ಓದಿನ ಹಣವನ್ನು ಗರ್ಲ್ ಫ್ರೆಂಡ್ ಗೆ ಖರ್ಚು ಮಾಡಿದ ಮಗ.. ಕೋರ್ಟ್ ಮೆಟ್ಟಿಲೇರಿದ ಅಮ್ಮ
ಕೇಳಿದ್ದಷ್ಟು ಹಣ ಕೈಗೆ ಬರ್ತಿದ್ದರೆ ಮಕ್ಕಳಿಗೆ ಹಣದ ಬೆಲೆ ತಿಳಿಯೋದಿಲ್ಲ. ಬೇಕಾಬಿಟ್ಟಿ ಖರ್ಚು ಮಾಡಿ ಮೋಜು ಮಾಡ್ತಾರೆ. ಇತ್ತ ಪಾಲಕರು, ಮಕ್ಕಳ ಚಿಂತೆಯಲ್ಲಿ ಜೀವ ಬಿಡ್ತಾರೆ. ಚೀನಾದಲ್ಲೂ ದಾರಿ ತಪ್ಪಿದ ಮಗನಿಗೆ ತಾಯಿ ಹೀಗೆ ಬುದ್ದಿ ಕಲಿಸಿದ್ದಾಳೆ.
ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸಲು ಪಾಲಕರು ಇನ್ನಿಲ್ಲದ ಕಷ್ಟಬೀಳ್ತಾರೆ. ಹಗಲಿರುಳು ದುಡಿದ ಹಣವನ್ನು ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಣಕ್ಕೆ ಖರ್ಚು ಮಾಡ್ತಾರೆ. ಈಗ ಶಿಕ್ಷಣ ಬಹಳ ದುಬಾರಿಯಾಗಿದೆ. ವಿದೇಶದಲ್ಲಿ ವಿದ್ಯೆಕಲಿಯಲು ಮನಸ್ಸು ಮಾಡುವ ಮಕ್ಕಳಿಗೆ ನೋವಾಗದಂತೆ ನಡೆದುಕೊಳ್ಳಲು ಪಾಲಕರು ತಮ್ಮ ಜೀವನಪರ್ಯಂತ ದುಡಿದು ಕೂಡಿಟ್ಟ ಹಣವನ್ನು ಅವರ ಕೈಗೆ ನೀಡಿ ತಾವು ಒಂದು ಹೊತ್ತಿನ ಊಟ ಮಾಡ್ತಾರೆ. ಮತ್ತೆ ಕೆಲವರು ಸಾಲ ಮಾಡಿ ಮಕ್ಕಳನ್ನು ಓದಿಸ್ತಾರೆ. ಈ ಮಕ್ಕಳು ತಂದೆ – ತಾಯಿ ಕಷ್ಟವನ್ನು ಅರಿತು ಓದಿನ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿ ಉತ್ತಮ ಸ್ಥಾನಕ್ಕೆ ಏರಿದೆ ಪಾಲಕರ ಶ್ರಮಕ್ಕೆ ಫಲ ಸಿಗುತ್ತದೆ. ಅದೇ ಪಾಲಕರ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ, ಭವಿಷ್ಯ ಹಾಳು ಮಾಡಿಕೊಳ್ಳುವ ಮಕ್ಕಳಾದ್ರೆ ತಮ್ಮ ಕಷ್ಟವನ್ನು ಪಾಲಕರು ಯಾರಿಗೆ ಹೇಳಿಕೊಳ್ತಾರೆ?
ಈಗ ಇಲ್ಲೊಬ್ಬ ತಾಯಿ ತಮ್ಮ ಮಗನ ವಿರುದ್ದ ಕೋರ್ಟ್ (Court) ಮೆಟ್ಟಿಲೇರಿದ್ದಾಳೆ. ವಿದೇಶದಲ್ಲಿ ಓದುತ್ತಿರುವ ಮಗನ ಶಿಕ್ಷಣ (Education) ಕ್ಕಾಗಿ ತಾಯಿ ತನ್ನೆಲ್ಲ ಸೇವಿಂಗ್ ನೀಡಿದ್ರೆ ಅದನ್ನು ಮಗ ಬೇರೆ ರೀತಿ ಖರ್ಚು ಮಾಡಿದ್ದಾನೆ.
ನಿಶ್ಚಿತಾರ್ಥ - ಮದುವೆ ಮಧ್ಯೆ ಈ ತಪ್ಪು ಮಾಡಿದ್ರೆ ಸಂಬಂಧ ಹಾಳಾಗುತ್ತೆ!
ಘಟನೆ ನಡೆದಿರೋದು ಚೀನಾ (China) ದ ಸಿಚುವಾನ್ ಪ್ರಾಂತ್ಯದಲ್ಲಿ. 41 ವರ್ಷದ ಲುಯಿ, 19 ವರ್ಷದ ಮಗ ಕ್ಸಿಯಾವೊಯ್ ಗೆ ದೊಡ್ಡ ಮೊತ್ತದ ಹಣವನ್ನು ನೀಡಿದ್ದರು. ವಿದೇಶದಲ್ಲಿ ಓದುತ್ತಿರುವ ಮಗನ ವಿಶ್ವವಿದ್ಯಾನಿಲಯದ ಟ್ಯೂಷನ್ ಶುಲ್ಕವಾಗಿ ಲುಯಿ ತನ್ನ ಮಗನಿಗೆ ಹಣ ನೀಡಿದ್ದಳು. ಆದ್ರೆ ಮಗ ಈ ಹಣವನ್ನು ಕಾಲೇಜಿಗೆ ನೀಡುವ ಬದಲು ತನ್ನ ಗೆಳತಿಗಾಗಿ ಹೊಸ ಕಾರನ್ನು ಖರೀದಿಸಿದ್ದಾನೆ.
ಲುಯಿಗೆ ಚಿಕ್ಕ ವಯಸ್ಸಿನಲ್ಲೇ ವಿಚ್ಛೇದನವಾಗಿತ್ತು. ತನ್ನ ಮಗನನ್ನು ಲುಯಿ ಯಾವುದೇ ಕೊರತೆ ಇಲ್ಲದೆ ಬೆಳೆಸಿದ್ದಳು. ಆತನಿಗಾಗಿ ಜೀವ ಸೆವೆಸಿದ್ದಳು. ಎರಡನೇ ಮದುವೆ ಆಗುವ ಮೊದಲು ಮಗನಿಗೆ ತನ್ನ ಹಣವನ್ನೆಲ್ಲ ನೀಡಿದ್ದಳು. 500,000 ಯುವಾನ್ ಅಂದ್ರೆ ಸುಮಾರು 57 ಲಕ್ಷ ರೂಪಾಯಿಯನ್ನು ಮಗನ ಖಾತೆಗೆ ವರ್ಗಾಯಿಸಿದ್ದಳು. ಕೆಲ ದಿನಗಳಲ್ಲೇ ಮಗ ಬ್ಯಾಂಕ್ ಪಾಸ್ಬುಕ್ ಕಳೆದಿದೆ ಎಂದು ದೂರು ನೀಡಿದ್ದ. ಪಾಸ್ವರ್ಡ್ ಕೂಡ ಬದಲಿಸಿದ್ದ. ಖಾತೆಯಲ್ಲಿದ್ದ ಎಲ್ಲ ಹಣವನ್ನು ತೆಗೆದಿದ್ದಾನೆ ಎಂಬುದು ಲುಯಿಗೆ ಗೊತ್ತಾಗಿದೆ. ಮಗ ತನ್ನ ಗರ್ಲ್ ಫ್ರೆಂಡ್ ಖಾತೆಗೆ ಎಲ್ಲ ಹಣವನ್ನು ವರ್ಗಾಯಿಸಿದ್ದಾನೆ ಎಂಬ ವಿಷ್ಯ ತಿಳಿದು ಲುಯಿ ದಂಗಾಗಿದ್ದಾಳೆ. ಇಷ್ಟೇ ಅಲ್ಲ ಲುಯಿ ಮಗ 200,000 ಯುವಾನ್ ಸುಮಾರು 22 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಗರ್ಲ್ ಫ್ರೆಂಡ್ ಗೆ ಉಡುಗೊರೆಯಾಗಿ ನೀಡಿದ್ದಾನೆ. ಇಬ್ಬರೂ ಲಾಂಗ್ ಡ್ರೈವ್ ಕೂಡ ಹೋಗಿದ್ದಾರೆ.
ಪತಿಗಾಗಿ ಸಿನಿಮಾ ತೊರೆದು ಗೃಹಿಣಿಯಾದ ಬಾಲಿವುಡ್ ನಟಿ! ಬ್ಲಾಕ್ಬಸ್ಟರ್ ಚಿತ್ರಗಳೀಗ ನೆನಪು ಮಾತ್ರ...
ಈ ವಿಷ್ಯ ತಿಳಿದ ಲುಯಿ ಎಚ್ಚೆತ್ತಿದ್ದಾಳೆ. ಮಗನಿಗೆ ಉಳಿದ 300,000 ಯುವಾನ್ ಸುಮಾರು 34 ಲಕ್ಷ ರೂಪಾಯಿ ಹಿಂದಿರುಗಿಸುವಂತೆ ಕೇಳಿದ್ದಾಳೆ. ಆದ್ರೆ ಮಗ ನಿರಾಕರಿಸಿದ್ದಾನೆ. ಒಮ್ಮೆ ಹಣವನ್ನು ಆತನ ಖಾತೆಗೆ ವರ್ಗಾಯಿಸಿದ್ಮೇಲೆ ಮುಗಿತು. ಅದನ್ನು ಹೇಗೆ ಬೇಕಾದ್ರೂ ನಾನು ಖಾಲಿ ಮಾಡ್ಬಹುದು ಎಂದು ವಾದಿಸಿದ್ದಾನೆ. ಲುಯಿ ಮಗನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾಳೆ. ಪ್ರಕರಣದ ವಿಚಾರಣೆ ನಡೆಸಿದ ಸಿಚುವಾನ್ ಮಿಯಾನ್ಯಾಂಗ್ ಫುಚೆಂಗ್ ಪೀಪಲ್ಸ್ ಕೋರ್ಟ್, ಮಗನಿಗೆ ದಂಡ ವಿಧಿಸಿದೆ. ಇಬ್ಬರ ಮಧ್ಯೆ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದೆ. ಕೋರ್ಟ್ ತೀರ್ಪಿನ ನಂತ್ರ ಮಗ 34 ಲಕ್ಷ ರೂಪಾಯಿಯನ್ನು ಹಿಂದಿರುಗಿಸಿದ್ದಾನೆ. ಮಗನ ಶಿಕ್ಷಣ ಹಾಗೂ ಖರ್ಚಿಗೆ ಪ್ರತಿ ತಿಂಗಳು ನಾನೇ ಹಣ ನೀಡ್ತೇನೆಂದು ಲುಯಿ ಹೇಳಿದ್ದಾಳೆ.