ಹೊಸ ವರ್ಷದಲ್ಲಿ ಅತಿ ಹೆಚ್ಚು ಸಂಭಾವನೆ ನೀಡುವ ಉದ್ಯೋಗಗಳಿವು
ಇನ್ನೇನು ವಾರದಲ್ಲಿ 2020 ಇತಿಹಾಸ ಸೇರಲಿದೆ. ಆದರೆ, ಕೊರೋನಾ ವೈರಸ್ ಸೋಂಕಿನಿಂದಾಗಿ ಈ ವರ್ಷವನ್ನು ಬಹುಶಃ ಈಗಿನ ಪೀಳಿಗೆ ತಮ್ಮ ತಲೆಮಾರಿನವರೆಗೂ ಮರೆಯಲಾರರು. ಸೋಂಕಿನಿಂದಾಗಿ ಇಡೀ ಜಗತ್ತು ತಲ್ಲಣಿಸಿತು. ಪರಿಣಾಮ ಉದ್ಯೋಗಗಳು ನಷ್ಟವಾದವು. ಆದರೆ, ಮುಂಬರುವ 2021ರಲ್ಲಿ ಹೊಸ ಉದ್ಯೋಗಗಳು ಒಳ್ಳೆಯ ಸಂಬಳ ತಂದುಕೊಡುವ ಭವಿಷ್ಯವನ್ನು ಹೊಂದಿವೆ.
2020 ಬಹುಶಃ ಈ ಇಸವಿಯನ್ನ ಯಾರೂ ಮರೆಯೋಕೆ ಸಾಧ್ಯವಿಲ್ಲ. ಈಗಿನ ತಲೆಮಾರು ಮರೆಯಾಗೋವರೆಗೂ ಈ ವರ್ಷ ಕರಾಳ ಅಧ್ಯಾಯ ಅವರ ಬದುಕಿನಲ್ಲಿ ಅಚ್ಚಳಿಯದಂತೆ ಉಳಿದು ಬಿಡುತ್ತದೆ. ಯಾಕಂದ್ರೆ ಕೊರೊನಾ ಮಹಾಮಾರಿ ತಂದಿಟ್ಟ ಆಪತ್ತು, ಕೊಟ್ಟ ಹೊಡೆತ, ಸಾವು-ನೋವು ಅಂಥದ್ದು. ಯಾರೂ ತಾನೇ ಇದನ್ನೆಲ್ಲ ಮರೆಯೋಕೆ ಸಾಧ್ಯ. ಅದೆಷ್ಟೋ ಜನರ ಅನ್ನ ಕಿತ್ತುಕೊಟ್ಟ ಮಾರಿ ವೈರಸ್ ಇದು.
ಹೀಗಾಗಿ ಮುಂದಿನ ವರ್ಷ ಹೇಗಿರುತ್ತೋ, ಉದ್ಯೋಗದ ಕಥೆ ಏನೋ? ಸರಿಯಾದ ಕೆಲಸ ಸಿಗುತ್ತಾ? ಹೆಚ್ಚು ಸಂಬಳ ಸಿಗುತ್ತಾ ಅನ್ನೋ ಯೋಚನೆಗಳು ಕಾಡ್ತಿವೆ. ಈಗಾಗಲೇ ಸಾಕಷ್ಟು ಕಂಪನಿಗಳಿಗೆ ಕೋವಿಡ್-19 ಭಾರೀ ಹೊಡೆತ ಕೊಟ್ಟಿದೆ. ಆದ್ರೆ ಕೆಲವೊಂದು ಬ್ಯುಸಿನೆಸ್‌ಗಳು ಚೆನ್ನಾಗಿಯೇ ನಡೆದಿವೆ. ಸೋ.. ಚಿಂತೆ ಬೇಡ. ಮುಂದಿನ ವರ್ಷ ಈ ಉದ್ಯೋಗಗಳನ್ನ ಆರಿಸಿಕೊಂಡ್ರೆ, ಖಂಡಿತ ನೀವು ಬೇಗ ಶ್ರೀಮಂತರಾಗಬಹುದು.
ಡೇಟಾ ಸೈಂಟಿಸ್ಟ್
‘ಡೇಟಾ ಸೈಂಟಿಸ್ಟ್’ ಎಂಬುದು 21 ನೇ ಶತಮಾನದ ಜನಪ್ರಿಯವಾದ ಕೆಲಸ ಎಂದು ಹಲವು ವರದಿಗಳು ಒಪ್ಪಿಕೊಳ್ಳುತ್ತವೆ. ಆಗ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಗಳ ಪಟ್ಟಿಯಲ್ಲಿ ಇದು ಅಗ್ರಸ್ಥಾನದಲ್ಲಿದೆ. ಹೆಚ್ಚು ಅನುಭವವುಳ್ಳ ಡೇಟಾ ಸೈಂಟಿಸ್ಟ್, ಅಮೆರಿಕಾದಲ್ಲಿ ವರ್ಷಕ್ಕೆ 800 ಸಾವಿರ ಡಾಲರ್ ಹಾಗೂ ಭಾರತದಲ್ಲಿ ವರ್ಷಕ್ಕೆ ಸುಮಾರು 90 ಲಕ್ಷ ರೂಪಾಯಿಗಳನ್ನು ಗಳಿಸಬಹುದು.
ಪೋಸ್ಟ್ ಮ್ಯಾಟ್ರಿಕ್ ಸ್ಕಾಲರ್‌ಶಿಪ್ ಯೋಜನೆಗೆ 59,000 ಕೋಟಿ ರೂ. ಹೂಡಿಕೆ
ಪ್ರಾಡಕ್ಟ್ ಮ್ಯಾನೇಜರ್
ಸಂಸ್ಥೆಯ ಉತ್ಪನ್ನ ಅಭಿವೃದ್ಧಿಗೆ ಪ್ರಾಡಕ್ಟ್ ಮ್ಯಾನೇಜರ್ (ಉತ್ಪನ್ನ ವ್ಯವಸ್ಥಾಪಕ) ಜವಾಬ್ದಾರರಾಗಿರುತ್ತಾರೆ. ಅವರು ಉತ್ಪನ್ನದ ಯಶಸ್ಸಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಅದರ ಸುಧಾರಣೆಯನ್ನು ನೋಡಿಕೊಳ್ಳುತ್ತಾರೆ. ಪ್ರಾಡಕ್ಟ್ ಮ್ಯಾನೇಜರ್‌ನನ್ನು ಉತ್ಪನ್ನದ ವ್ಯವಹಾರ ತಂತ್ರಗಳ ಹಿಂದಿನ ಮಿದುಳು ಎನ್ನಬಹುದು. ಅಮೆರಿಕಾದಲ್ಲಿ ಉತ್ಪನ್ನ ವ್ಯವಸ್ಥಾಪಕರು 250 ಸಾವಿರ ಡಾಲರ್ವರೆಗೆ ಮತ್ತು ಭಾರತದಲ್ಲಿ ವಾರ್ಷಿಕ 1 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ.
ಕ್ಲೌಡ್ ಆರ್ಕಿಟೆಕ್
ಕ್ಲೌಡ್ ಆರ್ಕಿಟೆಕ್ಟ್ ಒಬ್ಬ ಮಾಹಿತಿ ತಂತ್ರಜ್ಞಾನ ತಜ್ಞರಾಗಿದ್ದು, ಅವರು ಸಂಸ್ಥೆಯ ಕ್ಲೌಡ್ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಅಮೆರಿಕಾದಲ್ಲಿ ಒಬ್ಬ ಅನುಭವಿ ಕ್ಲೌಡ್ ಆರ್ಕಿಟೆಕ್, ಸುಮಾರು 240 ಸಾವಿರ ಡಾಲರ್ ಗಳಿಸಬಹುದು. ಇನ್ನು ಭಾರತದಲ್ಲಿ ವಾರ್ಷಿಕ 30-50 ಲಕ್ಷ ರೂಪಾಯಿವರೆಗೂ ಪಡೆಯಬಹುದು.
ಫುಲ್ ಸ್ಟಾಕ್ ಡೆವಲಪರ್
ಫುಲ್-ಸ್ಟಾಕ್ ಡೆವಲಪರ್, ವೆಬ್‌ಸೈಟ್‌ನ ಮುಂಭಾಗ ಮತ್ತು ಹಿಂಭಾಗ ಎರಡೂ ಕಡೆ ಕಾರ್ಯನಿರ್ವಹಿಸುತ್ತಾನೆ. ಅವರು ಬಳಕೆದಾರರ ಮುಖಾಮುಖಿ ವೆಬ್‌ಸೈಟ್‌ಗಳನ್ನು ನಿರ್ಮಿಸುವ ಯೋಜನೆಗಳನ್ನು ನಿಭಾಯಿಸುತ್ತಾರೆ ಮತ್ತು ಯೋಜನಾ ಹಂತದಲ್ಲಿ ಗ್ರಾಹಕರೊಂದಿಗೆ ಕೆಲಸ ಮಾಡುತ್ತಾರೆ. ಭಾರತದಲ್ಲಿ ವಾರ್ಷಿಕ 35 ಲಕ್ಷ ರೂಪಾಯಿವರೆಗೂ ಗಳಿಸಬಹುದು
ಬಿಗ್ ಡೇಟಾ ಇಂಜಿನಿಯರ್
ಕಳೆದ 10 ವರ್ಷಗಳಲ್ಲಿ ಪ್ರತಿ ವ್ಯವಹಾರ ಕ್ಷೇತ್ರದಲ್ಲೂ ಬಿಗ್ ಡೇಟಾ ಒಂದು ಕ್ರಾಂತಿಯಾಗಿದೆ. ಸಂಸ್ಥೆಯೊಂದರಲ್ಲಿ ದೊಡ್ಡ ಡೇಟಾ ಎಂಜಿನಿಯರ್‌ಗಳು ಡೇಟಾವನ್ನು ಸಂಗ್ರಹಿಸುತ್ತಾರೆ, ವಾಸ್ತುಶಿಲ್ಪವನ್ನು ಅಭಿವೃದ್ಧಿಪಡಿಸುತ್ತಾರೆ, ವಿನ್ಯಾಸಗೊಳಿಸುತ್ತಾರೆ, ಇಂಡಿಯಾದಲ್ಲಿ 30 ಲಕ್ಷದವರೆಗೂ ಗಳಿಸುತ್ತಾರೆ.
ಡೆವಲಪ್ಸ್ ಇಂಜಿನಿಯರ್
ಕೋಡ್ ಬಿಡುಗಡೆಗಳ ಮೇಲ್ವಿಚಾರಣೆ ಮಾಡುವುದೇ ಡೆವಲಪ್ಸ್ ಎಂಜಿನಿಯರ್ ಕೆಲಸ. ಹೀಗಾಗಿ ಅವರು ಐಟಿ ತಂಡದೊಂದಿಗೆ ಕೆಲಸ ಮಾಡುತ್ತಾರೆ. ಸಾಫ್ಟ್‌ವೇರ್‌ನ ನಿರಂತರ ಅಭಿವೃದ್ಧಿ, ಏಕೀಕರಣ ಮತ್ತು ನಿಯೋಜನೆಯನ್ನು ಖಚಿತಪಡಿಸಿಕೊಳ್ಳಲು ಅವರು ಕೋಡ್ ಮತ್ತು ಸ್ಕ್ರಿಪ್ಟ್ ಸಿದ್ಧಪಡಿಸಿ, ಪರೀಕ್ಷೆಗೆ ಒಳಪಡಿಸುತ್ತಾರೆ. ಅನುಭವವುಳ್ಳ ಡೆವಲಪ್ಸ್ ಇಂಜಿನಿಯರ್ ಅಮೆರಿಕಾದಲ್ಲಿ 800 ಸಾವಿರ ಡಾಲರ್ ಸಂಪಾದಿಸಿದ್ರೆ, ಭಾರತದಲ್ಲಿ 40 ಲಕ್ಷದವರೆಗೂ ಗಳಿಸಬಹುದು.
JEE Main: ಬಾಯಿಂದ ಎಕ್ಸಾಮ್ ಬರೆದು ಜೆಇಇ rank ಗಳಿಸಿದ ಯುವಕ
ಬ್ಲಾಕ್‌ಚೈನ್ ಡೆವಲಪರ್
ಬ್ಲಾಕ್‌ಚೈನ್ ಡೆವಲಪರ್, ಬ್ಲಾಕ್‌ಚೈನ್ ತಂತ್ರಜಾನಗಳನ್ನು ಸಂಶೋಧಿಸುತ್ತಾನೆ, ಸೈಬರ್ ದಾಳಿ ಮತ್ತು ಬ್ಲಾಕ್‌ಚೈನ್ ಪ್ರೋಟೋಕಾಲ್‌ಗಳಿಂದ ರಕ್ಷಿಸಲು ಭದ್ರತಾ ಕ್ರಮಗಳನ್ನು ರೂಪಿಸುತ್ತಾರೆ. ಜೊತೆಗೆ ಇಡೀ ನೆಟ್‌ವರ್ಕ್ ಅನ್ನು ಮೇಲ್ವಿಚಾರಣೆ ಮಾಡುತ್ತಾರೆ. ಯುಎಸ್‌ನಲ್ಲಿ 170 ಸಾವಿರ ಡಾಲರ್ ಸಂಬಳ ಸಿಗುತ್ತೆ. ಭಾರತದಲ್ಲಿ 22 ಲಕ್ಷದವರೆಗೆ ಸಂಪಾದಿಸಬಹುದು.
ಮೊಬೈಲ್ ಅಪ್ಲಿಕೇಷನ್ ಡೆವಲಪರ್
ಮೊಬೈಲ್ ಅಪ್ಲಿಕೇಶನ್ ಡೆವಲಪರ್, ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಮಾದರಿಗಳನ್ನು ಹಾಗೂ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಾರೆ. ಭಾರತದಲ್ಲಿ 30೦ ಲಕ್ಷ ರೂ. ಗಳಿಸಬಹುದು.
ಆರ್‌ಪಿಎ ಡೆವಲಪರ್
ಆರ್‌ಪಿಎ ಡೆವಲಪರ್, ಆರ್‌ಪಿಎ ವ್ಯವಸ್ಥೆಗಳನ್ನು ರಚಿಸುವ, ಅಭಿವೃದ್ಧಿಪಡಿಸುವ ಮತ್ತು ಕಾರ್ಯಗತಗೊಳಿಸುವ ವೃತ್ತಿಪರರು. ದಕ್ಷತೆಯನ್ನು ಹೆಚ್ಚಿಸಲು ಅವರು ಸ್ವಯಂಚಾಲಿತ ಪ್ರಕ್ರಿಯೆಗಳನ್ನು ಸ್ಥಾಪಿಸುತ್ತಾರೆ. ಭಾರತದಲ್ಲಿ ವಾರ್ಷಿಕ 11 ಲಕ್ಷ ರೂಪಾಯಿ ಗಳಿಸಬಹುದು.
ಮಾಹಿತಿ ಭದ್ರತಾ ವಿಶ್ಲೇಷಕ
ಸಂಸ್ಥೆಗಳಲ್ಲಿ ಕಂಪ್ಯೂಟರ್ ನೆಟ್‌ವರ್ಕ್‌ಗಳನ್ನು ರಕ್ಷಿಸುವ ಹೊಣೆಯನ್ನು ಮಾಹಿತಿ ಭದ್ರತಾ ವಿಶ್ಲೇಷಕರಿಗೆ ವಹಿಸಲಾಗಿದೆ. ಭಾರತದಲ್ಲಿ ವರ್ಷಕ್ಕೆ ಸುಮಾರು 30 ಲಕ್ಷ ರೂಪಾಯಿ ಗಳಿಸುತ್ತಾರೆ.
ಸಸ್ಯಾಧರಿತ ಮೊಟ್ಟೆ ಸಂಶೋಧಿಸಿದ ಐಐಟಿ ದೆಹಲಿ ಪ್ರೊಫೆಸರ್‌ಗೆ ಜಾಗತಿಕ ಪ್ರಶಸ್ತಿ