Asianet Suvarna News Asianet Suvarna News

ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ ಅಂತಾರಲ್ಲ ಹಾಗೆ ಮಾರ್ಜಾಲ ಚೇಷ್ಟೆಗೆ 11 ಲಕ್ಷ ನಷ್ಟ!

ಅಡುಗೆ ಮನೆಯಲ್ಲಿ ಆಡ್ತಿದ್ದ ಬೆಕ್ಕು ಮನೆಗೆ ಬೆಂಕಿ ಹಚ್ಚಿದೆ. ಇದ್ರಿಂದ ಒಂದಲ್ಲ ಎರಡಲ್ಲ 11 ಲಕ್ಷ ನಷ್ಟವಾಗಿದೆ. ಇಷ್ಟಾದ್ರೂ ಮನೆ ಮಾಲೀಕಳು ಹೇಳಿದ ಮಾತು ಮಾತ್ರ ಒಪ್ಪುವಂತಿದೆ. 
 

China Accidentally Turns On Cooker Set Fire At Home Eleven Lakh Damage Of Owner roo
Author
First Published Apr 30, 2024, 12:49 PM IST

ಮನೆಯಲ್ಲಿ ಮಕ್ಕಳು ಒಂದು ಗ್ಲಾಸ್ ಒಡೆದ್ರೆ ಪಾಲಕರು ಕಿರುಚಾಡ್ತಾರೆ. ಇನ್ನು ಲಕ್ಷಗಟ್ಟಲೆ ನಷ್ಟವಾಗುವಂತಹ ಕೆಲಸ ಮಾಡಿದ್ರೆ ಕಥೆ ಮುಗಿದಂತೆ. ಕೋಪದಲ್ಲಿ ಮಕ್ಕಳಿಗೆ ಬೈಗುಳದ ಜೊತೆ ಏಟಿನ ಮೇಲೆ ಏಟು ಬಿದ್ದಿರುತ್ತೆ. ಆದ್ರೆ ಇಲ್ಲಿ ತಪ್ಪು ಮಾಡಿದ್ದು ಮಗುವಲ್ಲ ಬೆಕ್ಕು. ಬಹುಶಃ ಮಾತು ಬರದ ಸಾಕು ಪ್ರಾಣಿಗಳ ಮೇಲೆ ಜನರಿಗೆ ಒಂದು ಪಟ್ಟು ಪ್ರೀತಿ ಹೆಚ್ಚು. ಮಕ್ಕಳಿಗಿಂತ ಅವರನ್ನು ಹೆಚ್ಚು ಕಾಳಜಿ, ಪ್ರೀತಿಯಿಂದ ನೋಡಿಕೊಳ್ಳುವ ಜನರು, ಅವು ಏನೇ ಮಾಡಿದ್ರೂ ಕ್ಷಮಿಸುತ್ತವೆ. ಅದಕ್ಕೆ ಈ ಘಟನೆಯನ್ನು ನೀವು ಸಾಕ್ಷ್ಯವಾಗಿ ನೋಡ್ಬಹುದು.

ಮನೆ (House) ಯಲ್ಲಿ ಸಾಕಿದ ಬೆಕ್ಕಿ (Cat) ನ ತಪ್ಪಿನಿಂದಾಗಿ ಮನೆ ಮಾಲೀಕಳಿಗೆ 11 ಲಕ್ಷ ರೂಪಾಯಿ ನಷ್ಟವಾಗಿದೆ. ಕೋಪಗೊಂಡ ಜನರು ಬೆಕ್ಕನ್ನು ಮನೆಯಿಂದ ಹೊರಗೆ ಹಾಗ್ತಿದ್ರೇನೋ ಆದ್ರೆ ಈ ಮಹಿಳೆ ತಪ್ಪು ತನ್ನದೂ ಇದೆ ಎಂಬುದನ್ನು ಒಪ್ಪಿಕೊಂಡಿದ್ದಲ್ಲದೆ ಬೆಕ್ಕಿನ ಜೊತೆ ಸಾಮಾಜಿಕ ಜಾಲತಾಣದಲ್ಲಿ ಲೈವ್ (Live) ಬಂದಿದ್ದಾಳೆ. ಅಷ್ಟಕ್ಕೂ ಬೆಕ್ಕು ಮಾಡಿದ್ದೇನು ಅಂದ್ರಾ?

137 ರೂ ಐಸ್‌ಕ್ರೀಮ್ ಆರ್ಡರ್ ಮಾಡಿ 3,000 ರೂಪಾಯಿ ಪರಿಹಾರ ಪಡೆದ ಬೆಂಗಳೂರಿಗ!

ಘಟನೆ ನೈಋತ್ಯ ಚೀನಾ (China) ದ ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದೆ. ಮನೆ ಮಾಲೀಕಳ ಹೆಸರು ಡ್ಯಾಂಡನ್. ಆಕೆ ಬೆಕ್ಕಿನ ಹೆಸರು ಜಿಂಗೌಡಿಯಾವೋ. ಡ್ಯಾಂಡನ್ ಹಾಗೂ ಆಕೆ ಮಕ್ಕಳು ಮನೆಯಲ್ಲಿ ಬೆಕ್ಕನ್ನು ಮಾತ್ರ ಬಿಟ್ಟು ಹೊರಗೆ ಹೋಗಿದ್ದರು. ಕೆಲ ಸಮಯದ ನಂತ್ರ ಡ್ಯಾಂಡನ್ ಗೆ ಕರೆ ಬಂದಿದೆ. ಆತುರದಲ್ಲಿ ಆಕೆ ಮನೆಗೆ ಓಡಿ ಬಂದಿದ್ದಾಳೆ. ಈ ವೇಳೆ ಮನೆಗೆ ಬೆಂಕಿ ಬಿದ್ದಿರುವುದು ಡ್ಯಾಂಡನ್ ಗೆ ಗೊತ್ತಾಗಿದೆ. ಡ್ಯಾಂಡನ್, ಮಕ್ಕಳು ಹಾಗೂ ಜಿಂಗೌಡಿಯಾವೋ ಸುರಕ್ಷಿತವಾಗಿದ್ದಾರೆ. ಜಿಂಗೌಡಿಯಾವೋ ಇದಕ್ಕೆ ಕಾರಣ. ಬೆಕ್ಕು ಮನೆಯ ಅಡುಗೆ ಮನೆಯಲ್ಲಿ ಆಟವಾಡುತ್ತಿತ್ತು. ಈ ಸಂದರ್ಭದಲ್ಲಿ ಬೆಕ್ಕಿನ ಕಾಲು ಟಚ್ ಆಗಿ ಇಂಡೆಕ್ಷನ್ ಕುಕ್ಕರ್ ಸ್ವಿಚ್ ಆನ್ ಆಗಿದೆ. ಇದ್ರಿಂದ ಮನೆಗೆ ಬೆಂಕಿ ಬಿದ್ದಿದೆ. ಭಯಗೊಂಡ ಬೆಕ್ಕು ಕ್ಯಾಬಿನೆಟ್ ಒಳಗೆ ಅಡಗಿ ಕುಳಿತುಕೊಂಡಿತ್ತು. ಅಗ್ನಿಶಾಮಕ ದಳದವರು ಕ್ಯಾಬಿನೆಟ್‌ನಲ್ಲಿ ಬೆಕ್ಕು ಅಡಗಿರುವುದನ್ನು ಪತ್ತೆ ಮಾಡಿದ್ದರು. ಬೆಕ್ಕಿಗೆ ಯಾವುದೇ ಗಾಯವಾಗಿಲ್ಲ. ಆದರೆ ದೇಹವು ಬೂದಿಯಿಂದ ಮುಚ್ಚಲ್ಪಟ್ಟಿದೆ. ಫ್ಲಾಟ್ ಗೆ ಬಿದ್ದ ಬೆಂಕಿಯಿಂದಾಗಿ ಡ್ಯಾಂಡನ್ ಗೆ 11 ಲಕ್ಷ ರೂಪಾಯಿ ನಷ್ಟವಾಗಿದೆ. ಮನೆಯ ಬಹುತೇಕ ಸಾಮಾನು ಬೆಂಕಿಗೆ ಭಸ್ಮವಾಗಿದೆ.

ಘಟನೆ ನಡೆದು ಒಂದು ವಾರದ ನಂತ್ರ ಡ್ಯಾಂಡನ್ ತನ್ನ ಸಾಕು ಬೆಕ್ಕು ಜಿಂಗೌಡಿಯಾವೋ ಜೊತೆ ಲೈವ್ ಬಂದಿದ್ದಾಳೆ. ಈ ವೇಳೆ ಆಕೆ ಎಲ್ಲ ವಿಷ್ಯವನ್ನು ವಿವರವಾಗಿ ತಿಳಿಸಿದ್ದಾಳೆ. ಬೆಕ್ಕಿಗೆ ಫೈರ್ ಸೇಫ್ಟಿ ಬಗ್ಗೆ ಟ್ರೈನಿಂಗ್ ನೀಡುವಂತೆ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ಈ ಸುದ್ದಿ ವೈರಲ್ ಆಗಿದೆ. 

ಲೈವ್‌ನಲ್ಲಿ  ಡ್ಯಾಂಡನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಮನೆಗೆ ಬೆಂಕಿ ಬೀಳಲು ಬೆಕ್ಕು ಮಾತ್ರ ಕಾರಣವಲ್ಲ. ಅದಕ್ಕೆ ತಾನೇನು ಮಾಡ್ತಿದ್ದೇನೆ ಎಂಬುದು ಗೊತ್ತಿಲ್ಲ. ಆದ್ರೆ ನನಗೆ ಫೈರ್ ಸೇಫ್ಟಿ ಗೊತ್ತಿದೆ. ನನ್ನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಡ್ಯಾಂಡನ್ ಹೇಳಿದ್ದಾಳೆ. ಇಂಡೆಕ್ಷನ್ ಕುಕ್ಕರ್ ಪ್ಲಗ್ ಹಾಕಿಟ್ಟಿದ್ದು ನನ್ನ ತಪ್ಪು. ಇನ್ಮುಂದೆ ಇಂಥ ತಪ್ಪಾಗದಂತೆ ನಾನು ನೋಡಿಕೊಳ್ತೇನೆ ಎಂದಿದ್ದಾಳೆ.

ಚೀನಾದಲ್ಲಿ ರೋಬೋಗಳು ​ ಏನೆಲ್ಲಾ ಮಾಡ್ತಿವೆ ಗೊತ್ತಾ? ಇಂಟರೆಸ್ಟಿಂಗ್​ ಮಾಹಿತಿ ಹೇಳಿದ ಡಾ.ಬ್ರೋ

ಡ್ಯಾಂಡನ್ ಮನೆಯಲ್ಲಿ ನಡೆದ ಘಟನೆ ನಂತ್ರ ಅನೇಕರು ಎಚ್ಚೆತ್ತಿದ್ದಾರೆ. ಮನೆಯಲ್ಲಿ ಪ್ರಾಣಿ ಸಾಕಿರುವ ಜನರು, ಯಾವುದೇ ಕಾರಣಕ್ಕೂ ಪ್ಲಗ್ ಹಾಕಿಟ್ಟು ಹೊರಗೆ ಹೋಗ್ಬಾರದು. ಪ್ರಾಣಿಗಳಿಗೆ ಅದ್ರ ಬಗ್ಗೆ ಜ್ಞಾನ ಇರದ ಕಾರಣ ಯಡವಟ್ಟಾಗುವ ಸಾಧ್ಯತೆ ಹೆಚ್ಚಿರುತ್ತದೆ.  

Latest Videos
Follow Us:
Download App:
  • android
  • ios