Asianet Suvarna News Asianet Suvarna News

ಪೋರ್ನ್ ನೋಡೋ ಚಟನಾ ? ಬಿಡಲು ಹೀಗ್ ಮಾಡ್ಬಹುದು ಟ್ರೈ ಮಾಡಿ

ಸೆಕ್ಸ್ ಅನ್ನೋದು ಜೀವನದ ಒಂದು ಭಾಗ. ಪೋರ್ನ್‌ ಲೈಂಗಿಕತೆಯನ್ನು ತೋರಿಸುವ ವೀಡಿಯೋಗಳು. ಆದ್ರೆ ಪದೇ ಪದೇ ಪೋರ್ನ್ ನೋಡುವ ಅಭ್ಯಾಸ ಒಂದು ಅಡಿಕ್ಷನ್. ಅದನ್ನು ಹೋಗಲಾಡಿಸಲು ಇಲ್ಲಿದೆ ಕೆಲವು ಸಿಂಪಲ್ ಟಿಪ್ಸ್.

Hooked To Porn, Try These Tips To Break The Addiction Vin
Author
Bengaluru, First Published Aug 25, 2022, 12:52 PM IST

ಕೆಲವರಿಗೆ ಪೋರ್ನ್ ನೋಡುವುದು ನೈತಿಕತೆಗೆ ಧಕ್ಕೆ ತರುವ ಸಮಸ್ಯೆಯಾಗಿರಬಹುದು. ಇನ್ನು ಕೆಲವರಿಗೆ ಕೇವಲ ಒತ್ತಡವನ್ನು ಬಿಡುಗಡೆ ಮಾಡುವ ಮಾರ್ಗವಾಗಿರಬಹುದು. ಇನ್ನಷ್ಟು ಮಂದಿಗೆ ರಿಲ್ಯಾಕ್ಸ್ ಆಗುವ ರೀತಿ. ಇಷ್ಟವಿರಲಿ ಇಲ್ಲದಿರಲಿ, ಕೇವಲ ಆನಂದಕ್ಕಾಗಿ ಅಶ್ಲೀಲತೆಯನ್ನು ನೋಡುವ ಜನರೂ ಇದ್ದಾರೆ. ಇನ್ನು ಕೆಲವರ ಪಾಲಿಗೆ ಇದು ಬಿಡಲಾಗದ ವ್ಯಸನವಾಗಿ ಮಾರ್ಪಟ್ಟಿರುತ್ತದೆ. ಅಶ್ಲೀಲತೆಯನ್ನು ಅತಿಯಾಗಿ ನೋಡುವ ಅಭ್ಯಾಸ ಸಮಸ್ಯೆಯಾಗಿ ಬದಲಾಗಬಜುದು. ಅನೇಕ ಜನರು ಅದನ್ನು ಅಶ್ಲೀಲ ವ್ಯಸನ ಎಂದು ಕರೆಯುತ್ತಾರೆ. ವಿವಿಧ ಅಧ್ಯಯನಗಳು ಅಶ್ಲೀಲ ವಿಷಯವನ್ನು ವೀಕ್ಷಿಸುವ ಋಣಾತ್ಮಕ ಪರಿಣಾಮವನ್ನು ನೋಡಿದೆ.

ಲೈಂಗಿಕತೆಯಿಂದ (Sex) ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ವಿಕೃತ ಗ್ರಹಿಕೆಗಳನ್ನು ಅಭಿವೃದ್ಧಿಪಡಿಸುವ ಪ್ರವೃತ್ತಿಯು ಅಶ್ಲೀಲ ವೀಕ್ಷಣೆಯ ಅಡ್ಡ ಪರಿಣಾಮಗಳಲ್ಲಿ ಒಂದಾಗಿದೆ. ನೀವು ಏನು ನೋಡುತ್ತೀರಿ ಮತ್ತು ನೀವು ಏನು ಮಾಡುತ್ತಿದ್ದೀರಿ ಎಂಬುದರ ನಡುವಿನ ವ್ಯತ್ಯಾಸವು ಸಮಸ್ಯೆಯಾಗಲು ಪ್ರಾರಂಭವಾಗುತ್ತದೆ.

ಅಷ್ಟಕ್ಕೂ ಪುರುಷರು ಆಫೀಸಲ್ಲೂ Pornography ನೋಡುವುದೇಕೆ?

ಒಬ್ಬ ವ್ಯಕ್ತಿಯು ಅಶ್ಲೀಲ ವಿಷಯವನ್ನು ಅತಿಯಾಗಿ ವೀಕ್ಷಿಸಲು ಒಲವು ತೋರಿದರೆ, ಅದು ಇಲ್ಲದೆ ಪ್ರಚೋದನೆಯನ್ನು ಅನುಭವಿಸಲು ಕಾರಣವಾಗಬಹುದು. ಲೈಂಗಿಕವಾಗಿ ಅಸಮರ್ಪಕ ಭಾವನೆ, ಪಾಲುದಾರರಿಂದ ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದಲು ತೊಡಗಬಹುದು. ಮಾತ್ರವಲ್ಲ ವಾಸ್ತವಕ್ಕೆ ದೂರವಿರುವ ಇಂಥಾ ಪೋರ್ನ್‌ಗಳನ್ನು ನೋಡುವುದರಿಂದ ಹಲವರು ಕಡಿಮೆ ಲೈಂಗಿಕ ತೃಪ್ತಿಯನ್ನು ಅನುಭವಿಸುತ್ತಾರೆ.

ಪೋರ್ನ್ ನೋಡುವುದನ್ನು ನಿಲ್ಲಿಸುವುದು ಹೇಗೆ ?
ಫೋರ್ಟಿಸ್ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮಾನಸಿಕ ಆರೋಗ್ಯ ಮತ್ತು ವರ್ತನೆಯ ವಿಜ್ಞಾನಗಳ ವಿಭಾಗದ ಮನೋವೈಜ್ಞಾನಿಕ ಸೇವೆಗಳ ಮುಖ್ಯಸ್ಥರಾದ ಡಾ.ದಿವ್ಯಾ ಜೈನ್, ಪೋರ್ನ್ ನೋಡುವ ಪ್ರಚೋದನೆಯನ್ನು ನಿಯಂತ್ರಿಸಲು ಈ ಕೆಳಗಿನ ಸಲಹೆಗಳನ್ನು ಸೂಚಿಸುತ್ತಾರೆ.

1. ಪರಿಣಾಮವನ್ನು ಗಮನಿಸಿ: ಅತಿಯಾದ ಅಶ್ಲೀಲತೆಯನ್ನು ವೀಕ್ಷಿಸುವುದರಿಂದ ನಿಮ್ಮ ಕೆಲಸ  (Work) ಮತ್ತು ಸಂಬಂಧಗಳ (Relationship) ಮೇಲೆ ಬೀರುವ ಪರಿಣಾಮವನ್ನು ನೀವು ಗುರುತಿಸಬೇಕು. ಅಶ್ಲೀಲತೆಯನ್ನು ಅತಿಯಾಗಿ ನೋಡುವುದು ಕೆಲಸ ಮೇಲೆ ನಿಮ್ಮ ಏಕಾಗ್ರತೆ ತಪ್ಪಬಹುದು. ನಿಮ್ಮ ಸಂಬಂಧದ ಮೇಲೆ ಭಾವನಾತ್ಮಕ ಪ್ರಭಾವವನ್ನು ಸಹ ಬೀರಬಹುದು. ಅಶ್ಲೀಲತೆಯನ್ನು ನೋಡುವ ನಿಮ್ಮ ಪ್ರಚೋದನೆಯು ನಿಮ್ಮ ವೈಯಕ್ತಿಕ ಸಂಬಂಧವನ್ನು ಅಡ್ಡಿಪಡಿಸುತ್ತಿದೆ ಎಂದು ನೀವು ಭಾವಿಸಿದರೆ, ಆ ಅಭ್ಯಾಸ (Habit) ಹಾನಿಕಾರಕ ಎಂಬುದನ್ನು ಅರ್ಥ ಮಾಡಿಕೊಳ್ಳಿ.

2. ನೀವು ವೀಕ್ಷಿಸುತ್ತಿರುವುದು ನಿಜವಲ್ಲ ಎಂದು ತಿಳಿಯಿರಿ: ಜನರು ತಾವು ವೀಕ್ಷಿಸುತ್ತಿರುವ ವಿಷಯವು 'ವಿಕೃತ, ಅವಾಸ್ತವಿಕ ಮತ್ತು ನಕಲಿ' ಎಂದು ಒಮ್ಮೆ ಒಪ್ಪಿಕೊಂಡು ಅರ್ಥಮಾಡಿಕೊಂಡರೆ, ಅದು ಅವರ ಆಸಕ್ತಿಯನ್ನು ಕುಗ್ಗಿಸಬಹುದು. ಬದಲಾಗಿ ನಿರಂತರವಾಗಿ ಪೋರ್ನ್ ನೋಡುವ ಅಭ್ಯಾಸಕಾಲ್ಪನಿಕ ಜಗತ್ತಿನಲ್ಲಿರಲು ಪ್ರಚೋದಿಸಬಹುದು, ಆದರೆ ನೀವು ವಾಸ್ತವದಿಂದ ತುಂಬಾ ದೂರವಿದ್ದರೆ, ಅದು ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ತರುತ್ತದೆ.

ಪೋರ್ನೋಗ್ರಫಿ ಕೋರ್ಸ್‌, ವಿದ್ಯಾರ್ಥಿಗಳು ಜೊತೆಯಲ್ಲೇ ಕುಳಿತು ಅಶ್ಲೀಲ ಸಿನಿಮಾ ನೋಡ್ಬೋದು !

3. ದೈನಂದಿನ ದಿನಚರಿ ಅನುಸರಿಸಿ: ನಿಯಮಿತವಾಗಿ ದೈನಂದಿನ ದಿನಚರಿಯನ್ನು ಅನುಸರಿಸಿ ಮತ್ತು ಇತರ ಅರ್ಥಪೂರ್ಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಅಶ್ಲೀಲ ಬಳಕೆಯಲ್ಲಿ ತೊಡಗಿಸಿಕೊಳ್ಳುವ ಪ್ರಲೋಭನೆಯಿಂದ ದೂರವಿರಲು ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಿಂದ ಪ್ಲಾಟ್‌ಫಾರ್ಮ್ ಅನ್ನು ನಿರ್ಬಂಧಿಸಿ.

4. ಒತ್ತಡ ನಿವಾರಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳಿ: ಇಂದಿನ ದಿನಗಳಲ್ಲಿ ಯಾರು ಒತ್ತಡದ (Pressure) ಸಮಸ್ಯೆಯಿಂದ ಬಳಲುತ್ತಿಲ್ಲ ಹೇಳಿ. ಹಾಗೆಂದು ಒತ್ತಡವನ್ನು ನಿವಾರಿಸಲು ಪೋರ್ನ್ ನೋಡುವುದೊಂದೇ ಮಾರ್ಗವಲ್ಲ. ಅಶ್ಲೀಲತೆಯನ್ನು ನೋಡುವುದಕ್ಕಿಂತ ಒತ್ತಡ ಮತ್ತು ಆತಂಕವನ್ನು ಬಿಡುಗಡೆ ಮಾಡಲು ಬೇರೆ ಹಲವು ಉತ್ತಮ ಮಾರ್ಗಗಳಿವೆ. ನೀವು ಧ್ಯಾನ ಮಾಡಲು ಪ್ರಯತ್ನಿಸಬಹುದು. ವ್ಯಾಯಾಮದಲ್ಲಿ ತೊಡಗಬಹುದು. ಅಥವಾ ಹೊಸ ಹವ್ಯಾಸದಲ್ಲಿ ತೊಡಗಿಸಿಕೊಳ್ಳಬಹುದು.

5. ಸಹಾಯ ಪಡೆಯಲು ಹಿಂಜರಿಯದಿರಿ: ಎಷ್ಟೇ ಪ್ರಯತ್ನ ಪಟ್ಟರೂ ಅಶ್ಲೀಲ ವೀಡಿಯೋಗಳನ್ನು ನೋಡುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲವೆಂದಾರೆ ಆದರೆ ಅದು ನಿಮ್ಮ ಜೀವನ (Life)ವನ್ನು ಅಡ್ಡಿಪಡಿಸುತ್ತದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಈ ಅಡಿಕ್ಷನ್ ಹೋಗಲಾಡಿಸಲು ಮಾನಸಿಕ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ.

Follow Us:
Download App:
  • android
  • ios