ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶಿಕ್ಷಣದ ಕ್ಷೇತ್ರ ಸುಧಾರಣೆಯತ್ತ ಹೆಚ್ಚು ಆಸಕ್ತಿ ವಹಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ಪರಿಶಿಷ್ಟ ಜಾತಿಯ ಸುಮಾರು 4 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ ನೆರವಾಗಲು 59,000 ಕೋಟಿ ರೂಪಾಯಿ ಶಿಷ್ಯವೇತನಕ್ಕೆ ಒಪ್ಪಿಗೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಮೆಟ್ರಿಕೋತ್ತರ ಸ್ಕಾಲರ್ ಶಿಪ್ ಯೋಜನೆಗೆ ಒಟ್ಟು ೫೯,೦೪೮ ಕೋಟಿ ಅನುದಾನ ಮೀಸಲಿಡಲಾಗಿದೆ. ಇದರಲ್ಲಿ ಶೇಕಡಾ ೬೦ರಷ್ಟು ಅಂದ್ರೆ ಕೇಂದ್ರದ ಪಾಲು ೩೫,೫೩೪ ಕೋಟಿ ರೂ. ಉಳಿದ ಮೊತ್ತವನ್ನು ರಾಜ್ಯ ಸರ್ಕಾರಗಳು ಭರಿಸಲಿವೆ.
ಪರಿಶಿಷ್ಟ ಜಾತಿಗಾಗಿ ಬರಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯು ವಿದ್ಯಾರ್ಥಿಗಳಿಗೆ 11 ನೇ ತರಗತಿಯಿಂದ ಯಾವುದೇ ಕೋರ್ಸ್ ಅನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಸರ್ಕಾರವು ಶಿಕ್ಷಣದ ವೆಚ್ಚವನ್ನು ಒದಗಿಸುತ್ತದೆ.
JEE Main: ಬಾಯಿಂದ ಎಕ್ಸಾಮ್ ಬರೆದು ಜೆಇಇ rank ಗಳಿಸಿದ ಯುವಕ
ಕ್ಯಾಬಿನೆಟ್ ಹೂಡಿಕೆಗೆ ಅನುಮೋದನೆ ನೀಡಿದ ನಂತರ, ಪಿಎಂ ಮೋದಿ ಅವರು ಈ ಹೂಡಿಕೆಯು ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ನೆರವಾಗಲಿದೆ ಎಂದಿದ್ದಾರೆ. ಆನ್‌ಲೈನ್ ಪೋರ್ಟಲ್‌ನಲ್ಲಿ ರಾಜ್ಯಗಳು ಅರ್ಹತೆ, ಜಾತಿ ಸ್ಥಿತಿ, ಆಧಾರ್ ಗುರುತಿಸುವಿಕೆ ಮತ್ತು ಬ್ಯಾಂಕ್ ಖಾತೆ ವಿವರಗಳ ಫೂಲ್ ಪ್ರೂಫ್ ಪರಿಶೀಲನೆ ಕೈಗೊಳ್ಳಲಿದೆ
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಮೆಟ್ರಿಕ್ ಸ್ಕಾಲರ್‌ಶಿಪ್ ಕುರಿತು ಕ್ಯಾಬಿನೆಟ್ ನಿರ್ಧಾರದಿಂದ ಎಸ್‌ಸಿ ಸಮುದಾಯಗಳಿಗೆ ಸೇರಿದ ಯುವಕರಿಗೆ ಹೆಚ್ಚಿನ ಶೈಕ್ಷಣಿಕ ಪ್ರವೇಶ ಪಡೆಯಲು ನೆರವಾಗಲಿದೆ. ನಮ್ಮ ಯುವಕರಿಗೆ ಉನ್ನತ ಗುಣಮಟ್ಟದ ಮತ್ತು ಕೈಗೆಟುಕುವ ಶಿಕ್ಷಣವನ್ನು ನೀಡುವುದು ನಮ್ಮ ಸರ್ಕಾರದ ಪ್ರಮುಖ ಕೇಂದ್ರವಾಗಿದೆ ಎಂದಿದ್ದಾರೆ.

10 ನೇ ತರಗತಿಯಲ್ಲಿ ಉತ್ತೀರ್ಣರಾದ ಬಡ ಕುಟುಂಬಗಳಿಂದ, ತಮ್ಮ ಆಯ್ಕೆಯ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಲು ಅಭಿಯಾನವನ್ನು ಪ್ರಾರಂಭಿಸಲಾಗುವುದು ಅಂತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದ ಬಳಿಕ ಶಿಕ್ಷಣ ಮುಂದುವರಿಸದಂತಹ ೧.೩೬ ಕೋಟಿ ಬಡ ವಿದ್ಯಾರ್ಥಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುವುದು ”ಎಂದು ಅದು ಹೇಳಿದೆ.
ಪಾರದರ್ಶಕತೆ, ಹೊಣೆಗಾರಿಕೆ, ದಕ್ಷತೆ ಮತ್ತು ಯಾವುದೇ ವಿಳಂಬವಿಲ್ಲದೆ ಸಹಾಯವನ್ನು ಸಮಯೋಚಿತವಾಗಿ ತಲುಪಿಸುವ ಆನ್‌ಲೈನ್ ಪ್ಲಾಟ್‌ಫ್ಲಾರಂನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಈ ಯೋಜನೆಯನ್ನು ನಡೆಸಲಾಗುವುದು ಎಂದು ಅಧಿಕೃತ ಹೇಳಿಕೆ ನೀಡಲಾಗಿದೆ.ಆನ್‌ಲೈನ್ ಪೋರ್ಟಲ್‌ನಲ್ಲಿ ರಾಜ್ಯಗಳು ಅರ್ಹತೆ, ಜಾತಿ ಸ್ಥಿತಿ, ಆಧಾರ್ ಗುರುತಿಸುವಿಕೆ ಮತ್ತು ಬ್ಯಾಂಕ್ ಖಾತೆ ವಿವರಗಳ ಫೂಲ್ ಪ್ರೂಫ್ ಪರಿಶೀಲನೆಯನ್ನು ಕೈಗೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸಸ್ಯಾಧರಿತ ಮೊಟ್ಟೆ ಸಂಶೋಧಿಸಿದ ಐಐಟಿ ದೆಹಲಿ ಪ್ರೊಫೆಸರ್‌ಗೆ ಜಾಗತಿಕ ಪ್ರಶಸ್ತಿ
ಪ್ರತಿ ಸಂಸ್ಥೆಯಿಂದ ಸಾಮಾಜಿಕ ಲೆಕ್ಕಪರಿಶೋಧನೆ, ವಾರ್ಷಿಕ ತೃತೀಯ ಮೌಲ್ಯಮಾಪನ, ಮತ್ತು ಅರ್ಧ-ವರ್ಷದ ಸ್ವಯಂ-ಲೆಕ್ಕಪರಿಶೋಧನಾ ವರದಿಗಳ ಮೂಲಕ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಮತ್ತಷ್ಟು ಬಲಪಡಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಮುಂದಿನ ಐದು ವರ್ಷಗಳಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಪರಿಶಿಷ್ಟ ವಿದ್ಯಾರ್ಥಿಗಳ ಕಲಿಕೆಗೆ ವಿನಿಯೋಗಿಸುತ್ತಿರುವುದು ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂಬುದು ಶೈಕ್ಷಣಿಕ ವಲಯದ ತಜ್ಞರ ಅನಿಸಿಕೆಯಾಗಿದೆ. ಶಿಕ್ಷಣ ಕ್ಷೇತ್ರದಕ್ಕೆ ನಿರ್ಲಕ್ಷ್ಯ ವ ಹಿಸಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪ ಮಧ್ಯೆಯೇ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು ಜತೆಗೆ ಆಯಾ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಮೊತ್ತವನ್ನು ನೀಡಬೇಕಾಗಿರುವುದರಿಂದ ಆ ಸರ್ಕಾರಗಳಿಗೂ ಶ್ರೇಯ ಸಲ್ಲಲಿದೆ ಎಂಬು ವಿಶ್ಲೇಷಕರ ಅಭಿಪ್ರಾಯವಾಗಿದೆ.
