ಮಕ್ಕಳಿಗೆ ಹೊಡೆಯೋದು ಭಾರತದಲ್ಲಿ ಅಪರಾಧವಲ್ಲ. ಹೊಡೆದ್ರೆ ಮಕ್ಕಳು ಸುಧಾರಿಸ್ತಾರೆ, ಅವರ ಭವಿಷ್ಯ ಚೆನ್ನಾಗಿರುತ್ತೆ ಅಂತಾ ಪಾಲಕರು ಭಾವಿಸಿದ್ದಾರೆ. ಬರೀ ಇದಕ್ಕೆ ಮಾತ್ರವಲ್ಲ, ಬೇರೆಯವರ ಮೇಲೆ ಸಿಟ್ ಬಂದ್ರೂ ಪಾಪ ಒದೆ ತಿನ್ನೋದು ಮಕ್ಕಳು.  

ಅಜ್ಜ – ಅಜ್ಜಿಗೆ ಮಕ್ಕಳಿಗಿಂತ ಮೊಮ್ಮಕ್ಕಳ ಮೇಲೆ ಪ್ರೀತಿ ಹೆಚ್ಚಿರುತ್ತದೆ. ಮೊಮ್ಮಕ್ಕಳನ್ನು ಅತಿಯಾಗಿ ಪ್ರೀತಿ ಮಾಡುವ ಅಜ್ಜ – ಅಜ್ಜಿ, ಅವರಿಗೆ ಏನೂ ಆಗದಂತೆ ಕಾಳಜಿವಹಿಸ್ತಾರೆ. ಮನೆಯಲ್ಲಿ ಹಿರಿಯರಿದ್ರೆ ತಾಯಂದಿರು ಮಕ್ಕಳಿಗೆ ಹೊಡೆಯಲು ಸಾಧ್ಯವಾಗೋದಿಲ್ಲ. ಯಾಕೆಂದ್ರೆ ತಾಯಿ ಕೋಪ ನೆತ್ತಿಗೇರುತ್ತಿದ್ದಂತೆ ಮಕ್ಕಳು, ಅಜ್ಜಿ ಮಡಿಲು ಸೇರ್ತಾರೆ. ಆದ್ರೆ ಮತ್ತೆ ಕೆಲ ಮಹಿಳೆಯರು ಬೇರೆಯವರ ಮೇಲಿನ ಕೋಪವನ್ನು ಮಕ್ಕಳ ಮೇಲೆ ತೋರಿಸ್ತಾರೆ. ಕೋಪದಲ್ಲಿ ಮಕ್ಕಳಿಗೆ ಏಟು ನೀಡ್ತಾರೆ. ಇದ್ರಿಂದ ಪಾಪದ ಮಕ್ಕಳು ನೋವು ತಿನ್ನುತ್ತಾರೆ. ಜೊತೆಗೆ ಮಕ್ಕಳ ಮನಸ್ಸಿನ ಮೇಲೆ ಇದು ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಇಲ್ಲೊಬ್ಬ ಅಜ್ಜಿಗೆ ಈಗ ಭಯ ಶುರುವಾಗಿದೆ. ಸೊಸೆ, ಮೊಮ್ಮಗನಿಗೆ ಹೊಡೆಯೋದನ್ನು ಅಜ್ಜಿಗೆ ನೋಡಲು ಸಾಧ್ಯವಾಗ್ತಿಲ್ಲ. 

ಅಜ್ಜಿಗೆ 68 ವರ್ಷ. ಆಕೆಗೆ ಇಬ್ಬರು ಗಂಡು ಮಕ್ಕಳು. ಹಿರಿಯ ಮಗನಿಗೆ ಮದುವೆಯಾಗಿದೆ. ಆತನಿಗೆ ಸಣ್ಣ ಮಗು (Child) ವಿದೆ. ಮೊಮ್ಮಗನನ್ನು ಅಜ್ಜ ಹಾಗೂ ಅಜ್ಜಿ ಹೆಚ್ಚು ಪ್ರೀತಿ ಮಾಡ್ತಾರೆ. ಅಜ್ಜಿ (grandmother) ಜೊತೆ ಮೊಮ್ಮಗ ದಿನ ಕಳೆಯಲು ಇಷ್ಟಪಡ್ತಾನೆ ಕೂಡ. ಮನೆಯಲ್ಲಿ ಬೇರೆ ಯಾವುದೇ ಸಮಸ್ಯೆಯಿಲ್ಲ. ಆದ್ರೆ ಸೊಸೆಯ ವಿಪರೀತ ಕೋಪ, ಅತ್ತೆಯ ಚಿಂತೆಗೆ ಕಾರಣವಾಗಿದೆ.

ಕೋಪ ಬರ್ತಿದ್ದಂತೆ ಮೊಮ್ಮಗನನ್ನು ಮನಸ್ಸಿಗೆ ಬಂದಂತೆ ಹೊಡೆಯುತ್ತಾಳಂತೆ ಸೊಸೆ. ಅತ್ತೆ – ಮಾವನ ಮೇಲೆ ಕೋಪ ಬಂದ್ರೂ ಏಟು ಬೀಳೋದು ಮಗನಿಗಂತೆ. ಇಡೀ ದಿನ ಮಗನಿಗೆ ಬೈಯ್ತಾಳೆ ಎನ್ನುವ ಅಜ್ಜಿ, ಎದೆ ಹಾಲು ಕುಡಿಯುವ ಮಗುವಿಗೆ ಈ ರೀತಿ ಹೊಡೆದ್ರೆ ಏನು ಗತಿ ಎನ್ನುತ್ತಾಳೆ.

ಬರೀ ಹೊಡೆಯೋದು ಮಾತ್ರವಲ್ಲ ಮಗನ ಜೊತೆ ಕೆಟ್ಟದಾಗಿ ವರ್ತಿಸ್ತಾಳಂತೆ. ತಾಯಿ ಕಂಡ್ರೆ ಮಗು ಭಯಪಡುವ ಸ್ಥಿತಿ ನಿರ್ಮಾಣವಾಗಿದೆಯಂತೆ. ತಡರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮಾಡುವ ಸೊಸೆ ಯಾವಾಗ್ಲೂ ನಶೆಯಲ್ಲಿ ಇರ್ತಾಳಂತೆ. ಸ್ತನಪಾನ ಮಾಡುವಾಗಲೂ ಸೊಸೆ ಮದ್ಯಪಾನ ಮಾಡ್ತಿರುತ್ತಾಳೆ ಎನ್ನುತ್ತಾಳೆ ಅತ್ತೆ. 

ನಿಮ್‌ ಮಗುವಿಗೆ ಮುದ್ದು ಹೆಚ್ಚಾಗಿ, ಶಿಸ್ತು ಕಡಿಮೆಯಾಗ್ತಿದ್ಯಾ ? ತಿಳ್ಕೊಳ್ಳೋದು ಹೇಗೆ ?

ಈ ಬಗ್ಗೆ ಸೊಸೆ ಜೊತೆ ಮಾತನಾಡಿದ್ದಾಳಂತೆ ಅತ್ತೆ. ಮದ್ಯಪಾನ ಮಾಡ್ಬೇಡ ಎಂದಿದ್ದಕ್ಕೆ ಮೊಮ್ಮಗನಿಗೆ ಮತ್ತಷ್ಟು ಹೊಡೆದಿದ್ದಾಳೆ. ಸೊಸೆ ತಂದೆ – ತಾಯಿ ಬಳಿಯೂ ಮಾತನಾಡಿದ್ದಾಳೆ ಅತ್ತೆ. ಆದ್ರೆ ಅತ್ತೆ ಮೇಲೆ ಆರೋಪ ಮಾಡುವ ಆಕೆ ಪಾಲಕರು, ಮಗಳು ಮಾಡ್ತಿರೋದು ಸರಿ ಎಂದಿದ್ದಾರಂತೆ.ಮೊಮ್ಮಗನಿಗೆ ಸೊಸೆ ಏಟು ನೀಡೋದನ್ನು ನೋಡಲು ಸಾಧ್ಯವಾಗ್ತಿಲ್ಲ. ಇದನ್ನು ಬಿಡಿಸೋದು ಹೇಗೆ ಎಂದು ಅತ್ತೆ ಪ್ರಶ್ನೆ ಮಾಡಿದ್ದಾಳೆ.

ಮಕ್ಕಳ ನಿರೀಕ್ಷೆಯಲ್ಲಿರೋ ಪೋಷಕರಿಗೊಂದು ಕಿವಿ ಮಾತು, ಹೀಗ್ ಪ್ರಿಪೇರ್ ಆದ್ರೆ ಸೇಫ್

ತಜ್ಞರ ಸಲಹೆ : ಮಕ್ಕಳಿಗೆ ಏಟು ನೀಡಿದ್ರೆ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಅನೇಕ ಪಾಲಕರು ಭಾವಿಸಿದ್ದಾರೆ. ಕೆಲ ದೇಶಗಳಲ್ಲಿ ಮಕ್ಕಳಿಗೆ ಹೊಡೆಯೋದು ಕಾನೂನು ಬಾಹಿರ. ಮತ್ತೆ ಕೆಲ ದೇಶಗಳಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಭಾರತದಲ್ಲಿ, ಪಾಲಕರು ಮಕ್ಕಳಿಗೆ ಹೊಡೆಯೋದು ಸಾಮಾನ್ಯ. ಅನೇಕ ಪಾಲಕರು ಮಕ್ಕಳಿಗೆ ಬುದ್ಧಿ ಕಲಿಸಲು ಒದೆ ನೀಡ್ತಾರೆ. ಇದು ತಪ್ಪು ಎನ್ನುವ ತಜ್ಞರು ಈ ಬಗ್ಗೆ ಮಗನ ಜೊತೆ ಮಾತನಾಡುವಂತೆ ಸಲಹೆ ನೀಡಿದ್ದಾರೆ. ತಡರಾತ್ರಿ ಪಾರ್ಟಿ, ಮಗನಿಗೆ ಏಟು ನೀಡುವ ಪತ್ನಿ ಬಗ್ಗೆ ಮಗನ ಜೊತೆ ಮಾತನಾಡುವ ಅವಶ್ಯಕತೆಯಿದೆ. ಈಗಾಗಲೇ ಆಕೆ ಪಾಲಕರ ಜೊತೆ ಮಾತನಾಡಿರುವ ನೀವು, ಮಗನಿಗೆ ಎಲ್ಲವನ್ನೂ ತಿಳಿಸಿ ಎನ್ನುತ್ತಾರೆ. ಸೊಸೆ ಸುಧಾರಿಸುವ ಕೆಲಸದಲ್ಲಿ ಮಗನನ್ನು ಸೇರಿಸಿಕೊಳ್ಳಿ ಎನ್ನುತ್ತಾರೆ.ಅನೇಕರು ಮಗುವಾದ್ಮೇಲೆ ಬದಲಾಗ್ತಾರೆ. ಮಗು ಹೊಣೆಯಾಗಿರಬಹುದು. ಇಲ್ಲವೆ ಬೇರೆ ಸಮಸ್ಯೆ ಕಾಡ್ತಿರಬಹುದು. ಮೊದಲು ಸೊಸೆ ಹಾಗೂ ಮಗನ ಜೊತೆ ಮಾತನಾಡಿ. ಇದು ಸಾಧ್ಯವಿಲ್ಲವೆಂದ್ರೆ ಕೌನ್ಸಿಲರ್ ಭೇಟಿಯಾಗಿ ಸೊಸೆ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎನ್ನುತ್ತಾರೆ ತಜ್ಞರು.