Asianet Suvarna News Asianet Suvarna News

ಕೋಣೆಗೆ ಬಾ ಎಂದನಂತೆ ನಿರ್ಮಾಪಕ, ನಟಿಗೆ ಬಂದಿತ್ತಂತೆ 1000ಕ್ಕೂ ಹೆಚ್ಚು ಪ್ರಪೋಸಲ್‌ !

ಇತ್ತೀಚಿಗೆ ಸ್ವಯಂ ವಿವಾಹವಾಗಿರುವ ಹಿಂದಿ ಕಿರುತೆರೆ ನಟಿ ಕನಿಷ್ಕಾ ಸೋನಿ, ಸಂಬಂಧಗಳಲ್ಲಿ ತನಗಾಗಿರುವ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. 1000ಕ್ಕೂ ಹೆಚ್ಚು ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಾಗಿ ತಿಳಿಸಿದ್ದಾರೆ. ಮಾತ್ರವಲ್ಲ ಕಿರುತೆರೆಯಲ್ಲಿ ನಿರ್ಮಾಪಕರು ಕೋಣೆಗೆ ಬಾ, ಹೊಟ್ಟೆ ತೋರಿಸು ಎಂದು ಕಾಟ ಕೊಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

Kanishka Soni Opens up About Being In An Abusive Relationship Vin
Author
Bengaluru, First Published Aug 25, 2022, 3:11 PM IST

ಇತ್ತೀಚೆಗೆ ತನ್ನನ್ನು ತಾನೇ ಮದುವೆಯಾಗಿರುವ ಕನಿಷ್ಕಾ ಸೋನಿ, ಸಂಬಂಧಗಳೊಂದಿಗಿನ ತನ್ನ ಅನುಭವವು ಹೆಚ್ಚು ಕೆಟ್ಟದಾಗಿತ್ತು ಎಂದು ಹೇಳಿದ್ದಾರೆ. ಹೊಸ ಸಂದರ್ಶನವೊಂದರಲ್ಲಿ ಕನಿಷ್ಕಾ, ಸಂಬಂಧದಲ್ಲಿ ಜನರು ತನ್ನನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ, ಪ್ರತಿಯಾಗಿ ನಾನು ಕಿರುತೆರೆಯಲ್ಲಿ ಹೇಗೆ ಬೆಳೆದೆ ಎಂಬುದನ್ನು ವಿವರಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಹಿಂದಿ ಕಿರುತೆರೆ ನಟಿ ಕನಿಷ್ಕಾ ಸೋನಿ ತನ್ನನ್ನು ತಾನು ಮದುವೆಯಾಗಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಘೋಷಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ನಟ ತನ್ನ ಟಿವಿ ಶೋ ದಿಯಾ ಔರ್ ಬಾತಿ ಹಮ್‌ಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಪವಿತ್ರ ರಿಶ್ತಾ, ದೇವೋನ್ ಕೆ ದೇವ್ ಮಹಾದೇವ್ ಮತ್ತು ಮಹಾಬಲಿ ಹನುಮಾನ್ ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ.

1200-1300 ಮದುವೆ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದೇನೆ
ನಾನು ಮುಂಬೈಗೆ ಬಂದಾಗ, ನನಗೆ ಅನೇಕ ಹುಡುಗರು ನನಗೆ ಪ್ರಪೋಸ್ ಮಾಡಿದರು. ನಾನು ಅಂತಹ 1200-1300 ಪ್ರಸ್ತಾಪಗಳನ್ನು ತಿರಸ್ಕರಿಸಿದ್ದೇನೆ. ಬಹಳ ಪ್ರಸಿದ್ಧ ನಟ ನನ್ನನ್ನು ಮದುವೆಗೆ ಪ್ರಸ್ತಾಪಿಸಿದರು, ಆದರೆ ಅವರ ನಿಜವಾದ ಮುಖವನ್ನು ಕೇವಲ ಎರಡು ತಿಂಗಳಲ್ಲಿ ಬಹಿರಂಗವಾಯಿತು. ಅವನು ತುಂಬಾ ಹಿಂಸಾತ್ಮಕನಾಗಿದ್ದನು. ನಾನು ಅವನನ್ನು ಹೆಸರಿಸುವುದಿಲ್ಲ. ಏಕೆಂದರೆ ಅದು ವಿವಾದಗಳನ್ನು ಸೃಷ್ಟಿಸುತ್ತದೆ. ಆದರೆ ಅವನು ತುಂಬಾ ಹಿಂಸಾತ್ಮಕನಾಗಿದ್ದನು ಮತ್ತು ಪ್ರತಿ 15 ನಿಮಿಷಗಳಿಗೊಮ್ಮೆ ಕೋಪಗೊಳ್ಳುತ್ತಿದ್ದನು. ವಸ್ತುಗಳನ್ನು ಮುರಿದು ನನ್ನನ್ನು ಹೊಡೆಯುತ್ತಿದ್ದನು, ಒಬ್ಬ ವ್ಯಕ್ತಿಯೊಂದಿಗೆ ಇರಬೇಕು ಎಂದು ನನ್ನ ತಾಯಿ ಯಾವಾಗಲೂ ನನಗೆ ಹೇಳುತ್ತಿದ್ದರು. ಹೀಗಾಗಿ ಆ ಸಂಬಂಧದಿಂದ ಹೊರಬರಲು ನನಗೆ ಐದು ವರ್ಷಗಳು ಬೇಕಾಯಿತು. 

Sologomy ಅಂದ್ರೇನು ? ಇದಕ್ಕಿದ್ಯಾ ಕಾನೂನು ಮಾನ್ಯತೆ ?

ಕೋಣೆಗೆ ಬಾ, ಹೊಟ್ಟೆ ತೋರಿಸು ಎಂದ ನಿರ್ಮಾಪಕ, 
ನಿರ್ಮಾಪಕರ ಕೋಣೆಗೆ ಹೋಗಲಿಲ್ಲಎಂಬ ಕಾರಣಕ್ಕಾಗಿ ಇಡೀ ದಿನದ ಚಿತ್ರೀಕರಣದ ನಂತರ ಒಮ್ಮೆ ಟಿವಿ ಕಾರ್ಯಕ್ರಮದಿಂದ ಹೊರಹಾಕಲಾಯಿತು ಎಂದು ಕನಿಷ್ಕಾ ಸೋನಿ ಹೇಳಿದರು. 2008ರಲ್ಲಿ ಎ-ಗ್ರೇಡ್ ಚಲನಚಿತ್ರಕ್ಕಾಗಿ, ನಿರ್ಮಾಪಕರು ನನ್ನ ಹೊಟ್ಟೆಯನ್ನು ನೋಡಲು ಅವರ ಮನೆಗೆ ಭೇಟಿ ನೀಡುವಂತೆ ನನ್ನನ್ನು ಕೇಳಿದರು. ನಾನು ಚಿತ್ರಕ್ಕಾಗಿ ಅದನ್ನು ಮಾಡುತ್ತೇನೆ ಎಂದು ಹೇಳಿದೆ. ಆದರೆ ಅವರು ಮನೆಗೆ ಬರುವಂತೆ ಒತ್ತಾಯಿಸಿರು. 'ನೀನು ಇಲ್ಲಿ ಮಾಡುತ್ತಿಲ್ಲ, ಚಿತ್ರಕ್ಕೆ ಹೇಗೆ ಮಾಡುತ್ತೀರಿ? ಎಂದು ಪ್ರಶ್ನಿಸಿದರು.

ಇತ್ತೀಚಿನ ದಿನಗಳಲ್ಲಿ ಸೊಲೋಗಮಿ ಎಂಬ ಪದ ಭಾರಿ ಸದ್ದು ಮಾಡುತ್ತಿದೆ. ತಿಂಗಳುಗಳ ಹಿಂದೆ ಗುಜರಾತಿನ ಕ್ಷಮಾ ಬಿಂದು ಸೊಲೋಗಮಿ ಮದುವೆಯಾಗಿ ಸುದ್ದಿಗಳ ಕೇಂದ್ರ ಬಿಂದುವಾಗಿದ್ದರು. ವರನನ್ನು ವರಿಸಲು ಇಷ್ಟವಿಲ್ಲದ ಕಾರಣ, ಏಕಾಂಗಿಯಾಗಿ ಜೀವಿಸಲು ನಿರ್ಧರಿಸಿದ ಕ್ಷಮಾ ಬಿಂದು ಸ್ವಯಂ ವಿವಾಹದ ನಿರ್ಧಾರ ತೆಗೆದುಕೊಂಡಿದ್ದರು. ಭಾರತದಲ್ಲಿ ತನ್ನನ್ನು ತಾನು ಮದುವೆಯಾದ ಮೊದಲ ಮಹಿಳೆ ಇವರು. ಈ ಸ್ವಯಂ-ವಿವಾಹದ ಪರಿಕಲ್ಪನೆಯನ್ನು ಸೋಲೋಗಮಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಸೋಲೋಗಮಿ ವಿವಾಹ ನಡೆದಿದ್ದು ಕೂಡ ಇದೇ ಮೊದಲು. ಅದೇ ರೀತಿ ಹಿಂದಿ ಕಿರುತೆರೆ ನಟಿ ಕನಿಷ್ಕಾ ಸೋನಿ ಸ್ವಯಂ ವಿವಾಹವಾಗಿದ್ದಾರೆ. ಪವಿತ್ರ ರಿಶ್ತಾ ಮತ್ತು ದಿಯಾ ಔರ್ ಬಾತಿ ಹಮ್ ಎಂಬ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿ ಹೆಚ್ಚು ಹೆಸರುವಾಸಿಯಾದ ನಟ, ಆಗಸ್ಟ್ 6ರಂದು ತನ್ನನ್ನು ಮದುವೆಯಾಗಿರುವುದಾಗಿ ಘೋಷಿಸಿಕೊಂಡರು.

ಸೊಲೊಗಾಮಿಯ ಅರ್ಥ ನಿಮಗೆ ತಿಳಿದಿದೆಯೇ? ಯಾಕೆ ಈ ಟ್ರೆಂಡ್ ಹೆಚ್ಚುತ್ತಿದೆ?

ಸೋಲೋಗಮಿ ಎಂದರೇನು ?
ಸೊಲೊಗಮಿ ಎಂದರೆ ಒಬ್ಬ ವ್ಯಕ್ತಿಯು ತನ್ನನ್ನು ತಾನೇ ಮದುವೆ (Marriage)ಯಾಗುವುದು ಎಂದರ್ಥ. ಸೊಲೊಗಾಮಿಯನ್ನು ಒಟೊಗಾಮಿ ಎಂದೂ ಸಹ ಕರೆಯಲಾಗುತ್ತದೆ. ಸೊಲೊಗಾಮಿ ಆಗುವವರು ಇದು ತಮ್ಮ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಮತ್ತು ತಮ್ಮನ್ನು ತಾವು ಪ್ರೀತಿಸುವ ಒಂದು ಮಹತ್ತರ ಹೆಜ್ಜೆ ಎಂದು ಅವರು ಹೇಳುತ್ತಾರೆ. ಇದನ್ನು ಸ್ವಯಂ-ವಿವಾಹ ಎಂದೂ ಕರೆಯಬಹುದು. 

ನಾನೇ  ಶಿವ, ನಾನೇ ಶಕ್ತಿ ಎಲ್ಲವೂ ನನ್ನೊಳಗೆ ಇದೆ
'ನನ್ನನ್ನು ನಾನೇ ಮದುವೆಯಾಗಿದ್ದೇನೆ. ನನ್ನ ಎಲ್ಲಾ ಕನಸುಗಳನ್ನು ನಾನು ಸ್ವಂತವಾಗಿ ಈಡೇರಿಸಿಕೊಂಡಿದ್ದೇನೆ ಮತ್ತು ನಾನು ಪ್ರೀತಿಸುತ್ತಿರುವ ಏಕೈಕ ವ್ಯಕ್ತಿ ನಾನೇ. ನಾನು ಯಾವಾಗಲೂ ಒಂಟಿ (Alone)ಯಾಗಿ ಮತ್ತು ನನ್ನ ಗಿಟಾರ್‌ನೊಂದಿಗೆ ಏಕಾಂತದಲ್ಲಿ ಸಂತೋಷವಾಗಿರುತ್ತೇನೆ. ನಾನು ದೇವತೆ, ಸ್ಟ್ರಾಂಗ್ ಮತ್ತು ಪವರ್‌ಫುಲ್, ಶಿವ ಮತ್ತು ಶಕ್ತಿ ಎಲ್ಲವೂ ನನ್ನೊಳಗೆ ಇದೆ, ಧನ್ಯವಾದಗಳು" ಎಂದು ನಟಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದು ಅವರು ಮಂಗಳಸೂತ್ರ ಮತ್ತು ಸಿಂಧೂರ್ ಧರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದರು.

Follow Us:
Download App:
  • android
  • ios