ರಾಮ ಮಂದಿರ ರಾಷ್ಟ್ರ ಮಂದಿರವಾಗಲಿ: ಶ್ರೀರಾಮುಲು
ಅಯೋಧ್ಯೆಯ ರಾಮಮಂದಿರ ರಾಷ್ಟ್ರ ಮಂದಿರ ಆಗಬೇಕು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಶನಿವಾರ ಬಂದ ಅಯೋಧ್ಯೆ ತೀರ್ಪು ಯಾರದೋ ಒಬ್ಬರ ಗೆಲುವು ಅಲ್ಲ, ಭಾರತದ ಗೆಲುವು ಎಂದಿದ್ದಾರೆ.
ರಾಯಚೂರು(ನ.10): ಅಯೋಧ್ಯೆಯ ರಾಮಮಂದಿರ ರಾಷ್ಟ್ರ ಮಂದಿರ ಆಗಬೇಕು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಶನಿವಾರ ಬಂದ ಅಯೋಧ್ಯೆ ತೀರ್ಪು ಯಾರದೋ ಒಬ್ಬರ ಗೆಲುವು ಅಲ್ಲ, ಭಾರತದ ಗೆಲುವು ಎಂದಿದ್ದಾರೆ.
ಭಾರತದಲ್ಲಿ ರಾಮ ಮಂದಿರದ ನಿರ್ಮಾಣದ ಬಗ್ಗೆ ಬಹಳಬೇಡಿಕೆ ಇತ್ತು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಒಂದು ಜಾತಿ ಗೆಲುವು ಅಲ್ಲ. ಇದೂ ಭಾರತದ ಗೆಲುವು ಆಗುತ್ತೆ, ಆಗಿದೆ. ರಾಮಮಂದಿರ ರಾಷ್ಟ್ರ ಮಂದಿರ ಆಗಬೇಕು ಎಂದಿದ್ದಾರೆ.
ಅಯೋಧ್ಯೆ ಆದೇಶ: ಕನ್ನಡ ಪತ್ರಿಕೆಗಳ ಮುಖಪುಟವೇ ವಿಶೇಷ!
ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಬೆಂಬಲ ಸೂಚಿಸಿದ ಸಚಿವ ಶ್ರೀರಾಮುಲು ರಾಮ ಮಂದಿರ ರಾಷ್ಟ್ರಮಂದಿರ ಆಗಬೇಕು. ರಾಮ ಒಂದು ಜಾತಿಗೆ ಸೀಮಿತವಲ್ಲ. ಬೇರೆ ಬೇರೆ ರಾಷ್ಟ್ರಗಳಲ್ಲಿ ರಾಮನನ್ನು ದೇವರೆಂದು ಪೂಜಿಸುತ್ತಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ. ರಾಮನನ್ನು ಎಲ್ಲಾ ಜಾತಿಯವರು ಪೂಜಿಸುತ್ತಾರೆ. ಹೀಗಾಗಿ ರಾಮ ಮಂದಿರ ರಾಷ್ಟ್ರ ಮಂದಿರವಾದರೆ ಒಳ್ಳೆಯದ್ದು ಸಚಿವ ಶ್ರೀರಾಮುಲು ಹೇಳಿದ್ದಾರೆ.
7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಶನಿವಾರ ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
‘ನೆರೆಯನ್ನು ಸರಿಯಾಗಿ ನಿರ್ವಹಣೆ ಮಾಡಿದ್ದು ಯಡಿಯೂರಪ್ಪ ಮಾತ್ರ’