ರಾಯಚೂರು[ನ.6]: ಮಾಹಿತಿ ಇಲ್ಲದೆ ಸಭೆಗೆ ಹಾಜರಾದ ಅಧಿಕಾರಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಗರದಲ್ಲಿ ಬುಧವಾರ ನಡೆದಿದೆ. 

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆ ಮಾಹಿತಿ ಇಲ್ಲದ ಅಧಿಕಾರಿಗಳ ಮೇಲೇ ಗರಂ ಆದ ಸಚಿವರು ನೀವು ಜಡ್ಡು ಹಿಡಿದಿದ್ದಿರಿ. ಕನಿಷ್ಠ ಮಾಹಿತಿ ಇಲ್ಲದ ಇವರಿಗೆ ಒಂದು ಹಾಸಿಗೆ ಹಾಕಿಕೊಡಿ ಮಲಗಲಿ ಎಂದು ಹೇಳಿದ್ದಾರೆ.  ಪ್ರಾಚ್ಯವಸ್ತು ಇಲಾಖೆ ಅಧಿಕಾರಿ ವೆಂಕಟೇಶ್ ಅವರಿಗೆ ಶೋಕಾಸ್ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಮಾತು ಕೇಳದಕ್ಕೆ ಸಚಿವ ಸಿ.ಟಿ.ರವಿ ಅವರ ಬಳಿ ರಾಯಚೂರು ನಗರ ಶಾಸಕ ಡಾ: ಶಿವರಾಜ್ ಪಾಟೀಲ್ ಅವರು ಅಸಹಾಯಕತೆ ತೋಡಿಕೊಂಡಿದ್ದಾರೆ.  ತಮ್ಮಿಷ್ಟದಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ‌. ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲವೆಂದು ಸಚಿವರಿಗೆ ದೂರು ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೇ ವೇಳೆ ಪ್ರವಾಸೋದ್ಯಮ ಜಿಲ್ಲಾ ಅಧಿಕಾರಿ ಕಾಳೆ ವಿರುದ್ಧ ಶಾಸಕ ಶಿವರಾಜ್ ಪಾಟೀಲ್ ಫುಲ್ ಗರಂ ಆಗಿದ್ದರು. ಸಭೆಯಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ್, ಶಾಸಕ ರಾಜುಗೌಡ, ಶಾಸಕ ಬಸನಗೌಡ ದದ್ದಲ್, ಶಿವರಾಜ್ ಪಾಟೀಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.