Asianet Suvarna News Asianet Suvarna News

ಮದುವೆ ಮೆಮೊರೆಬಲ್ ಆಗಿರ್ಬೇಕಾ, ಅತ್ಯುತ್ತಮ ಫೋಟೋ ಕ್ಲಿಕ್ಕಿಸಲು ಇಲ್ಲಿದೆ ಟಿಪ್ಸ್

ಮದುವೆ (Marriage) ಎಲ್ಲರ ಜೀವನ (Life)ದಲ್ಲೂ ಅತ್ಯಂತ ಸುಂದರ ಘಳಿಗೆ. ಹೀಗಾಗಿ ಈ ನೆನಪನ್ನು ಸದಾಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಲು ಎಲ್ಲರೂ ಪ್ರಯತ್ನಿಸುತ್ತಾರೆ. ನೆನಪನ್ನು ಶಾಶ್ವತವಾಗಿ ತಾಜಾ ಇರುವಂತೆ ಮಾಡೋದು ಫೋಟೋಸ್ (Photos). ಮದ್ವೆ ಸಮಯದಲ್ಲಿ ಅತ್ಯದ್ಭುತ ಫೋಟೋಸ್ ಕ್ಲಿಕ್ಕಿಸೋಕೆ ಇಲ್ಲಿದೆ ಕೆಲವೊಂದು ಟಿಪ್ಸ್.

How To Click Beautiful Photos In Wedding, Tips For The Best Wedding Photos Vin
Author
Bengaluru, First Published Jun 29, 2022, 3:18 PM IST

ಮದುವೆ (Marriage) ಎಂದರೆ ಈಗ ಮೊದಲಿನಂತಿಲ್ಲ. ಅತ್ಯಂತ ಅದ್ಧೂರಿಯಾಗಿ ನೆರವೇರುತ್ತದೆ. ಮಂಟಪ, ಮದುಮಕ್ಕಳ ದಿರಿಸು, ಡೆಕೊರೇಶನ್, ಊಟ-ಉಪಚಾರ ಎಲ್ಲವೂ ಗ್ರ್ಯಾಂಡ್ (Grand) ಆಗಿರುತ್ತದೆ. ಅದರಲ್ಲೂ ಆಡಂಬರದ ಮದುವೆಗೆ ಇತ್ತೀಚಿನ ವರ್ಷಗಳಲ್ಲಿ ಸೇರ್ಕೊಂಡಿರುವ ಕಾನ್ಸೆಪ್ಟ್‌  ವೆಡ್ಡಿಂಗ್ ಫೋಟೋಗ್ರಫಿ (Wedding Photography). ಹಿಂದೆಲ್ಲಾ ವಧು-ವರರು, ತಾಳಿ ಕಟ್ಟುವ ದೃಶ್ಯ, ಅತಿಥಿಗಳು, ಊಟದ ಫೋಟೊ ತೆಗೆದರೆ ವೆಡ್ಡಿಂಗ್ ಫೋಟೋಗ್ರಫಿ ಮುಗಿಯುತ್ತಿತ್ತು. ಆದರೆ ಈಗ ಹಾಗಿಲ್ಲ. ಮದುವೆ ಕಾರ್ಯಕ್ರಮಗಳಲ್ಲಿ ವೆಡ್ಡಿಂಗ್ ಪೋಟೋಗ್ರಫಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ವೆಡ್ಡಿಂಗ್‌ಗೂ ಮೊದಲೇ ಪ್ರಿ ಫೋಟೋಶೂಟ್ (Photoshoot) ಮಾಡಿಸಿ, ಸೇವ್ ದಿ ಡೇಟ್ ಲಗತ್ತಿಸಿ ಆಮಂತ್ರಣ ಪತ್ರಿಕೆಯನ್ನೇ ಸಿದ್ಧಪಡಿಸಲಾಗುತ್ತೆ.

ಪ್ರೇಮ ವಿವಾಹವಾಗಲಿ ಅಥವಾ ನಿಶ್ಚಯಿತವಾದ ವಿವಾಹವಾಗಲಿ, ವಿವಾಹದ ಕ್ಷಣಗಳು ಪ್ರತಿಯೊಬ್ಬರ ಜೀವನದಲ್ಲೂ ನಿರ್ಣಾಯಕವಾಗಿವೆ ಏಕೆಂದರೆ ಅವು ದಂಪತಿಗಳ ನಿಜವಾದ ಪ್ರೀತಿಯನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ನಿಮ್ಮ ಮದುವೆಯ ಫೋಟೋಗಳು ಮುಂಬರುವ ವರ್ಷಗಳಲ್ಲಿ ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸುತ್ತವೆ ಎಂಬುದನ್ನು ಮರೆಯಬೇಡಿ. ಮದುವೆಯ ಫೋಟೋಗಳು ದಂಪತಿಗಳ (Couple) ನಡುವೆ ಆತ್ಮ-ಸಂಪರ್ಕವನ್ನು ಸೃಷ್ಟಿಸಲು ಸಹಾಯ ಮಾಡಬೇಕು. ಆದರೆ ವೆಡ್ಡಿಂಗ್ ಫೋಟೋಗ್ರಫಿ ಈಗ ಮೊದಲಿನಂತಿಲ್ಲ. ಅತ್ಯಾಧುನಿಕವಾಗಿ, ಅತ್ಯಾಕರ್ಷಕವಾಗಿ ಬದಲಾಗಿದೆ. ಹೀಗಿರುವಾಗ ಅದ್ಭುತ ಮದುವೆ ಫೋಟೋಗಳನ್ನು ಕ್ಲಿಕ್ಕಿಸಲು ಇಲ್ಲಿದೆ ಕೆಲವೊಂದು ಟಿಪ್ಸ್.

Wedding Tips: ಮದುವೆಗೂ ಮುನ್ನವೇ ಸಂಗಾತಿಗಿದ್ಯಾ ಈ ಅಭ್ಯಾಸ ಗಮನಿಸಿ!

ಸುಂದರವಾಗಿ ರೆಡಿಯಾಗಿ: ಮದುವೆ ಎಂಬುದು ಪ್ರತಿಯೊಬ್ಬರ ಪಾಲಿಗೂ ಬಿಗ್‌ ಡೇ. ಹೀಗಾಗಿ ನಿಮ್ಮ ಜೀವನದ ಈ ಸ್ಪೆಷಲ್ ಡೇಯಂದು ನೀವು ಹೇಗೆ ರೆಡಿಯಾಗಬೇಕು ಎಂದು ಅಂದುಕೊಂಡಿದ್ದೀರೋ ಹಾಗೆ ರೆಡಿಯಾಗಿ. ಆದರೆ ನೀವು ಧರಿಸಿರುವ ಬಟ್ಟೆಯಲ್ಲಿ ನೀವು ಆರಾಮದಾಯಕವಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಬಟ್ಟೆ ಅದೆಷ್ಟು ಆಕರ್ಷಕವಾಗಿದ್ದರೂ ನಿಮ್ಮ ಮುಖ ಕಳೆಗುಂದಿದಂತೆ ಕಾಣುತ್ತದೆ. ಇದರಿಂದ ಪೋಟೋಗಳು ಸಹ ಚೆನ್ನಾಗಿ ಬರಲು ಸಾಧ್ಯವಿಲ್ಲ.

ಸರಿಯಾದ ಮೇಕಪ್ ಆರ್ಟಿಸ್ಟ್‌ನ್ನು ಆರಿಸಿ: ಮೇಕಪ್ ಕಲಾವಿದರು ಎಲ್ಲಾ ರೀತಿಯ ಮೇಕಪ್ ಮಾಡಲು ಬಲ್ಲವರಾಗಿರುತ್ತಾರೆ. ಆದರೆ ನಿಮ್ಮ ಮುಖಕ್ಕೆ ಯಾವ ರೀತಿಯ ಮೇಕಪ್‌ ಸರಿ ಹೊಂದುತ್ತದೆ ಎಂಬುದನ್ನು ಸರಿಯಾಗಿ ಕೇಳಿ ತಿಳಿದುಕೊಳ್ಳಿ. ಮೇಕಪ್ ಸರಿಯಾಗಿರದಿದ್ದರೆ ನೀವು ಅದೆಷ್ಟು ಆಕರ್ಷಕವಾಗಿ ಡ್ರೆಸ್ ಮಾಡಿದ್ದರೂ ಅದು ವ್ಯರ್ಥವಾಗಿ ಬಿಡುತ್ತದೆ. ಹೀಗಾಗಿ ಸಂಪೂರ್ಣ ಮೇಕಪ್‌ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಂತಿರಲಿ ಬದಲಿಗೆ ಸೌಂದರ್ಯವನ್ನು ಕೆಡಿಸುವಂತೆ ಆಗಬಾರದು.

ಸ್ಥಳವನ್ನು ಮೊದಲೇ ಆರಿಸಿಕೊಳ್ಳಿ: ವಿಶೇಷವಾಗಿ ಹೊರಾಂಗಣ ಕ್ಲಿಕ್‌ಗಳಿಗಾಗಿ ಕ್ಯಾಶುಯಲ್ ಮೇಕ್ಅಪ್ ಅನ್ನು ಆರಿಸಿಕೊಳ್ಳಿ. ಹೊರಾಂಗಣದಲ್ಲಿ ಶೂಟಿಂಗ್ ಮಾಡುವಾಗ ನೀವು ಬೆವರಬಹುದು ಮತ್ತು ಮೇಕ್ಅಪ್ ತೇಪೆಯಂತೆ ಕಾಣಬಹುದು. ಇದು ನಿಮ್ಮ ಮದುವೆಯ ಫೋಟೋ ಹಾಳಾಗಲು ಸಹ ಕಾರಣವಾಗುತ್ತದೆ. ಹೀಗಾಗಿ ಮೇಕಪ್ ಕಲಾವಿದರೊಂದಿಗೆ ನಿಮ್ಮ ಅವಶ್ಯಕತೆಗಳು ಮತ್ತು ಸ್ಥಳದ ಪರಿಸ್ಥಿತಿಗಳನ್ನು ಮುಂಚಿತವಾಗಿ ಚರ್ಚಿಸಿ.

ಮದುವೆಯಾಗಲು ಹುಡುಗಿ ಸಿಗ್ತಿಲ್ಲವೆಂದು ಊರಿಡೀ ಪೋಸ್ಟರ್‌ ಹಾಕಿದ ಯುವಕ !

ಮದುವೆ ಫೋಟೋಗಳು ನೈಜವಾಗಿರಲಿ: ಮದುವೆ ಕಾರ್ಯಕ್ರಮಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸುವಾಗ ಯಾವತ್ತೂ ಆರ್ಟಿಫಿಶಿಯಲ್ ಆಗಿ ಫೋಟೋಗಳನ್ನು ಕ್ಲಿಕ್ಕಿಸುವುದರತ್ತ ಆಸಕ್ತಿ ತೋರಬೇಡಿ. ಕುಟುಂಬ ಮತ್ತು ಸ್ನೇಹಿತರ ಒತ್ತಡಕ್ಕೆ ಮಣಿಯಬೇಡಿ. ನೆನಪಿಡಿ, ಇದು ನಿಮ್ಮ ದೊಡ್ಡ ದಿನ ಮತ್ತು ನೀವು ಮದುವೆಯ ಪೂರ್ವ ಮತ್ತು ನಂತರದ ಕ್ಷಣಗಳನ್ನು ನಿಮ್ಮ ಪಾಲಿಗೆ ಅತ್ಯಮೂಲ್ಯವಾಗಿದೆ. ಹೀಗಾಗಿ ಮದುವೆಯ ಫೋಟೋಗಳು ಯಾವತ್ತೂ ನೈಜವಾಗಿರುವಂತೆ ನೋಡಿಕೊಳ್ಳಿ. ಕಿರುನಗೆ ಮುಖದಲ್ಲಿರಲ್ಲಿ. ಇದು ಫೋಟೋದಲ್ಲಿ ನಿಮ್ಮ ಮುಖವನ್ನು ಸುಂದರವಾಗಿ ಕಾಣಿಸುತ್ತದೆ. 

ಸಂಗಾತಿಯ ಜೊತೆ ಸಂವಹನ ನಡೆಸಿ: ನಿಮ್ಮ ಮದುವೆಯ ಫೋಟೋಗಳಿಗೆ ಪೋಸ್ ನೀಡುವಾಗ ನಿಮ್ಮ ಸಂಗಾತಿಯೊಂದಿಗೆ ಸಂವಹನ ನಡೆಸುವ ಮೂಲಕ ಮನಸ್ಥಿತಿಯನ್ನು ಸರಿಯಾಗಿ ಹೊಂದಿಸಿ. ಸಂಗಾತಿಯ ಜೊತೆ ಆಪ್ತತೆ ಇಲ್ಲದಿದ್ದಾಗ ಇಬ್ಬರ ನಡುವೆ ಅನ್‌ಕಂಫರ್ಟೆಬಲ್ ಕಾಣಿಸಿಕೊಳ್ಳುತ್ತದೆ. ಇದು ಫೋಟೋದಲ್ಲೂ ಅಸಹಜತೆಯನ್ನು ಮೂಡಿಸಬಹುದು. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಆಪ್ತವಾಗಿದ್ದಷ್ಟೂ ಫೋಟೋಗಳನ್ನು ಸಹ ಅದ್ಭುತವಾಗಿ ಸೆರೆ ಹಿಡಿಯಲು ಸಾಧ್ಯವಾಗುತ್ತದೆ.

ಲವ್ ಮ್ಯಾರೇಜ್‌ಗಿಂತ ಆರೇಂಜ್ಡ್‌ ಮ್ಯಾರೇಜ್‌ ಒಳ್ಳೇದು ಅಂತಾರಲ್ಲ, ಯಾಕೆ ?

ಸುಂದರವಾದ ಪರಿಸರದಲ್ಲಿ ಫೋಟೋ ಕ್ಲಿಕ್ಕಿಸಿ: ಮದುವೆಯ  ಸುಂದರ ಫೋಟೋವನ್ನು ಕ್ಲಿಕ್ಕಿಸಲು ಉತ್ತಮ ಮಾರ್ಗವೆಂದರೆ ಮದುವೆಯ ಸ್ಥಳವನ್ನು ಅದರ ಗರಿಷ್ಠ ಸಾಮರ್ಥ್ಯಕ್ಕೆ ಬಳಸಿಕೊಳ್ಳುವುದು. ಸುಂದರವಾದ ಮದುವೆಯ ಫೋಟೋಗಳನ್ನು ಸೆರೆಹಿಡಿಯಲು ಮೆಟ್ಟಿಲುಗಳು, ಪೂಲ್, ಉದ್ಯಾನ ಅಥವಾ ಯಾವುದೇ ಪರಂಪರೆಯ ಸ್ಮಾರಕಗಳನ್ನು ಬಳಸಿ. ಹಿನ್ನೆಲೆಯಾಗಿ ನೀವು ಮದುವೆಯ ಅಲಂಕಾರವನ್ನು ಬಳಸಬಹುದು.

ಫೋಟೋ ಕ್ಲಿಕ್ಕಿಸಲು ಸಮಯ ಮೀಸಲಿಡಿ: ಚಿತ್ರೀಕರಣದ ಮೊದಲು ನಿಮ್ಮ ಮನಸ್ಸಿನಲ್ಲಿ ಕೆಲವು ಶಾಟ್‌ಗಳಿವೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಪಾಲುದಾರ ಮತ್ತು ಛಾಯಾಗ್ರಾಹಕರೊಂದಿಗೆ ಇದನ್ನು ಚರ್ಚಿಸಿ ನೀವು ಅವುಗಳನ್ನು ಅನನ್ಯ ರೀತಿಯಲ್ಲಿ ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ತಿಳಿದುಕೊಳ್ಳಿ. ಮದುವೆಯಲ್ಲಿ ಭಾವಚಿತ್ರಗಳನ್ನು ಕ್ಲಿಕ್ಕಿಸಲು ಸಾಕಷ್ಟು ಸಮಯವನ್ನು ಮೀಸಲಿಡಲು ಯಾವಾಗಲೂ ಮರೆಯದಿರಿ.

Follow Us:
Download App:
  • android
  • ios