ಭಾರತೀಯನೊಬ್ಬ ವಾರದಲ್ಲಿ ಸರಾಸರಿ 40 ಗಂಟೆಗಳನ್ನು ಕಚೇರಿಯಲ್ಲಿ ಕಳೆಯುತ್ತಾನೆ. ಹೀಗಾಗಿ, ಈ ಸಮಯವನ್ನು ಎಂಜಾಯ್ ಮಾಡಲು ಹಾಗೂ ಹೆಚ್ಚು ಪ್ರಾಡಕ್ಟಿವ್ ಆಗಿಸಲು ಕಚೇರಿಯಲ್ಲಿ ಗೆಳೆಯರಿರುವುದು ಮುಖ್ಯ. ಸ್ಟ್ಯಾಟಿಸ್ಟಿಕ್ಸ್‌ಗಳ ಪ್ರಕಾರ, ಬಿಸ್ನೆಸ್‌ನಲ್ಲಿ ಆಪ್ತಗೆಳೆಯನಿದ್ದರೆ ನೀವು ಹೆಚ್ಚು ಚೆನ್ನಾಗಿ ಕೆಲಸ ಮಾಡಬಲ್ಲಿರಿ. ಈ ವರ್ಷ ಜಾಗತಿಕವಾಗಿ ನಡೆಸಿದ ವರ್ಕ್‌ಪ್ಲೇಸ್ ಟ್ರೆಂಡ್ಸ್ ಅಧ್ಯಯನದಲ್ಲಿ 10 ದೇಶಗಳಲ್ಲಿ ಶೇ.60ರಷ್ಟು ಉದ್ಯೋಗಿಗಳು ಕಚೇರಿಯಲ್ಲಿ ಗೆಳೆಯರಿದ್ದರೆ ತಾವು ಕೆಲಸ ಬದಲಿಸುವ ಬಗ್ಗೆ ಯೋಚಿಸುವುದು ದೂರದ ಮಾತು ಎಂದಿದ್ದಾರೆ. 10ರಲ್ಲಿ ಇಬ್ಬರು ಉದ್ಯೋಗಿಗಳಿಗೆ ಕಚೇರಿಯಲ್ಲಿ ಬೆಸ್ಟ್ ಫ್ರೆಂಡ್ ಇರುತ್ತಾರೆ. ವರ್ಕ್‌ಪ್ಲೇಸ್‌ನಲ್ಲಿ ಉತ್ತಮ ಸ್ನೇಹಿತರಿದ್ದರೆ ಏನೆಲ್ಲ ಲಾಭಗಳುಂಟು ಎಂಬುದನ್ನಿಲ್ಲಿ ಕೊಡಲಾಗಿದೆ. 

1. ಕಚೇರಿಯ ಅನುಭವಗಳನ್ನು ಹಂಚಿಕೊಳ್ಳಲು
ನೀವು ನಿಮ್ಮ ಸಂಗಾತಿಯನ್ನೂ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರಬಹುದು. ಅವರಿಗೆ ಎಲ್ಲವನ್ನೂ ಹೇಳಬಹುದು. ಆದರೆ, ಆಫೀಸಿನ ವಿಷಯಗಳನ್ನು ನಿಮ್ಮ ಆಫೀಸ್ ಫ್ರೆಂಡ್‌ನಷ್ಟು ಸರಿಯಾಗಿ ಸಂಗಾತಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ. ಏಕೆಂದರೆ ಕಚೇರಿಯ ಫ್ರೆಂಡ್‌ಗೆ ಸಹೋದ್ಯೋಗಿಗಳೆಲ್ಲರ ಪರಿಚಯವಿರುತ್ತದೆ. ಅವರ ಸ್ವಭಾವಗಳ ಅರಿವಿರುತ್ತದೆ. ನೀವು ಹೇಳುವುದನ್ನೆಲ್ಲ ಅವರು ಸರಿಯಾಗಿ ಗ್ರಹಿಸಬಲ್ಲರು. ಅಲ್ಲದೆ, ಅವರೊಂದಿಗೆ ನಿಮ್ಮ ಹೊಸ ಐಡಿಯಾಗಳನ್ನು ಹಂಚಿಕೊಳ್ಳಬಹುದು, ಪ್ರಾಜೆಕ್ಟ್‌ಗಳನ್ನು ಒಟ್ಟಿಗೇ ಮಾಡಬಹುದು. ಒಟ್ಟಿಗೇ ಮಾಡಿದಾಗ ಕಷ್ಟದ ಕೆಲಸವೂ ಇಷ್ಟವಾಗತೊಡಗುತ್ತದೆ.

2. ಹ್ಯಾಪ್ ಅವರ್ಸ್
ಕೆಲ ದಿನಗಳು ಕಚೇರಿಯಲ್ಲಿ ಕೆಟ್ಟದೆನಿಸಬಹುದು. ಮತ್ತೆ ಕೆಲ ದಿನಗಳು ಸಂತೋಷ ಕೊಡಬಹುದು. ಇವೆಲ್ಲವನ್ನೂ ಅಲ್ಲೇ ಅದೇ ಕ್ಷಣದಲ್ಲಿ ಆಫೀಸ್ ಫ್ರೆಂಡ್ ಬಳಿ ಹೇಳಿಕೊಂಡು ದುಃಖ ಕಡಿಮೆ ಮಾಡಿಕೊಂಡು ಸಂತೋಷವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. 

3. ಕೆಲಸವನ್ನು ಮತ್ತಷ್ಟು ಪ್ರೀತಿಸಬಲ್ಲಿರಿ
ಕೆಲಸವನ್ನು ಪ್ರೀತಿಸದವರು ವರ್ಕ್‌ಪ್ಲೇಸ್ ಫ್ರೆಂಡ್‌ಶಿಪ್ ಕೂಡಾ ಬಯಸುವುದಿಲ್ಲ. ಆದರೆ ತಮ್ಮ ಕೆಲಸವನ್ನು ಪ್ರೀತಿಸುವವರಿಗೆ ವರ್ಕ್‌ಪ್ಲೇಸ್ ಫ್ರೆಂಡ್ ಕೇಕ್ ಮೇಲಿನ ಕ್ರೀಂನಂತೆ ಭಾಸವಾಗುತ್ತಾರೆ. ಗೆಳೆಯರ ಕಾರಣದಿಂದ ನೀವು ಕೆಲಸವನ್ನು ಮತ್ತಷ್ಟು ಪ್ರೀತಿಸಲು ಕಾರಣ ಸಿಕ್ಕಂತಾಗುತ್ತದೆ. ಗೆಳೆಯರ ಕಂಪನಿ ಇದ್ದರೆ ಓವರ್‌ಟೈಂ ಡ್ಯೂಟಿಗೆ ಕೂಡಾ ನೀವು ಬೆದರುವವರಲ್ಲ. ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಬೇಕಲ್ಲ ಎಂದು ಕೊರಗುವುದಕ್ಕಿಂತ ಗೆಳೆಯ ಸಿಗುವ ಖುಷಿಯಲ್ಲಿ ಬೇಗ ಎದ್ದು ರೆಡಿಯಾಗಿ ಹೋಗಬಲ್ಲಿರಿ.

4. ಸಮಾಧಾನ ಕೊಡುವ ಸ್ನೇಹ
ವರ್ಕ್‌ಪ್ಲೇಸ್‌ನಲ್ಲಿ ಯಾವುದೇ ಬೇಜಾರಿನ ಘಟನೆಗಳು ನಡೆದಾಗ ಈ ಗೆಳೆಯ ನಿಮಗೆ ಚಿಯರ್‌ಲೀಡರ್‌ನಂತೆ ಮತ್ತೆ ಹುರಿದುಂಬಿಸುತ್ತಾನೆ. ಸಮಾಧಾನ ಹೇಳುತ್ತಾನೆ. ಕೆಲವೇ ಸಮಯದಲ್ಲಿ ನಿಮ್ಮ ಮೂಡ್ ಸರಿ ಹೋಗುವುದು. ಅದೇ ಗೆಳೆಯರಿಲ್ಲದೆ, ನನಗ್ಯಾರೂ ಇಲ್ಲ, ನಾನು ಒಂಟಿ ಎಂದು ನೀವು ಪದೇ ಪದೆ ಕೊರಗುತ್ತಿದ್ದರೆ ನಿಮ್ಮ ಪೊಟೆನ್ಷಿಯಲ್ ಇದ್ದಷ್ಟು ಕೆಲಸ ಮಾಡಲಾಗುವುದಿಲ್ಲ.

ಯಶಸ್ವಿ ವ್ಯಕ್ತಿಗಳ ಉದ್ಯೋಗ ಸಂಬಂಧಿ ಅಭ್ಯಾಸಗಳಿವು...

5. ಥೆರಪಿಸ್ಟ್
ಕಚೇರಿಯ ಕೆಲಸ ಕಷ್ಟವೆನಿಸಿ, ಕಿರಿಕಿರಿ ಆಗುತ್ತಿದ್ದರೆ, ನಿಮ್ಮೆಲ್ಲ ಭಾವನೆಗಳನ್ನೂ ವರ್ಕ್‌ಪ್ಲೇಸ್ ಕ್ಲೋಸ್ ಫ್ರೆಂಡ್ ಜೊತೆ ಹೇಳಿಕೊಂಡರೆ ಆತ ಥೆರಪಿಸ್ಟ್ ಥರವೇ ಕೆಲಸ ಮಾಡುತ್ತಾನೆ. ನಿಮ್ಮೆಲ್ಲ ಕಟ್ಟಿಕೊಂಡ ನೆಗೆಟಿವ್ ಎಮೋಶನ್ಸ್ ಹೊರ ಹಾಕಿ, ನಿಜಕ್ಕೂ ಯಾವುದರ ಕಡೆ ನೀವು ಗಮನ ಹರಿಸಬೇಕು ಎಂಬುದನ್ನು ತಿಳಿಸುತ್ತಾನೆ. ಇದರಿಂದಾಗಿ ನಿಮ್ಮ ಒತ್ತಡ, ಖಿನ್ನತೆ ಎಲ್ಲವೂ ದೂರ ಓಡುತ್ತದೆ. ಬಾಸ್ ನಿಮ್ಮ ತಪ್ಪಿಗಾಗಿ ಕೂಗಾಡಿದಾಗ ಕೆಲವೇ ಅಡಿಗಳ ದೂರದಲ್ಲಿ ಸಮಾಧಾನ ಹೇಳುವ ಗೆಳೆಯ ಇರುವುದು ಎಷ್ಟು ಖುಷಿಯ ವಿಚಾರವಲ್ಲವೇ? 

ಕೆಲಸದಲ್ಲಿ ಈ ತಪ್ಪು ಮಾಡ್ಬೇಡಿ

6. ಆತ್ಮವಿಶ್ವಾಸ
ಗೆಳೆಯನ ಮಾತು ಅದೆಷ್ಟು ಆತ್ಮವಿಶ್ವಾಸ ನೀಡುತ್ತದೆಂದರೆ ನಿಮ್ಮ ಬಾಸ್ ಬಳಿ ಹೇಳಲು ಹಿಂಜರಿವ ಆ ಹೊಸ ಐಡಿಯಾಗಳು ನಿಮಗೆ ಪ್ರಮೋಶನ್ ಕೊಡಿಸಿದರೂ ಅಚ್ಚರಿಯಿಲ್ಲ.