ಮೂವರು ಹೆಂಡಿರ ಮುದ್ದಿನ ಗಂಡ, ಮೂರನೇ ಹೆಂಡ್ತಿಯಿಂದಲೇ ಸಾವು ಕಂಡ!

ಮಂಜುನಾಥ್ ಜಾದವ್ ಎಂಬ ವ್ಯಕ್ತಿಯನ್ನು ಆತನ ಮೂರನೇ ಹೆಂಡತಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ತಿಗಾಗಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Haveri three wives beloved husband dies his third wife hand sat

ಹಾವೇರಿ/ಹುಬ್ಬಳ್ಳಿ (ಮಾ.12): ಮೂರನೇ ಹೆಂಡತಿಯಿಂದ ಕೊಲೆಯಾದ ಮಂಜುನಾಥ್ ಶಿವಪ್ಪ ಜಾದವ್ ( 45 ವರ್ಷ). ಮೃತ ಮಂಜುನಾಥ್ ಜಾದವ್ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕು ಮುಡಸಾಲಿ ಗ್ರಾಮದ ನಿವಾಸಿ ಆಗಿದ್ದಾರೆ. ಆದರೆ, ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಬಂಕಾಪುರ ಬಳಿ ನಿನ್ನೆ (ಮಾ.11ರಂದು) ಮಂಜುನಾಥ್ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಮೊದಲಿಗೆ ಅಸಹಜ ಸಾವು ಅಂತ ಪ್ರಕರಣ ದಾಖಲು ಆಗಿತ್ತು. ಬಳಿಕ ಮಂಜುನಾಥ್ ಜಾದವ್ ಕೊಲೆಯಾದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಮೃತ ಮಂಜುನಾಥ್ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ.

ಮಧು ವೀರಣ್ಣ ಹಿರೇಮಠ ಎಂಬ ಮಹಿಳೆಯೇ ಮಂಜುನಾಥ್ ಕೊಲೆ ಮಾಡಿರುವುದಾಗಿ ಕೇಸ್ ದಾಖಲು ಮಾಡಿದ್ದಾರೆ. ಆರೋಪಿ ಮಧು ಹಿರೇಮಠ ಕೂಡಾ ಮುಡಸಾಲಿ ಗ್ರಾಮದವಳು. ನನ್ನ ತಂದೆ ಮಂಜುನಾಥ್ ಜಾದವ್ ಮೇಲೆ ಗಂಭೀರ ಹಲ್ಲೆ ಮಾಡಿ ಕೊಲೆ ಗೈದಿರುವುದಾಗಿ ಕೇಸ್ ಪುತ್ರ ವಿಜಯ್ ಕೇಸ್ ದಾಖಲು ಮಾಡಿದ್ದಾನೆ. 

ಘಟನೆ ಹಿನ್ನೆಲೆ ಏನು?
ಮೃತ ಮಂಜುನಾಥ್ ಜಾದವ್ ಮೊದಲನೇ ಪತ್ನಿ ಹಲವು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಇದಾದ ಬಳಿಕ ಮಂಜುನಾಥ್ ಜಾದವ್ ಮತ್ತೊಬ್ಬರನ್ನು ಮದುವೆಯಾಗಿದ್ದರು. 2ನೇ ಮದುವೆಯಾದ ಬಳಿಕವೂ ಮಂಜುನಾಥ್ ಮಧು ಹಿರೇಮಠ ಎಂಬ ಮಹಿಳೆಯೊಂದಿಗೆ ಅನೈತಿಕವಾಗಿ ಸಂಬಂಧ ಇಟ್ಟುಕೊಂಡಿದ್ದನು. ಇದಾದ ನಂತರ ಅನೈತಿಕ ಸಂಬಂಧಕ್ಕೆ ಒಪ್ಪದ ಮಧು ಮದುವೆ ಮಾಡಿಕೊಳ್ಳುವಂತೆ ಮಂಜುನಾಥ್‌ಗೆ ಒತ್ತಾಯಿದ್ದಳು. ಹೀಗಗಿ, ಮಧು-ಮಂಜುನಾಥ್ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಕೋಲಾರದಲ್ಲಿ ಅನಾಗರಿಕ ಕೃತ್ಯ; ಮದುವೆ ವಯಸ್ಸಿಗೆ ಬಂದ ಮಗಳನ್ನೇ ಗರ್ಭಿಣಿ ಮಾಡಿದ ಅಪ್ಪ!

ಹಲವು ವರ್ಷಗಳಿಂದ ಮಂಜುನಾಥ್ ಜಾದವ್ ಹಾಗೂ ಮಧು ಅನೋನ್ಯವಾಗಿದ್ದರು. ಹುಬ್ಬಳ್ಳಿಯ ನವನಗರದಲ್ಲಿ ಮಧುಗೆ ಮನೆ ಮಾಡಿಕೊಟ್ಟು, ವಾರದಲ್ಲಿ ಆಗೊಮ್ಮೆ ಈಗೊಮ್ಮೆ ಮಂಜುನಾಥ್ ಜಾದವ್ ಹೋಗಿ ಬರುತ್ತಿದ್ದನು. ಆದರೆ, 3ನೇ ಹೆಂಡತಿ ಮಧುಗಾಗಿ ಮಂಜುನಾಥ್ 3 ಎಕರೆ ಜಮೀನು ಮಾರಿಕೊಂಡಿದ್ದನು. ಇದಾದ ನಂತರ, ಮಧು ಈ ಸಂಸಾರ ಸರಿ ಹೋಗುತ್ತಿಲ್ಲವೆಂದು ಮಂಜುನಾಥ್‌ನನ್ನು ಬಿಟ್ಟು ವೀರಯ್ಯ ಎನ್ನುವವರ ಜೊತೆಗೆ 2ನೇ ಮದುವೆ ಮಾಡಿಕೊಂಡಿದ್ದಳು. ಇದಾದ ನಂತರ ಮಂಜುನಾಥ್-ಮಧು ನಡುವೆ ಭಿನ್ನಾಭಿಪ್ರಾಯ ಬಂದು, ಜಗಳ ನಡೆದಿದೆ.

ಮಂಜುನಾಥ್ ತನ್ನ ಆಸ್ತಿ ಮಾರಿಕೊಂಡು ಮನೆ ಮಾಡಿ ಕೊಟ್ಟಿದ್ದಕ್ಕಾಗಿ ಈಗಲೂ ಮನೆಗೆ ಬಂದು ಕಾಡುತ್ತಿದ್ದಾನೆ. ಆತನನ್ನು ಕೊಲೆ ಮಾಡಿದರೆ ತನ್ನ 2ನೇ ಗಂಡನ ಜೊತೆಗೆ ಸುಖವಾಗಿ ಸಂಸಾರ ಮಾಡಿಕೊಂಡು ಇರಬಹುದು ಎಂದು ಮಧು ಕೊಲೆಗೆ ಸಂಚು ರೂಪಿಸುತ್ತಾಳೆ. ಈ ಯೋಜನೆಯಂತೆ ಹುಬ್ಬಳ್ಳಿಯ ನವನಗರದಲ್ಲಿ ಮಧು ವಾಸವಿದ್ದ ಮನೆಯಲ್ಲಿಯೇ ಮಂಜುನಾಥನ ಕೊಲೆ ಮಾಡಿ, ನಂತರ ಬುಲೆರೋ ವಾಹಹನದಲ್ಲಿ ಶವ ತಂದು ಬಂಕಾಪುರ ಬಳಿ ಶವ ಬೀಸಾಡಿ ಹೋಗಿದ್ದರು. ತಮ್ಮ ಮೇಲೆ ಅನುಮಾನ ಬಾರದಂತೆ ತಪ್ಪಿಸಿಕೊಳ್ಳಲು ಆತನ ಬೈಕ್ ಅನ್ನು ಆಕ್ಸಿಡೆಂಡ್ ಆಗಿದೆ ಎಂದು ಬಿಂಬಿಸಲು ಅಲ್ಲಿಯೇ ಬೀಸಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಬಂಕಾಪುರ ಪೊಲೀಸರು ಆರೋಪಿ ಮಧುಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದೃಶ್ಯಂ ಸಿನೆಮಾ ಸ್ಟೈಲ್‌ನಲ್ಲಿ ಬೆಂಗಳೂರು ಒಂಟಿ ಮಹಿಳೆ ಕೊಲೆ, 4 ತಿಂಗಳ ಬಳಿಕ ರಹಸ್ಯ ಭೇದಿಸಿದ ಪೊಲೀಸರು!

Latest Videos
Follow Us:
Download App:
  • android
  • ios