Asianet Suvarna News Asianet Suvarna News

ಕಾರ್ಟೂನ್ ಪಾತ್ರದ ಮೇಲೆ ಮೂಡಿದ ಪ್ರೀತಿ.. ಲಕ್ಷಾಂತರ ಖರ್ಚು ಮಾಡಿ ಮದುವೆ!

ಮಕ್ಕಳು, ದೊಡ್ಡವರು ಎನ್ನದೆ ಅನೇಕರು ಕಾರ್ಟೂನ್ ವೀಕ್ಷಣೆ ಮಾಡ್ತಾರೆ. ಅದ್ರಲ್ಲಿ ಬರುವ ಪಾತ್ರಗಳು ಎಲ್ಲರ ಮೆಚ್ಚುಗೆ ಗಳಿಸೋದು ಸಹಜ. ಆದ್ರೆ ಅದೆ ಪ್ರೀತಿಗೆ ತಿರುಗಿ, ಮದುವೆಗೆ ಬಂದು ನಿಂತ್ರೆ..?!
 

Japan Man Marry Virtual Anime Cartoon Character For Loving Relationship roo
Author
First Published Sep 22, 2023, 2:14 PM IST

ಜಪಾನ್ ಜನರ ಆಲೋಚನೆಯಲ್ಲಿ ದೊಡ್ಡ ಬದಲಾವಣೆ ಆಗ್ತಿದೆ. ಜಪಾನಿ ಜನರು ಮದುವೆಯಾಗಲು ಮನಸ್ಸು ಮಾಡ್ತಿಲ್ಲ. ವಿಶ್ವದ ಜನಸಂಖ್ಯಾ ಪಟ್ಟಿಯಲ್ಲಿ ಜಪಾನ್ 11ನೇ ಸ್ಥಾನದಲ್ಲಿದ್ದರೂ ಯುವಕರ ಸಂಖ್ಯೆ ಕಡಿಮೆ ಇದೆ. ವೃದ್ಧರ ಸಂಖ್ಯೆ ಹೆಚ್ಚಾಗ್ತಿರುವ ಕಾರಣ ಇದು ಅಲ್ಲಿನ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ನೀಡ್ತಿದೆ.  ಸಮೀಕ್ಷೆ ಒಂದರ ಪ್ರಕಾರ, 20ರ ಹರೆಯದ ಶೇಕಡಾ 65.8 ರಷ್ಟು ಪುರುಷರು ಮತ್ತು 51.8  ರಷ್ಟು ಮಹಿಳೆಯರು ಸಂಗಾತಿ ಹೊಂದಿಲ್ಲ. ಇನ್ನು ಮೂವತ್ತರ ಹರೆಯದಲ್ಲಿ ಸಂಗಾತಿ ಹೊಂದಿಲ್ಲದವರ ಸಂಖ್ಯೆ ಪುರುಷರು ಶೇಕಡಾ 35.5ರಷ್ಟಾದ್ರೆ ಮಹಿಳೆಯರು ಶೇಕಡಾ 27ರಷ್ಟಿದ್ದಾರೆ. ಅಪ್ಪಿತಪ್ಪಿ ಮದುವೆಗೆ ಮನಸ್ಸು ಮಾಡುವವರು ಕೂಡ ಭಿನ್ನ ಆಲೋಚನೆಗಳನ್ನು ಹೊಂದಿದ್ದಾರೆ. ಅವರು ಮದುವೆಗೆ ಆಯ್ದುಕೊಳ್ಳುವ ಸಂಗಾತಿ ಅಚ್ಚರಿ ಹುಟ್ಟಿಸುವಂತಿರುತ್ತದೆ. ಈಗ ಜಪಾನ್ ವ್ಯಕ್ತಿಯೊಬ್ಬನ ಮದುವೆ ಸುದ್ದಿ ಮಾಡಿದೆ. ಆತ ತನ್ನ ಬಹುದಿನದ ಪ್ರೇಮಿ ಜೊತೆ ಮದುವೆಯಾಗಿದ್ದಾನೆ. ಆದ್ರೆ ಅದು ಜೀವವಿರುವ ಹುಡುಗಿಯಲ್ಲ. ಜೀವವಿಲ್ಲದ ಬೊಂಬೆ. 

ಜಪಾನ್ (Japan) ವ್ಯಕ್ತಿ ಕಾರ್ಟೂನ್ (Cartoon) ಪಾತ್ರವನ್ನು ಪ್ರೀತಿಸಿದ್ದಲ್ಲದೆ ಮಾನವ ಗಾತ್ರದ ಗೊಂಬೆಯನ್ನು ಖರೀದಿಸಿದ್ದಾನೆ. ನಂತ್ರ ಗೊಂಬೆ ಜೊತೆ ಮದುವೆ (Married )ಯಾಗಿದ್ದಾನೆ. ಆತನ ಪ್ರೀತಿ ಕಥೆ ಬಗ್ಗೆ ಮಾಹಿತಿ ಇಲ್ಲಿದೆ. ಅಕಿಹಿಕೊ ಕೊಂಡೊ ಕಾರ್ಟೂನ್ ಜೊತೆ ಮದುವೆಯಾದ ವ್ಯಕ್ತಿ. ಕಾರ್ಟೂನ್ ಪಾತ್ರವನ್ನು ಬಹಳ ಸಮಯದಿಂದ ಪ್ರೀತಿಸುತ್ತಿದ್ದನು. ಕೊನೆಗೆ ಪಾತ್ರವನ್ನೇ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾನೆ. ದೊಡ್ಡ ಗೊಂಬೆ ಖರೀದಿ ಮಾಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.  ಇದಲ್ಲದೆ ಹೊಸ ರೀತಿಯ ಸಂಬಂಧವನ್ನು ಪ್ರಚಾರ ಮಾಡುತ್ತಿದ್ದಾನೆ. 

ಪತಿಯ ಮನೆಗೆಲಸಗಳ ಪಟ್ಟಿ ಕೊಟ್ಟ ನಟಿ ಕತ್ರಿನಾ: ಆಹಾ! ನೀವೇ ಪುಣ್ಯವಂತರು ಅಂದ ಮಹಿಳೆಯರು

ಸೈಕೋಸೆಕ್ಸುವಲ್ (Fictosexual) ಅಂದರೇನು? : ಅಕಿಹಿಕೊ ಕೊಂಡೊ ಕಾರ್ಟೂನ್ ಮದುವೆಯಾಗಿದ್ದಲ್ಲದೆ ಈ ಸಂಬಂಧಕ್ಕೆ ಫಿಕ್ಟೋಸೆಕ್ಸುವಲ್ ಎಂದು ನಾಮಕರಣ ಮಾಡಿದ್ದಾನೆ.  ಫಿಕ್ಟೋಸೆಕ್ಸುವಲ್ ಅಂದರೆ ಒಬ್ಬ ವ್ಯಕ್ತಿಯು ಕಾಲ್ಪನಿಕ ಪಾತ್ರವನ್ನು ಪ್ರೀತಿಸುವ ಮತ್ತು ಅವಳೊಂದಿಗೆ ಇರಬೇಕೆಂದು ಕನಸು ಕಾಣಲು ಪ್ರಾರಂಭಿಸುವ ಸಂಬಂಧ.  

ಅಕಿಹಿಕೊ ಕೊಂಡೊ ಕಾರ್ಟೂನ್ ಮದುವೆಯಾಗಿದ್ದು ಏಕೆ? : ಕಾರ್ಟೂನ್ ಪಾತ್ರವನ್ನೇ ಮದುವೆಯಾಗಿ ತನ್ನ ಬಾಳ ಸಂಗಾತಿ (Life Partner) ಮಾಡಿಕೊಂಡ ಅಕಿಹಿಕೊ ಕೊಂಡೊ ಅದಕ್ಕೆ ಕಾರಣವನ್ನೂ ಹೇಳಿದ್ದಾನೆ. ಫಿಕ್ಟೋಸೆಕ್ಸುವಲ್ ಸಂಬಂಧದ ಬಗ್ಗೆ ಪ್ರಚಾರ ಮಾಡುವ ಸಂದರ್ಭದಲ್ಲಿ ಜನರು ಈತನನ್ನು ಹುಚ್ಚ, ಮಾನಸಿಕ ಅಸ್ವಸ್ಥ ಎಂದು ಕರೆಯುತ್ತಿದ್ದರಂತೆ. ಆದ್ರೂ ತನ್ನ ಕೆಲಸವನ್ನು ಅಕಿಹಿಕೊ ಕೊಂಡೊ ಬಿಡಲಿಲ್ಲ. ಫಿಕ್ಟೋಸೆಕ್ಸುವಲ್ ಅಸೋಸಿಯೇಷನ್ ಅನ್ನು ಪ್ರಾರಂಭಿಸಿದ್ದಾನೆ. ಇದರ ಮೂಲಕ ಹೊಸ ರೀತಿಯ ಸಂಬಂಧದ ಬಗ್ಗೆ ಜನರಿಗೆ ತಿಳಿಸುತ್ತಿದ್ದಾನೆ.  ಪ್ರಸ್ತುತ ಈ ಗುಂಪಿನಲ್ಲಿ ಕೇವಲ ನಾಲ್ವರು ಸದಸ್ಯರಿದ್ದಾರೆ. ಕಾರ್ಟೂನ್ ಪಾತ್ರವನ್ನು ನಾನು ಪ್ರೀತಿಸುತ್ತಿದ್ದೇನೆ. ಅದನ್ನು ತುಂಬಾ ಇಷ್ಟಪಡ್ತೇನೆ ಎಂದಾಗ ಜನರಿಗೆ ಅದು ಅರ್ಥವಾಗ್ತಿರಲಿಲ್ಲ. ಈ ಹೊಸ ರೀತಿಯ ಪ್ರೀತಿಯ ಬಗ್ಗೆ ಜಗತ್ತಿಗೆ ತಿಳಿಯಬೇಕೆಂದು ನನ್ನ ಬಯಕೆಯಾಗಿತ್ತು. ಹಾಗಾಗಿ ಕಾರ್ಟೂನ್ ಪಾತ್ರವನ್ನು ಮದುವೆಯಾಗಿದ್ದೇನೆ ಎನ್ನುತ್ತಾನೆ ಅಕಿಹಿಕೊ ಕೊಂಡೊ. 

ಭಾರತದ ಈ ಗ್ರಾಮದಲ್ಲಿ ಮದುವೆಗೂ ಮುನ್ನ ನೈಟ್ ಕ್ಲಬ್ಬಲ್ಲಿ ದೈಹಿಕ ಸಂಬಂಧ ಬೆಳೆಸ್ಬಹುದು!

ಅಕಿಹಿಕೊ ಮದುವೆಗೆ ಖರ್ಚಾದ ಹಣ ಎಷ್ಟು ಗೊತ್ತಾ?: ಅಕಿಹಿಕೊಗೆ ಈಗ 40 ವರ್ಷ ವಯಸ್ಸಾಗಿದೆ. ಆತ ಜಪಾನ್ ನಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದಾನೆ. ಕಾರ್ಟೂನ್ ಪಾತ್ರಧಾರಿ ಗುಡಿಯಾಳನ್ನು ಮದುವೆಯಾಗಿದ್ದಾನೆ. ಅಕಿಹಿಕೊ ಈ ಮದುವೆಗೆ 13 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾನೆ. ಈ ಮದುವೆ ಸಮಾರಂಭಕ್ಕೆ ಒಟ್ಟು 40 ಅತಿಥಿಗಳು ಬಂದಿದ್ದರು. ಅಕಿಹಿಕೊ ಈ ಮದುವೆಯನ್ನು ಪೋಷಕರು ನಿರಾಕರಿಸಿದ್ದಾರೆ. ಅವರು ಈ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಹಾಗಾಗಿ ಅಕಿಹಿಕೊ ಕೊಂಡೊ ಮದುವೆಗೆ ಅವರು ಬಂದಿರಲಿಲ್ಲ. ಅಕಿಹಿಕೊನನ್ನು ಜನರು ಫಿಕ್ಟೋಸೆಕ್ಸುವಲ್ ಜನಕ ಎಂದು ಕರೆಯುತ್ತಾರೆ. 

Follow Us:
Download App:
  • android
  • ios