ಸುಮಾರು 22 ವರ್ಷಗಳ ನನ್ನ ದಾಂಪತ್ಯ ಡಿವೋರ್ಸ್‌ನಲ್ಲಿ ಕೊನೆಯಾಗಿತ್ತು. ನಾನು ಭಾರತೀಯ ಮಹಿಳೆ. ಒಂಟಿತನ, ಮಕ್ಕಳ ಜವಾಬ್ದಾರಿಯ ಜೊತೆಗೆ ಇನ್‌ ಸೆಕ್ಯುರಿಟಿ ಫೀಲ್‌ ನನ್ನನ್ನು ಕಂಗೆಡಿಸಿತ್ತು. ಪರಸ್ಪರ ಇಬ್ಬರ ಒಪ್ಪಿಗೆಯಲ್ಲೇ ನಾವು ಡಿವೋರ್ಸ್‌ಗೆ ಮುಂದಾಗಿದ್ದಾದರೂ ಬಂಧುಗಳು ನನ್ನ ಬಗ್ಗೆ ಏನೆಲ್ಲ ಯೋಚಿಸಬಹುದು ಅನ್ನೋದೂ ಕಂಗೆಡಿಸಿತ್ತು. ಊಟ, ತಿಂಡಿ ಸೇರುತ್ತಿರಲಿಲ್ಲ. ದಿನಗಟ್ಟಲೆ ಖಾಲಿ ಹೊಟ್ಟೆಯಲ್ಲೇ ಇರುತ್ತಿದ್ದೆ. ರಾತ್ರಿ ನಿದ್ದೆಯೂ ಬರುತ್ತಿರಲಿಲ್ಲ.

ನಾನು ಡಿಪ್ರೆಶನ್‌ನಿಂದ ಬಳಲುವಂತಾಯ್ತು. ಈ ಸಮಯದಲ್ಲಿ ನಾನು 13 ಕೆಜಿ ತೂಕ ಕಳೆದುಕೊಂಡಿದ್ದೆ. ಇನ್ನೂ ಸೆಟಲ್‌ ಆಗದ ಮಕ್ಕಳ ಜವಾಬ್ದಾರಿ ಪೂರೈಸಲು, ಜೀವನ ನಿರ್ವಹಣೆಗೆ ಸಿಕ್ಕ ಸಿಕ್ಕ ಕೆಲಸಗಳನ್ನೆಲ್ಲ ಮಾಡುತ್ತಿದ್ದೆ. ಇಂಥಾ ಸುದೀರ್ಘ ಯಾತನೆಗಳ ಬಳಿಕ ಒಮ್ಮೆ ಅನಿಸಿತು, ಅರೆ, ನಾನ್ಯಾಕೆ ಹೀಗೆಲ್ಲ ಆಡುತ್ತಿದ್ದೇನೆ.. ನೋವಿನ ದಾಂಪತ್ಯದಲ್ಲಿ ಪ್ರತೀ ದಿನ ಅಳುತ್ತಾ ಬದುಕೋದರಲ್ಲಿ ಏನು ಅರ್ಥ ಇದೆ.. ಈಗ ನಾನು ನನಗೆ ಬೇಕಾದ ಹಾಗೆ ಬದುಕೋದಕ್ಕೆ ಅವಕಾಶ ಇದೆ. ಚೆಂದಕ್ಕೆ ಬದುಕೋದು ಬಿಟ್ಟು ನಾನ್ಯಾಕೆ ಈ ಥರ ನನ್ನನ್ನು ನಾನೇ ಹಿಂಸಿಸುತ್ತಿದ್ದೇನೆ...

ಹೀಗೊಂದು ಜ್ಞಾನೋದಯ ಆದ ಮೇಲೆ ನನ್ನ ಲೈಫು ನಿಜಕ್ಕೂ ಬದಲಾಯ್ತು, ನಾನು ನನಗೋಸ್ಕರ ಬದುಕಲು ಶುರು ಮಾಡಿದೆ. ಕೆಲಸದ ಜೊತೆಗೇ ಮಾಸ್ಟರ್ಸ್‌ ಡಿಗ್ರಿಗೆ ಅಪ್ಲೈ ಮಾಡಿದೆ. ಹಠದಿಂದ ಓದಿದೆ. ಉತ್ತಮ ಅಂಕಗಳೊಂದಿಗೆ ಪಾಸಾದೆ. ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಸಿಕ್ಕಿತು. ನನ್ನ ಒಂಟಿತನ ಹೋಗಲಾಡಿಸಲು ಮಗಳು ಡೇಟಿಂಗ್ ಆಪ್‌ನಲ್ಲಿ ಹೆಸರು ಸೇರಿಸಲು ಹೇಳಿದಳು. ಆದರೆ ನನಗೆ ಮತ್ತೆ ಸಂಸಾರದ ಉಸಾಬರಿ ಬೇಕಿರಲಿಲ್ಲ. ಆದರೆ ಒಬ್ಬ ಒಳ್ಳೆಯ ಗೆಳೆಯನ ಹಪಹಪಿ ಇದ್ದೇ ಇತ್ತು. ಕೊನೆಗೂ ಮಗಳ ಒತ್ತಾಯಕ್ಕೆ ಮಣಿದು ಓಕೆ ಕ್ಯುಪಿಡ್‌ನಲ್ಲಿ ನನ್ನ ಬಯೋಡಾಟ ಅಪ್ಲೋಡ್ ಮಾಡಿದೆ. 

ಪುರುಷರು ಹೀಗಿದ್ದರೆ ಮಹಿಳೆಯರು ಆಕರ್ಷಿತರಾಗೋದು ಗ್ಯಾರಂಟಿ! ...

'ನನ್ನ ಬಯೋಗ್ರಫಿ ಬಹಳ ದೊಡ್ಡದು, ಅದನ್ನೋದುತ್ತಾ ನೀವೊಂದು ಕಪ್ ಕಾಫಿ ಕುಡಿದು ಮುಗಿಸಬಹುದು' ಅನ್ನೋ ಲೈನೂ ಸೇರಿಸಿದ್ದೆ. ಅದಕ್ಕೆ ಒಂದು ಪ್ರತಿಕ್ರಿಯೆ ಬಂತು, ಟಾಮ್ ಅನ್ನೋರಿಂದ. 'ನಿನ್ನ ಪ್ರೊಫೈಲ್ ತುಂಬ ಇಂಟೆರೆಸ್ಟಿಂಗ್, ಅದನ್ನೋದುತ್ತಾ ನನ್ನ ಕಾಫಿ ತಣ್ಣಗಾಗಿ ಹೋಯ್ತು'. 

ಟಾಮ್ ಹಾಗೂ ನನ್ನ ನಡುವೆ ಹೀಗೆ ಮಾತುಕತೆ ಶುರುವಾಯ್ತು. ನಮ್ಮ ಚಾಟ್ ಐದು ತಿಂಗಳವರೆಗೂ ವಿಸ್ತರಿಸಿದಾಗ 'ನಾವ್ಯಾಕೆ ಸ್ಕೈಪ್‌ನಲ್ಲಿ ಸಿಗಬಾರ್ದು' ಅಂತ ನಾನೇ ಕೇಳಿಕೊಂಡೆ. ಆತ ಒಪ್ಪಿದ. ಟಾಮ್ ಸಹ ಡಿವೋರ್ಸಿ. ನಾವಿಬ್ಬರೂ ಬಹಳ ಬೇಗ ಕನೆಕ್ಟ್‌ ಆದೆವು. 

ಇದಾಗಿ ನಾನು ಕ್ಯಾಲಿಫೊರ್ನಿಯಾಗೆ ಹೋಗಬೇಕಾಯ್ತು. ಟಾಮ್ ಭರ್ತಿ 20 ಗಂಟೆ ಡ್ರೈವ್ ಮಾಡಿ ಬಂದು ನನ್ನನ್ನು ಮೀಟ್ ಆದ. ಅದೇ ನಮ್ಮ ಮೊದಲ ಭೇಟಿ.. ಹಳೇ ಸ್ನೇಹಿತರನ್ನು ಭೇಟಿ ಮಾಡಿದಂಥಾ ಫೀಲ್ ನನಗೆ. 

ಲೈಂಗಿಕ ಸಮಸ್ಯೆ ಮುಚ್ಚಿಟ್ಟಷ್ಟೂ ದಾಂಪತ್ಯ ಬದುಕಿಗೆ ಹಾನಿ ...

ಆದರೂ ನಮ್ಮಿಬ್ಬರ ನಡುವೆ ಪ್ರೇಮ ಕಿಡಿ ಹೊತ್ತಿಕೊಂಡಿದ್ದು ಸುಳ್ಳಲ್ಲ. ಆದರೂ ನಾವದನ್ನು ಹೆಚ್ಚು ಫೋಕಸ್ ಮಾಡಲಿಲ್ಲ. ಇದಾಗಿ ಒಂದು ವರ್ಷದ ಬಳಿಕ ನಾನು ಈ ವಿಚಾರವನ್ನು ಮಕ್ಕಳಲ್ಲಿ ಹೇಳಿದೆ. 'ಆತ ನಿನ್ನನ್ನು ಕೇರ್ ಮಾಡ್ತಾರಾ, ನೀನು ಅವರ ಜೊತೆಗೆ ಖುಷಿಯಾಗಿರ್ತೀಯಾ' ಅಂತೆಲ್ಲ ಕ್ರಾಸ್ ಚೆಕ್ ಮಾಡಿ ಗ್ರೀನ್ ಸಿಗ್ನಲ್ ಕೊಟ್ರು. 

ಅದು ನನ್ನ 57ನೇ ವಯಸ್ಸು. ಟಾಮ್ ನಾನೂ ಕೆಫೆಯಲ್ಲಿ ಕಾಫಿ ಹೀರುತ್ತಿದ್ದೆವು. ಟಾಮ್ ತಡವರಿಸುತ್ತಾ ಹೇಳಿದ, 'ನನ್ನ ಫ್ರೆಂಡ್ ಕೇಳ್ತಿದ್ದಳು, ನೀವಿಬ್ರೂ ಲವ್ ಮಾಡ್ತೀರಾ ಅಂತ. ನಾನು ಅವಳಿಗೆ ಹೌದು ಅಂದೆ'. ನನಗೇನೂ ತೋಚಲಿಲ್ಲ. 'ಹೇ, ನಿನ್ನಲ್ಲಿ ಆ ಫೀಲ್ ಬರೋ ತನಕ ಸುಮ್ಮನಿದ್ದುಬಿಡು. ಗಡಿಬಿಡಿ ಮಾಡಬೇಡ..' ಟಾಮ್ ಸಾವಧಾನದಿಂದ ಹೇಳಿದ.

#Feelfree: ನಾನು ಉಭಯಲಿಂಗಕಾಮಿಯಾ? ಇದು ತಪ್ಪಾ? ...

ಇದಾಗಿ ಎರಡು ವಾರ ಕಳೆದಿತ್ತು, ನಾನು ಟಾಮ್‌ನನ್ನು ಪ್ರೀತಿಸುತ್ತಿರುವ ಫೀಲ್ ಬಂತು! ಎಸ್, 57ನೇ ವಯಸ್ಸಲ್ಲಿ ನಾನು ಲವ್ವಲ್ಲಿ ಬಿದ್ದಿದ್ದೆ. 

ನಾವಿಬ್ಬರೂ ಬಹಳ ಬಹಳ ಸುತ್ತಾಡಿದೆವು. ಎಲ್ಲೆಲ್ಲೋ ಟ್ರಾವೆಲ್ ಮಾಡಿದೆವು. ಈ ವಯಸ್ಸಲ್ಲಿ ಮೊದಲ ಬಾರಿ ನಾನು ಟಾಮ್ ಜೊತೆಗೆ ಸ್ಕೀಯಿಂಗ್ ಮಾಡಿದೆ. ನಾವಿಬ್ಬರೂ ಜೊತೆಯಾಗಿ ಸ್ಕ್ಯೂಬಾ ಡೈವಿಂಗ್ ಮಾಡಿದೆವು, ಬೆಟ್ಟ ಹತ್ತಿದೆವು. ಏನೇನೆಲ್ಲ ಸಾಹಸ ಮಾಡಿದೆವು. 

ಆತ ನನ್ನ ಪಿಎಚ್‌ಡಿಗೂ ಸಹಾಯ ಮಾಡಿದ.  ಬದುಕನ್ನು ರೀಸ್ಟಾರ್ಟ್ ಮಾಡಿಕೊಳ್ಳೋದಕ್ಕೆ ಇಂಥಾ ವಯಸ್ಸೇ ಆಗಬೇಕು ಅಂತ ಖಂಡಿತಾ ಇಲ್ಲ. ಯಾವ ವಯಸ್ಸಲ್ಲೂ ನೀವು ಮಜವಾಗಿ ಲೈಫ್‌ನ ಎನ್‌ಜಾಯ್ ಮಾಡಬಹುದು. ಸಮಸ್ಯೆಗೊಂದು ಪರಿಹಾರ ಕಂಡುಕೊಂಡು ಬದುಕನ್ನು ಖುಷಿಯಾಗಿ ಕಳೆಯೋಣ ಅನ್ನೋದು ನನ್ನ ಬಲವಾದ ಆಶಯ.