Asianet Suvarna News Asianet Suvarna News

Relationship Tips: ಸಂಬಂಧ ವಿಷವಾಗ್ತಿದೆ ಅನ್ನೋದನ್ನು ಹೀಗೆ ಪತ್ತೆ ಮಾಡಿ

ಒಂದು ಸಂಬಂಧ ಗಟ್ಟಿಯಾಗಿರಲು ಅನೇಕ ವಿಷ್ಯಗಳು ಮಹತ್ವ ಪಡೆಯುತ್ತವೆ. ಹೊಂದಾಣಿಕೆ ಇಲ್ಲಿ ಮುಖ್ಯವಾದ್ರೂ ಅತಿಯಾದ ಹೊಂದಾಣಿಕೆ ವಿಷವಾಗುತ್ತದೆ. ಅದೇ ರೀತಿ ಇನ್ನೂ ಕೆಲ ಲಕ್ಷಣಗಳು ನಿಮ್ಮಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.
 

Relationship Tips Things That Poison Your Relationship
Author
First Published May 30, 2023, 4:01 PM IST

ಸ್ನೇಹವಿರಲಿ, ಪ್ರೀತಿಯಿರಲಿ ಇಲ್ಲ ಕುಟುಂಬಸ್ಥರ ಮಧ್ಯೆ ಸಂಬಂಧವಿರಲಿ ಇದು ಯಾವಾಗ್ಲೂ ಆರೋಗ್ಯಕರವಾಗಿರಬೇಕು. ಅನಾರೋಗ್ಯಕರ ಸಂಬಂಧ ದೀರ್ಘ ಸಮಯ ನಿಲ್ಲೋದಿಲ್ಲ. ಉಸಿರುಗಟ್ಟಿಸಿದ ಅನುಭವವನ್ನು ನೀಡುತ್ತದೆ. ನಿಮ್ಮ ಭಾವನಾತ್ಮಕ ಅಗತ್ಯಗಳನ್ನು ನಿಜವಾಗ್ಲೂ ಈ ಸಂಬಂಧದಲ್ಲಿ ಪೂರೈಸಲಾಗ್ತಿದೆಯಾ ಎಂಬ ಪ್ರಶ್ನೆ ಮೂಡಿದಾಗ ನೀವು ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ನಮ್ಮ ಸಂಬಂಧಗಳನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ. ಈ ಸಂಬಂಧ ನಮಗೆ ಹಾನಿಕಾರಕವೇ ಅಥವಾ ನಮ್ಮ ಕ್ಷೇಮಕ್ಕೆ ಯೋಗ್ಯವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. 

ಸಂಬಂಧ (Relationship) ವಿಷಕಾರಿಯಾಗಿದೆಯೇ ಇಲ್ಲ ನಮ್ಮ ಭಾವನೆಯನ್ನು ಅರ್ಥ ಮಾಡಿಕೊಂಡು ನಡೆಯಬಲ್ಲದ್ದಾ ಎಂಬುದನ್ನು ನಾವು ಪರೀಕ್ಷಿಸಿಕೊಳ್ಳಲು ಕೆಲ ಕೀ (Key) ಗಳಿವೆ. ಅವುಗಳನ್ನು ಪರೀಕ್ಷಿಸಿಕೊಂಡರೆ ಸಾಲದು, ಸರಿಪಡಿಸಬಹುದಾದ ಸಮಸ್ಯೆಯನ್ನು ಕುಳಿತು ಬಗೆಹರಿಸಿಕೊಂಡು ಸಂಬಂಧವನ್ನು ಗಟ್ಟಿಗೊಳಿಸುವ ಯತ್ನ ನಡೆಸಬೇಕು. ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ಅಲ್ಲೇ ಇದ್ದು ಕೊಳೆತು ನಾರುವದಕ್ಕಿಂತ ಹೊರ ಬರುವುದು ಯೋಗ್ಯ. ನಾವಿಂದು ಯಾವೆಲ್ಲ ಲಕ್ಷಣದ ಮೂಲಕ ನಿಮ್ಮ ಸಂಬಂಧ ವಿಷಕಾರಿ ಎಂಬುದನ್ನು ಪತ್ತೆ ಮಾಡ್ಬಹುದು ಅಂತಾ ಹೇಳ್ತೇವೆ.

Relationship Tips : ಕೋಟ್ಯಾಧಿಪತಿ ಹುಡುಗನ ಕೈ ಹಿಡಿಯುವ ಮುನ್ನ…

ಅತಿಯಾದ ನಿರೀಕ್ಷೆ (Expectation) : ಯಾವುದೇ ಸಂಬಂಧವಿರಲಿ ನಿರೀಕ್ಷೆಗಳು ಸಾಮಾನ್ಯ. ಇದು ರೋಮ್ಯಾಂಟಿಕ್ (Romantic) ಆಗಿರಲಿ ಇಲ್ಲ ಪ್ಲಾಟೋನಿಕ್ ಆಗಿರಲಿ. ಆದ್ರೆ ನಿರೀಕ್ಷೆ ಅತಿಯಾದ್ರೆ ಒಳ್ಳೆಯದಲ್ಲ. ಸಂಬಂಧದಲ್ಲಿ ವಿಪರೀತ ನಿರೀಕ್ಷೆ ನುಸುಳಿದಾಗ ಸಂಬಂಧಕ್ಕೆ ಅಪಾಯ. ನಿಮ್ಮಿಂದ ಸಾಧ್ಯವಾಗದಷ್ಟು ನಿರೀಕ್ಷೆ ಸಂಗಾತಿ ಕಡೆಯಿಂದ ಬಂದಾಗ ನೀವು ಸಂಬಂಧವನ್ನು ಪುನರ್ಪರಿಶೀಲನೆ ಮಾಡುವುದು ಒಳ್ಳೆಯದು. 

ಅಭಿಪ್ರಾಯದಲ್ಲಿ ಅಜಗಜಾಂತರ ವ್ಯತ್ಯಾಸ : ಆರೋಗ್ಯಕರ ಸಂಬಂಧದಲ್ಲಿ ವಿಭಿನ್ನ ಅಭಿಪ್ರಾಯಗಳಿಗೆ ಅವಕಾಶ ಇರುತ್ತದೆ. ಎಲ್ಲಾ ಸಂಬಂಧಗಳಲ್ಲಿ ವಾದ – ವಿವಾದಗಳು ಸಂಭವಿಸುತ್ತವೆ. ತಂದೆ- ಮಕ್ಕಳ ಸಂಬಂಧದಿಂದ ಹಿಡಿದು ಪತಿ – ಪತ್ನಿ ಸಂಬಂಧದವರೆಗೆ ಎಲ್ಲರದಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯ, ಗಲಾಟೆ ಸರ್ವೆ ಸಾಮಾನ್ಯ. ಅನೇಕ ಬಾರಿ ಈ ಗಲಾಟೆ ಇಬ್ಬರ ಮನಸ್ಸನ್ನು ಶಾಂತಗೊಳಿಸುವ ಜೊತೆಗೆ ಬಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೆರವಾಗುತ್ತದೆ. ಆದ್ರೆ ಇದು ಮಿತಿ ಮೀರಿದ್ರೆ ಕಷ್ಟ. ಸಂಪೂರ್ಣ ಹೊರಗಿನವರಂತೆ ನಿಮ್ಮಿಬ್ಬರ ಸಂಬಂಧವಿದ್ರೆ ಸಂಬಂಧ ಮುಂದುವರೆಸುವ ಬದಲು ಹೊರಗೆ ಬರೋದು ಒಳ್ಳೆಯದು.

Relationship Tips: ಸುಖಿ ದಂಪತಿಗಳು ಹೀಗೆಲ್ಲ ವರ್ತಿಸೋದಿಲ್ಲ, ದಾಂಪತ್ಯ ಚೆನ್ನಾಗಿರ್ಬೇಕು ಅಂದ್ರೆ ನೀವೂ ಹೀಗೆಯೇ ಇರಿ

ನಿಮ್ಮದೆಲ್ಲವ ಬಿಟ್ಟು ಅವರಾಗಲು ಸಾಧ್ಯವಿಲ್ಲ : ಒಂದು ಸಂಬಂಧದಲ್ಲಿ ಕೊಡು – ಕೊಳ್ಳುವಿಕೆ ಸಮನಾಗಿರಬೇಕು. ನಿಮ್ಮೆಲ್ಲ ಸಮಯವನ್ನು ನೀವು ಅವರಿಗೆ ಮೀಸಲಿಟ್ಟು, ನಿಮ್ಮ ನಿರೀಕ್ಷೆ, ಆಸೆ ಬದಿಗಿಟ್ಟು, ಅವರನ್ನು ಮೆಚ್ಚಿಸುವ ಪ್ರಯತ್ನ ನಡೆಸುತ್ತಿದ್ದರೆ ಇದಕ್ಕೆ ಅರ್ಥವಿಲ್ಲ. ಎದುರಿರುವ ವ್ಯಕ್ತಿ ಕೂಡ ನಿಮಗೆ ಸಮಯ, ಸಹಾಯ ಎರಡನ್ನೂ ಸರಿಯಾದ ಪ್ರಮಾಣದಲ್ಲಿ ನೀಡಿದ್ರೆ ಮಾತ್ರ ಸಂಬಂಧ ಮುಂದುವರೆಯಲು ಸಾಧ್ಯ. ಸದಾ ನೀವೇ ಅವರ ಬಳಿ ತಲೆಬಾಗ್ತಿದ್ದರೆ ಈಗ್ಲೇ ತಲೆ ಎತ್ತಿ, ಆ ಸಂಬಂಧದಿಂದ ಹೊರಬನ್ನಿ.

ನಿಮ್ಮಿಬ್ಬರ ಗಲಾಟೆಯಲ್ಲಿ ಮೂರನೇಯವನ್ಯಾಕೆ? : ಇಬ್ಬರ ಮಧ್ಯೆ ಗಲಾಟೆ ನಡೆದಿದ್ರೆ ಅದನ್ನು ನೀವಿಬ್ಬರೇ ಬಗೆಹರಿಸಿಕೊಳ್ಬೇಕು. ಸಮಸ್ಯೆ ಬಗೆಹರಿಸಿಕೊಳ್ಳಲು ಅಸಮರ್ಥವಾಗಿದ್ದು, ಬೇರೊಬ್ಬರ ಸಹಾಯ ಬಯಸ್ತಿದ್ದರೆ ನಿಮ್ಮ ಸಂಬಂಧ ದೀರ್ಘಕಾಲ ಬದುಕೋದು ಅನುಮಾನ ಎಂಬುದನ್ನೇ ಸೂಚಿಸುತ್ತದೆ. 

ಬೆನ್ನ ಹಿಂದೆ ನಿಂತು ಆಡುವ ಮಾತು : ನಂಬಿಕೆ, ವಿಶ್ವಾಸದ ಮೇಲೆ ಒಂದು ಸಂಬಂಧ ನಿಂತಿರುತ್ತದೆ. ನಿಮ್ಮ ಸಂಗಾತಿ ಅಥವಾ ಸ್ನೇಹಿತ, ನಿಮ್ಮ ಮುಂದೊಂದು, ಹಿಂದೊಂದು ರೀತಿ ವರ್ತನೆ ಮಾಡ್ತಿದ್ದರೆ, ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳನ್ನು ಆಡ್ತಿದ್ದರೆ ಇದು ಆರೋಗ್ಯಕರ ಸಂಬಂಧವಲ್ಲ. ಈ ಸಂಬಂಧವನ್ನು ಸಡಿಲಬಿಡುವುದು ಒಳ್ಳೆಯದು. ಇದ್ರಲ್ಲಿ ರಾಜಿಯಾದ್ರೆ ಮುಂದೆ ಮತ್ತಷ್ಟು ಸಮಸ್ಯೆ ನಿಮ್ಮನ್ನು ಆವರಿಸಬಹುದು.
 

Follow Us:
Download App:
  • android
  • ios