ಪಿಗ್ಯಾಸಂನಿಂದ ಸಿಗುತ್ತಾ ಮಹಿಳೆಯರಿಗೆ ಪರಾಕಾಷ್ಠೆ? ಅಷ್ಟಕ್ಕೂ ಏನಿದು?

ಸಂಭೋಗದ ವೇಳೆ ಪರಾಕಾಷ್ಠೆ ಪಡೆದಾಗ ಮಹಿಳೆಯರು ರಿಲ್ಯಾಕ್ಸ್ ಆಗ್ತಾರೆ. ಆದ್ರೆ ಬರೀ ಸೆಕ್ಸ್‌ನಿಂದ ಕ್ಲೈಮ್ಯಾಕ್ಸ್ ತಲುಪೋದು ಕಷ್ಟ. ಅದಕ್ಕೆ ನಾನಾ ವಿಧಾನಗಳಿವೆ. ಅದ್ರಲ್ಲಿ ಪಿಗ್ಯಾಸಂ ಕೂಡ ಒಂದು. ಅದ್ರ ವಿಧಾನ ಹಾಗೇ ನಷ್ಟದ ಬಗ್ಗೆ ಮಾಹಿತಿ ಇಲ್ಲಿದೆ.

Explain What Is Peegasm And Its Side Effects on women roo

ಸಂಭೋಗದಲ್ಲಿ ಪರಾಕಾಷ್ಠೆ ಮಹಿಳೆಯರಿಗೆ ಸುಲಭವಾಗಿ ಸಿಗೋದಿಲ್ಲ. ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಪರಾಕಾಷ್ಠೆ ತಲುಪೋದು ಬಹಳ ಅಪರೂಪ. ಸಂಗಾತಿಗೆ ಬೇಸರವಾಗಬಾರದು ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಪರಾಕಾಷ್ಠೆ ತಲುಪಿದಂತೆ ನಾಟಕವಾಡ್ತಾರೆ ಎಂದು ಸಮೀಕ್ಷೆಯೊಂದು ಈ ಹಿಂದೆ ಹೇಳಿತ್ತು. 

ಬಹುತೇಕ ಪುರುಷರು, ಸಂಗಾತಿಯ ಪರಾಕಾಷ್ಠೆ (Climax) ಗೆ ಹೆಚ್ಚು ಮಹತ್ವ ನೀಡೋದಿಲ್ಲ ಎನ್ನುವ ದೂರೂ ಇದೆ. ಈ ಪರಾಕಾಷ್ಠೆ ಬಗ್ಗೆ ಮಹಿಳೆಯರು ಬಹಿರಂಗವಾಗಿ ಮಾತನಾಡೋದಿಲ್ಲ. ದಂಪತಿ ಮಧ್ಯೆಯೂ ಇದ್ರ ಬಗ್ಗೆ ಚರ್ಚೆ ನಡೆಯೋದಿಲ್ಲ. ಲೈಂಗಿಕ (Sexual) ಸಮಯದಲ್ಲಿ ಪರಾಕಾಷ್ಠೆ ತಲುಪಲು ಅನೇಕ ವಿಷ್ಯಗಳನ್ನು ಗಮನಿಸಬೇಕಾಗುತ್ತದೆ. ಬರೀ ಸೆಕ್ಸ್ ನಿಂದ ಪರಾಕಾಷ್ಠೆ ತಲುಪೋದು ಕಷ್ಟ. ಈಗಿನ ದಿನಗಳಲ್ಲಿ ಪರಾಕಾಷ್ಠೆಗೆ ಸಂಬಂಧಿಸಿದಂತೆ ಹೊಸ ಟ್ರೆಂಡ್ ಶುರುವಾಗಿದೆ. ಅದೇ ಪಿಗ್ಯಾಸಂ (Peegasm). ಇಂಟರ್ನೆಟ್ ನಲ್ಲಿ ಪಿಗ್ಯಾಸಂ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ನಾವಿಂದು ಪಿಗ್ಯಾಸಂ ಅಂದ್ರೇನು? ಅದರಿಂದ ಹೇಗೆ ಪರಾಕಾಷ್ಠೆ ತಲುಪಬಹುದು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

Love Story: ಪ್ರೀತಿಗಾಗಿ ದೇಶದ ಗಡಿ ದಾಟಿ 10000 ಕಿ.ಮೀ ಪಯಣಿಸಿದ ಯುವಕ

ಪಿಗ್ಯಾಸಂ ಎಂದರೇನು? : ಪಿಗ್ಯಾಸಂ ಪದವು ಪೈ (ಪೀ) ಮತ್ತು ಪರಾಕಾಷ್ಠೆಯಿಂದ ಮಾಡಲ್ಪಟ್ಟಿದೆ. ಸಂಭೋಗ ನಡೆಸಿ ಪರಾಕಾಷ್ಠೆ ತಲುಪುವ ವಿಧಾನ ಇದಲ್ಲ. ಇಲ್ಲಿ ನಿಮಗೆ ಪರಾಕಾಷ್ಠೆ ತಲುಪಲು ಸಂಗಾತಿಯ ಅಗತ್ಯವಿರೋದಿಲ್ಲ.ಪಿಗ್ಯಾಸಂ ಎಂಬುದು ಮೂತ್ರವನ್ನು ಉದ್ದೇಶಪೂರ್ವಕವಾಗಿ ತಡೆ ಹಿಡಿಯುವುದಾಗಿದೆ. ಮೂತ್ರಕೋಶವು ಸಂಪೂರ್ಣವಾಗಿ ತುಂಬಿದ ನಂತರ ಮತ್ತು ಮೂತ್ರನಾಳದ ಸ್ಪಾಂಜ್ ಮತ್ತು ಚಂದ್ರನಾಡಿ ಸೇರಿದಂತೆ ಸ್ತ್ರೀ ಎರೋಜೆನ್ ವಲಯಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಮೂತ್ರವನ್ನು ತುಂಬಾ ಸಮಯ ತಡೆಹಿಡಿದು ನಂತ್ರ ಮೂತ್ರ ವಿಸರ್ಜನೆ ಮಾಡಿದಾಗ ಉಂಟಾಗುವ ಸಂವೇದನೆಯು ಪರಾಕಾಷ್ಠೆಯಂತೆಯೇ ಇರುತ್ತದೆ. ಇದನ್ನೇ ಪಿಗ್ಯಾಸಂ ಎನ್ನುತ್ತಾರೆ.

ರೆಡ್ಡಿಟ್‌ನಲ್ಲಿ ಶುರುವಾಗಿತ್ತು ಚರ್ಚೆ: ರೆಡ್ಡಿಟ್‌ನಲ್ಲಿ ಬಳಕೆದಾರರೊಬ್ಬರು ಇದ್ರ ಬಗ್ಗೆ ಪ್ರಶ್ನೆ ಮಾಡಿದ್ದರು. ಮೂತ್ರ ತಡೆಹಿಡಿದ ನಂತ್ರ ಯಾವುದಾದ್ರೂ ಮಹಿಳೆಗೆ ಸೆಕ್ಸ್ ಕ್ಲೈಮ್ಯಾಕ್ಸ್ ಅನುಭವ ಆಗಿತ್ತಾ ಎಂದು ವ್ಯಕ್ತಿಯೊಬ್ಬರು ಕೇಳಿದ್ದರು. ಅದಕ್ಕೆ ಅನೇಕ ಪುರುಷರು ಹೌದು ಎಂದು ಉತ್ತರ ನೀಡಿದ್ದರು. ಇನ್ನು ಕೆಲವರು, ಪರಾಕಾಷ್ಠೆ ವೇಳೆ ಆಗುವ ಅನುಭವ ಆಗಿದೆ ಆದ್ರೆ ಸಂಭೋಗದ ಸುಖ ಸಂಪೂರ್ಣ ಸಿಕ್ಕಿಲ್ಲ ಎಂದಿದ್ದರು. 

ಸೆಕ್ರೆಟರಿ ಜೊತೆಗೇ ಲಿವ್‌ ಇನ್‌ ರಿಲೇಶನ್‌ನಲ್ಲಿ ರೇಖಾ! ಆಕೆಯ ಪತಿಯ ಆತ್ಮಹತ್ಯೆಗೆ ಇದೇ ಕಾರಣ?

ಪಿಗ್ಯಾಸಂ ಎಷ್ಟು ಸುರಕ್ಷಿತ?  : ಪಿಗ್ಯಾಸಂ ಬಗ್ಗೆ ಒಬ್ಬೊಬ್ಬರ ಅನುಭವ ಒಂದೊಂದು ರೀತಿಯಲ್ಲಿದೆ. ಆದ್ರೆ ಇದು ಒಳ್ಳೆಯದಲ್ಲ. 

ಸೋಂಕು (Infection) : ಮೂತ್ರವನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಂಡರೆ, ಅದು ನಿಮ್ಮ ಮೂತ್ರ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೂತ್ರದಲ್ಲಿ ಸೋಂಕುಗಳ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ.

ಮೂತ್ರದ ಬಣ್ಣದಲ್ಲಿ ಬದಲಾವಣೆ : ಅನೇಕ ಬಾರಿ ನೀವು ಮೂತ್ರವನ್ನು ತಡೆಹಿಡಿಯುವ ಕಾರಣ ಮೂತ್ರದ ಬಣ್ಣ ಬದಲಾಗುತ್ತದೆ.

ಮೂತ್ರಕೋಶದಲ್ಲಿ ಸಮಸ್ಯೆ (Kidney Health Issue) : ಮೂತ್ರವನ್ನು ತುಂಬಾ ಸಮಯ ತಡೆಹಿಡಿಯುವ ಕಾರಣ ಮೂತ್ರಕೋಶದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮೂತ್ರಕೋಶದ ಕಲ್ಲು ಸೇರಿದಂತೆ  ಕೆಲ ಸಂದರ್ಭದಲ್ಲಿ ಇದು ಕ್ಯಾನ್ಸರ್ ಗೂ ಕಾರಣವಾಗಬಹುದು. 
ಹಾಗಾಗಿ ಯಾವುದೇ ಕಾರಣಕ್ಕೂ ಮೂತ್ರ ತಡೆಹಿಡಿದು ಸುಖದ ಅನುಭವಪಡೆಯಲು ಹೋಗಬೇಡಿ ಎನ್ನುತ್ತಾರೆ ತಜ್ಞರು. 

ಪರಾಕಾಷ್ಠೆ ಅನುಭವ ಹೇಗಾಗುತ್ತದೆ? : ಹುಡುಗಿ ಪರಾಕಾಷ್ಠೆಯನ್ನು ಅನುಭವಿಸಿದಾಗ, ಯೋನಿ ಮತ್ತು ಗುದದ್ವಾರದ ಸುತ್ತಲಿನ ಶ್ರೋಣಿಯ  ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಈ ವೇಳೆ ಅವು ಉದ್ವಿಗ್ನಗೊಳ್ಳುತ್ತವೆ ಮತ್ತು ಲಯಬದ್ಧವಾಗಿ ವಿಶ್ರಾಂತಿ ಪಡೆಯುತ್ತವೆ. ಹೆಚ್ಚಿನ ಹುಡುಗಿಯರು ಕೇವಲ ಯೋನಿ ಸಂಭೋಗದಿಂದ ಪರಾಕಾಷ್ಠೆ ಅನುಭವಿಸುವುದಿಲ್ಲ. ಯೋನಿಯು ತುಲನಾತ್ಮಕವಾಗಿ ಕಡಿಮೆ ಸಂವೇದನಾಶೀಲವಾಗಿರುತ್ತದೆ. ಫಿಂಗರಿಂಗ್ ಮತ್ತು ಮೌಖಿಕ ಸಂಭೋಗ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. 

Latest Videos
Follow Us:
Download App:
  • android
  • ios