ಮಳೇಲಿ ಕಾರು ಕೆಳಗೆ ಆಶ್ರಯ ಪಡೆಯೋ ಬೆಕ್ಕು, ನಾಯಿ ಬಗ್ಗೆ ಇರಲಿ ಕಾಳಜಿ, ರತನ್ ಟಾಟಾ ಮನವಿ!
ಮಳೆಗಾಲದಲ್ಲಿ ಆರೋಗ್ಯದ ಜೊತೆ ನಾನಾ ವಿಷ್ಯಗಳ ಬಗ್ಗೆ ಗಮನ ಇಟ್ಕೊಳ್ಬೇಕು. ವಾಹನ ಚಲಾಯಿಸುವ ವೇಳೆ ಎಲ್ಲೆಡೆ ಕಣ್ಣಿಡುವ ಜೊತೆಗೆ ವಾಹನ ಹೊರ ತೆಗೆಯುವಾಗ ಕೂಡ ಎಚ್ಚರವಹಿಸಬೇಕು. ಯಾಕೆ ಅಂತಾ ರತನ್ ಟಾಟಾ ಹೇಳ್ತಾರೆ ಓದಿ.
ಮಳೆಗಾಲ ಶುರುವಾಗಿದೆ. ರಸ್ತೆ ಅಪಘಾತಗಳ ಸಂಖ್ಯೆ ಜಾಸ್ತಿಯಾಗಿದೆ. ಕಣ್ಣ ಮುಂದೆಯೇ ಅದೆಷ್ಟೋ ಜೀವಗಳು ಕೊಚ್ಚಿ ಹೋಗುವ ದೃಶ್ಯಗಳನ್ನು ನಾವು ನೋಡ್ತಿರುತ್ತೇವೆ. ಬರೀ ಮನುಷ್ಯ ಮಾತ್ರವಲ್ಲ ಮಳೆಗಾಲ ಬಂದ್ರೆ ಪ್ರಾಣಿಗಳಿಗೂ ಜೀವಭಯ ಶುರುವಾಗುತ್ತದೆ. ರಸ್ತೆ ಮೇಲೆ ನಾಯಿ, ಬೆಕ್ಕಿನ ಶವವನ್ನು ನೀವು ನೋಡ್ತಿರುತ್ತೀರಿ. ಚಾಲಕನ ನಿರ್ಲಕ್ಷ್ಯದಿಂದ ಅನೇಕ ಪ್ರಾಣಿಗಳ ಬಲಿಯಾಗಿರುತ್ತದೆ. ಈ ಬಗ್ಗೆ ಪ್ರಾಣಿ ಪ್ರೇಮಿಗಳು ಮಾತ್ರವಲ್ಲ ಖ್ಯಾತ ಉದ್ಯಮಿ ರತನ್ ಟಾಟಾ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಮಳೆಗಾಲದಲ್ಲಿ ವಾಹನ ಚಾಲಕರು ಏನೆಲ್ಲ ಗಮನಿಸಬೇಕು ಎಂಬುದನ್ನು ರತನ್ ಟಾಟಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಖ್ಯಾತ ಉದ್ಯಮಿ ರತನ್ ಟಾಟಾ (Ratan Tata) ಹೇಳಿದ್ದೇನು? : ರತನ್ ಟಾಟಾ ತಮ್ಮ ಉದ್ಯೋಗವನ್ನು ಎಷ್ಟು ಪ್ರೀತಿಸುತ್ತಾರೋ ಅಷ್ಟೇ ಪ್ರಾಣಿ (Animal) ಗಳನ್ನು ಕೂಡ ಪ್ರೀತಿಸುತ್ತಾರೆ. 85 ವರ್ಷದ ರತನ್ ಟಾಟಾ, ಪ್ರಾಣಿಗಳ ಹಕ್ಕು ಹಾಗೂ ಅವುಗಳ ರಕ್ಷಣೆಗಳ ಕುರಿತು ಜಾಗೃತಿ ಮೂಡಿಸುವ ಅನೇಕ ಪೋಸ್ಟ್ ಗಳನ್ನು ಆಗಾಗ್ಗೆ ಹಂಚಿಕೊಳ್ತಾರೆ. ರತನ್ ಟಾಟಾ ಬೀದಿ ನಾಯಿ (Dog) ಹಾಗೂ ಬೀದಿ ಪ್ರಾಣಿಗಳ ಕುರಿತು ಅಪಾರವಾದ ಕಾಳಜಿ ತೋರುತ್ತಾರೆ. ಅನೇಕ ಸಂದರ್ಭದಲ್ಲಿ ಅವರು ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬೀದಿ ಪ್ರಾಣಿಗಳ ಕುರಿತು ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.
ಅಬ್ಬಾ ನೋಡಿದ್ರೇನೆ ಭಯವಾಗುತ್ತೆ..ಚಲಿಸುವ ರೈಲಿನಲ್ಲಿ ಜೋಡಿಯಿಂದ ಇದೆಂಥಾ ಹುಚ್ಚಾಟ..!
ಮಳೆಗಾಲದಲ್ಲಿ ಬೀದಿಯಲ್ಲಿರುವ ಪ್ರಾಣಿಗಳ ಪರಿಸ್ಥಿತಿ ತೀರ ಕೆಟ್ಟದ್ದಾಗಿರುತ್ತದೆ. ಮಳೆಗಾಲದಲ್ಲಿ ಬೆಚ್ಚನೆಯ ಆಶ್ರಯಕ್ಕಾಗಿ ಹುಡುಕಾಡುವುದನ್ನು ನಾವು ಅನೇಕ ಕಡೆ ನೋಡ್ತೇವೆ. ಮಳೆಯಿಂದ ರಕ್ಷಣೆ ಪಡೆಯುವುದಕ್ಕೋಸ್ಕರ ಅವರು ವಾಹನಗಳ ಅಡಿಯಲ್ಲೋ ಅಥವಾ ಅಂಗಡಿ ಮುಂಗಟ್ಟುಗಳಲ್ಲೋ ಮಲಗುತ್ತವೆ. ಅಂತಹ ಸಮಯದಲ್ಲಿ ವಾಹನ ಚಾಲಕರ ಗಮನಕ್ಕೆ ಬಾರದೇ ಗಾಡಿಯ ಕೆಳಗೆ ಮಲಗಿರುವ ಪ್ರಾಣಿಗಳಿಗೆ ಗಾಯವಾಗಬಹುದು. ಹಾಗಾಗಿ ಮಳೆಗಾಲದ ಅವಧಿಯಲ್ಲಿ ಬೀದಿಪ್ರಾಣಿಗಳಿಗೆ ತಾತ್ಕಾಲಿಕ ನೆಲೆ ಮಾಡಿಕೊಡಬೇಕು ಎಂದು ರತನ್ ಟಾಟಾ ಇನ್ಸ್ಟಾಗ್ರಾಮ್ ನ ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ.
ನಿಮ್ಮ ಸುತ್ತ ಇರೋರು ನಿಜವಾಗಲೂ ಒಳ್ಳೇಯವ್ರಾ, ಕೆಟ್ಟವ್ರಾ?
ಮಳೆಗಾಲದಲ್ಲಿ ಅನಾಥ ಪ್ರಾಣಿಗಳಿಗೆ ಆಶ್ರಯ ನೀಡಿ ಎನ್ನುತ್ತಾರೆ ರತನ್ ಟಾಟಾ : ರತನ್ ಟಾಟಾ ಅವರು ತಮ್ಮ ಪೋಸ್ಟ್ ನಲ್ಲಿ ಈಗ ಮಳೆಗಾಲ ಆರಂಭವಾಗಿದೆ. ಬೀದಿ ಪ್ರಾಣಿಗಳಾದ ಬೆಕ್ಕು, ನಾಯಿ ಮುಂತಾದವು ಮಳೆಯಿಂದ ರಕ್ಷಣೆ ಪಡೆಯಲು ನಮ್ಮ ವಾಹನಗಳ ಅಡಿಯಲ್ಲಿ ಮಲಗುತ್ತವೆ. ಅಂತಹ ಪ್ರಾಣಿಗಳಿಗೆ ಹಾನಿಯಾಗದೇ ಇರಲು ವಾಹನ ಚಾಲಕರು ತಮ್ಮ ವಾಹನವನ್ನು ಸ್ಟಾರ್ಟ್ ಮಾಡುವ ಅಥವಾ ಚಲಾಯಿಸುವ ಮುನ್ನ ಒಮ್ಮೆ ವಾಹನದ ಕೆಳಗಡೆ ಪರಿಶೀಲಿಸಿ ಎಂದು ಇನ್ಸ್ಟಾದಲ್ಲಿ ವಿನಂತಿಸಿಕೊಂಡಿದ್ದಾರೆ. ವಾಹನ ಚಾಲಕರು ಚೆಕ್ ಮಾಡದೇ ವಾಹನವನ್ನು ಚಲಾಯಿಸುವುದರಿಂದ ವಾಹನಗಳ ಕೆಳಗಡೆ ಮಲಗಿರುವ ಪ್ರಾಣಿಗಳಿಗೆ ಹಾನಿಯಾಗಬಹುದು. ಇಲ್ಲವೇ ಅವು ವಿಕಲಾಂಗರಾಗಬಹುದು ಅಥವಾ ಸಾಯಲೂಬಹುದು. ಹಾಗಾಗಿ ಡ್ರೈವ್ ಮಾಡುವ ಮೊದಲು ವಾಹನದ ಕೆಳಗಡೆ ಒಮ್ಮೆ ಪರೀಕ್ಷಿಸಿ ಎಂದು ರತನ್ ಟಾಟಾ ಹೇಳಿದ್ದಾರೆ.
ಇನ್ಸ್ಟಾ ಗ್ರಾಂ ನಲ್ಲಿ ಒಂದು ನಾಯಿಯ ಚಿತ್ರದ ಜೊತೆಗೆ ಅನಾಥ ಪ್ರಾಣಿಗಳ ಬಗ್ಗೆ ತಮಗೆ ಇರುವ ಕಾಳಜಿಯನ್ನು ತೋರಿಸಿರುವ ರತನ್ ಟಾಟಾ ಸಾರ್ವಜನಿಕವಾಗಿ ಬೀದಿ ಪ್ರಾಣಿಗಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸಿದ್ದಾರೆ. ಮಳೆಗಾಲದ ಸಮಯದಲ್ಲಿ ನೀವೆಲ್ಲರೂ ಅನಾಥ ಪ್ರಾಣಿಗಳಿಗೆ ತಾತ್ಕಾಲಿಕ ಆಶ್ರಯ ನೀಡಿದರೆ ಅದು ಹೃದಯವನ್ನು ಸ್ಪರ್ಷಿಸುತ್ತದೆ ಎಂದು ರತನ್ ಟಾಟಾ ತಮ್ಮ ಭಾವನೆಯನ್ನು ಬಿಚ್ಚಿಟ್ಟಿದ್ದಾರೆ. ರತನ್ ಟಾಟಾ ಪೋಸ್ಟ್ ಗೆ ಸಾಮಾಜಿಕ ಜಾಲತಾಣ ಬಳಕೆದಾರರು ಮೆಚ್ಚುಕೆ ವ್ಯಕ್ತಪಡಿಸಿದ್ದಾರೆ. ರತನ್ ಟಾಟಾ ಪೋಸ್ಟ್ ಗೆ 14 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.