ತಿಂಗಳ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ 2 ಸಾವಿರ ಇಳಿಕೆ; ಇತ್ತ LPG ಸಿಲಿಂಡರ್ ಕಥೆ ಏನು?
ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ಬೆಲೆಗಳು, ಹಾಗೂ ಗೃಹ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳ ವಿವರ ಇಲ್ಲಿದೆ.

ತಿಂಗಳ ಮೊದಲ ದಿನದಂದು ಕೆಲವು ಹಣಕಾಸಿನ ನಿಯಮಗಳು ಬದಲಾವಣೆ ಆಗುತ್ತಿರುತ್ತವೆ. ಆದ ಕಾರಣ ಸಾಮಾನ್ಯ ಜನರು ಈ ಬದಲಾವಣೆಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ತಿಂಗಳ ಮೊದಲದ ದಿನದಂದು ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಏರಿಳಿತ ಕಾಣುತ್ತಿರುತ್ತದೆ. ಹಾಗೆಯೇ ಪ್ರತಿದಿನ ಚಿನ್ನ-ಬೆಳ್ಳಿ ದರದಲ್ಲಿಯೂ ವ್ಯತ್ಯಾಸ ಆಗುತ್ತಿರುತ್ತದೆ.
ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ? ಗೃಹ ಬಳಕೆ 14 ಕೆಜಿ ಮತ್ತು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,940 ರೂಪಾಯಿ
8 ಗ್ರಾಂ: 63,520 ರೂಪಾಯಿ
10 ಗ್ರಾಂ: 79,400 ರೂಪಾಯಿ
100 ಗ್ರಾಂ: 7,94,000 ರೂಪಾಯಿ
ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,662 ರೂಪಾಯಿ
8 ಗ್ರಾಂ: 69,296 ರೂಪಾಯಿ
10 ಗ್ರಾಂ: 86,620 ರೂಪಾಯಿ
100 ಗ್ರಾಂ: 8,66,200 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 79,400 ರೂಪಾಯಿ, ಮುಂಬೈ: 79,400 ರೂಪಾಯಿ, ದೆಹಲಿ: 79,550 ರೂಪಾಯಿ, ಕೋಲ್ಕತ್ತಾ: 79,400 ರೂಪಾಯಿ, ಬೆಂಗಳೂರು: 79,400 ರೂಪಾಯಿ, ಹೈದರಾಬಾದ್: 79,400 ರೂಪಾಯಿ
ಎಷ್ಟು ದರ ಇಳಿಕೆ?
ಇಂದು ದೇಶದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 2,000 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 1,600 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 970 ರೂಪಾಯಿ
100 ಗ್ರಾಂ: 9,700 ರೂಪಾಯಿ
1000 ಗ್ರಾಂ: 97,000 ರೂಪಾಯಿ
LPG ಸಿಲಿಂಡರ್ ಬೆಲೆ
19 ಕೆಜಿ ವಾಣಿಜ್ಯ ಬಳಕೆ LPG ಸಿಲಿಂಡರ್ ಬೆಲೆಯಲ್ಲಿ 6 ರಿಂದ 7 ರೂಪಾಯಿ ಏರಿಕೆಯಾಗಿದೆ. ಈ ಬೆಲೆ ನಗರದಿಂದ ನಗರಕ್ಕೆ ವ್ಯತ್ಯಾಸ ಆಗುತ್ತಿರುತ್ತವೆ. 1 ಆಗಸ್ಟ್ 2024ರಿಂದ ಗೃಹ ಬಳಕೆ ಸಿಲಿಂಡರ್ ಬೆಲೆ ಸ್ಥಿರವಾಗಿದೆ. ಮಾರ್ಚ್-2023ರಲ್ಲಿ 19 ಕೆಜಿ ವಾಣಿಜ್ಯ ಬಳಕೆ LPG ಸಿಲಿಂಡರ್ ಬೆಲೆ 352 ರೂಪಾಯಿ ಏರಿಕೆಯಾಗಿತ್ತು.