Asianet Suvarna News Asianet Suvarna News

ಅವರು ನಿಮ್ಮ ಬಗ್ಗೆ ಪೊಸೆಸ್ಸಿವಾ? ಹುಷಾರು, ಇದು ಬರೀ ಲವ್ ಆಗಿರೋಲ್ಲ

ಪ್ರೀತಿ ಕೆಲವೊಮ್ಮೆ ಉಸಿರುಗಟ್ಟಿಸುತ್ತದೆ. ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ ಭಾಸವಾಗುತ್ತದೆ. ಬೆಳವಣಿಗೆಗೆ ಆಸ್ಪದವೇ ಇಲ್ಲದಂತೆ ಮಾಡುತ್ತದೆ. ಇವೆಲ್ಲವೂ ಉಂಟಾಗುವುದು ಪ್ರೀತಿ ಎನ್ನುವುದು ಗೀಳಿಗೆ ಪರಿವರ್ತನೆಯಾದಾಗ. ಪ್ರೀತಿಯನ್ನೇ ಗೀಳನ್ನಾಗಿ ಮಾಡಿಕೊಳ್ಳುವ ಸಂಗಾತಿಯನ್ನು ಗುರುತಿಸುವುದು ಅಗತ್ಯ.
 

Is your partner have obsession with you or loves you relationship tips here
Author
First Published Jun 1, 2023, 4:55 PM IST

ನಮ್ಮನ್ನು ಪ್ರೀತಿಸುವ ಜನರನ್ನು ನಾವೂ ಅತಿಯಾಗಿ ಇಷ್ಟಪಡುತ್ತೇವೆ. ಅಗತ್ಯವಿದ್ದಾಗ ಬೆಂಬಲ ನೀಡುವವರ ಬಗ್ಗೆ ಸಾಕಷ್ಟು ಆದರ ಹೊಂದಿರುತ್ತೇವೆ. ಆದರೆ, ಈ ಅತಿಯಾದ ಪ್ರೀತಿ ಕೆಲವೊಮ್ಮೆ ಗೀಳಿನ ರೂಪಕ್ಕೆ ತಿರುಗುವುದೂ ಇದೆ. ಗೀಳ ಮತ್ತು ಪ್ರೀತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರೀತಿ ಸ್ವಲ್ಪ ವಿಚಿತ್ರ ರೂಪ ಪಡೆದುಕೊಂಡರೆ ಅದೇ ಗೀಳಾಗುತ್ತದೆ. ಪ್ರೀತಿ ಪ್ರತಿಯೊಬ್ಬರನ್ನೂ ಸಶಕ್ತಗೊಳಿಸಿದರೆ ಗೀಳು ಎಲ್ಲರನ್ನೂ ಬಲಹೀನಗೊಳಿಸುತ್ತದೆ. ಗೀಳು ಅಭದ್ರತೆ ಮತ್ತು ಪೊಸೆಸಿವ್ ನೆಸ್ ನಿಂದ ಕೂಡಿರುತ್ತದೆ. ಅಧ್ಯಯನಗಳ ಪ್ರಕಾರ, ಗೀಳಿನಂತಹ ಪ್ರೀತಿ ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಸಮಸ್ಯೆ ಆಗಿದೆ. ಹೀಗಾಗಿ, ಸೂಕ್ತ ಗುರುತಿಸುವಿಕೆ ಮತ್ತು ಪರಿಹಾರದ ಅಗತ್ಯವಿರುತ್ತದೆ. ನಾವು ಸ್ವೀಕರಿಸುವ ಪ್ರೀತಿ ನಿಯಂತ್ರಣದ ರೂಪಕ್ಕೆ ತಿರುಗಿದಾಗ ಆ ಸಂಬಂಧ ಉಸಿರುಕಟ್ಟಿಸಲು ಆರಂಭವಾಗುತ್ತದೆ. ಕೆಟ್ಟದ್ದೆಂದು ಅನಿಸಲು ಶುರುವಾಗುತ್ತದೆ. ಹೀಗಾಗಿ, ಪ್ರೀತಿ ಮತ್ತು ಗೀಳಿನ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವುದು ಅಗತ್ಯ. ಹಲವು ಅಂಶಗಳ ಮೂಲಕ ನಿಮ್ಮದು ಗೀಳೋ, ಪ್ರೀತಿಯೋ ಎನ್ನುವುದನ್ನು ಅರಿತುಕೊಳ್ಳಬಹುದು. ನಿಮ್ಮ ಸಂಗಾತಿ ನಿಮ್ಮ ಮೇಲೆ ಹೊಂದಿರುವ ಭಾವನೆ ಎಂಥದ್ದು ಎನ್ನುವುದನ್ನು ಸಹ ತಿಳಿದುಕೊಳ್ಳಬಹುದು.

•    ನಿಮ್ಮ ಬಗ್ಗೆ ಅತಿಯಾದ ಪೊಸೆಸಿವ್ ನೆಸ್ (Over Possessiveness)
ಪ್ರತಿ ಸಂಬಂಧದಲ್ಲಿ ಸ್ವಲ್ಪ ಪೊಸೆಸಿವ್ ನೆಸ್ ಇದ್ದೇ ಇರುವುದು ಸಹಜ. ಆದರೆ, ಇದಕ್ಕೊಂದು ಮಿತಿ (Limit) ಇರುತ್ತದೆ. ಇದನ್ನು ನಿಮ್ಮ ಸಂಗಾತಿ (Partner) ಮುರಿದಾಗ ಅದನ್ನು ಗೀಳಾಗಿ (Obsession) ಪರಿಗಣಿಸಬಹುದು. ಸಂಗಾತಿ ನಿಮ್ಮ ಮೊಬೈಲ್ ಚೆಕ್ ಮಾಡುವುದು, ನೀವು ಬೇರೆಯವರೊಂದಿಗೆ ಎಂಗೇಜ್ ಆಗಿದ್ದಾಗ ನೆಗೆಟಿವ್ ಆಗಿ ಪ್ರತಿಕ್ರಿಯಿಸುವುದು ಇದಕ್ಕೆ ಕೆಲವು ಉದಾಹರಣೆ. ನಿಮ್ಮನ್ನು ಕಳೆದುಕೊಳ್ಳುವ ಭೀತಿಯಲ್ಲಿ ಅವರು ಹಾಗೆ ಮಾಡುತ್ತಾರೆ. 

Relationship Tips: ನೀವು ಹೀಗೆ ಮಾಡೋದ್ರಿಂದಾನೇ ಸಂಬಂಧ ಮುರಿದು ಬೀಳೋದು

•    ಉಡುಗೊರೆ (Gifts) ನೀಡುತ್ತ ಸದಾ ಖುಷಿಯಾಗಿಡಲು ಬಯಸುತ್ತಾರೆ
ಪ್ರೀತಿಪಾತ್ರಿಗೆ ಉಡುಗೊರೆ ನೀಡುವುದು ಸಾಮಾನ್ಯ. ಆದರೆ, ಯಾವತ್ತೂ ಅವರು ನಿಮ್ಮನ್ನು ಅಚ್ಚರಿಪಡಿಸುತ್ತ, ಉಡುಗೊರೆ ನೀಡುತ್ತಿರುವುದು ಸಹಜವೆಂದು ಅನಿಸುವುದಿಲ್ಲ. ನಿಮ್ಮ ಖುಷಿಗಿಂತ ಹೆಚ್ಚಾಗಿ ನೀವು ಅವರನ್ನು ತೊರೆಯದಂತೆ ನೋಡಿಕೊಳ್ಳುವ ಪ್ರಯತ್ನವಾಗಿ ಕಾಣುತ್ತದೆ.

•    ನಿಮ್ಮನ್ನು ಪಡೆಯಲು ತರಾತುರಿ (Fast)
ಗೀಳಿನ ಪ್ರೀತಿ ಭಯ (Fear) ಮತ್ತು ಅಭದ್ರತೆಯಿಂದ (Insecurity) ಕೂಡಿರುವುದರಿಂದ ನಿಮ್ಮನ್ನು ಪಡೆಯಲು ಅವರು ಗಡಿಬಿಡಿ ತೋರುತ್ತಾರೆ. ನೈಜವಾದ ಪ್ರೀತಿ (Love) ಅರಳಲು ಸ್ವಲ್ಪ ಸಮಯ ಬೇಕು ಎನ್ನುವುದನ್ನು ಅವರು ಮರೆಯುತ್ತಾರೆ. 

•    ಸದಾಕಾಲ ಸಂಪರ್ಕದಲ್ಲಿರಬೇಕು (Touch All the Time)
ಇಡೀ ದಿನ ಯಾರೊಂದಿಗಾದರೂ ಮೆಸೇಜ್ (Message) ಮಾಡುತ್ತ, ಪದೇ ಪದೆ ಫೋನ್ ಮಾಡುತ್ತಿರಲು ಸಾಧ್ಯವೇ? ಆದರೆ, ನಿಮ್ಮ ಸಂಗಾತಿ ಪದೇ ಪದೆ ನಿಮ್ಮೊಂದಿಗೆ ಮಾತನಾಡಲು, ಮೆಸೇಜ್ ಮಾಡಲು, ಚಿಕ್ಕಪುಟ್ಟ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳಲು ಬಯಸುತ್ತಾರೆ. ಈ ಮೂಲಕ ನೀವು ಬೇರೆ ಏನೂ ಮಾಡದಂತೆ ಕಟ್ಟಿಹಾಕುತ್ತಾರೆ. 

•    ನಿಮ್ಮ ಬಗ್ಗೆ ಅಸಂತೋಷ (Not Happy)
ಬೆಂಬಲ (Support) ನೀಡುವ ಸಂಗಾತಿ ನಿಮ್ಮ ಏಳಿಗೆ, ಪರಿಶ್ರಮವನ್ನು ಕಂಡು ಖುಷಿ ಪಡುತ್ತಾರೆ. ಆದರೆ, ಗೀಳಿನಂತಹ ಪ್ರೀತಿ ಹೊಂದಿರುವ ಸಂಗಾತಿಗೆ ನಿಮ್ಮ ಬಗ್ಗೆ ಅಂತಹ ಸಂತೋಷ ಇರುವುದಿಲ್ಲ. ನೀವು ಅವರನ್ನು ಬಿಟ್ಟು ಒಂದು ದಿನ ಕೆಲಸಕ್ಕಾಗಿ ಎಲ್ಲಾದರೂ ಹೋಗಬೇಕೆಂದು ಬಂದರೆ ಅವರು ಅದನ್ನು ಸಹಿಸುವುದಿಲ್ಲ. ನಿಮ್ಮ ಏಳಿಗೆಯ ಬಗ್ಗೆ ಅವರ ಗಮನವಿರುವುದಿಲ್ಲ. ಬದಲು, ಓವರ್ ಪ್ರೊಟೆಕ್ಟಿವ್ (Over Protective) ಆಗಿ ವರ್ತಿಸುತ್ತಾರೆ. 

The Karezza Method: ಸುಖಕರ ಲೈಂಗಿಕ ಜೀವನಕ್ಕೆ ಈ ತಂತ್ರ ಬಳಸಿ

•    ಅವರು ನಿಮ್ಮದೇ ಗುಂಗಿನಲ್ಲಿರುತ್ತಾರೆ (Think)
ಪ್ರೀತಿಸಿದ ವ್ಯಕ್ತಿಗಳು ಪರಸ್ಪರ ನೆನಪಿನಲ್ಲಿರುವುದು ಸಹಜ. ಆದರೆ, ಬೇರೆ ಕೆಲಸಕಾರ್ಯಗಳಿಗೆ ಆಸ್ಪದವೇ ಇಲ್ಲದಂತೆ ಕೇವಲ ನಿಮ್ಮ ನೆನಪಿನಲ್ಲಿ ದಿನ ಕಳೆಯುವುದು ಅವರು ನಿಮ್ಮ ಮೇಲೆ ಗೀಳಿನ ಭಾವನೆ (Feel) ಹೊಂದಿರುವುದಕ್ಕೆ ಸಾಕ್ಷಿ. 

Follow Us:
Download App:
  • android
  • ios