Asianet Suvarna News Asianet Suvarna News

‘ಯಡಿಯೂರಪ್ಪ ಅವರಲ್ಲಿ ಅಂಬೇಡ್ಕರ್ ಬಸವಣ್ಣರನ್ನು ಕಾಣುವೆ’

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಲ್ಲಿ ನಾನು ಅಂಬೇಡ್ಕರ್, ಬಸವಣ್ಣರಂತ ಮೇರು ವ್ಯಕ್ತಿಗಳನ್ನು ನೋಡುತ್ತಿದ್ದೇನೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. 

Minister Sriramulu Praises CM BS Yediyurappa
Author
Bengaluru, First Published Nov 2, 2019, 8:33 AM IST
  • Facebook
  • Twitter
  • Whatsapp

ರಾಯಚೂರು [ನ.02]: ಯಡಿಯೂರಪ್ಪ ಬಡವರಿಗೆ ಮಿಡಿಯುವ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿ ರುವ ಸಚಿವ ಶ್ರೀರಾಮುಲು, ನಾನು ಅಂಬೇಡ್ಕರ್, ಬಸವಣ್ಣ ನನ್ನು ನೋಡಿಲ್ಲ. ಬದಲಿಗೆ ಅವರನ್ನೆಲ್ಲ ಯಡಿಯೂರಪ್ಪನ ವರಲ್ಲಿ ಕಾಣುತ್ತಿದ್ದೇನೆ ಎಂದು ಬಣ್ಣಿಸಿದ್ದಾರೆ. 

ಹಿಂದಿನ ಸರ್ಕಾರ ಮಕ್ಕಳ ವಿಚಾರದಲ್ಲೂ ರಾಜಕೀಯ ಮಾಡಿತ್ತು. ಆದರೆ, ನಮ್ಮ ಸರ್ಕಾರ ಅಂಥ ತಪ್ಪು ಮಾಡುವುದಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಗೆ ಇಂದಿನಿಂದ ಬಿಸಿಯೂಟ ಆರಂಭಿಸಲಿದೆ ಎಂದು ಶ್ರೀರಾಮುಲು ತಿಳಿಸಿದರು.

ಡಿಕೆಶಿ ಬಗ್ಗೆ ರಾಮುಲು ಸಾಫ್ಟ್ ಕಾರ್ನರ್, ಕಾರಣ ಏನಂತೆ ಬ್ರದರ್!... 

ಹಿಂದಿನ ಸಿದ್ದರಾಮಯ್ಯರ ಸರ್ಕಾರ ಮಕ್ಕಳ ಊಟದಲ್ಲೂ ರಾಜಕೀಯ ಮಾಡಿತ್ತು. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಮೇಲ್ನೋಟಕ್ಕೆ ಹಾಗೆ ತೋರಿಸಿಕೊಂಡರು ಅವರು ಕೋಟ್ಯಂತರ ಮೌಲ್ಯದ ವಾಚ್ ಕಟ್ಟಿಕೊಳ್ಳುವ ಮನಸ್ಥಿತಿ ಉಳ್ಳವರಾಗಿದ್ದಾರೆ ಎಂದು ಟೀಕಿಸಿದರು.

Follow Us:
Download App:
  • android
  • ios