ಬಿಜೆಪಿಗರೇ ಸರ್ಕಾರಕ್ಕೆ ಆದಾಯದ ಮೂಲ ಹುಡುಕಿಕೊಡಲಿ: ಡಿಕೆಶಿ
ವಿದೇಶಿ ಕಂಪನಿಗಳು ಬೇಡ, ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿವರಿಗೆ ಸಮಯ ಸಿಗುತ್ತದೆ. ಅವರೇ ಆದಾಯ ಮೂಲಗುರುತಿಸಿ ಸರ್ಕಾರಕ್ಕೆ ಮಾಹಿತಿ ನೀಡಿದರೆ ಬಹಳ ಒಳ್ಳೆಯದು ಎಂದ ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು(ಜೂ.22): ವಿದೇಶಿ ಕಂಪನಿಗಳು ಬೇಡ, ಬಿಜೆಪಿಯವರೇ ಸರ್ಕಾರಕ್ಕೆ ಆದಾಯದ ಮೂಲ ಗುರುತಿಸಿ ಕೊಡುವ ಕೆಲಸ ಮಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಆದಾಯ ಮೂಲ ಗುರುತಿಸಲು ವಿದೇಶ ಕಂಪನಿಗೆ ಟೆಂಡರ್ ನೀಡಿರುವ ಬಗ್ಗೆ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ವಿದೇಶಿ ಕಂಪನಿಗಳು ಬೇಡ, ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿವರಿಗೆ ಸಮಯ ಸಿಗುತ್ತದೆ. ಅವರೇ ಆದಾಯ ಮೂಲಗುರುತಿಸಿ ಸರ್ಕಾರಕ್ಕೆ ಮಾಹಿತಿ ನೀಡಿದರೆ ಬಹಳ ಒಳ್ಳೆಯದು ಎಂದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ ಸ್ಪರ್ಧೆ ಮಾಡೊಲ್ಲ: ಜಿಟಿ ದೇವೇಗೌಡ ಅಚ್ಚರಿ ಹೇಳಿಕೆ!
ಇನ್ನು ಚನ್ನಪಟ್ಟಣ ಭೇಟಿ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಟೀಕೆಯನ್ನು ಬಹಳಸಂತೋಷದಿಂದ ಸ್ವೀಕರಿಸುತ್ತೇನೆ ಎಂದರು.