೆ ಆಕೆಯೇ ಅತೀದೊಡ್ಡ ಬಲ ಎಂದು ಹೇಳಿದ್ದಾರೆ.

ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಸ್ಪೇಸ್‌ ಸೆಂಟರ್‌ನಿಂದ ಅಕ್ಸಿಯಂ-4 ಮಿಷನ್‌ ಉಡಾವಣೆ ಆದಾಗ ಶುಭಾಂಶು ಶುಕ್ಲಾ ಎಷ್ಟು ಉತ್ಸಾಹದಲ್ಲಿದ್ದರೋ ಗೊತ್ತಿಲ್ಲ. ಆದರೆ, ಕಾಮ್ನಾ ಮಿಶ್ರಾ ಮುಖದಲ್ಲಿ ಮಾತ್ರ ಆತಂಕದ ಭಾವಗಳು ಎದ್ದು ಕಾಣುತ್ತಿದ್ದವು. ಲಿಫ್ಟ್‌ಆಫ್‌ ಆಗುವ ಕೆಲ ಗಂಟೆಗಳ ಮುನ್ನ ಶುಕ್ಲಾ, ತನ್ನ ಪ್ರೀತಿಯ ಪತ್ನಿಗಾಗಿ ಭಾವುಕ ನೋಟ್‌ ಬರೆದಿದ್ದರು. ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಅವರು, ತಮ್ಮ ಇಷ್ಟು ದೂರದ ಪ್ರಯಾಣದಲ್ಲಿ ಎಂದೂ ಭರಿಸಲಾಗದ ಜಾಗ ಎಂದು ಕರೆದರೆ, ಕಾಮ್ನಾ ಪ್ರೀತಿ ಮತ್ತೆ ಹೆಮ್ಮೆಯಿಂದ ಇದಕ್ಕೆ ಪ್ರತಿಕ್ರಿಯಿಸಿದರು. ಇವರ ಪ್ರೇಮಕಥೆ ಆರಂಭವಾಗಿದ್ದು ಹೇಗೆ? ಇಲ್ಲಿದೆ ವಿವರ..

ಶುಭಾಂಶು ಶುಕ್ಲಾ ಹಾಗೂ ಕಾಮ್ನಾ ಮಿಶ್ರಾ ಅವರ ಪ್ರೀತಿಯನ್ನು ನೋಡೋವುದಾದರೆ ಹಲವು ದಶಕಗಳ ಹಿಂದೆ ಹೋಗಬೇಕು. ಇಬ್ಬರೂ ಮೊದಲು ಭೇಟಿಯಾಗಿದ್ದು ಲಕ್ನೋನ ಪ್ರಾಥಮಿಕ ಶಾಲೆಯಲ್ಲಿ. ಅಂದಿನಿಂದಲೂ ಅವರು ಸ್ನೇಹಿತರಾಗಿದ್ದರು. ಶಾಲಾ ದಿನಗಳಿಂದ ಹಿಡಿದು ರಾಷ್ಟ್ರದ ಸ್ಪೂರ್ತಿಯಾಗುವವರೆಗೂ ಅವರು ಶಾಂತ ಸ್ವಭಾವದ ಹುಡುಗ ಎಂದು ವೃತ್ತಿಯಲ್ಲಿ ದಂತ ವೈದ್ಯೆ ಆಗಿರುವ ಕಾಮ್ನಾ ಮಿಶ್ರಾ ಹೇಳಿದ್ದಾರೆ.

ಸಾಕಷ್ಟು ಬಾರಿ ಇವರ ಸಂಬಂಧಕ್ಕೆ ಅಂತರಗಳೇ ಅಡ್ಡಿ ಬಂದಿದ್ದವು. ಸಾಕಷ್ಟು ಪ್ರಮುಖ ಕ್ಷಣವನ್ನು ಜೊತೆಯಾಗಿ ಕಳೆಯೋದನ್ನ ಮಿಸ್‌ ಮಾಡಿಕೊಂಡಿದ್ದಾರೆ. ಆದರೆ, ಶುಭಾಂಶು ಶುಕ್ಲಾ ಅವರ ಏರ್‌ಪೋರ್ಸ್‌ನ ವೇಳಾಪಟ್ಟಿಯೇ ಹಾಗಿದ್ದವು ಎನ್ನುತ್ತಾರೆ ಕಾಮ್ನಾ. ಮಗ ಸಿದ್ಧಾರ್ಥನ ಬಾಲ್ಯದ ಹಲವು ಕ್ಷಣಗಳನ್ನು ಶುಭಾಂಶು ಮಿಸ್‌ ಮಾಡಿಕೊಂಡಿದ್ದಾರೆ. ಇದರ ನೋವು ಅವರಲ್ಲಿದ್ದರೂ, ಬದ್ಧತೆ-ಗುರಿಯ ವಿಚಾರದಲ್ಲಿ ಅವರು ಮಹಾಭಾರತದ ಅರ್ಜುನ ಇದ್ಧತೆ. ಅವರಲ್ಲಿ ಗೊಂದಲಗಳೇ ಇರೋದಿಲ್ಲ ಎನ್ನುತ್ತಾರೆ.

ಮನೆಯಲ್ಲಿ ಶುಕ್ಲಾ ಶಿಸ್ತಿನ ವ್ಯಕ್ತಿ ಹಾಗೂ ಶಾಂತ ಸ್ವಭಾವದಲಲ್ಲಿಯೇ ಇರುತ್ತದೆ. ನಾನ್ ಫಿಕ್ಷನ್‌ಗಳು ಯಾವುದೇ ಆಗಿರಲಿ ಅದು ಅವರಿಗೆ ಇಷ್ಟ. ಫಿಟ್‌ನೆಸ್, ಮಗನ ಜೊತೆ ಆಟವಾಡೋದು ಮನತುಂಬಿ ಮಾಡುತ್ತಾರೆ. ಸಮಸ್ಯೆಗಳು ಎದುರಾದಾಗ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ತಮ್ಮ ಎಲ್ಲಾ ಗಮನ ನೀಡುತ್ತಾರೆ ಎಂದು ಗಂಡನ ಬಗ್ಗೆ ಹೇಳಿತ್ತಾರೆ ಕಾಮ್ನಾ. ಫೈಟರ್‌ ಜೆಟ್‌ನ ಪೈಲಟ್‌ ಆಗಿದ್ದವರು, ಸ್ಪೇಸ್‌ ಕ್ಯಾಪ್ಸೂಲ್‌ನಲ್ಲಿ ಗಗನಯಾತ್ರಿಗಿ ಕೂರಲು ಸಾಧ್ಯವಾಗೋದಕ್ಕೆ ಅವರ ಡೆಡಿಕೇಷನ್‌ ಸಾಕ್ಷಿ ಎನ್ನುತ್ತಾರೆ. ಬದುಕಲ್ಲಿ ಎಂಥಾ ಕಷ್ಟದ ಸಾಗರಗಳೇ ಇರಲಿ, ನಾವು ಈಜುತ್ತಿರಬೇಕು ಎನ್ನುವುದು ಅವರು ಯಾವಾಗಲೂ ಹೇಳುವ ಮಾತು..

ಶುಭಾಂಶು ಶುಕ್ಲಾ ಅವರ ಪ್ರಯಾಣವು ಲಕ್ನೋದ ಅಲಿಗಂಜ್ ಕ್ಯಾಂಪಸ್‌ನಲ್ಲಿರುವ ಸಿಟಿ ಮಾಂಟೆಸ್ಸರಿ ಶಾಲೆಯ (CMS) ತರಗತಿ ಕೋಣೆಗಳಲ್ಲಿ ಪ್ರಾರಂಭವಾಯಿತು. ಆದರೆ 1998 ರಲ್ಲಿ ಕಾರ್ಗಿಲ್ ಯುದ್ಧ ಅವರ ಬದುಕನ್ನು ಸಂಪೂರ್ಣವಾಗಿ ಬದಲಾಯಿಸಿತು. ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಸೈನಿಕನಾಗಬೇಕು ಎಂದು ಆಗ ಬಯಸಿದ್ದರು.ದೃಢನಿಶ್ಚಯದಿಂದ ಮತ್ತು ಅವರ ಕುಟುಂಬಕ್ಕೂ ತಿಳಿಸದೆ, ಅವರು UPSC ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪರೀಕ್ಷೆಗೆ ಸದ್ದಿಲ್ಲದೆ ಅರ್ಜಿ ಸಲ್ಲಿಸಿದ್ದು ಮಾತ್ರವಲ್ಲದೆ ಪರೀಕ್ಷೆ ಉತ್ತೀರ್ಣರಾದರು. ಅವರು 2005 ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ NDA ಯಿಂದ ಪದವಿ ಪಡೆದರು, ನಂತರ ಭಾರತೀಯ ವಾಯುಪಡೆ ಅಕಾಡೆಮಿಯಲ್ಲಿ ವಿಮಾನ ತರಬೇತಿಯನ್ನು ಪಡೆದರು. 2006 ರಲ್ಲಿ, ಅವರನ್ನು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ಅಧಿಕೃತವಾಗಿ ನಿಯೋಜಿಸಲಾಯಿತು.

ಶುಕ್ಲಾ ಅವರು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಿಂದ (ಐಐಎಸ್ಸಿ) ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ.

ಕಳೆದ ಹಲವು ವರ್ಷಗಳಲ್ಲಿ ಭಾರತೀಯ ವಾಯುಪಡೆಯಲ್ಲಿ ಯುದ್ಧಕಾಲದ ಪೈಲಟ್‌ ಹಾಗೂ ಟೆಸ್ಟ್‌ ಪೈಲಟ್‌ ಆಗಿ ತಮ್ಮ ಜೀವನ ರೂಪಿಸಿದ್ದಾರೆ. ಅಂದಾಜು 2 ಸಾವಿರ ಗಂಟೆಗಳ ಕಾಲದ ಹಾರಾಟ ಅನುಭವ ಅವರಿಗೆ ಇದೆ. ವಿವಿಧ ರೀತಿಯ ವಿಮಾನಗಳನ್ನು ಹಾರಾಟ ಮಾಡಿದ ಅನುಭವವ ಅವರಲ್ಲಿದೆ.

ಅವರ ನಿಖರತೆ, ಶಿಸ್ತು ಮತ್ತು ತಾಂತ್ರಿಕ ಪರಿಣತಿಯು 2019 ರಲ್ಲಿ ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಕಾರ್ಯಾಚರಣೆಗೆ ನೇಮಕಗೊಂಡ ನಾಲ್ಕು ಗಗನಯಾತ್ರಿಗಳಲ್ಲಿ ಒಬ್ಬರಾಗಿ ಅವರನ್ನು ಆಯ್ಕೆ ಮಾಡಲು ಕಾರಣವಾಯಿತು. ಅಂದಿನಿಂದ ಅವರು ರಷ್ಯಾದ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಮತ್ತು ಬೆಂಗಳೂರಿನಲ್ಲಿರುವ ಭಾರತದ ಗಗನಯಾತ್ರಿ ತರಬೇತಿ ಸೌಲಭ್ಯದಲ್ಲಿ ಕಠಿಣ ಗಗನಯಾತ್ರಿ ತರಬೇತಿಯನ್ನು ಪಡೆದಿದ್ದಾರೆ.