Asianet Suvarna News Asianet Suvarna News

ಸಲಿಂಗಿಗಳ ಮದುವೆಗೆ ಪುರೋಹಿತರಿಲ್ಲ.. ಹೊಸ ದಾರಿ ಕಂಡುಕೊಂಡ್ರು!

* ಹಿಂದು ಸಂಪ್ರದಾಯದಂತೆ ಸಲಿಂಗಿಗಳು ಮದುವೆಯಾಗ ಬಯಸಿದ್ದರು
* ಯಾವ ಪುರೋಹಿತರು ಮುಂದೆ ಬರಲೇ ಇಲ್ಲ
* ಪುರೋಹಿತರ ಸಮಸ್ಯೆ ಪರಿಹಾರಕ್ಕಾಗಿ ಹೊಸ ದಾರಿ ಕಂಡುಕೊಂಡರು
* ಸ್ನೇಹಿತರಲ್ಲೇ ಒಬ್ಬರು ಮದುವೆ ಕಾರ್ಯ ನಡೆಸಿಕೊಟ್ಟರು

Indian American gay couples find new forms of union amid stigma mah
Author
Bengaluru, First Published Aug 27, 2021, 11:42 PM IST
  • Facebook
  • Twitter
  • Whatsapp

ಕ್ಯಾಲಿಫೋರ್ನಿಯಾ(ಆ. 27)  ಸಲಿಂಗಿಗಳು ಹಿಂದು ಸಂಪ್ರದಾಯದಂತೆ ಮದುವೆಯಾಗಲು ಬಯಸಿದ್ದರು. ಆದರೆ ಅವರಿಗೆ ಪುರೋಹಿತರು ಸಿಗುತ್ತಲೇ ಇರಲಿಲ್ಲ. ಯಾವ ಪುರೋಹಿತರು  ಮದುವೆ ಕಾರ್ಯಕ್ರಮದ ನೇತೃತ್ವ ವಹಿಸಲು ಮುಂದೆ ಬರುತ್ತಿರಲಿಲ್ಲ.  ಈ ಕಾರಣಕ್ಕೆ ಜೋಡಿ ಹೊಸ ಮಾರ್ಗವೊಂದನ್ನು ಹುಡುಕಿಕೊಂಡಿತು.

ಸಮೀರ್ ಸಮುದ್ರ ಮತ್ತು ಅಮಿತ್  ಗೋಖಲೆ ಮದುವೆಯಾಗಿದ್ದಾರೆ.  ಒಟ್ಟಾಗಿ ಹಲವು ವರ್ಷಗಳಿಂದ ಬಾಳುತ್ತಿದ್ದವರು ಇದೀಗ ದಾಂಪತ್ಯ ಆರಂಭಿಸಿದ್ದಾರೆ.  ನಾವು ಸಲಿಂಗಿ ಎನ್ನುವ ಕಾರಣಕ್ಕೆ ಎಲ್ಲ ಕಡೆಯಿಂದಲೂ ನೋ ಉತ್ತರವೇ ಬರುತ್ತಿತ್ತು. ಆದರೆ ನಮಗೆ ಹಿಂದು ಸಂಪ್ರದಾಯದಂತೆ ಮದುವೆಯಾಗಬೇಕಿತ್ತು.

ನಾರ್ತ್ ಕ್ಯಾಲಿಫೋರ್ನಿಯಾದ ಘಟನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. 2015. ರಿಂದಲೇ ಅಮೆರಿಕದಲ್ಲಿ ಸಲಿಂಗಿಗಳ ಹಕ್ಕು  ಕಾಪಾಡುವ ಸಂಘಟನೆಗಳು ಕೆಲಸ ಮಾಡಿಕೊಂಡು ಬಂದಿವೆ.  ಅಲ್ಲಿಂದ ಸುಮಾರು 300,000 ಕ್ಕೂ ಅಧಿಕ ಸಲಿಂಗ ಜೋಡಿ ವಿವಾಹವಾಗಿವೆ.

ಸಲಿಂಗಿ...ಪುರಾಣಗಳೆ ಒಪ್ಪಿದ್ದ ವಿಚಾರ

ದೇವಾಲಯಗಳು ಸಹ ನಮ್ಮ ಮದುವೆಗೆ ಅವಕಾಶ ನೀಡುವುದಿಲ್ಲ ಎಂದವು. ಪುರೋಹಿತರು ಕರೆ ಸ್ವೀಕರಿಸುವುದನ್ನೇ ಬಿಟ್ಟರು. ಹಾಗಾಗಿ ಅನಿವಾರ್ಯವಾಗಿ ಬೇರೆ ದಾರಿ ಹಿಡಿಯಬೇಕಾಯಿತು.

ಈ ಮದುವೆಗೆ ಸ್ನೇಹಿತರಲ್ಲೇ ಒಬ್ಬರಾದ ಧಾರ್ಮಿಕತೆ ಬಗ್ಗೆ ತಿಳಿಸುಕೊಂಡಿದ್ದ ಸ್ವಪ್ನಾ ಪಾಂಡೆ ಪುರೋಹಿತರಾದರು.  ಆಕೆ ಸಹ ಸಲಿಂಗಿ.. ತನ್ನ ಪಾಕಿಸ್ತಾನಿ ಸಂಗಾತಿಯನ್ನು  ಮದುವೆ ಆಗಬೇಕಿದ್ದರೆ ವ್ಯಾಪಕ ವಿರೋಧ ಅನುಭವಿಸಿದ್ದರು.

ಸ್ವಪ್ನಾ ಎಲ್‌ಜಿಬಿಟಿಕ್ಯೂ ಹಕ್ಕುಗಳ ಕಾಪಾಡುವ ಎನ್ ಜಿಒ ಒಂದನ್ನು ನಡೆಸಿಕೊಂಡು ಬಂದಿದ್ದಾರೆ. ಇಂಥ ವಿಚಾರಗಳನ್ನು ಆಕೆ  ಒಂದು ಸವಾಲಾಗಿ ಸ್ವೀಕಾರ ಮಾಡುತ್ತಾರೆ. 

2019 ರಲ್ಲಿ ಜೈನ ಮುನಿಯಾಗಿದ್ದ ಅಭಿಷೇಕ್ ಸಂಘವಿ ಮತ್ತು ಪರಾಗ್ ಶಾ ಸಲಿಂಗಿ ಜೋಡಿ ವಿವಾಹವಾಗಿದ್ದರು. ಒಟ್ಟಿನಲ್ಲಿ ಎಲ್ಲ ವಿರೋಧಗಳ ನಡುವೆ ಸಲಿಂಗಿಗಳ ವಿವಾಹ ನೆರವೇರಿದೆ. 

 

Follow Us:
Download App:
  • android
  • ios