ಸುಂದರಿಯ ಫೋಟೋ ಸಿಕ್ಕಿತೆಂದು ಹೀಗೆ ಮೋಸ ಮಾಡೋದಾ ಭಾರತ್ ಮ್ಯಾಟ್ರಿಮೋನಿ? ಗೃಹಿಣಿ ಆಕ್ರೋಶ
ವಧು-ವರರು ಬೇಕಾಗಿದ್ದಾರೆ ಎಂದು ಆನ್ಲೈನ್ ಮ್ಯಾಟ್ರಿಮೋನಿ ಸೈಟ್ಗೆ ಸಹಸ್ರಾರು ರೂಪಾಯಿ ಹಣ ಸುರಿಯುವ ಮುನ್ನ ಒಮ್ಮೆ ಈ ಘಟನೆ ಕೇಳಿ...
ಮದುವೆ ಎನ್ನುವುದು ದೊಡ್ಡ ಬಿಸಿನೆಸ್ ಮಾರ್ಕೆಟ್ ಆಗಿ ದಶಕಗಳೇ ಕಳೆದು ಬಿಟ್ಟಿವೆ. ವಧು-ವರರು ಸಿಗುತ್ತಿಲ್ಲ ಎಂದು ವಧು-ವರರ ವೇದಿಕೆಗಳ ಕಚೇರಿಗಳು ಗಲ್ಲಿಗಳಲ್ಲಿ ತಲೆ ಎತ್ತಿ ನಿಂತಿದ್ದರೆ, ದೊಡ್ಡ ದೊಡ್ಡ ಕಂಪೆನಿಗಳು ಆನ್ಲೈನ್ ಮೂಲಕ ವಧು-ವರರನ್ನು ಹುಡುಕಿ ಕೊಡುವುದಾಗಿ ಹೇಳಿ ಸಹಸ್ರಾರು ರೂಪಾಯಿಗಳನ್ನು ವಸೂಲು ಮಾಡುತ್ತಿವೆ. ಭಾರತ್ ಮ್ಯಾಟ್ರಿಮೋನಿ ಸೇರಿದಂತೆ ಹಲವರಾಗು ಇಂಥ ವೇದಿಕೆಗಳು ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದರ ಮೂಲಕ ಮದುವೆಯಾದವರೂ ಇದ್ದಾರೆ. ಹೆಚ್ಚು ದುಡ್ಡು ಕೊಟ್ಟರೆ, ಒಳ್ಳೊಳ್ಳೆ ಪ್ರೊಫೈಲ್ ಕೊಡುತ್ತೇವೆ ಎನ್ನುವ ಆಮಿಷ ಒಡ್ಡಿ, ಬೇಕಾಗಿದ್ದಾರೆ ಜಾಹೀರಾತಿನಲ್ಲಿ ಇರುವವರ ಸ್ಟ್ಯಾಂಡರ್ಡ್ಗೆ ತಕ್ಕಂತೆ ಹಣ ವಸೂಲಿ ಮಾಡಲಾಗುತ್ತಿದೆ. ಹುಡುಗಿ- ಹುಡುಗ ಸಿಕ್ಕರೆ ಸಾಕಪ್ಪಾ ಎಂದುಕೊಳ್ಳುವವರು ಹೆಚ್ಚಾಗಿರುವ ಕಾರಣ, ಅದರಲ್ಲಿಯೂ ತಮ್ಮದೇ ಜಾತಿಯ ಹುಡುಗಿ ಸಿಗುತ್ತಿಲ್ಲ ಎಂದು ಪರಿತಪಿಸುತ್ತಿರುವ ದೊಡ್ಡ ವರ್ಗದ ಯುವಕರು ಇಂಥ ಆನ್ಲೈನ್ ಮದುವೆ ವೇದಿಕೆಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ.
ಇಂಥ ಆನ್ಲೈನ್ ವೇದಿಕೆಗಳಿಂದ ಮೋಸ ಹೋಗುವವರು ನಾಚಿಕೆಗೆ ಅಂಜಿ ಅದರ ಬಗ್ಗೆ ಓಪನ್ ಆಗಿ ಮಾತನಾಡುವುದಿಲ್ಲ ಎನ್ನುವುದು ಇಂಥ ವೇದಿಕೆ ಸೃಷ್ಟಿಕರ್ತರಿಗೂ ಗೊತ್ತು. ಆದರೆ ಇಲ್ಲೊಂದು ಪ್ರಕರಣದಲ್ಲಿ ಸುಂದರ ಗೃಹಿಣಿಯೊಬ್ಬಳ ಫೋಟೋ ಹಾಕುವ ಮೂಲಕ, ಇವರ ಜಾತಕವನ್ನೂ ಅಲ್ಲಿ ಕೊಟ್ಟಿದ್ದಾರೆ. ವರ ಬೇಕಾಗಿದ್ದಾನೆ ಎನ್ನುವ ಅರ್ಥದಲ್ಲಿ ಈ ಜಾಹೀರಾತು ಇದೆ. ಆದರೆ ಇದಾಗಲೇ ಮದುವೆಯಾಗಿರುವ ಈ ಗೃಹಿಣಿ ವಿಡಿಯೋ ಮಾಡಿ, ಭಾರತ್ ಮ್ಯಾಟ್ರಿಮೋನಿಯ ವಿರುದ್ಧದ ಗರಂ ಆಗಿದ್ದಾರೆ. ಸಿಕ್ಕ ಸಿಕ್ಕ ಫೋಟೋ ಹಾಕಿ ಹೆಣ್ಣುಮಕ್ಕಳ ಮಾನ ಹರಾಜು ಹಾಕುತ್ತಿರುವ ಬಗ್ಗೆ ಅವರು ಕಿಡಿ ಕಾರಿದ್ದಾರೆ.
ಲಾಯರ್ ಜಗದೀಶ್ ಮಾತಿಗೆ ನಾಚಿಕೊಂಡ ರಕ್ಷಿತಾ: 'ನಾಟಿ ಆ್ಯಟ್ ಫಾರ್ಟಿ ಸರ್ ನೀವು' ಎಂದ ನಟಿ!
ತಮ್ಮ ಪತಿಯನ್ನೂ ವಿಡಿಯೋದಲ್ಲಿ ತೋರಿಸಿರುವ ಸ್ವಾತಿ ಮುಕುಂದ್ ಎನ್ನುವವರು, ಭಾರತ್ ಮ್ಯಾಟ್ರಿಮೋನಿಯಲ್ಲಿ ತಮ್ಮ ಫೋಟೋ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ನನ್ನ ಮದುವೆ ಇದಾಗಲೇ ಆಗಿದೆ. ಖಂಡಿತವಾಗಿಯೂ ನಮ್ಮ ಮದುವೆ ಯಾವುದೇ ಆನ್ಲೈನ್ ಸೈಟ್ ಮೂಲಕವೂ ಆಗಿಲ್ಲ ಎಂದಿರುವ ಸ್ವಾತಿ ಅವರು, ತಮ್ಮ ಫೋಟೋ ಬಳಕೆ ಮಾಡಿಕೊಂಡಿರುವ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮ್ಯಾಟ್ರಿಮೋನಿ ಸೈಟ್ಗಳು ಬಳಕೆದಾರರಿಂದ ಸಿಕ್ಕಾಪಟ್ಟೆ ಹಣ ವಸೂಲಿ ಮಾಡುತ್ತವೆ. ದುಡ್ಡು ಕೊಟ್ಟರೆ ಎಲ್ಲಾ ರೀತಿಯ ಗೋಪ್ಯತೆ ಕಾಪಾಡಿಕೊಂಡು ಮಾಹಿತಿ ನೀಡಲಾಗುತ್ತದೆ ಎನ್ನುವ ಜಾಹೀರಾತು ಬರುತ್ತದೆ. ಮಾತ್ರವಲ್ಲದೇ ಫೋಟೋಗಳನ್ನು ಹಾಗೂ ವಧು-ವರರ ಫೋಟೋಗಳನ್ನು ಅಪ್ಲೋಡ್ ಮಾಡುವಾಗ ಸೂಕ್ತ ತನಿಖೆ, ವಿಮರ್ಶೆ, ಪರಾಮರ್ಶೆ ಎಲ್ಲವನ್ನೂ ಮಾಡಿಯೇ ಮುಂದುವರೆಯುವ ಆಶ್ವಾಸನೆ ನೀಡುತ್ತವೆ. ಆದರೆ ಮಾಡಿದ್ದೇನು ಎಂದು ಪ್ರಶ್ನಿಸಿದ್ದಾರೆ.
ಇಂಥ ಆನ್ಲೈನ್ ವೇದಿಕೆಗಳನ್ನು ದಯವಿಟ್ಟು ನಂಬಬೇಡಿ ಅಂದಿರುವ ಅವರು, ಇಂಥ ವೇದಿಕೆಗಳ ಗುಣಮಟ್ಟ ಹಾಗೂ ಇದನ್ನು ನಂಬಿಕೊಂಡು ದುಡ್ಡು ಸುರಿಯುವ ಬಳಕೆದಾರರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಫೋಟೋ ಇವರದ್ದು ಹಾಕಿ ನಿತ್ಯಾ ರಾಜಶೇಖರ್ ಎನ್ನುವ ಬೇರೆ ಹೆಸರು ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಸಿಕ್ಕಿಬೀಳಬಾರದು ಎನ್ನುವ ಉದ್ದೇಶ ಆನ್ಲೈನ್ ವೇದಿಕೆಯವರದ್ದು ಇದ್ದ ಹಾಗೆ ಕಾಣಿಸುತ್ತದೆ. ಆದರೆ ಬಳಕೆದಾರರು ಎಷ್ಟು ಜಾಗರೂಕರಾಗಿ ಇರಬೇಕು ಎನ್ನುವ ಬಗ್ಗೆ ಇದು ಸೂಚಿಸುತ್ತದೆ. ಅದೇ ರೀತಿ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ಅಪ್ಲೋಡ್ ಮಾಡುವುದು ಎಷ್ಟು ಡೇಂಜರ್ ಎನ್ನುವ ಬಗ್ಗೆ ಇದಾಗಲೇ ಹಲವರು ಬೇರೆ ಬೇರೆ ರೀತಿಯ ಉದಾಹರಣೆಗಳನ್ನೂ ಕೊಟ್ಟಿದ್ದಾರೆ.
ನೀಲಿ ಚಿತ್ರದಲ್ಲಿ ನಟಿಸಲು ಆಫರ್ ಬಂದಿದೆ ಎಂದ ಮಗ! ಅಮ್ಮನ ರಿಯಾಕ್ಷನ್ ನೋಡಿ- ವಿಡಿಯೋ ವೈರಲ್