Asianet Suvarna News Asianet Suvarna News

ಹಡಗಿನಲ್ಲಿ ವಾಸಿಸೋ ಈ ದಂಪತಿಗೆ ಬಟ್ಟೆ ಒಗೆಯೋದೇ ಮರೆತು ಹೋಗಿದೆಯಂತೆ!

ನಿವೃತ್ತಿಯಾದ್ಮೇಲೆ ಜೊತೆಯಲ್ಲಿ ಸಂಗಾತಿ ಇದ್ರೂ ಒಂಟಿತನ ಕಾಡೋದು ಮಾಮೂಲಿ. ಕೆಲವರು ಬೇಸರಪಟ್ಟುಕೊಳ್ಳದೆ ಜೀವನದಲ್ಲಿ ಹೊಸದನ್ನು ಸಾಧಿಸಲು ಮುಂದಾಗ್ತಾರೆ. ಈ ವೃದ್ಧ ದಂಪತಿ ಕೂಡ ತಮ್ಮ ಮುಂದಿನ ಜೀವನದ ಬಗ್ಗೆ ಮಹತ್ವದ ನಿರ್ಧಾರಕೈಗೊಂಡಿದ್ದಾರೆ. 

Couple Buy Twenty Crore Rupee Cruise Ship Cabin As Retirement Home To Live At Sea Full Time roo
Author
First Published Oct 20, 2023, 2:05 PM IST

ಜೀವನದ ಪ್ರತಿಯೊಂದು ಘಟ್ಟವೂ ಅದರದೇ ಆದ ಜವಾಬ್ದಾರಿ, ಖುಷಿ, ನೋವುಗಳನ್ನು ಹೊಂದಿದೆ. ಎಲ್ಲ ಸಂದರ್ಭಗಳಲ್ಲಿಯೂ ನಾವು ಅನೇಕ ಏರಿಳಿತಗಳನ್ನು ಕಾಣುತ್ತೇವೆ. ವಿದ್ಯಾಭ್ಯಾಸ ಮಾಡುವವರಿಗೆ ಒಂದು ರೀತಿಯ ಚಿಂತೆಯಾದರೆ, ಕೆಲಸದ ಜವಾಬ್ದಾರಿ ಹೊತ್ತವರನ್ನು ಮತ್ತೊಂದು ರೀತಿಯ ಚಿಂತೆ ಕಾಡುತ್ತದೆ. ಎಲ್ಲದರ ಜೊತೆಗೆ ನಿವೃತ್ತಿ ಜೀವನ ಕೂಡ ಬಹುದೊಡ್ಡ ಸಮಸ್ಯೆಯೇ ಆಗಿದೆ.

ರಿಟೈರ್ ಮೆಂಟ್ (Retirement) ಜೀವನ ಅನೇಕ ಸವಾಲುಗಳನ್ನು ಒಡ್ಡುತ್ತದೆ. ಬಹುತೇಕ ಮಂದಿ ಈ ಸಮಯದಲ್ಲಿ ಒಂಟಿತನ (Loneliness ) ನ ಹಾಗೂ ಆರ್ಥಿಕ ತೊಂದರೆಯಿಂದ ಬಳಲುತ್ತಾರೆ. ಆದ್ದರಿಂದಲೇ ಅನೇಕ ಮಂದಿ ನಿವೃತ್ತಿ ಜೀವನಕ್ಕೆಂದೇ ಹಣವನ್ನು ಕೂಡಿಡುತ್ತಾರೆ. ಭೂಮಿ, ಹಣ, ಬಂಗಾರ ಮುಂತಾದವುಗಳಿಗೆ ಹಣವನ್ನು ಹೂಡಿಕೆ ಮಾಡುತ್ತಾರೆ. ನಿವೃತ್ತಿ ಜೀವನವನ್ನು ಯಾವುದೇ ಚಿಂತೆ ಜಂಜಾಟಗಳಿಲ್ಲದೇ, ಸುಖವಾಗಿ ಕಳೆಯಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ.

ಡೇಟಿಂಗ್‌ ರೂಮರ್‌ ಖಚಿತ ಪಡಿಸಿದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ?

ಸಮುದ್ರ (Sea) ದಲ್ಲಿ ನಿವೃತ್ತಿ ಜೀವನ: ನಿವೃತ್ತಿ ಜೀವನವನ್ನು ಒಬ್ಬೊಬ್ಬರು ಒಂದೊಂದು ರೀತಿ ಕಳೆಯಲು ಇಷ್ಟಪಡುತ್ತಾರೆ. ಕೆಲವರು ಪ್ರಶಾಂತ ವಾತಾವರಣದಲ್ಲಿ ಇರಲು ಬಯಸಿದರೆ ಇನ್ನು ಕೆಲವರು ದೇಶ, ವಿದೇಶವನ್ನು ಸುತ್ತಲು ಬಯಸುತ್ತಾರೆ. ಹೀಗೆ ಒಬ್ಬೊಬ್ಬರ ರಿಟೈರ್ಮೆಂಟ್ ಪ್ಲಾನ್ ಒಂದೊಂದು ರೀತಿ ಇರುತ್ತದೆ. ಇಲ್ಲೊಬ್ಬ ದಂಪತಿ  ತಮ್ಮ ಆಸ್ತಿಯನ್ನೆಲ್ಲ ಮಾರಿ ಕ್ರೂಜ್ ಎಮ್ ವಿ ಹಡಗಿನಲ್ಲಿ ವಾಸಿಸಲು ನಿರ್ಧರಿಸಿ ಹಡಗಿನಲ್ಲೇ ಮನೆ ಖರೀದಿಸಿದ್ದಾರೆ. ಅದಕ್ಕಾಗಿ ಅವರು ತಮ್ಮ ಆಸ್ತಿಯನ್ನು ಕೂಡ ಮಾರಿದ್ದಾರೆ. 80 ವರ್ಷದ ಮೈಕ್ ಸೋರೋಕರ್ ಮತ್ತು 75 ವರ್ಷದ ಬಾರ್ಬರಾ ದಂಪತಿಗಳು ಎಮ್ ವಿ ನರೇಟಿವ್ ಎಂಬ ದಂಪತಿ ಹಡಗಿನಲ್ಲಿ ವಾಸಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಇವರು 2.5 ಬಿಲಿಯನ್ ವೆಚ್ಚದಲ್ಲಿ ಒಂದು ಸಣ್ಣ ಕ್ಯಾಬಿನ್ ಖರೀದಿಸಿದ್ದಾರೆ. ಇವರಿಬ್ಬರೂ ತಮ್ಮ ರಿಟೈರ್ ಮೆಂಟ್ ಜೀವನವನ್ನು ಸಮುದ್ರದಲ್ಲಿ ಕಳೆಯಲು ನಿರ್ಧರಿಸಿದ್ದಾರೆ.

ಜೀವನ ಚೆನ್ನಾಗಿರ್ಬೇಕಾ? ಇಂಥ ಜನರೊಂದಿಗೆ ಇರದಿದ್ದರೆ ಸರಿ!

ಕ್ರೂಜ್ ಎಮ್ ವಿ ಹಡಗಿನಲ್ಲೇನಿದೆ ವಿಶೇಷತೆ?:  ಕ್ರೂಜ್ ಎಮ್ ವಿ ಹಡಗು ಉಳಿದ ಹಡಗುಗಳಿಗಿಂತ ಭಿನ್ನವಾಗಿದೆ. ಉಳಿದ ಹಡಗುಗಳಲ್ಲಿ ಕೆಲವು ದಿನಗಳ ಮಟ್ಟಿಗೆ ಬಾಡಿಗೆಗೆ ರೂಮ್ ಗಳನ್ನು ನೀಡಲಾಗುತ್ತದೆ. ಅನೇಕ ಮಂದಿ ತಮ್ಮ ರಜಾ ದಿನಗಳನ್ನು ಅಲ್ಲಿ ಕಳೆಯುತ್ತಾರೆ. ಆದರೆ ಕ್ರೂಜ್ ಹಡಗಿನಲ್ಲಿ ಈ ಸೌಲಭ್ಯವಿಲ್ಲ. ಕ್ರೂಜ್ ಹಡಗಿನ ಕ್ಯಾಬಿನ್ ಮತ್ತು ಅಪಾರ್ಟ್ ಮೆಂಟ್ ಗಳನ್ನು ಲಾಂಗ್ ಟರ್ಮ್ ಗಳಿಗೆ ಮಾರಾಟಮಾಡುತ್ತಿದೆ. ಈ ಹಡಗಿನಲ್ಲಿ ಲಾಂಡ್ರಿ, ಜಿಮ್, ರೆಸ್ಟೋರೆಂಟ್ ಮುಂತಾದ ಅನೇಕ ರೀತಿಯ ಸೌಲಭ್ಯಗಳು ಇವೆ.

ಮೈಕ್ ಮತ್ತು ಬಾರ್ಬರಾ ದಂಪತಿ  ಈಗಾಗಲೇ ನಾಲ್ಕು ಬಾರಿ ಕ್ರೂಜ್ ಹಡಗಿನಲ್ಲಿ ಪ್ರಯಾಣಿಸಿದ್ದಾರೆ. ಹೀಗೆ ಹಡಗಿನಲ್ಲಿ ಪ್ರಯಾಣಿಸಿದ ಅವರು ಯಾವುದೇ ಟೈಂ ಬೌಂಡ್ ಇಲ್ಲದೇ ಸುದೀರ್ಘ ಸಮಯದ ತನಕ ಹಡಗಿನಲ್ಲೇ ಇರಲು ಬಯಸಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ದಂಪತಿಗಳ ಮನೆ ಸಿದ್ಧವಾಗಲಿದೆ. ತಮ್ಮ ಹೊಸ ಮನೆಯ ಮೂಲಕ ಅವರು ಅನೇಕ ಹೊಸ ಸ್ಥಳಗಳನ್ನು ನೋಡಲು ಉತ್ಸುಕರಾಗಿದ್ದಾರೆ.

ನಿವೃತ್ತಿ ಜೀವನಕ್ಕಾಗಿ (Retirment LIfe) ಬಹಳ ಅಪರೂಪದ ಪ್ಲಾನ್ ಮಾಡಿರುವ ಮೈಕ್ ದಂಪತಿಗಳು “ಈಗ ನಮಗೆ ಬಟ್ಟೆ ತೊಳೆಯುವುದೇ ಮರೆತು ಹೋಗಿದೆ ಏಕೆಂದರೆ ಕ್ರೂಜ್ ನಲ್ಲಿ ಅದೆಲ್ಲ ವ್ಯವಸ್ಥೆಗಳು ಇವೆ. ಎಲ್ಲರೂ ಹಡಗಿನಲ್ಲಿ ವರ್ಷಗಟ್ಟಲೆ ಸಮಯವನ್ನು ಕಳೆಯಲು ಬಯಸುವುದಿಲ್ಲ ಆದರೆ ಮುಂದಿನ ದಿನಗಳಲ್ಲಿ ಅನೇಕ ಮಂದಿ ಕ್ರೂಜ್ ಕ್ಯಾಬಿನ್ ಗಳನ್ನು ಖರೀದಿಸುವ ಸಾಧ್ಯತೆ ಇದೆ” ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಕೂಜ್ ಕೆಲವು ಟ್ರಾವೆಲ್ ಪ್ರೋಗ್ರಾಂಗಳನ್ನು ಪ್ರಾರಂಭಿಸಲಿದೆ. ಅವು ಕೂಡ ಬಹಳ ಬೇಗ ಮಾರಾಟವಾಗುತ್ತವೆ ಎಂದು ಮೈಕ್ ದಂಪತಿಗಳು ಕ್ರೂಜ್ ಹಡಗಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios