ಪತ್ನಿಯ ಉಡುಗೊರೆಗಳ ಮೇಲೆ ಪತಿಗೆ ಯಾವುದೇ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮದುವೆ ಅಥವಾ ಇನ್ನಿತರ ಶುಭ ಸಮಾರಂಭದಲ್ಲಿ ಮಹಿಳೆಯರಿಗೆ ನೀಡುವ ಉಡುಗೊರೆಗಳ ಮೇಲೆ ಆಕೆಗೆ ಮಾತ್ರ ಸಂಪೂರ್ಣ ಹಕ್ಕು ಇರುತ್ತದೆ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

Husband has no right over wives gifts Chhattisgarh High Court landmark judgment sat

ಬೆಂಗಳೂರು (ಜು.17):  ಸಾಮಾನ್ಯವಾಗಿ ಭಾರತೀಯ ಸಂಪ್ರದಾಯದಲ್ಲಿ ಮದುವೆ ಅಥವಾ ಇನ್ನಿತರ ಶುಭ ಸಮಾರಂಭದಲ್ಲಿ ಮಹಿಳೆಯರಿಗೆ ಸಂಬಂಧಿಕರು ಅಥವಾ ಅವರ ಸ್ನೇಹಿತರು ನೀಡುವ ಉಡುಗೊರೆಗಳ ಮೇಲೆ ಆಕೆಗೆ ಮಾತ್ರ ಸಂಪೂರ್ಣ ಹಕ್ಕು ಇರುತ್ತದೆ. ಇಂತಹ ಉಡುಗೊರೆಯ ಗಂಡ ಅಥವಾ ಅವರ ಮನೆಯವರಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಹೈಕೋರ್ಟ್‌ ಮಹಿಳಾ ಪರವಾದ ಮಹತ್ವದ ತೀರ್ಪನ್ನು ನೀಡಿದೆ.

ಭಾರತೀಯ ಸಂಪ್ರದಾಯದಲ್ಲಿ ಎಲ್ಲ ಜಾತಿ, ಧರ್ಮಗಳಲ್ಲಿಯೂ ಮದುವೆ ಸೇರಿ ಇನ್ನಿತರೆ ಶುಭ ಸಮಾರಂಭಗಳಲ್ಲಿ ಉಡುಗೊರೆ ಕೊಡುವುದು ತೀರಾ ಸಾಮಾನ್ಯವಾದ ವಿಚಾರವಾಗಿದೆ. ಆದರೆ, ಉಡುಗೊರೆಗಳು ಸಣ್ಣದ್ದಾಗಿರಬಹುದು ಅಥವಾ ಬೆಲೆ ಬಾಳುವಂಥದ್ದಾಗಿರಬಹುದು. ಆದರೆ, ಹೀಗೆ ಉಡುಗೊರೆಯಾಗಿ ಸಿಕ್ಕ ವಸ್ತುಗಳ ಮೇಲೆ ಗಂಡ- ಹೆಂಡತಿ ಇಬ್ಬರಿಗೂ ಅಧಿಕಾರ ಇರುತ್ತದೆ ಎಂದು ನಾವು ತಿಳಿದುಕೊಂಡಿರುತ್ತೇವೆ. ಆದರೆ, ನಮ್ಮ ಊಹೆ ತಪ್ಪಾಗಿದೆ. ಮದುವೆ ಅಥವಾ ಇನ್ನಿತರ ಸಮಾರಂಭಗಳಲ್ಲಿ ಹೆಂಡತಿ ಅಥವಾ ಪತ್ನಿಗೆ ಬಂದ ಉಡುಗೊರೆಗಳ ಮೇಲೆ ಸಂಪೂರ್ಣವಾಗಿ ಆಕೆಗೇ ಹಕ್ಕು ಇರುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್‌ ಮಹತ್ತರವಾದ ತೀರ್ಪನ್ನು ನೀಡಿದೆ.

ಭೀಮನ ಅಮವಾಸ್ಯೆ: ಪಾದಪೂಜೆ ಮಾಡದೇ ತವರಿನಲ್ಲಿದ್ದ ಪತ್ನಿಯನ್ನು ಕಿಡ್ನಾಪ್‌ ಮಾಡಿದ ಪತಿರಾಯ

ಮಹಿಳೆಯರು ಅನೇಕ ಸಂದರ್ಭಗಳಲ್ಲಿ ಅನೇಕ ರೀತಿಯ ಉಡುಗೊರೆಗಳನ್ನು ಸ್ವೀಕರಿಸುತ್ತಾರೆ. ಮದುವೆಯ ಮೊದಲು ಅಥವಾ ನಂತರ ಮಹಿಳೆಯರು ಖಂಡಿತವಾಗಿಯೂ ಉಡುಗೊರೆಗಳನ್ನು ಪಡೆಯುತ್ತಾರೆ. ಹೀಗಾಗಿ ಛತ್ತೀಸ್‌ಗಢ ಹೈಕೋರ್ಟ್ ಇತ್ತೀಚೆಗೆ ಸ್ತ್ರಿಧಾನ್ (ಉಡುಗೊರೆ) ಪ್ರಕರಣದಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ವಿವಾಹದ ಮೊದಲು ಅಥವಾ ನಂತರ, ನಿಶ್ಚಿತಾರ್ಥ ಅಥವಾ ವಿದಾಯ ಸಂದರ್ಭದಲ್ಲಿ ಮಹಿಳೆಗೆ ಉಡುಗೊರೆಯಾಗಿ ನೀಡಿದ ಆಸ್ತಿಯು ಆಕೆಯ ಸ್ವಂತದ್ದಾಗಿದೆ. ಅವಳ ಸಂತೋಷಕ್ಕಾಗಿ ಅದನ್ನು ಖರ್ಚು ಮಾಡುವ ಹಕ್ಕಿದೆ. ಅದರ ಮೇಲೆ ಗಂಡನಿಗೆ ಹಕ್ಕಿಲ್ಲ ಎಂದು ಆದೇಶಿಸಿದೆ.

ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯ ಪರವಾಗಿ ತೀರ್ಪು:  ಛತ್ತೀಸ್‌ಗಢ ರಾಜ್ಯದ ಅಂಬಿಕಾಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನದ ಪ್ರಕರಣ ದಾಖಲಾಗಿತ್ತು. ಮದುವೆಯಾಗಿ ಕೆಲವು ವರ್ಷಗಳ ಸಂಸಾರ ನಡೆಸಿದ್ದ ಪತಿ-ಪತ್ನಿ ಇಬ್ಬರೂ ವಿವಾಹ ವಿಚ್ಛೇದನ ಪಡೆದಿದ್ದರು. ಈ ವೇಳೆ ತನಗೆ ಉಡುಗೊರೆಯಾಗಿ ಬಂದಿದ್ದ ಆಸ್ತಿ ಮತ್ತು ವಸ್ತುಗಳನ್ನು ಗಂಡನ ಮನೆಯಿಂದ ಹಿಂದಿರುಗಿಸುವಂತೆ ಮಹಿಳೆ ಕೇಳಿಕೊಂಡಿದ್ದರು. ಆದರೆಮ ಇದನ್ನು ತೊರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ಪತಿಯ ಪರವಾಗಿ ತೀರ್ಪು ನೀಡಿ ಆದೇಶ ಹೊರಡಿಸಿತ್ತು. 

Bengaluru PES College: ಪರೀಕ್ಷೆಯಲ್ಲಿ ಕಾಪಿ ಮಾಡ್ತಿದ್ದ ವಿದ್ಯಾರ್ಥಿಗೆ ಅವಮಾನ: 14ನೇ ಮಹಡಿಯಿಂದ ಬಿದ್ದು ಸಾವು

ಹೈಕೋರ್ಟ್‌ನಲ್ಲಿ ಗೆಲುವು ಸಾಧಿಸಿ ಪತ್ನಿ:  ಈ ತೀರ್ಪಿನ ವಿರುದ್ಧ ಮಹಿಳೆ 2021ರ ಡಿಸೆಂಬರ್‌ ವೇಳೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ತ್ರಿಸದಸ್ಯ ಪೀಠವು, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿದೆ. ಜೊತೆಗೆ, ಪತ್ನಿಗೆ ಬಂದ ಉಡುಗೊರೆಯ ಮೇಲೆ ಪತಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಮಹಿಳಾ ಪರವಾದ ಮಹತ್ವದ ನಿರ್ಧಾರವನ್ನ ಹೊರಡಿಸಿದೆ. ಈ ಮೂಲಕ ಮಹಿಳೆ ಪಡೆದ ಉಡುಗೊರೆ ಮತ್ತು ವಸ್ತುಗಳನ್ನು ಪಡೆಯುವ ಹಕ್ಕು ಆಕೆಗೆ ಮಾತ್ರ ಇದೆ ಎಂದು ತ್ರಿಸದಸ್ಯ ಪೀಠವು ಆದೇಶಿಸಿದೆ. 

Latest Videos
Follow Us:
Download App:
  • android
  • ios