ಚಿಗುರೊಡೆಯುವ ಮುನ್ನ ಕಮರಿದ ಪ್ರೀತಿ, ಸೀನಿಯರ್ ಅಂದುಕೊಂಡರೆ ಉಪನ್ಯಾಸಕರಾಗಿ ಎಂಟ್ರಿ!

* ಕಾಲೇಜು ಲೈಫಲ್ಲಿ ಸಹಪಾಠಿ, ಸೀನಿಯರ್, ಉಪನ್ಯಾಸಕರ ಮೇಲೆ ಕ್ರಶ್

* ಸೀನಿಯರ್ ಎಂದು ಭಾವಿಸಿದಾತ ಉಪನ್ಯಾಸಕರಾಗಿ ಎಂಟ್ರಿ

* ಉಪನ್ಯಾಸಕನಿಗೆ ಮಗುವಿದ್ದ ವಿಚಾರ ತಿಳಿದವರಿಗೆ ಶಾಕ್

College life Student crush on Lecturer pod

ಐಶ್ವರ್ಯ ಕೋಣನ, ವಿಜಯನಗರ

ಅಯ್ಯೋ...! ಬಾರಮ್ಮ ಆಗಲೇ ತಡವಾಗಿದೆ ಇನ್ನೆಷ್ಟು ಕಾಯುತ್ತೀಯ ಅಂತ ಕೋಪದಲ್ಲಿ ನನ್ನ ಸ್ನೇಹತೆ ರೇಗಿದ್ದು ಕೇಳಿ ಓಡಿಹೋದೆ ಅದಾಗಲೇ ಕಾಲೇಜಿಗೆ ತಡವಾಗಿತ್ತು ನನಗೆ ಅಲ್ಲಿಂದಲೇ ಅಕ್ಷತೆಕಾಳು ಹಾಕುತ್ತಿದ್ದಳು,ಹೋಗೆ ನೀನು ಯಾವಾಗಲೂ ತಡ ಮಾಡ್ತೀಯಾ ಇನ್ಮುಂದೆ ನೀನು ನನ್ನ ಜೊತೆ ಬರಬೇಡ ಅಂತೆಲ್ಲ ಬೈಗುಳ ನಾನು ನನ್ನಿಂದ ತಡವಾಗಿಲ್ಲ ಇಂದು ಅವಳ ಜೊತೆ ಜಗಳವಾಡುತ್ತಾ ಕ್ಲಾಸ್ ಒಳಗೆ ಹೋಗೋಕೆ ಸರ್ ಪರ್ಮಿಷನ್ ಕೇಳಲು ಬಾಗಿಲು ಹತ್ತಿರ ಹೋದೆ ,ಆಗ ಒಂದು ಅದ್ಭುತವೇ ಕಾದಿತ್ತು ಆ ಹುಡುಗನನ್ನು ನೋಡಿ ಇಬ್ಬರು ಬೆರಗಾಗಿ ಹೋದೆವು.

ಹೌದು ನಾವು ಆ ದಿನ ಕ್ಲಾಸ್ ಕೇಳಲೇ ಇಲ್ಲ ಅವನ ಅಂದ ಚಂದವನ್ನು ವರ್ಣನೆ ಮಾಡುತ್ತಾ ಕೂತು ಬಿಟ್ಟೆವು, ಸಮಯ ಹೋಗಿದ್ದೇ ತಿಳಿಯಲಿಲ್ಲ ಅವರ ಕ್ಲಾಸ್ ಅಷ್ಟು ಚಂದ ವಾಗಿತ್ತು ಆಗಿತ್ತು ಕ್ಷಮಿಸಿ ಅದು ಕ್ಲಾಸ್ ಅಲ್ಲ ಅವರ ಚೆಲುವೇ ಆಗಿತ್ತು ಮತ್ತೆ ಪ್ರೇಕ್ಷಾ ಬಯಲಿಗೆ ಸ್ಟಾರ್ಟ್ ಮಾಡಿದ್ಲು ಅವರು ನನ್ನ ಹುಡುಗ ಅಂತ ನಾನು ಇಲ್ಲ ಅವನು ನನ್ನವನು ಅಂತ ಯಪ್ಪಾ ..! ನಮ್ದು ಇಲ್ಲಿಗೆ ಮುಗಿಯುವ ಕಥೆಯಲ್ಲ ಬಿಡಿ .ಅವರ ಬಗ್ಗೆ ತಿಳಿದು ಮಾತನಾಡಿಸಬೇಕೆಂದು ಕಾಲೇಜಿನಲ್ಲಿ ಸ್ನೇಹಿತರ ಬಳಿ ಕೇಳಿದೆವು ಅವರಿಗೂ ವಿಷಯ ಗೊತ್ತಿಲ್ಲ ಅವರು ಕೂಡ ಮೊದಲ ಬಾರಿ ನೋಡಿದ್ದು ಅವರನ್ನು ನಮ್ಮ ಸೀನಿಯರ್ ಇರಬೇಕೆಂದು ಬಹಳ ಖುಷಿಯಾದವು ಕಾಲೇಜಿನ ಎಲ್ಲ ಹುಡುಗಿಯರ ಕ್ರಶ್ ಅವರಾಗಿದ್ದರು ಎಂದು ನಮಗೆ ತಡವಾಗಿ ತಿಳಿಯಿತು.ಆದರೂ ನಮ್ಮ ಪ್ರಯತ್ನ ಬಿಡಬಾರದೆಂದು ಮರುದಿನ ಕಾಲೇಜಿಗೆ ಸ್ವಲ್ಪ ಬೇಗನೆ ಹೋದ್ವಿ

ಇಬ್ಬರು ಅವರು ಯಾವ ಡ್ರೆಸ್ ಹಾಕಿಕೊಂಡು ಬರಬಹುದು ಹೇಗೆ ಬರಬಹುದು ಎಂದೆಲ್ಲ ಮಾತನಾಡುತ್ತ ಹೋದೆವು ಆಗಲೇ ಗೊತ್ತಾಗಿದ್ದು ಅವರು ನಮಗೆ ಬಂದಿರುವ ಹೊಸ ಉಪನ್ಯಾಸಕ ಎಂದು ಆಗ ಸ್ವಲ್ಪ ಬೇಜಾರಾಯಿತು, ಆದರೂ ಮನಸ್ಸು ಮಾತು ಕೇಳಲಿಲ್ಲ ಪ್ರೇಕ್ಷಾ ಬೇಡ್ವೇ ಅವರು ನಮ್ಮ ಉಪನ್ಯಾಸಕರು ತುಂಬಾ ಸ್ಟ್ರಿಕ್ಟ್ ಅಂತೆ ಬಹಳ ಬೈತಾರಂತೆ ಅದು-ಇದು ಹೇಳಿದ್ದು ನನಗೂ ಸ್ವಲ್ಪ ಭಯವಾಯಿತು ಒಮ್ಮೆ ನನ್ನ ಹೆಸರು ಅವರ ಬಾಯಲ್ಲಿ ಕೇಳಿದಾಗ ನನ್ನ ಖುಷಿಗೆ ಪಾರವೇ ಇಲ್ಲ, ಆದರೆ ಅವತ್ತು ಇಂದಿನ ನ್ಯೂಸ್ ಬಗ್ಗೆ ಕೇಳಿದಾಗ ನನಗೆ ಏನೂ ತಿಳಿಯದಂತೆ ನಿಂತೆ ಆಗ ಅವರ ಬಾಯಿಯಲ್ಲಿ ಆಂಗ್ಲ ಪದಗಳ ಮಂತ್ರಾಕ್ಷತೆ ಬಂದವು ಆದರೂ ಅವು ಕೇಳಲು ನನಗೆ ಇಂಪಾಗಿದ್ದವು.

ಅವರೊಂದಿಗೆ ಹುಡುಗಿಯರು ಮಾತನಾಡುವಾಗ ನಾನು ಪ್ರೇಕ್ಷಾ ನೆಪಮಾಡಿಕೊಂಡು ಬೈದದ್ದು ಇದೆ, ಅವರ ಚಂದಕ್ಕೆ ಅಷ್ಟು ಮನಸೋತಿದ್ದೇ ಕೆಲದಿನಗಳ ನಂತರ ಕಾಲೇಜಿನಲ್ಲಿ ಒಂದು ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಅಯ್ಯೊಜಿಸಲಾಗಿತ್ತು, ಆಗ ನಮ್ಮ ಸರ್ ತಮ್ಮ ಕುಟುಂಬದೊಂದಿಗೆ ಬರುವುದಾಗಿ ತಿಳಿಸಿದರು ನಾನು ಉತ್ಸುಕಳಾಗಿ ಹೋದೆ , ಅಲ್ಲಿ ತುಂಬಾ ವಿದ್ಯಾರ್ಥಿಗಳ ಗುಂಪು ಗುಂಪಾಗಿತ್ತು ಅಲ್ಲಿ ಹೋಗಿ ನೋಡಿದಾಗ ತುಂಬಾ ಕ್ಯೂಟ್ ಮತ್ತು ತೊದಲನುಡಿ ಹಾಡುತ್ತಾ ಚಿಕ್ಕಮಗು ಎಲ್ಲರನ್ನು ಆಕರ್ಷಿಸುತ್ತಿತ್ತು, ಆ ಮಗು ಎಲ್ಲರನ್ನು ಮಕ್ಕಳಂತೆ ಮಾಡಿಬಿಟ್ಟಿತ್ತು ನಾನು ಅದನ್ನು ನೋಡುತ್ತಾ ಕಳೆದುಹೋದೆ ನಂತರ ನಮ್ಮ ಉಪನ್ಯಾಸಕರು ಬಂದು ಮಗುವನ್ನು ಎತ್ತಿಕೊಂಡರು ಆಗಲೇ ತಿಳಿದಿದ್ದು ಅದು ಅವರ ಮಗು ಎಂದು ಆ ಕ್ಷಣ ನಾನು ಕಟ್ಟಿದ ಕನಸೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಯಿತು ನನ್ನ ಸ್ನೇಹಿತೆ ಪ್ರೇಕ್ಷಾ ಖುಷಿಗಂತೂ ಪಾರವೇ ಇರಲಿಲ್ಲ ಶುರುವಾಯಿತು ನಮ್ಮಿಬ್ಬರ ನಡುವೆ.

Latest Videos
Follow Us:
Download App:
  • android
  • ios