ಸಹೋದ್ಯೋಗಿಗಳ ಟಾರ್ಗೆಟ್ ಹಿಂಸೆ ನೀಡಿದ ಎಚ್‌ಡಿಎಫ್‌ಸಿ ಬ್ಯಾಂಕ್ ಅಧಿಕಾರಿ, ವಿಡಿಯೋ ವೈರಲ್!
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ನಡೆದ ಆನ್‌ಲೈನ್ ಸಭೆಯ ವೀಡಿಯೊವು ಹಿರಿಯ ಉಪಾಧ್ಯಕ್ಷ ಪುಷ್ಪಾಲ್ ರಾಯ್ ಅವರ ನೇತೃತ್ವದಲ್ಲಿ ಸಂಸ್ಥೆಯಲ್ಲಿ ಉದ್ಯೋಗಿಗಳು ಅನುಭವಿಸುತ್ತಿರುವ ಅತೀ ಕೆಟ್ಟ ಕೆಲಸದ ವಾತಾವರಣದ ಮೇಲೆ ಬೆಳಕು ಚೆಲ್ಲಿದೆ.
ನವದೆಹಲಿ (ಜೂ.5): ಆರ್ಥಿಕ ಅನಿಶ್ಚಿತತೆಗಳು, ಲೇಆಫ್‌ಗಳ, ಡಿಜಿಟಲ್ ರೂಪಾಂತರದಂಥ ಅಸಂಖ್ಯಾತ ಬದಲಾವಣೆಗಳ ನಡುವೆ, ಜೊತೆಗೆ ಹೈಬ್ರಿಡ್ ಕೆಲಸದ ಮಾದರಿಗೆ ಹೊಂದಿಕೊಳ್ಳುವ ಮೂಲಕ ಇಂದು ಉದ್ಯೋಗಿಗಳಿಗೆ ಆರೋಗ್ಯಕರ ಕೆಲಸದ ವಾತಾವರಣವು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಹಾಗಿದ್ದರೂ ಕೆಲವೊಮ್ಮೆ ನಾವು ಕೆಲಸ ಮಾಡುವ ಸ್ಥಳದಲ್ಲಿನ ವಿಷಕಾರಿ ವಾತಾವರಣದ ಅನುಭವ ಖಂಡಿತಾ ಆಗುತ್ತದೆ. ಇದು ಉದ್ಯೋಗಿಗಳಿಗೆ ತಮ್ಮ ಕೌಶಲ್ಯವನ್ನು ಬೆಳೆಯಲು, ಕಲಿಯಲು ಮತ್ತು ಅಭಿವೃದ್ಧಿಪಡಿಸಲು ಉತ್ತಮ ವಾತಾವರಣವನ್ನು ಒದಗಿಸುವಲ್ಲಿ ಭಾರತವು ಇನ್ನೂ ಬಹಳ ದೂರ ಸಾಗಬೇಕಾಗಿದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅಂತಹ ಒಂದು ಪ್ರಕರಣವನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಲಿಂಕ್ಡ್‌ಇನ್‌ನಲ್ಲಿ ಸೌಮಿ ಚಕ್ರವರ್ತಿ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಚಕ್ರವರ್ತಿ ಅವರು, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಆನ್‌ಲೈನ್ ಸಭೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಬ್ಯಾಂಕ್‌ನ ಹಿರಿಯ ಉಪಾಧ್ಯಕ್ಷ ಪುಷ್ಪಾಲ್ ರಾಯ್ ಅವರ ನೇತೃತ್ವದಲ್ಲಿ ಸಂಸ್ಥೆಯಲ್ಲಿ ಉದ್ಯೋಗಿಗಳು ಅನುಭವಿಸುತ್ತಿರುವ ಕೆಟ್ಟ ಕೆಲಸದ ವಾತಾವರಣದ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ಈ ವಿಡಿಯೋವನ್ನು ಬಳಿಕ ಇತರ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲೈ ಹಂಚಿಕೊಳ್ಳಲಾಗಿದೆ.
ಈ ವಿಡಿಯೋ ಬೆಂಗಾಲಿ ಭಾಷೆಯಲ್ಲಿದೆ. ಇದರಲ್ಲಿ ಪುಷ್ಪಾಲ್ ರಾಯ್ ತನ್ನ ಸಹೋದ್ಯೋಗಿಗಳ ಕೆಲಸದ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುವುದರೊಂದಿಗೆ ಅವರ ಟಾರ್ಗೆಟ್‌ನ ವಿವರ ಪಡೆದುಕೊಳ್ಳುತ್ತಿದ್ದಾರೆ. ಸಾಕಷ್ಟು ಸಮಯದಲ್ಲಿ ರಾಯ್ 'ಶಟ್ ಅಪ್' ಎಂದು ದೊಡ್ಡ ದನಿಯಲ್ಲಿ ವಿಕಾರವಾಗಿ ಉದ್ಯೋಗಿಗಳಿಗೆ ಚೀರುತ್ತಿರುವುದು ದಾಖಲಾಗಿದೆ. 'ನಿನಗೆ ನನ್ನ ಸಿಪಿಐ ಸ್ಕೋರ್ 71. ನಾನು ಇಂದು ನಿನಗೆ ಹಾಗೂ ತೀಥರ್‌ಗೆ ಎಚ್‌ಆರ್ ಮೆಮೋ ಕಳಿಸಲಿದ್ದೇನೆ' ಎಂದು ಜಾನ್ ಎನ್ನುವ ಉದ್ಯೋಗಿಗೆ ಪುಷ್ಪಾಲ್ ಹೇಳಿರುವುದು ದಾಖಲಾಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲಿಯೇ ಎಚ್‌ಡಿಎಫ್‌ಸಿ ಬ್ಯಾಂಕ್, ಕೋಲ್ಕತ್ತದ ಕಚೇರಿಯಲ್ಲಿರುವ ಉದ್ಯೋಗಿಯನ್ನು ವಜಾ ಮಾಡಿದೆ. "ಇದು ಇತ್ತೀಚಿನ ಸೋಶಿಯಲ್ ಮೀಡಿಯಾ ವರದಿಯನ್ನು ಉಲ್ಲೇಖಿಸುತ್ತದೆ. ಈ ವಿಷಯದಲ್ಲಿ ಪ್ರಾಥಮಿಕ ವಿಚಾರಣೆಯ ಆಧಾರದ ಮೇಲೆ, ಸಂಬಂಧಪಟ್ಟ ಉದ್ಯೋಗಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ, ಇದನ್ನು ಬ್ಯಾಂಕಿನ ನಡವಳಿಕೆ ಮಾರ್ಗಸೂಚಿಗಳ ಪ್ರಕಾರ ಕೈಗೊಳ್ಳಲಾಗುವುದು" ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ತಿಳಿಸಿದೆ.
ಕೆಲಸ ಮಾಡುವ ಸ್ಥಳದಲ್ಲಿ ಯಾವುದೇ ರೀತಿಯ ಕೆಟ್ಟ ನಡವಳಿಕೆಗಳಿಗೆ ಕಂಪನಿಯು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ನಮ್ಮ ಎಲ್ಲಾ ಉದ್ಯೋಗಿಗಳನ್ನು ಘನತೆಯಿಂದ ನಡೆಸಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಖಾಸಗಿ ವಿಭಾಗದಲ್ಲಿ ದೇಶದ ಬಹುದೊಡ್ಡ ಕಂಪನಿಯಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಹೇಳಿದೆ.
ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ, ಅನೇಕ ಬಳಕೆದಾರರು ದೇಶದಲ್ಲಿ ಕಠಿಣ ಕಾರ್ಮಿಕ ಕಾನೂನುಗಳ ಅಗತ್ಯವಿದೆ ಅನ್ನೋದನ್ನು ತಿಳಿಸಿದ್ದಾರೆ. ಈ ರೀತಿಯ ವಾತಾವರಣವು ಅನೇಕ ಸಂಸ್ಥೆಗಳಲ್ಲಿ ದಿನಚರಿಯ ರೀತಿಯಲ್ಲಿ ಮಾರ್ಪಟ್ಟಿದೆ ಎಂದು ಹೆಚ್ಚಿನವರು ಟೀಕಿಸಿದ್ದಾರೆ.
ಇದು ಇಂದು ದೇಶದ ಎಲ್ಲಾ ಹಣಕಾಸಿ ಸಂಸ್ಥೆಗಳ ಚಿತ್ರಣವಾಗಿದೆ. ಇದು ನಮ್ಮ ರಾಜ್ಯದ ಚಿತ್ರಣ ಕೂಡ ಹೌದು. ಈತ ಕೇವಲ ಪ್ರತಿಬಿಂಬ ಮಾತ್ರ' ಎಂದು ಇನ್ನೊಬ್ಬರು ಬರೆದಿದ್ದಾರೆ. "ಇದನ್ನು ನಂಬಲೂ ಸಾಧ್ಯವಿಲ್ಲ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಾವು ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ನಾವು ತೊಂದರೆ ಅನುಭವಿಸುತ್ತೇವೆ.ನಾವು ಅಂತಹ ನಕಾರಾತ್ಮಕ ನಡವಳಿಕೆಯನ್ನು ಸಹಿಸಲು ಹೋದರೆ. ನಮ್ಮ ಯುವಕರು ಅದನ್ನೇ ಅನುಸರಿಸುತ್ತಾರೆ. ನಾವು ಉದ್ಯೋಗಿಗಳು ಮತ್ತು ನಮ್ಮ ಮೇಲಿನ ಆಡಳಿತಕ್ಕೆ ಅರ್ಹವಾದ ಗೌರವಕ್ಕೆ ನಾವು ಅರ್ಹರಾಗಿದ್ದೇವೆ. ಸ್ವಯಂ ಮೌಲ್ಯ ಮತ್ತು ಆತ್ಮಗೌರವವು ಹೆಚ್ಚು ಮುಖ್ಯವಾಗಿದೆ" ಎಂದು ಮತ್ತೊಬ್ಬರು ಬರೆದಿದ್ದಾರೆ.
ಎಚ್ ಡಿಎಫ್ ಸಿ-ಎಚ್ ಡಿಎಫ್ ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಜುಲೈಗೆ ಪೂರ್ಣ ನಿರೀಕ್ಷೆ; ಏನೆಲ್ಲ ಬದಲಾಗಲಿದೆ?
"ಭಾರತಕ್ಕೆ ಖಂಡಿತವಾಗಿ ಕಟ್ಟುನಿಟ್ಟಾದ ಕಾರ್ಮಿಕ ಕಾನೂನುಗಳ ಅಗತ್ಯವಿದೆ. ದುರದೃಷ್ಟವಶಾತ್, ನಾಯಕತ್ವವು ನೋಡುತ್ತಿರುವುದು ಸಂಖ್ಯೆಗಳು, ಲಾಭ ಮತ್ತು ಷೇರುಗಳ ಬೆಲೆ ಏರಿಕೆಯಾಗಿದೆಯೇ ಇಲ್ಲವೇ ಅನ್ನೋದನ್ನು ಮಾತ್ರ' ಎಂದು ಬರೆದಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಚ್‌ಡಿಎಫ್‌ಸಿ ಲಿ. ವಿಲೀನ, ದೇಶದ 2ನೇ ಅತಿದೊಡ್ಡ ಕಂಪನಿ!