ಭಿಕ್ಷುಕ ಎಂದ್ಕೊಂಡಿದ್ದವಳಿಗೆ ರಾಜನೆಂದು ಗೊತ್ತಾದರೆ? ಸಂಗಾತಿ ಮೊದಲ ಭೇಟಿ ಬಗ್ಗೆ ಇವ್ರೆಲ್ಲ ಹೇಳಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ಅನೇಕ ಪ್ರಶ್ನೋತ್ತರಗಳು ನಡೆಯುತ್ತಿರುತ್ತವೆ. ಜನರು ತಮ್ಮ ವೈಯಕ್ತಿಕ ವಿಷ್ಯಗಳನ್ನು ಇದ್ರಲ್ಲಿ ಹಂಚಿಕೊಳ್ತಾರೆ. ಜೀವನದಲ್ಲಿ ಅತ್ಯಂತ ಸಂತಸದ ವಿಷಯವಾದ ಸಂಗಾತಿ ಭೇಟಿ, ಮದುವೆ ಬಗ್ಗೆ ಕೇಳಲಾದ ಪ್ರಶ್ನೆಗೆ ಬಳಕೆದಾರರ ಉತ್ತರ ಭಿನ್ನವಾಗಿದೆ.
ನಮ್ಮನ್ನು ಅರ್ಥ ಮಾಡಿಕೊಂಡು ನಮ್ಮ ಜೊತೆ ಹೆಜ್ಜೆ ಹಾಕುವ ಸಂಗಾತಿ ಬೇಕು. ಕೆಲವರಿಗೆ ಮೊದಲ ನೋಟದಲ್ಲೇ ಪ್ರೀತಿ ಚಿಗುರಿದ್ರೆ ಮತ್ತೆ ಕೆಲವರು ಭಿನ್ನ ಸನ್ನಿವೇಶದಲ್ಲಿ ಸಂಗಾತಿಯನ್ನು ಭೇಟಿ ಮಾಡಿರ್ತಾರೆ. ಇನ್ನು ಕೆಲವರು ಪಾಲಕರು ತೋರಿಸಿದವರನ್ನು ಮದುವೆಯಾಗಿ ಸುಖವಾಗಿರ್ತಾರೆ. ಮದುವೆ ಹೇಗೆ ಆಗಿರಲಿ, ಮೊದಲ ಬಾರಿ ಆ ಸಂಗಾತಿಯನ್ನು ಭೇಟಿಯಾದ ಕ್ಷಣವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಅದು ವಿಶೇಷವಾಗಿಯೇ ಇರುತ್ತದೆ. ಇದನ್ನು ಅರಿತಿರುವ ಇನ್ಸ್ಟಾಬ್ಲಾಗ್ 9 ಜೆ, ಟ್ವಿಟರ್ ಬಳಕೆದಾರರಿಗೆ ಪ್ರಶ್ನೆಯೊಂದನ್ನು ಕೇಳಿದೆ. ಅದಕ್ಕೆ ಟ್ವಿಟರ್ ಬಳಕೆದಾರರ ಉತ್ತರ ಇಂಟರೆಸ್ಟಿಂಗ್ ಆಗಿದೆ.
Instablog9ja ಟ್ವಿಟರ್ ಖಾತೆಯಲ್ಲಿ ನೀವು ನಿಮ್ಮ ಸಂಗಾತಿಯನ್ನು ಹೇಗೆ ಭೇಟಿಯಾದ್ರಿ ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಜನರು ಉತ್ತರ ನೀಡಿದ್ದಾರೆ. ಕೆಲವರು ಸಂಗಾತಿ (Spouse) ಭೇಟಿಯಾಗಿದ್ದು ಹೇಗೆ ಎಂಬುದನ್ನು ವಿವರಿಸಿದ್ರೆ ಮತ್ತೆ ಕೆಲವರು ಇನ್ನೂ ಹುಡುಕುತ್ತಿದ್ದೇನೆ, ಈ ವಿಷ್ಯ ನನಗೆ ಸಂಬಂಧಿಸಿದ್ದಲ್ಲ ಎಂದೆಲ್ಲ ಉತ್ತರ ನೀಡಿದ್ದಾರೆ.
ಮದ್ವೆ ಯಾವಾಗ ಕೇಳಿದ್ರೆ, ನಾನಿನ್ನೂ ಪ್ರೆಗ್ನೆಂಟ್ ಆಗಿಲ್ಲ ಅನ್ನೋದಾ ತಾಪ್ಸಿ ಪನ್ನು?
ಟ್ವಿಟರ್ (Twitter) ಬಳಕೆದಾರರೊಬ್ಬರು, ನಾನು ಮಹಿಳಾ ಸಮ್ಮೇಳನದಲ್ಲಿ ಸ್ವಯಂಸೇವಕನಾಗಿದ್ದೆ. ಅವರು ಹೋಸ್ಟ್‌ಗೆ ಸ್ನೇಹಿತರಾಗಿದ್ದರು. ಆತಿಥೇಯರು ನಮ್ಮನ್ನು ಪರಿಚಯಿಸಿದರು ಮತ್ತು ನಮಗೆ ಈಗ ಇಬ್ಬರು ಮಕ್ಕಳಿದ್ದಾರೆ ಎಂದು ಬರೆದಿದ್ದಾರೆ.
ಇನ್ನೊಬ್ಬರು ಆಸಕ್ತಿಕರ ವಿಷ್ಯವನ್ನು ಬರೆದಿದ್ದಾರೆ. ನಾನು 18 ವರ್ಷಗಳ ಹಿಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಚಿಂದಿ ಬಟ್ಟೆ ತೊಟ್ಟ ವ್ಯಕ್ತಿಯನ್ನು ನೋಡಿದೆ. ಆತ ಭಿಕ್ಷೆ ಬೇಡುತ್ತಿದ್ದನು. ನನ್ನ ಬಳಿ ಸಾಕಷ್ಟು ಹಣವಿರಲಿಲ್ಲ. ಆದರೆ ನಾನು ಅವನಿಗೆ ನನ್ನ ಬಳಿಯಿದ್ದ ಕೊನೆಯ 200 ನೈರಾವನ್ನು ನೀಡಿದೆ. ಆಮೇಲೆ ನನಗೆ ಆತ ರಾಜಕುಮಾರ ಎಂಬುದು ಗೊತ್ತಾಯ್ತು. ನಾವಿಬ್ಬರೂ ಮದುವೆಯಾಗಿದ್ದೇವೆ ಎಂದು ಬರೆದಿದ್ದಾರೆ.
ಇನ್ನೊಬ್ಬರು ವಾಟ್ಸ್ ಅಪ್ ಮೂಲಕ ಸಂಗಾತಿ ಭೇಟಿಯಾದೆ ಎಂದಿದ್ದಾರೆ. ಅವಳು ವಾಟ್ಸಾಪ್‌ನಲ್ಲಿ ನನ್ನ ಮತ್ತು ಅವಳ ಸ್ನೇಹಿತನ ವೀಡಿಯೊವನ್ನು ನೋಡಿದಳು. ಅವಳು ನಂತ್ರ ನನ್ನ ಫೇಸ್ಬುಕ್ ಯೂಸರ್ ನೇಮ್ ಪಡೆದುಕೊಂಡಳು. ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದಳು ಮತ್ತು ಒಂದೆರಡು ಚಿತ್ರಗಳನ್ನು ಇಷ್ಟಪಟ್ಟಳು. ನಂತರ ನನಗೆ ಒಂದು ಡಿಎಂ ಕಳುಹಿಸಿದಳು...ಉಳಿದದ್ದು ಇತಿಹಾಸ ಎಂದು ಅವರು ಸಂಗಾತಿ ಸಿಕ್ಕ ಸಮಯವನ್ನು ಮೆಲುಕು ಹಾಕಿದ್ದಾರೆ.
ಅವನೊಬ್ಬ ಪಕ್ಕದ ಮನೆ ಹುಡುಗನಾಗಿದ್ದ. ಆದರೆ ನನ್ನ ಬೈಕಿನಿಂದ ತಳ್ಳಿದ ನಂತ್ರ ಇಬ್ಬರು ಹತ್ತಿರವಾಗಿದ್ದೆವು. ಬಾಸ್ಕೆಟ್ ಬಾಲ್ ಕಾರಣಕ್ಕೆ ಇಬ್ಬರು ಮತ್ತಷ್ಟು ಒಟ್ಟಿಗೆ ಸಮಯ ಕಳೆಯುತ್ತಿದ್ದೆವು. ಆದ್ರೆ ಅಲ್ಲಿಯೂ ನಮ್ಮ ಪ್ರೀತಿ ಹೇಳಿರಲಿಲ್ಲ. ಆತನ ಮದುವೆ ಹಿಂದಿನ ದಿನ ನಾನವನ ಹೃದಯ ಕದಿಯಲು ಯಶಸ್ವಿಯಾದೆ ಎಂದು ಇನ್ನೊಬ್ಬರು ಬರೆದಿದ್ದಾರೆ.
ನಾನು ಯುನಿವರ್ಸಿಟಿಯಲ್ಲಿ ಅಂತಿಮ ವರ್ಷದಲ್ಲಿದ್ದೆ. ಏಕಾಗ್ರತೆಗಾಗಿ ನಾನು ನನ್ನ ಸ್ನೇಹಿತನ ಮನೆಗೆ ಹೋಗಬೇಕಾಯಿತು. ಅಲ್ಲಿ ನಾನು ಈ ಸುಂದರ ಮಹಿಳೆಯನ್ನು ಗಮನಿಸಿದ್ದೆ. ಅವರು ಬೇಗನೆ ಏಳ್ತಾರೆ, ಇಡೀ ಮನೆಯನ್ನು ಗುಡಿಸಿ ಊಟವನ್ನು ತಯಾರಿಸುತ್ತಾರೆ ಅನ್ನೋದನ್ನು ನೋಡಿದೆ. ಮಾತುಕತೆಗೆ 6 ತಿಂಗಳು ಹಿಡಿಯಿತು. ಈಗ.. ಎಂದು ಇನ್ನೊಬ್ಬರು ತಮ್ಮ ಬಾಳಸಂಗಾತಿ ಸಿಕ್ಕ ವಿಷ್ಯವನ್ನು ಟ್ವೀಟ್ ಮಾಡಿದ್ದಾರೆ.
ನಾನು ಮಾತ್ರವಲ್ಲ, ಕೋಪ ಬಂದ್ರೆ ಐಶ್ವರ್ಯಾ ರೈ ಕೂಡ ರಿಯಾಕ್ಟ್ ಮಾಡ್ತಾಳೆ: ಅತ್ತೆ ಜಯಾ ಬಚ್ಚನ್
ವಿಶ್ವವಿದ್ಯಾನಿಲಯದ ದಿನಗಳಲ್ಲಿ ಅವಳು ನನ್ನ ಕಾಂಪೌಂಡ್ ಎದುರು ವಾಸಿಸುತ್ತಿದ್ದಳು. ನಾನು ಅವಳನ್ನು ನೋಡಿದೆ ಮತ್ತು ಅವಳನ್ನು ಹಿಂಬಾಲಿಸಿದೆ. ಇಂದು ಉಳಿದದ್ದು ಇತಿಹಾಸ. ನೆರೆಹೊರೆಯವರೊಂದಿಗೆ ಡೇಟಿಂಗ್ ಮಾಡಲು ಸಾಧ್ಯವಿಲ್ಲ ಎಂದಿದ್ದಳು. ಈಗ ನನ್ನ ಹೆಂಡತಿ ನನ್ನ ನೆರೆಹೊರೆಯವಳು ಎಂದು ತಮ್ಮ ಪ್ರೇಮಕಥೆ ಬರೆದಿದ್ದಾರೆ.
ಚಿಕ್ಕಪ್ಪನನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಂಡು ಬರಲು ಹೋದಾಗ ಕಳ್ಳತನ ಆರೋಪದ ಮೇಲೆ ಬಂಧಿಯಾಗಿದ್ದ ಹುಡುಗಿಗೆ ಜಾಮೀನು ನೀಡಿದೆ. ಈಗ ನಮಗೀಗ ಮೂರು ಮಕ್ಕಳು ಎನ್ನುತ್ತಾನೆ ಈತ.
ಈ ಟ್ವಿಟರ್ ಗೆ ಇನ್ನೂ ಸಾಕಷ್ಟು ಕಮೆಂಟ್ ಬಂದಿದೆ. ಕೆಲವರು ಇನ್ನೂ ಸಿಕ್ಕಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರೆ ಮತ್ತೆ ಕೆಲವರು ಹುಡುಕ್ತಿದ್ದೇನೆ ಎಂದಿದ್ದಾರೆ. ಕೆಲವರಿಗೆ ಟ್ವಿಟರ್, ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿಯೇ ಸಂಗಾತಿ ಸಿಕ್ಕಿದ್ದಾರಂತೆ.