Asianet Suvarna News Asianet Suvarna News

International Mens Day: ಪುರುಷರಿಗಾಗಿ ಒಂದು ದಿನವೇಕೆ?

ಪುರುಷರನ್ನು ಗೌರವಿಸಲು ಮತ್ತು ಅವರ ಸಾಂಸ್ಕೃತಿಕ, ರಾಜಕೀಯ, ಭಾವನಾತ್ಮಕ ಮತ್ತು ಸಾಮಾಜಿಕ ಆರ್ಥಿಕ ಸಾಧನೆಗಳನ್ನು ಗುರುತಿಸಲು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತೆ. ಈ ದಿನದ ಆಚರಣೆ ಆರಂಭ ಆಗಿದ್ದು ಯಾವಾಗ? ಅಂತಾರಾಷ್ಟ್ರೀಯ ಪುರುಷರ ದಿನ 2022ರ ಥೀಮ್ ಏನು ಅನ್ನೋ ಮಾಹಿತಿ ಇಲ್ಲಿದೆ.

International Mens Day 2022: Date, History, Theme And Significance Of Day Vin
Author
First Published Nov 19, 2022, 11:41 AM IST | Last Updated Nov 19, 2022, 11:41 AM IST

ಅಂತಾರಾಷ್ಟ್ರೀಯ ಪುರುಷರ ದಿನವನ್ನು (International Mens Day) ವಾರ್ಷಿಕವಾಗಿ ನವೆಂಬರ್ 19ರಂದು ಆಚರಿಸಲಾಗುತ್ತದೆ. ಇದು ಪುರುಷರನ್ನು ಗೌರವಿಸಲು ಮತ್ತು ಅವರ ಸಾಂಸ್ಕೃತಿಕ, ರಾಜಕೀಯ, ಭಾವನಾತ್ಮಕ ಮತ್ತು ಸಾಮಾಜಿಕ ಆರ್ಥಿಕ ಸಾಧನೆಗಳನ್ನು ಗುರುತಿಸುವ ದಿನವಾಗಿದೆ. ಪುರುಷರು ಈ ಸಮಾಜದ ಪ್ರಮುಖ ಸ್ತಂಭಗಳು. ಆದರೆ ಯಾರೂ ಕೂಡಾ ಪುರುಷರ ಬಗ್ಗೆ, ಪುರುಷರ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ, ಅವರು ವಹಿಸುವ ಪ್ರತಿಯೊಂದು ಪಾತ್ರದಲ್ಲೂ ಅವರ ಕೊಡುಗೆ ಮತ್ತು ಸಮರ್ಪಣೆಯಿರುತ್ತದೆ. ಅದು ತಂದೆ (Father) ಯಾಗಿರಲಿ, ಸಂಗಾತಿ (Partner)ಯಾಗಿರಲಿ ಅಥವಾ ಮಗನಾಗಿರಲಿ. ತ್ಯಾಗ, ಸಮರ್ಪಣೆ, ಜವಾಬ್ದಾರಿ, ಕಾಳಜಿ ಮತ್ತು ಪ್ರೀತಿ. ಈ ಮೌಲ್ಯಗಳನ್ನು ಆಚರಿಸಲು ಮತ್ತು ಪುರುಷತ್ವದ ಸಕಾರಾತ್ಮಕ ಅನಿಸಿಕೆಗಳನ್ನು ಉತ್ತೇಜಿಸಲು, ಅಂತರರಾಷ್ಟ್ರೀಯ ಪುರುಷರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಪುರುಷರ ದಿನದ ಇತಿಹಾಸ
ಸಮಾಜಕ್ಕೆ ಪುರುಷರು ನೀಡಿದ ಕೊಡುಗೆಯನ್ನು ಆಚರಿಸಲು, ಪುರುಷರು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ (Awareness) ಮೂಡಿಸುವ ಮೂಲಕ ಪುರುಷರ ಕಲ್ಯಾಣದ ಕಡೆಗೆ ಗಮನಹರಿಸಲು ನವೆಂಬರ್ 19 ರಂದು ಅಂತರರಾಷ್ಟ್ರೀಯ ಪುರುಷರ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಪುರುಷರ ದಿನವನ್ನು ಮೊದಲ ಬಾರಿಗೆ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿರುವ ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾದ ಡಾ.ಜೆರೋಮ್ ಟೀಲುಕ್‌ಸಿಂಗ್ ಅವರು ಆಚರಿಸಿದರು. ಈ ದಿನವನ್ನು ಡಾ ಜೆರೋಮ್ ಅವರ ತಂದೆಯ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಬಳಸಲಾಯಿತು. ಪುರುಷರಿಗೆ ಸಂಬಂಧಿಸಿದ ಸಮಸ್ಯೆಗಳನ್ನು (Problems) ತರಲು ಈ ದಿನವನ್ನು ಬಳಸಿಕೊಳ್ಳುವಂತೆ ಅವರು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿದರು.

ಪುರುಷರೇ, ಈ ಟೆಸ್ಟ್ ಮಾಡಿಸಲು ತಡ ಮಾಡಬೇಡಿ, ಮತ್ತಷ್ಟು ಹದಗೆಡಬಹುದು ಆರೋಗ್ಯ

ಆರಂಭದಲ್ಲಿ, ಅಂತಾರಾಷ್ಟ್ರೀಯ ಪುರುಷರ ದಿನವನ್ನು 1992ರಲ್ಲಿ ಥಾಮಸ್ ಓಸ್ಟರ್ ಉದ್ಘಾಟಿಸಿದರು. ಅದರ ಪ್ರಾಮುಖ್ಯತೆಯ ಕಾರಣದಿಂದ 1999 ರಲ್ಲಿ ಡಾ ಜೆರೋಮ್ ಟೀಲುಕ್‌ಸಿಂಗ್ ಅವರು ಈ ದಿನವನ್ನು ಪುನರುಜ್ಜೀವನಗೊಳಿಸಿದರು. ಅವರ ತಂದೆಯ ಜನ್ಮದಿನದಂದು ಈ ದಿನವನ್ನು ಆಯೋಜಿಸುವುದರ ಜೊತೆಗೆ ಅವರು ಅದೇ ದಿನಾಂಕದಂದು, ಒಂದು ದಶಕದ ಹಿಂದೆ (1989) ಟ್ರಿನಿಡಾಡ್ ಮತ್ತು ಟೊಬಾಗೋದ ಸಾಕರ್ ತಂಡವನ್ನು ಹೇಗೆ ಒಂದುಗೂಡಿಸಿದ್ದರು ಎಂಬುದನ್ನು ಆಚರಿಸಲು ಆಯ್ಕೆ ಮಾಡಿದರು. 

ಅಂತಾರಾಷ್ಟ್ರೀಯ ಪುರುಷರ ದಿನದ ಮಹತ್ವ
ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಪುರುಷರು ವಿನಾಕಾರಣ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ. ನಕಲಿ ವರದಕ್ಷಿಣೆ ಕೇಸು (Fake dowry case), ಕೌಟುಂಬಿಕ ದೌರ್ಜನ್ಯ, ಮೊದಲಾದ ಪ್ರಕರಣಗಳಲ್ಲಿ ಸಿಲುಕಿಕೊಂಡು ನರಕಯಾತನೆ ಅನುಭವಿಸುತ್ತಾರೆ. ಹಲವೆಡೆ ಕೆಲಸ ಮಾಡುವ ಜಾಗದಲ್ಲಿ ಪುರುಷರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಪುರುಷರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. 

ಡಿಫರೆಂಟ್ ಸ್ಟೈಲಲ್ಲಿ ಗಡ್ಡ ಬಿಡೋದು ಚಂದ, ಮೆಂಟೇನ್ ಮಾಡದಿದ್ದರೆ ಅನಾರೋಗ್ಯ ಗ್ಯಾರಂಟಿ

ಸಮಾಜ ಸೇವೆ, ಸಾಮಾನ್ಯ ಸಾಮಾಜಿಕ ವ್ಯವಸ್ಥೆ ಮತ್ತು ಕಾನೂನು ಕ್ಷೇತ್ರಗಳಲ್ಲಿ ಪುರುಷರು ಎದುರಿಸುತ್ತಿರುವ ತಾರತಮ್ಯ ಮತ್ತು ನಿಂದನೆಗಳನ್ನು ಎತ್ತಿ ತೋರಿಸಲು ಈ ದಿನ ಮಹತ್ವದ್ದಾಗಿದೆ. ಅಂತರಾಷ್ಟ್ರೀಯ ಪುರುಷರ ದಿನ ಲಿಂಗ ಸಮಾನತೆಯನ್ನು ಉತ್ತೇಜಿಸಲು ಪ್ರೋತ್ಸಾಹಿಸುತ್ತದೆ.

ಅಂತಾರಾಷ್ಟ್ರೀಯ ಪುರುಷರ ದಿನ 2022ರ ಥೀಮ್
ಈ ವರ್ಷ, ಅಂತರಾಷ್ಟ್ರೀಯ ಪುರುಷರ ದಿನವು 'ಪುರುಷರಿಗೆ ಸಹಾಯ' ಎಂಬ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳು ಮತ್ತು ಸರಣಿ ಸಮ್ಮೇಳನಗಳ ಮೂಲಕ ಪುರುಷರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು.

Latest Videos
Follow Us:
Download App:
  • android
  • ios