Karnataka Village Accountant Recruitment 2022: 355 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ

  • ಖಾಲಿ ಇರುವ  ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕಂದಾಯ ಇಲಾಖೆ
  • ಅಕ್ಟೋಬರ್ 25ರಂದು ನೇಮಕಾತಿ ಅಧಿಸೂಚನೆ, ಸದ್ಯದಲ್ಲೇ ಕೊನೆಯ ದಿನಾಂಕ ಪ್ರಕಟ
  • ಒಟ್ಟು 355 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ಖಾಲಿ
Karnataka Village Accountant Recruitment notification Apply for 355 VA vacancies gow

ಬೆಂಗಳೂರು(ಜ.13): ಕರ್ನಾಟಕ ಕಂದಾಯ ಇಲಾಖೆಯು (Karnataka Revenue Department)ರಾಜ್ಯದಲ್ಲಿ ಖಾಲಿ ಇರುವ  ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 355 ಹುದ್ದೆಗಳು ಖಾಲಿ ಇದ್ದು, ಅಕ್ಟೋಬರ್ 25ರಂದು ಕರ್ನಾಟಕ ಗ್ರಾಮ ಲೆಕ್ಕಿಗ(Village Accountant) ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸದ್ಯದಲ್ಲೇ ಇಲಾಖೆ ಪ್ರಕಟಿಸಲಿದೆ.  ಖಾಲಿ ಇರುವ ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ revenue.kar.nic.in ಗೆ ಭೇಟಿ ನೀಡಲು ಕೋರಲಾಗಿದೆ.

ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಗ್ರಾಮ ಲೆಕ್ಕಿಗ ನೇರ ನೇಮಕಾತಿಗೆ ಆದೇಶ ಹೊರಡಿಸಿರುವ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, " ಆಯಾ ಜಿಲ್ಲೆಗಳಲ್ಲಿ ಮಂಜೂರಾದ ಗ್ರಾಮಲೆಕ್ಕಿಗರ ಹುದ್ದೆಯಲ್ಲಿ ಶೇಕಡ 30ಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿ ಇದ್ದಲ್ಲಿ, ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿ. ಅಂತಿಮ ನೇಮಕಾತಿ ಆದೇಶವನ್ನು ಹೊರಡಿಸುವ ಮುನ್ನ ಆಯವ್ಯಯದಲ್ಲಿ ಅನುದಾನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕಡ್ಡಾಯವಾಗಿ ಸರ್ಕಾರದ ಅನುಮತಿಯನ್ನು ಪಡೆಯಲು ಅಗತ್ಯ ಕ್ರಮ ವಹಿಸಿ, ಎಂಸು ಜನವರಿ 1ರಂದು ಸೂಚನೆ ನೀಡಲಾಗಿದೆ.

SECR Recruitment 2022: ಪ್ಯಾರಾ ಮೆಡಿಕಲ್‌ನ ವಿವಿಧ ಹುದ್ದೆಗಳಿಗೆ ಆಗ್ನೇಯ ಮಧ್ಯ ರೈಲ್ವೆ ಸಂದರ್ಶನ

ಒಟ್ಟು 355 ಗ್ರಾಮಲೆಕ್ಕಾಧಿಕಾರಿ ಹುದ್ದೆಗಳ ವಿವರ:
ಚಾಮರಾಜನಗರ- 40
ಬೆಂಗಳೂರು-11
ಉಡುಪಿ-18
ರಾಮನಗರ-1
ಚಿತ್ರದುರ್ಗ-59
ಶಿವಮೊಗ್ಗ-69
ಹಾಸನ- 34
ಮಂಡ್ಯ-54
ರಾಯಚೂರು-51
ದಾವಣಗೆರೆ-18

ಶೈಕ್ಷಣಿಕ ವಿದ್ಯಾರ್ಹತೆ: ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕರ್ನಾಟಕ ಕಂದಾಯ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ದ್ವಿತೀಯ ಪಿಯುಸಿ/ಪದವಿ ಪೂರ್ಣಗೊಳಿಸಿರಬೇಕು.

Shivamogga Anganwadi Recruitment 2022: ಶಿವಮೊಗ್ಗದಲ್ಲಿ 88 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ

ವಯೋಮಿತಿ: ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು 18-35 ವರ್ಷದೊಳಗಿರಬೇಕು. 2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷಗಳು, SC, ST (P) ಮತ್ತು ST (H) ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು PwD ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ: ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ 2A, 2B, 3A, 3B ಅಭ್ಯರ್ಥಿಗಳು 200 ರೂ. ಮತ್ತು SC, ST ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.

RCF Recruitment 2022:10th,12th ಐಟಿಐ ಆದವರಿಗೆ ರೈಲು ಕೋಚ್ ಫ್ಯಾಕ್ಟರಿಯಲ್ಲಿ ಉದ್ಯೋಗವಕಾಶ

ಆಯ್ಕೆ ಪ್ರಕ್ರಿಯೆ ಮತ್ತು ವೇತನ: ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಮಾಸಿಕ 21,400 ರಿಂದ 42,000ರೂ ವೇತನ ದೊರೆಯಲಿದೆ. ಉದ್ಯೋಗ ಪಡೆದವರು ಕರ್ನಾಟದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಲು ತಯಾರಿರಬೇಕು.

ಪ್ರಸಾರ ಭಾರತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.20 ಕೊನೆ ದಿನ: ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿ Prasar Bharathi) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಸಾರ ಭಾರತಿಯ ಅಧಿಕೃತ ವೆಬ್ಸೈಟ್ prasarbharati.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಪ್ರಸಾರ ಭಾರತಿಯು ಡಿಡಿ-ಕಿಸಾನ್ ನ  ಪ್ರೊಡಕ್ಷನ್ ಎಕ್ಸಿಕ್ಯೂಟಿವ್ (Production Executive) ಮತ್ತು ಸೀನಿಯರ್ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ( Senior Production Exicutive) ಹುದ್ದೆಗಳಿಗೆ ಅರ್ಹ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. 

Latest Videos
Follow Us:
Download App:
  • android
  • ios