ಪ್ರೇಮಿಗಳ ದಿನದಂದು ಖಾಸಗಿ ಸಂಸ್ಥೆಯೊಂದು ತನ್ನ ಉದ್ಯೋಗಿಗಳಿಗೆ ವಿಶೇಷ ರೀತಿಯಲ್ಲಿ ಹೂ ಮಳೆಗೆರೆದು ಸರ್‌ಫ್ರೈಸ್ ನೀಡಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಪ್ರೇಮಿಗಳ ದಿನ ಬಂದು ಹೋಯ್ತು... ಕೆಲವರು ಇದನ್ನು ಪ್ರೇಮಿಗಳ ದಿನವಾಗಿ ಆಚರಿಸಿದರೆ ಮತ್ತೆ ಕೆಲವರು 2019ರ ಇದೇ ದಿನ ನಡೆದ ಪುಲ್ವಾಮಾ ದಾಳಿಯಲ್ಲಿ ಹುತಾತ್ವರಾದ 40 ಸಿಆರ್‌ಪಿಎಫ್ ಯೋಧರನ್ನು ಸ್ಮರಿಸಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್‌ಗಳನ್ನು ಹಾಕುವ ಮೂಲಕ ಸಂಭ್ರಮದಿಂದ ದೂರ ಉಳಿದರು. ಮತ್ತೆ ಕೆಲವರು ಪ್ರೇಮಕ್ಕೆ ದಿನವಿಲ್ಲಾ ಪ್ರತಿದಿನವೂ ಪ್ರೇಮ ದಿನವೇ ಎಂದರೆ ಮತ್ತೆ ಕೆಲವರು ಪ್ರೀತಿ ಎಂದರೆ ಇದು ಗಂಡ ಹೆಂಡತಿ, ಗರ್ಲ್ ಫ್ರೆಂಡ್ ಬಾಯ್‌ಫ್ರೆಂಡ್, ಸ್ನೇಹಿತ ಸ್ನೇಹಿತೆ, ಪ್ರೇಮಿಗಳು ಇವರ ನಡುವಿನ ಪ್ರೇಮವನ್ನು ಸಂಭ್ರಮಿಸುವ ದಿನ ಮಾತ್ರವಲ್ಲ, ಇದನ್ನು ಅಕ್ಕ ತಂಗಿ, ಅಣ್ಣ ತಮ್ಮ, ಅಕ್ಕ ತಮ್ಮ, ಅಣ್ಣ ತಂದಿ, ಅಪ್ಪ ಅಮ್ಮ, ಅಮ್ಮ ಮಗ, ಅಪ್ಪ ಮಗಳು ಕೂಡ ಸಂಭ್ರಮಿಸಬಹುದು. ಇದು ಸಂಬಂಧಗಳ ನಡುವಿನ ಪ್ರೀತಿಯನ್ನು ವ್ಯಕ್ತಪಡಿಸುವ ದಿನವೆಂದು ಹೇಳುತ್ತಾ ವಿಭಿನ್ನವಾಗಿ ಆಚರಿಸಿಕೊಳ್ಳುತ್ತಾ ವ್ಯಾಲೆಂಟೈನ್ಸ್ ಡೇಯನ್ನು ಸಂಭ್ರಮಿಸಿದರು. ಆದರೆ ಇಲ್ಲೊಂದು ಕಡೆ ಸಂಸ್ಥೆಯೊಂದು ಪ್ರೇಮಿಗಳ ದಿನವನ್ನು ಉದ್ಯೋಗಿಗಳಿಗಾಗಿ ವಿಭಿನ್ನವಾಗಿ ಆಚರಿಸಿದ್ದು, ಇದರಿಂದ ಇಡೀ ಸಂಸ್ಥೆಯ ಉದ್ಯೋಗಿಗಳೇ ಖುಷಿ ಪಟ್ಟಿದ್ದಾರೆ. ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಅನೇಕರು ಅಯ್ಯೋ ನಮ್ಮ ಆಫೀಸ್‌ನಲ್ಲೂ ಹೀಗಿರ್ಬಾರ್ದಿತ್ತಾ ಅಂತ ಹಲುಬುತ್ತಿದ್ದರೆ ಮತ್ತೆ ಕೆಲವರು ಆ ಆಫೀಸ್‌ಗೆ ಸೇರೋದೇಗೆ ಎಂದು ಕಾಮೆಂಟ್‌ಗಳಲ್ಲಿ ಕೇಳುತ್ತಿದ್ದಾರೆ. ಹಾಗಿದ್ರೆ ಆ ಸಂಸ್ಥೆ ಮಾಡಿದ್ದೇನು?
devintelle_odoo ಎಂಬ ಇನಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, 'ಕಾಮ್ ಕೇ ಸಾಥ್ ಫ್ಯಾರ್ ಬೀ ಜರೂರಿ' ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಅಂದರೆ 'ಕೆಲಸದ ಜೊತೆ ಪ್ರೀತಿಯೂ ಅಗತ್ಯವಾಗಿ ಬೇಕು' ಎಂಬುದು. ಪ್ರೇಮಿಗಳ ಮೇಲೆ ಅವರ ಪ್ರೇಮಗಳು ಹೂವಿನ ಮಳೆಗೆರೆದು ಗುಲಾಬಿ ಹೂವು ನೀಡಿ ಏನಾದರೂ ಸರ್‌ಫ್ರೈಸ್ ಆಗಿರುವ ಗಿಫ್ಟ್ ನೀಡಿ ತಮ್ಮ ಪ್ರೇಮವನ್ನು ವ್ಯಕ್ತಪಡಿಸುವುದನ್ನು ನೀವು ನೋಡಿರಬಹುದು. ಇದರ ಅನುಭವ ಪ್ರೇಮಿಯಾಗಿದಲ್ಲಿ ನಿಮಗೂ ಆಗಿರಬಹುದು. ಆದರೆ ಎಲ್ಲರಿಗೂ ಈ ಅದೃಷ್ಟ ಇರುವುದಿಲ್ಲ, ಪ್ರೇಮಿಯಾದರೂ ಹೂವಿನ ಮಳೆ ಸುರಿಯುವುದಿಲ್ಲ, ಆದರೆ ಈ ವೀಡಿಯೋದಲ್ಲಿ ಕಾಣಿಸುವಂತೆ ಪ್ರೇಮಿಗಳ ದಿನ ತನ್ನ ಎಲ್ಲಾ ಉದ್ಯೋಗಿಗಳಿಗೆ ಕಚೇರಿ ಒಳಗೆ ಎಂಟ್ರಿ ಕೊಡುತ್ತಿದ್ದಂತೆಯೇ ಅಲ್ಲೇ ಗುಲಾಬಿ ಪಕಳೆಗಳ್ನು ಅವರ ಮೇಲೆ ಹಾಕಿ ಸರ್‌ಫ್ರೈಸ್ ನೀಡಲಾಗಿದೆ. ಒಬ್ಬರಾದ ಮೇಲೆ ಒಬ್ಬರಂತೆ ಬಾಗಿಲು ದೂಡಿ ಆಫೀಸಿನೊಳಗೆ ಬರುವ ಪ್ರತಿಯೊಬ್ಬ ಉದ್ಯೋಗಿಗೂ ಇದು ದೊಡ್ಡದಾದ ಸರ್‌ಫ್ರೈಸ್ ಆಗಿತ್ತು. ಕೆಂಪು ಗುಲಾಬಿಯ ಎಸಳುಗಳು ಮೈಮೇಲೆ ಬೀಳುತ್ತಿದ್ದಂತೆ ಉದ್ಯೋಗಿಗಳ ಮುಖದಲ್ಲಿ ಕಿರುನಗೆಯ ಜೊತೆ ಅಚ್ಚರಿಯೂ ಮೂಡಿ ಎಲ್ಲರೂ ಖುಷಿ ಪಟ್ಟರು. ಅನೇಕರು ಖುಷಿಯ ಜೊತೆ ಅಚ್ಚರಿಯಿಂದ ನೋಡಿ ಕೈಗೆ ಸಿಕ್ಕಿದ ಕೆಂಪು ಗುಲಾಬಿಯನ್ನು ಹಿಡಿದುಕೊಂಡು ಮುಂದೆ ಹೋದರು. ಅಂತು ಆ ದಿನ ಇಡೀ ಕಚೇರಿಯೇ ಸಂತೋಷದಿಂದ ಇದ್ದಿದ್ದಂತು ಸುಳ್ಳಿರಲಾರದು.. ಹಾಗಂತ ಅವರಿಗೆ ಹೂ ಕೊಟ್ಟಿದ್ದಾರು ಪ್ರೇಮಿಗಳಲ್ಲ, ಕಂಪನಿ ಮಾಡಿದ ಈ ಸಣ್ಣ ಕಾರ್ಯ ಎಲ್ಲರ ಮೊಗದಲ್ಲಿ ನಗು ತರಿಸುವಂತೆ ಮಾಡಿತು. ಕೆಲವರ ಜೀವನದ ಮೊದಲ ಹೂ ಮಳೆಯೂ ಅದಾಗಿದ್ದಿರಬಹುದು. ಹೀಗಾಗಿ ಅನೇಕರು ಸಂಭ್ರಮದಿಂದ ಮುಂದೆ ಹೋದರು.
ಖಾಸಗಿ ಸಂಸ್ಥೆಯೊಂದರ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈ ಭೂಮಿ ಮೇಲೆ ಇಂತಹ ಆಫೀಸ್‌ಗಳು ಇರ್ತಾವಾ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಪ್ಲಾನ್ ಮಾಡಿದವರಿಗೆ ಧನ್ಯವಾದ ಹೇಳಲೇಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಯ್ಯೋ ದಿನ ಇದೇ ಕೆಲಸ ಮಾಡ್ಬೇಕು ಅಂತ ಮನೆಯಿಂದ ಹೊರಟು ಕಚೇರಿಗೆ ಬಂದವರಿಗೆ ಇದು ನಿಜವೂ ಸರ್‌ಫ್ರೈಸ್ ಆಗಿರುತ್ತೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಎಲ್ಲರ ಮೊಗದಲ್ಲಿ ನಗು ತರಿಸಿದ್ದು, ಈ ವೀಡಿಯೋ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ...
ಈ ಸುಂದರ ವೀಡಿಯೋಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
