Viral News: ಮೊದಲ ಡೇಟಲ್ಲೇ ಪೊಲೀಸ್ ಕರೆಸಿದ ಆಸಾಮಿ; ಯಾಕೆ ಗೊತ್ತಾ?
ರಷ್ಯಾದ ಪೊಲೀಸರು ಹುಡುಗಿಯೊಬ್ಬಳ ಹುಡುಕಾಟ ನಡೆಸುತ್ತಿದ್ದಾರೆ. ಮೊದಲ ಬಾರಿ ಡೇಟಿಂಗ್ ಗೆ ಹೋದಾಗ ಯಡವಟ್ಟು ನಡೆದಿದೆ. ಇದ್ರಿಂದ ಕೋಪಗೊಂಡ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಎಂಬ ವಿವರ ಇಲ್ಲಿದೆ.
ಈಗಿನ ದಿನಗಳಲ್ಲಿ ಡೇಟಿಂಗ್ ಫ್ಯಾಷನ್ ಆಗಿದೆ. ಪರಿಚಯವಾದ ಮೊದಲನೇ ದಿನವೇ ಡೇಟಿಂಗ್ ಗೆ ಹೋಗಲು ಯುವಜನತೆ ಇಷ್ಟಪಡ್ತಾರೆ. ಡೇಟಿಂಗ್ ಹೆಸರಿನಲ್ಲಿ ರೆಸ್ಟೋರೆಂಟ್ ಸುತ್ತುವ ಜನರು ಬಿಲ್ ಮೇಲೆ ಬಿಲ್ ಪಾವತಿ ಮಾಡಿ ಎಂಜಾಯ್ ಮಾಡ್ತಾರೆ. ಕೆಲವೊಮ್ಮೆ ಇದೇ ಬಿಲ್ ಇಬ್ಬರ ಮಧ್ಯೆ ಗಲಾಟೆಗೂ ಕಾರಣವಾಗುತ್ತೆ.
ಡೇಟಿಂಗ್ (Dating) ಗೆ ಹೋದಾಗ ಹುಡುಗರು ಬಿಲ್ (Bill) ಪಾವತಿ ಮಾಡ್ಬೇಕು ಎನ್ನುವುದು ಅಲಿಖಿತ ನಿಯಮ. ಫ್ರೆಂಡ್ಸ್ ಇರಲಿ, ಸಂಬಂಧಿಕರಿರಲಿ ಪುರುಷರ ಜೊತೆ ಹೋದಾಗ, ಹೊಟ್ಟೆ ತುಂಬ ಊಟ ಮಾಡಿ ಬಿಲ್ ಬಂದಾಗ ಪುರುಷರ ಮುಖ ನೋಡ್ತಾರೆ. ಇಲ್ಲವೆ ಪುರುಷರೇ ಬಿಲ್ ತೆಗೆದುಕೊಂಡು ಪಾವತಿ ಮಾಡ್ತಾರೆ.
PERSONALITY TIPS: ಈ ಜನ ಇದ್ದಾರಲ್ಲ? ಭಾರೀ ಜಾಣರು, ಒತ್ತಡವನ್ನು ಸುಲಭವಾಗಿ ಎದುರಿಸ್ತಾರೆ!
ಕೆಲ ಸ್ವಾಭಿಮಾನಿ ಹುಡುಗಿಯರು ತಾವೇ ಬಿಲ್ ಪಾವತಿ ಮಾಡ್ತೇವೆ ಎನ್ನುತ್ತಾರೆ. ಹುಡುಗಿಯರು ಬಿಲ್ ಪಾವತಿ ಮಾಡೋದಕ್ಕೆ ಓಕೆ ಎನ್ನುವವರಿದ್ದಾರೆ. ಇಬ್ಬರಿಗೂ ಸಮಾನತೆ ಸಿಗಬೇಕು, ಯಾವಾಗ್ಲೂ ಪುರುಷರೇ ಬಿಲ್ ಪಾವತಿ ಮಾಡ್ಬೇಕು ಎಂದೇನಿಲ್ಲ. ಹಾಗಾಗಿ ಹುಡುಗಿ ಬಿಲ್ ಪಾವತಿ ಮಾಡಬಹುದು ಇಲ್ಲವೆ ಇಬ್ಬರೂ ಬಿಲ್ ಹಂಚಿಕೊಳ್ಳಬಹುದು ಎನ್ನುತ್ತಾರೆ ಕೆಲವರು.
ಈ ವಿಷ್ಯಕ್ಕೆ ಇಬ್ಬರ ಮಧ್ಯೆ ಸಣ್ಣಪುಟ್ಟ ಗಲಾಟೆ ನಡೆಯುತ್ತಿರುತ್ತದೆ. ಬಿಲ್ ಹಿಡಿದು ಇಬ್ಬರು ಎಳೆದಾಡೋದಿದೆ. ಅಲ್ಲೇ ಸಣ್ಣಪುಟ್ಟ ಗಲಾಟೆ ಮಾಡ್ಕೊಂಡು ಯಾರೋ ಒಬ್ಬರು ಬಿಲ್ ಪಾವತಿ ಮಾಡಿ ರೆಸ್ಟೋರೆಂಟ್ (Restaurant) ನಿಂದ ಹೊರಗೆ ಬರ್ತಾರೆ. ಆದ್ರೆ ರೆಸ್ಟೋರೆಂಟ್ ಬಿಲ್ ವಿಷ್ಯ ಪೊಲೀಸ್ ಠಾಣೆಗೆ ಹೋದ ಘಟನೆಯೊಂದು ಬೆಳಕಿಗೆ ಬಂದಿದೆ. ಅದೂ ಡೇಟಿಂಗ್ ಗೆ ಹೋದ ವ್ಯಕ್ತಿಯೊಬ್ಬ, ಹುಡುಗಿ ವಿರುದ್ಧ ದೂರು ನೀಡಿದ್ದಾನೆ.
ಅದು ಮಾಡೋ ಮೊದಲು ಇದೆಲ್ಲಾ ಗೊತ್ತಿರಲಿ: ಒಮ್ಮೆಗೆ ಎರಡೆರಡು ಕಾಂಡೋಮ್ ಬಳಸಿದ್ರೆ...?
ಹುಡುಗಿ ಬಿಲ್ ಪಾವತಿಸಿಲ್ಲ ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ :
ಘಟನೆ ರಷ್ಯಾದ ಮಾಸ್ಕೋದಲ್ಲಿ ನಡೆದಿದೆ. 28 ವರ್ಷದ ವ್ಯಕ್ತಿಯೊಬ್ಬ ಬಿಲ್ ವಿಭಜಿಸಲು ನಿರಾಕರಿಸಿದ ನಂತರ ಡೇಟಿಂಗ್‌ಗೆ ಹೋದ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದಾನೆ. ಡೇಟಿಂಗ್ ವೇಳೆ ಬಂದ ಸಂಪೂರ್ಣ 16,000 ರೂಬಲ್ ಅಂದ್ರೆ 13,727 ರೂಪಾಯಿ ಬಿಲ್ ಅನ್ನು ಕೊನೆಗೆ ಆತನೇ ಭರಿಸಿದ್ದಾನೆ.
ಕೆಲ ದಿನಗಳ ಹಿಂದೆ ಆನ್ಲೈನ್ ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತಂತೆ. ಇಬ್ಬರು ಒಟ್ಟಿಗೆ ಡೇಟಿಂಗ್ ಮಾಡಲು ನಿರ್ಧರಿಸಿದ್ದರಂತೆ. ಮಾಸ್ಕೋದ ಮೀರಾ ಅವೆನ್ಯೂದ ಕೆಫೆಗೆ ಹೋಗಲು ಇಬ್ಬರು ತೀರ್ಮಾನ ಕೈಗೊಂಡಿದ್ದರಂತೆ. ನಿಗದಿಯಂತೆ ಇಬ್ಬರು ರೆಸ್ಟೋರೆಂಟ್ ಗೆ ಹೋಗಿದ್ದಾರೆ. ಸಿಬ್ಬಂದಿ ಬರುವವರೆಗೆ ಎಲ್ಲವೂ ಸರಿ ಇತ್ತು. ಆದ್ರೆ ಬಿಲ್ ಬಂದ್ಮೇಲೆ ಪರಿಸ್ಥಿತಿ ಬದಲಾಗಿದೆ. 13,727 ರೂಪಾಯಿ ಬಿಲ್ ಬಂದಾಗ ವ್ಯಕ್ತಿ ಬಿಲ್ ಹಂಚಿಕೊಳ್ಳುವಂತೆ ಹುಡುಗಿಗೆ ಹೇಳಿದ್ದಾನೆ. ಆದ್ರೆ ಹುಡುಗಿ ಇದನ್ನು ನಿರಾಕರಿಸಿದ್ದಾಳೆ. ಹುಡುಗ ಹೆಚ್ಚು ಆಹಾರ ಮತ್ತು ಪಾನೀಯ ಆರ್ಡರ್ ಮಾಡಿದ್ದಾನೆ, ಆತನೇ ಹೆಚ್ಚು ತಿಂದಿದ್ದಾನೆ ಎಂಬ ಆರೋಪ ಮಾಡಿ ಹುಡುಗಿ ಹಣ ನೀಡೋದನ್ನು ನಿರಾಕರಿಸಿದ್ದಾಳೆ.
ಇದೇ ವಿಷ್ಯಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಕೆಲ ಕಾಲ ವಾದ – ವಿವಾದ ನಡೆದಿದೆ. ನಂತ್ರ ಹುಡುಗಿ ಅಲ್ಲಿಂದ ಹೊರಟು ಹೋಗಿದ್ದಾಳೆ. ತನ್ನೊಬ್ಬನ ಮೇಲೆ ಬಿಲ್ ಹೊರೆ ಹೊರಿಸಿ ಹುಡುಗಿ ಓಡಿ ಹೋಗಿದ್ದಾಳೆಂದು ಯುವಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ತನಗೆ ನ್ಯಾಯಬೇಕು ಎಂದು ಹುಡುಗ ಪೊಲೀಸರಿಗೆ ಮನವಿ ಸಲ್ಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಗಿಯ ಹುಡುಕಾಟ ನಡೆಸುತ್ತಿದ್ದಾರೆ.ಸಾಮಾಜಿಕ ಜಾಲತಾಣದಲ್ಲೂ ಈ ವಿಷ್ಯ ವೈರಲ್ ಆಗಿದೆ. ಜನರು, ಹುಡುಗಿ ಮಾಡಿದ್ದು ಎಷ್ಟು ಸರಿ, ಹುಡುಗ ಮಾಡಿದ್ದು ಎಷ್ಟು ಸರಿ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.