5 ಕೋಟಿ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಈ ಅಜ್ಜ ನೀಡಿದ್ದು 5 ಸಾವಿರ ರೂ!
ವೃದ್ಧಾಪ್ಯದಲ್ಲಿ ಮಕ್ಕಳ ಸಹಾಯ ಪಾಲಕರಿಗೆ ಬೇಕು. ಆಗ ಆರೈಕೆ ಮಾಡಿದ ಮಕ್ಕಳ ಮೇಲೆ ಪಾಲಕರಿಗೆ ವಿಶೇಷ ಪ್ರೀತಿ ಇರುತ್ತದೆ. ಸಾಯುವ ಸಮಯದಲ್ಲೂ ಮಕ್ಕಳು ಹತ್ತಿರ ಸುಳಿದಿಲ್ಲ ಎಂದಾದ್ರೆ ಅವರ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕೂ ಇರೋದಿಲ್ಲ.
ಪಾಲಕರ ಆಸ್ತಿ ಮಕ್ಕಳಿಗೆ ಸೇರುತ್ತದೆ. ತಂದೆ ಆಸ್ತಿಯಲ್ಲಿ ಪಾಲು ಕೇಳಲು ಮಕ್ಕಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ವಂಶಪಾರಂಪರ್ಯವಾಗಿ ಬಂದ ಆಸ್ತಿ ಪಡೆಯುವ ಹಕ್ಕು ಮಕ್ಕಳಿಗೆ, ಮೊಮ್ಮಕ್ಕಳಿಗೆ ಇದೆ. ಆದ್ರೆ ತಂದೆ ಸ್ವಂತ ಮಾಡಿದ ಆಸ್ತಿಯನ್ನು ಆತ ತನ್ನಿಷ್ಟದಂತೆ ಯಾರಿಗೆ ಬೇಕಾದ್ರೂ ನೀಡಬಹುದು.
ಎಷ್ಟೇ ಮಕ್ಕಳಿರಲಿ, ಪಾಲಕ (Parents) ರಿಗೆ ವಯಸ್ಸಾಗ್ತಿದ್ದಂತೆ ಅವರನ್ನು ನೋಡಿಕೊಳ್ಳಲು ಮಕ್ಕಳು ಬರೋದಿಲ್ಲ. ಅನೇಕ ಪಾಲಕರು ಅನಾಥಾಶ್ರಮ ಸೇರೋದಿದೆ. ಮತ್ತೆ ಕೆಲವರು ಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿರುತ್ತಾರೆ. ಮಕ್ಕಳು, ಮೊಮ್ಮಕ್ಕಳಿದ್ರೂ ಯಾರೂ ಇಲ್ಲದಂತೆ ಜೀವನ ನಡೆಸುತ್ತಾರೆ. ನಮ್ಮ ಕಷ್ಟಗಳೇ ದೊಡ್ಡದಾಗೋ ಕಾರಣ ಪಾಲಕರನ್ನು ನೋಡಿಕೊಳ್ಳಲು ಸಮಯ ಸಿಗೋದಿಲ್ಲ ಎನ್ನುವ ಮಕ್ಕಳಿದ್ದಾರೆ. ಪಾಲಕರು ಜೀವಂತವಾಗಿದ್ದಾಗ ಒಂದು ದಿನವೂ ಮನೆಗೆ ಬರದ ಮಕ್ಕಳು, ಅವರು ಸತ್ತಾಗ ಓಡಿ ಬರ್ತಾರೆ. ಅವರ ಆಸ್ತಿ ಎಷ್ಟಿದೆ, ಯಾವೆಲ್ಲ ಆಸ್ತಿಯನ್ನು ನುಂಗಿ ನೀರುಕುಡಿಯಬಹುದು ಎಂಬ ಪ್ಲಾನ್ ಮಾಡ್ತಾರೆ. ನಾಲ್ಕೈದು ಸಹೋದರ – ಸಹೋದರಿಯರಿದ್ದರೆ ಕಚ್ಚಾಟ ಜೋರಾಗಿ ಕೋರ್ಟ್ (Court) ಗೆ ಹೋಗುವುದಿದೆ. ಈಗ ಅಜ್ಜನೊಬ್ಬ ಮೊಮ್ಮಕ್ಕಳಿಗೆ ಬುದ್ಧಿ ಕಲಿಸುವ ಕೆಲಸ ಮಾಡಿದ್ದಾನೆ.
ಬಾಯ್ ಫ್ರೆಂಡ್ ಹುಡುಕೋದು ಹೇಗೆ ಗೊತ್ತಾ? ಡೇಟಿಂಗ್ ಮಾಡಿಲ್ಲವಾ ..ಚಿಂತೆ ಬಿಡಿ ಹೀಗೆ ಮಾಡಿ
ಘಟನೆ ಲಂಡನ್ (London) ನಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಫ್ರೆಡೆರಿಕ್ ವಾರ್ಡ್ ಸೀನಿಯರ್ 2020ರಲ್ಲಿ ಸಾವನ್ನಪ್ಪಿದ್ದಾರೆ. ಆದ್ರೆ ಅವರ ಆಸ್ತಿ ವಿವಾದ ಇನ್ನೂ ನಡೆಯುತ್ತಿದೆ. ಫ್ರೆಡೆರಿಕ್ ವಾರ್ಡ್ ಸೀನಿಯರ್ ಗೆ ಮೂವರು ಮಕ್ಕಳು. ಫ್ರೆಡ್ ಜೂನಿಯರ್, ಟೆರ್ರಿ ಮತ್ತು ಸುಸಾನ್. ಫ್ರೆಡ್ ಜೂನಿಯರ್ 2015 ರಲ್ಲಿ ನಿಧನರಾಗಿದ್ದಾರೆ. ಅವರಿಗೆ ಐವರು ಹೆಣ್ಣು ಮಕ್ಕಳಿದ್ದಾರೆ.
ಸಾಯುವ ಮುನ್ನ ಫೆಡೆರಿಕ್ ವಾರ್ಡ್ ಸೀನಿಯರ್ ಉಯಿಲು ಬರೆದಿದ್ದಾರೆ. ಫ್ರೆಡ್ ಜೂನಿಯರ್ ಸತ್ತಾಗಲೇ ಒಮ್ಮೆ ಉಯಿಲಿನ ಬಗ್ಗೆ ಮಾತುಕಥೆ ಆಗಿತ್ತು. ಆಗ ಎಲ್ಲ ಆಸ್ತಿಯನ್ನು ಮೂರು ಮಕ್ಕಳ ಹಂಚಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದಿದ್ದರು. ಆದ್ರೆ ಫೆಡೆರಿಕ್ ವಾರ್ಡ್ ಸೀನಿಯರ್ ಸತ್ತ ಮೇಲೆ ಟೆರ್ರಿ ಉಯಿಲು ಓದಿದ್ದಾರೆ. ಅದನ್ನು ಕೇಳಿ ಎಲ್ಲರೂ ದಂಗಾಗಿದ್ದಾರೆ.
ಫೆಡೆರಿಕ್ ವಾರ್ಡ್ ಸೀನಿಯರ್ ಬಡ ವ್ಯಕ್ತಿಯಲ್ಲ. 91ನೇ ವರ್ಷದಲ್ಲಿ ಸಾವನ್ನಪ್ಪಿದಾಗ ಅವರ ಬಳಿ ಸಾಕಷ್ಟು ಹಣವಿತ್ತು. ಕಠಿಣ ಪರಿಶ್ರಮದಿಂದಾಗಿ ಅವರು ಸಾಕಷ್ಟು ಹಣವನ್ನು ಗಳಿಸಿದ್ದರು. ಅವರು ಸತ್ತ ಸಮಯದಲ್ಲಿ ಬ್ಯಾಂಕ್ ಖಾತೆಯಲ್ಲಿ 500,000 ಲಕ್ಷ ಪೌಂಡ್ ಅಂದ್ರೆ 5.27 ಕೋಟಿ ರೂಪಾಯಿ ಇತ್ತು. ಉಯಿಲಿನಲ್ಲಿ ಮೂವರು ಮಕ್ಕಳು, ಮೊಮ್ಮಕ್ಕಳಿಗೆ ಫೆಡೆರಿಕ್ ಆಸ್ತಿ ನೀಡಿಲ್ಲ. ಬರೀ ಇಬ್ಬರು ಮಕ್ಕಳಿಗೆ ಮಾತ್ರ ಆಸ್ತಿ ಪಾಲು ಮಾಡಿದ್ದಾರೆ. ಟೆರ್ರಿ ಮತ್ತು ಸುನಾಸ್ ಗೆ ಎಲ್ಲ ಆಸ್ತಿ ಸೇರಿದೆ. ಫ್ರೆಡ್ ಜೂನಿಯರ್ ನ ಐದು ಮಕ್ಕಳಿಗೆ ಕೇವಲ 5000 ರೂಪಾಯಿಗಳ ಲಕೋಟೆಯನ್ನು ನೀಡಿದ್ದಾರೆ.
ಗಂಡ ಹೆಂಡತಿ ನಡುವೆ ಅಂತರ ಬೆಳೆಯಲು ಇದೇ ಕಾರಣವಂತೆ ಗೊತ್ತಾ?
ಇದನ್ನು ಕೇಳಿದ ಐದು ಹೆಣ್ಣು ಮಕ್ಕಳು ಶಾಕ್ ಆಗಿದ್ದಾರೆ. ಅಜ್ಜನಿಗೆ ನಮ್ಮ ಮೇಲೆ ಅಪಾರ ಪ್ರೀತಿ ಇತ್ತು. ಅವರು ಸಾಯುವ ಸಮಯದಲ್ಲಿ ಬುದ್ಧಿ ಭ್ರಮಣೆಯಾಗಿತ್ತು. ಟೆರ್ರಿ ಅವರ ಮನಸ್ಸು ತಿರುಗಿಸಿದ್ದಾರೆಂದು ಅವರು ಆರೋಪ ಮಾಡಿದ್ದಾರೆ. ಆದ್ರೆ ಯಾವುದೇ ಮೊಮ್ಮಕ್ಕಳು ಫೆಡೆರಿಕ್ ರನ್ನು ನೋಡಲು ಬರಲಿಲ್ಲ. ಹಾಗಾಗಿ ಯಾವುದೇ ಸಂಪತ್ತು ಸಿಗೋದಿಲ್ಲ ಎಂದು ಫೆಡೆರಿಕ್ ಬರೆದಿದ್ದಾರೆ.
ಈಗ ಐವರು ಹೆಣ್ಣು ಮಕ್ಕಳು ಕೋರ್ಟ್ ಮೊರೆ ಹೋಗಿದ್ದಾರೆ. ತಾತನ ಆಸ್ತಿಯಲ್ಲಿ ಮೂರನೇ ಒಂದು ಪಾಲು ಬೇಕು ಎಂದು ಆಗ್ರಹಿಸಿದ್ದಾರೆ. ಆದ್ರೆ ಟೆರ್ರಿ ತಂದೆ ಮೇಲೆ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ. ಐವರು ಮೊಮ್ಮಕ್ಕಳು ಭೇಟಿಯಾಗಲು ಬಾರದ ಕಾರಣ ಅವರ ಮೇಲೆ ತಂದೆ ಕೋಪಗೊಂಡಿದ್ದರು ಎಂದು ಟೆರ್ರಿ ಹೇಳಿದ್ದಾರೆ.