ಎಲ್ಲದಕ್ಕೂ ಯಸ್ ಅಂತ ಹೇಳೋದು ಗ್ರೇಟ್ ಅಲ್ಲ, ನಯವಾಗಿ ನೋ ಅಂತ ಹೇಳುವುದ ಕಲೀರಿ
ಯಾರು ಏನೇ ಹೇಳಿದರೂ ಅದನ್ನು ಒಪ್ಪಿಕೊಳ್ಳುವ ಸ್ವಭಾವ ನಿಮ್ಮದಾ? ಯಾರಿಗಾದರೂ “ನೋ, ಹಾಗಲ್ಲ ಹೀಗೆ’ ಎಂದೋ ಅಥವಾ “ಅದು ನನ್ನಿಂದ ಸಾಧ್ಯವಿಲ್ಲ’ ಎಂದೋ ನೇರವಾಗಿ ಹೇಳಲು ನಿಮ್ಮಿಂದ ಸಾಧ್ಯವಿಲ್ಲವಾ? ಕಷ್ಟಪಟ್ಟಾದರೂ ಸರಿ, “ನೋ’ ಎನ್ನುವುದನ್ನು ಕಲಿತುಕೊಳ್ಳಿ. ಅದರಿಂದ ನಿಮ್ಮ ಬದುಕು ನಿಮ್ಮದಾಗುತ್ತದೆ.
ಯಾರಾದರೂ ನಿಮ್ಮನ್ನು ಏನಾದರೂ ಕೇಳಿದರೆ “ನೋ’ ಎನ್ನಲು ನಿಮಗೆ ಸಾಧ್ಯವಾಗುವುದಿಲ್ಲವೇ? ಎಲ್ಲರನ್ನೂ ಸಂಪ್ರೀತಿಗೊಳಿಸುವುದೆಂದರೆ ನಿಮಗೆ ಇಷ್ಟವೇ? ಹಾಗಾದರೆ, ನೀವು “ಯೆಸ್’ ವ್ಯಕ್ತಿಯಾಗಿದ್ದೀರಿ. ಅಂದರೆ, ನಿಮಗೆ ನೀವೇ ಸಾಕಷ್ಟು ಬಾರಿ ಧೋಕಾ ಮಾಡಿಕೊಳ್ಳುತ್ತೀರಿ. ನಿಮಗೆ ನೀವೇ ನಿರಾಸೆ ಉಂಟಾಗುವಂತೆ ಮಾಡಿಕೊಳ್ಳುತ್ತೀರಿ! ಯಾರಾದರೂ ಏನಾದರೂ ಸಹಾಯಕ್ಕೆ ಕರೆದರೆ ನೀವು “ಯೆಸ್’ ಎಂದೇ ಹೇಳುವುದು. ಯಾವುದಾದರೂ ಫಂಕ್ಷನ್ ಮಿಸ್ ಮಾಡಲು ನಿಮ್ಮಿಂದ ಸಾಧ್ಯವಿಲ್ಲ, “ಅವರು ಆಹ್ವಾನಿಸಿದ್ದಾರಲ್ಲ, ಹೋಗದೇ ಇರುವುದು ಸರಿಯಲ್ಲ’ ಎಂದುಕೊಳ್ಳುತ್ತೀರಿ. ಯಾರಿಗಾದರೂ ಫೇವರ್ ಮಾಡಲು ಕೋರಿದರೂ ನೀವು ಯೆಸ್. ಸಂಬಂಧದಲ್ಲೂ ನೀವು ಎಲ್ಲದಕ್ಕೂ ಯೆಸ್. “ನೋ’ ಎಂದಾಗ ಉಂಟಾಗುವ ಕೆಲವು ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ನೀವು ಇಷ್ಟಪಡುತ್ತೀರಿ. ಹೀಗಾಗಿ, ಸಂಗಾತಿಯ ಎಲ್ಲ ಕೆಲಸಕ್ಕೂ ನೀವು ಯೆಸ್ ಎಂದೇ ಹೇಳುತ್ತೀರಿ. ಅಂದರೆ, ಜೀವನದ ಎಲ್ಲ ಹಂತದಲ್ಲೂ ನೀವು “ಯೆಸ್’ ಕೇಂದ್ರಿತ ವ್ಯಕ್ತಿಯಾಗಿದ್ದೀರಿ. ಈ ಗುಣ ಕ್ರಮೇಣ ನಿಮಗೆ ಅನೇಕ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹೀಗೆ ಮಾಡುತ್ತಲೇ ಇದ್ದರೆ ನಿಮ್ಮದಲ್ಲದ ಬದುಕನ್ನು ನೀವು ಬದುಕಬೇಕಾಗುತ್ತದೆ. ಹೀಗಾಗಿ, ಕೆಲವೊಮ್ಮೆ ಅಥವಾ ಆಗಾಗ ನೋ ಎನ್ನಲು ಯಾವುದೇ ಕಾರಣಕ್ಕೂ ಹಿಂದೇಟು ಹಾಕಬಾರದು. ಅದರಿಂದ ಸಾಕಷ್ಟು ಲಾಭವಿದೆ.
ಯಾರನ್ನೂ ಬೇಸರಪಡಿಸಬಾರದು ಎಂದು ಅವರು ಕೇಳಿದ್ದಕ್ಕೆಲ್ಲ “ಯೆಸ್’ (Yes) ಎನ್ನುವುದಕ್ಕೂ ಹೊಂದಾಣಿಕೆಗೂ (Adjustment) ವ್ಯತ್ಯಾಸವಿದೆ. ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ, ಅವರ ಅಗತ್ಯಕ್ಕೆ ಸ್ಪಂದಿಸುವುದು (Response) ಮುಖ್ಯ. ಆದರೆ, ನಮ್ಮ ಮೌಲ್ಯಗಳನ್ನು (Values) ಬಲಿಕೊಟ್ಟು ಯೆಸ್ ಎನ್ನಬಾರದು. ಹಾಗೆಂದು “ಸಾಧ್ಯವಿಲ್ಲ (Not Possible)’ ಎನ್ನುವುದಕ್ಕೂ ಸೂಕ್ತ ಮಾರ್ಗವಿದೆ. ಒರಟಾಗಿ ಅಥವಾ ಹಠಮಾರಿತನದಿಂದ ನೋ ಎನ್ನಬೇಕು ಎಂದಲ್ಲ. ಗೌರವಯುತವಾಗಿ, ನೇರವಾಗಿ, ಸ್ಪಷ್ಟವಾಗಿ, ಅತ್ಯಂತ ತಾಳ್ಮೆಯಿಂದ ಹೇಳಬೇಕು. ಈ ಕುರಿತ ಖಚಿತತೆ ನಿಮ್ಮಲ್ಲಿರಲಿ.
ಬುದ್ಧಿ ಇದ್ದರೂ ಪೆದ್ದು ಪೆದ್ದಾಗಿ ಆಡಬೇಡಿ, ಸ್ವಲ್ಪ ಸರಿಯಾಗಿ ಬಿಹೇವ್ ಮಾಡಿ
• ನಿಮ್ಮ ಸಮಯ-ಶಕ್ತಿಯ (Time and Energy) ಉಳಿತಾಯ
ಇಷ್ಟವಿಲ್ಲದಿದ್ದರೂ ಮತ್ತೊಬ್ಬರಿಗಾಗಿ ಎಲ್ಲವನ್ನೂ ಒಪ್ಪಿಕೊಳ್ಳುವುದರಿಂದ ನಿಮ್ಮತನ (Yourself) ಮಾಯವಾಗಬಹುದು. ನಿಶ್ಚಿತವಾಗಿ ನಿಮಗೆ ಏನು ಬೇಕೋ, ಅವುಗಳನ್ನು ಮಾಡಲು ನಿಮ್ಮಲ್ಲಿ ಸಮಯವಿಲ್ಲದೇ ಹೋಗಬಹುದು, ಶಕ್ತಿಯೂ ಇಲ್ಲದೇ ಹೋಗಬಹುದು. ಹೀಗಾಗಿ, ಅನಗತ್ಯವಾಗಿ ಬೇರೊಬ್ಬರಿಗೆ ಸಮಯ ನೀಡುವ ಬದಲು ನಿಮಗೇನು ಬೇಕೋ ಅವುಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತದೆ.
• ಗುರಿ (Goal) ನಿಗದಿಪಡಿಸಿಕೊಳ್ಳಲು ಸಾಧ್ಯ
ಎಲ್ಲದಕ್ಕೂ ಯೆಸ್ ಎನ್ನುವುದರಿಂದ ನಿಮ್ಮ ಜೀವನದ ಗುರಿಗಳೇ ನಿಮಗೆ ಸ್ಪಷ್ಟವಾಗದೆ ಇರಬಹುದು. ಬೇರೊಬ್ಬರು ನಿಮ್ಮ ಜೀವನವನ್ನು (Life) ನಿರ್ದೇಶಿಸುವಂತೆ ಆಗಬಹುದು. ನಿರ್ಧರಿಸುವ ಶಕ್ತಿ ಮತ್ತು ಸಾಮರ್ಥ್ಯ (Capacity) ಕಳೆದುಕೊಂಡಂತೆ ನಿಮಗೆ ಫೀಲ್ ಆಗಬಹುದು. ನೋ ಎನ್ನುವುದನ್ನು ಕಲಿತುಕೊಂಡರೆ ಗುರಿ ರೂಪಿಸಿಕೊಳ್ಳಲು ಹಾಗೂ ಅದನ್ನು ಸಾಧಿಸಲು ಸಾಧ್ಯವಾಗುತ್ತದೆ.
• ಸ್ವಗೌರವ (Self Respect)
ಸದಾಕಾಲ ಬೇರೊಬ್ಬರ ಅಗತ್ಯಗಳಿಗೆ (Need) ಆಗುತ್ತ ನಿಮ್ಮತನವನ್ನೇ ಮರೆಯುವಂತಾದರೆ ಕ್ರಮೇಣ ಸ್ವಗೌರವವೇ ನಶಿಸುತ್ತದೆ. ನಿಮ್ಮ ಬಗ್ಗೆ ಕಾಳಜಿ (Care) ತೆಗೆದುಕೊಳ್ಳುವ ಅಗತ್ಯದ ಬಗ್ಗೆ ಅರಿವಾಗುವುದಿಲ್ಲ. ನಿಮ್ಮದೇ ಅಗತ್ಯಗಳನ್ನು ಕಡೆಗಣಿಸುವ ಪರಿಪಾಠ ಬೆಳೆಸಿಕೊಳ್ಳುತ್ತೀರಿ. “ಸಾಧ್ಯವಿಲ್ಲ ಅಥವಾ ನನ್ನಿಂದ ಆಗದು’ ಎಂದು ಮತ್ತೊಬ್ಬರಿಗೆ ಹೇಳಲು ರೂಢಿಸಿಕೊಳ್ಳುವುದರಿಂದ ನಿಮಗೆ ಆದ್ಯತೆ ಕೊಟ್ಟುಕೊಳ್ಳಲು ಅನುಕೂಲವಾಗುತ್ತದೆ.
Personality Tips: ಒತ್ತಡದಲ್ಲೂ ಕೂಲ್ ಆಗಿರ್ಬೇಕಾ? ಈ ಗುಣಗಳನ್ನ ಬೆಳೆಸ್ಕೊಳಿ
• ಅರ್ಥಪೂರ್ಣ ಬದುಕು (Meaningful Life)
ಮಾಡಲು ಇಷ್ಟವಿಲ್ಲದ ಕೆಲಸಗಳನ್ನು ಒಪ್ಪಿಕೊಳ್ಳದೆ ನೋ (No) ಎನ್ನುವುದರಿಂದ ನಿಮ್ಮ ಮನಸ್ಥಿತಿ ಉತ್ತಮವಾಗುತ್ತದೆ. ಹೆಚ್ಚು ಖುಷಿಯಾಗಿ ಬದುಕಲು ಸಾಧ್ಯವಾಗುತ್ತದೆ. ಆರೋಗ್ಯಕರವಾಗಿರಲು (Healthy) ಅನುಕೂಲವಾಗುತ್ತದೆ ಹಾಗೂ ಅರ್ಥಪೂರ್ಣ ಜೀವನ ನಿಮ್ಮದಾಗುತ್ತದೆ. ಕೆಲವೊಮ್ಮೆ ಅಪರಾಧಿ (Guilt) ಭಾವನೆ ಮೂಡಿದರೂ “ನೋ’ ಎನ್ನುವುದನ್ನು ಕಲಿತುಕೊಳ್ಳಿ. ಅದಕ್ಕೆ ಯಾವುದೇ ರೀತಿ ವಿವರಣೆ ನೀಡುವ ಅಗತ್ಯವಿಲ್ಲ. ಏಕೆಂದರೆ, ಪೀಪಲ್ ಪ್ಲೀಸರ್ (People Pleaser) ಆಗುವುದರಿಂದ ಪ್ರಯೋಜನವಿಲ್ಲ.