Asianet Suvarna News Asianet Suvarna News

Raichur: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ

ಓದಲು ಇಷ್ಟವಿಲ್ಲದ ಕಾರಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 15 ವರ್ಷದ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ
 

raichur Kittur Rani Chennamma Residential School student commits Self Death san
Author
First Published Aug 24, 2023, 9:34 PM IST


ರಾಯಚೂರು (ಆ.24): ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗದ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಬಿ.ಆರ್.ಗುಂಡಾ ಗ್ರಾಮ ವಿದ್ಯಾರ್ಥಿನಿಯಾಗಿದ್ದ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡ ಬಾಲಿಕ. 15 ವರ್ಷದ ಪವಿತ್ರಾ,  ದೇವದುರ್ಗ ತಾಲೂಕಿನ ಬಿ.ಆರ್. ಗುಂಡಾ ಗ್ರಾಮದ ವಿದ್ಯಾರ್ಥಿನಿ. 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ವಸತಿ ಶಾಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಓದಲು ಇಷ್ಟವಿಲ್ಲದೆ ಶಾಲೆ ತಪ್ಪಿಸಿ ಈಕೆ ಮನೆಗೆ ಬರುತ್ತಿದ್ದಳು ಎಂದು ಹೇಳಲಾಗಿದೆ. ಮನೆಯಲ್ಲಿ ಬುದ್ದಿ ಹೇಳಿ ಗುರುವಾರ ವಸತಿ ಶಾಲೆಗೆ ಬಿಟ್ಟು ಪಾಲಕರು ಊರಿಗೆ ಹೋಗಿದ್ದರು. ಗುರುವಾರ ವಸತಿ ಶಾಲೆಗೆ ಬಂದರೂ ತರಗತಿಗೆ ಪವಿತ್ರಾ ಗೈರು ಹಾಜರಿಯಾಗಿದ್ದರು. ಎಲ್ಲಾ ವಿದ್ಯಾರ್ಥಿಗಳು ತರಗತಿಗೆ ಹೋದಾಗ ಕೋಣೆಯಲ್ಲಿ ಫ್ಯಾನ್‌ಗೆ ವೇಲ್ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದ್ರ​ಯಾ​ನ-3 ಯಶಸ್ವಿಗೆ ಮಂತ್ರಾ​ಲ​ಯದ ಸುಬು​ಧೇಂದ್ರ ತೀರ್ಥ​ರು ಹರ್ಷ

ಸ್ಥಳಕ್ಕೆ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಆದರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

22 ದಿನಗಳಲ್ಲೇ ಭರ್ತಿಯಾದ ಮಂತ್ರಾಲಯ ರಾಯರ ಮಠದ ಹುಂಡಿಗಳು: ಪ್ರತಿನಿತ್ಯ 10 ಲಕ್ಷ ರೂ. ಕಾಣಿಕೆ

Follow Us:
Download App:
  • android
  • ios