Asianet Suvarna News Asianet Suvarna News

1 ಕೋಟಿ ವೇತನದ ಕೆಲಸಕ್ಕೆ ಆಯ್ಕೆಯಾದ ಒಂದೇ ವರ್ಷದಲ್ಲಿ ವಜಾಗೊಂಡಿದ್ದ ಐಐಟಿ ಪದವೀಧರ

ಒಂದು ಕೋಟಿ ವೇತನದ ಕೆಲಸಕ್ಕೆ ಆಯ್ಕೆಯಾಗಿದ್ದ ಒಂದೇ ವರ್ಷದಲ್ಲಿ ಪರಾಗ್ ಅಗರ್ವಾಲ್ ಅವರು ಸಂಸ್ಥೆಯಿಂದ ವಜಾಗೊಳ್ಳುವಂತಾಗಿತ್ತು. ಹೀಗೆ ವಜಾಗೊಂಡ ಪರಾಗ್ ಅಗರ್ವಾಲ್ ಅವರು ಈಗೇನ್ ಮಾಡ್ತಿದ್ದಾರೆ ಇಲ್ಲಿದೆ ಡಿಟೇಲ್ ಸ್ಟೋರಿ.

The Rise and Fall of India's Highest Paid IIT Graduate Parag Agarwal akb
Author
First Published Sep 22, 2024, 3:04 PM IST | Last Updated Sep 22, 2024, 3:04 PM IST

ಐಐಟಿಯಲ್ಲಿ ಪದವಿ ಪಡೆದ ಅನೇಕರು ಪ್ರಪಂಚದ ವಿವಿಧ ದೈತ್ಯ ಟೆಕ್ ಕಂಪನಿಗಳನ್ನು ಆಳುತ್ತಿದ್ದಾರೆ.  ಅದೇ ರೀತಿ ಐಐಟಿ ಪದವೀಧರ ಪರಾಗ್ ಅಗರ್ವಾಲ್ ಅವರು ಟ್ವಿಟ್ಟರ್‌ಗೆ ಒಂದು ಕೋಟಿ ವೇತನದ ಸಂಬಳಕ್ಕೆ ಆಯ್ಕೆಯಾಗಿದ್ದರು. ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನ ಸಿಇಒ ಆಗಿದ್ದವರು ಪರಾಗ್ ಅಗರ್ವಾಲ್‌, ಆದರೆ ಯಾವಾಗ ಈ ಟ್ವಿಟ್ಟರ್‌ಗೆ ಎಲಾನ್ ಮಸ್ಕ್ ಮಾಲೀಕರಾದರೋ ಆಗಲೇ ಪರಾಗ್ ಅಗರ್ವಾಲ್ ಅವರಿಗೆ ಸಂಕಷ್ಟ ಕಾದಿತ್ತು.  ಟ್ವಿಟ್ಟರ್‌ನ್ನು ಎಕ್ಸ್ ಎಂದು ಬದಲಾಯಿಸಿದ ಎಲಾನ್ ಮಸ್ಕ್‌, ತಾವು ಟ್ವಿಟ್ಟರ್‌ನ ಮಾಲೀಕತ್ವ ತೆಗೆದುಕೊಳ್ಳುತ್ತಿದ್ದಂತೆ ಪರಾಗ್ ಅಗರ್ವಾಲ್ ಅವರನ್ನು ಮನೆಗೆ ಕಳುಹಿಸಿದ್ದರು. ಹೀಗಾಗಿ  ಒಂದು ಕೋಟಿ ವೇತನದ ಕೆಲಸಕ್ಕೆ ಆಯ್ಕೆಯಾಗಿದ್ದ ಒಂದೇ ವರ್ಷದಲ್ಲಿ ಪರಾಗ್ ಅಗರ್ವಾಲ್ ಅವರು ಸಂಸ್ಥೆಯಿಂದ ವಜಾಗೊಳ್ಳುವಂತಾಗಿತ್ತು. ಹೀಗೆ ವಜಾಗೊಂಡ ಪರಾಗ್ ಅಗರ್ವಾಲ್ ಅವರು ಈಗೇನ್ ಮಾಡ್ತಿದ್ದಾರೆ ಇಲ್ಲಿದೆ ಡಿಟೇಲ್ ಸ್ಟೋರಿ.

ಸೋಶಿಯಲ್ ಮೀಡಿಯಾ ಎಕ್ಸ್ ಅಥವಾ ಟ್ವಿಟ್ಟರನ್ನು ಎಲಾನ್ ಮಸ್ಕ್ ಖರೀದಿಸಿದೆ ಒಂದು ಬಿಗ್ ಡಿಲ್,  ಟ್ವಿಟ್ಟರನ್ನು ಖರೀದಿಸಿದ ನಂತರ ಎಲಾನ್ ಮಸ್ಕ್‌ ಅದರಲ್ಲಿ ಹಲವು ಬದಲಾವಣೆಗಳನ್ನು ತಂದರು, ಪರಾಗ್ ಅಗರ್ವಾಲ್ ಅವರನ್ನು ತೆಗೆದು ಹಾಕುವುದರಿಂದ ಆರಂಭಿಸಿ ಟ್ವಿಟ್ಟರ್‌ನಲ್ಲಿ ಒಂದೊಂದೇ ಬದಲಾವಣೆ ಮಾಡಿದ್ದರು.  ಆದರೆ ಇತ್ತಒಂದು ಕೋಟಿ ಮೊತ್ತದ ಸಂಬಳದ ಹುದ್ದೆಯಿಂದ ಹೊರಗೆ ಹೋದ ಪರಾಗ್‌ ಅಗರ್ವಾಲ್ ಅವರು ಮತ್ತೆ ಹೆಚ್ಚಾಗಿ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ, ಹೀಗಾಗಿ ಅವರು ಏನ್ ಮಾಡುತ್ತಿರಬಹುದು ಎಂಬ ಕುತೂಹಲ ಹಲವರದ್ದು, ಅದಕ್ಕೆ ಈಗ ಬ್ಲೂಮ್ಬರ್ಗ್‌ ಉತ್ತರ ನೀಡಿದೆ. 

ಪರಾಗ್‌ ಅಗರ್ವಾಲ್‌ಗೆ ಗೇಟ್‌ಪಾಸ್‌? ಟ್ವಿಟರ್‌ಗೆ ಹೊಸ CEO ಹುಡುಕಿದ ಎಲೋನ್ ಮಸ್ಕ್ !

ಟ್ವಿಟರ್ ವಿರುದ್ಧ ಕೇಸ್ ಹಾಕಿರುವ ಪರಾಗ್ ಹಾಗೂ ಇತರರು
ನವಂಬರ್‌ 2021ರಿಂದ ಅಕ್ಟೋಬರ್‌ 2022ರವರೆಗೆ ಟ್ವಿಟ್ಟರ್ ಸಿಇಒ ಆಗಿದ್ದ ಪರಾಗ್ ಅಗರ್ವಾಲ್  ಸೇರಿದಂತೆ ಎಲಾನ್ ಮಸ್ಕ್ ವಜಾ ಮಾಡಿದ ಟ್ವಿಟ್ಟರ್ ಸಂಸ್ಥೆಯ ಇತರ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡ ಈಗ ಟ್ವಿಟ್ಟರ್‌ ವಿರುದ್ಧ ಕೇಸ್ ಹಾಕಿದ್ದು, 1000 ಕೋಟಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಆ ಸಂದರ್ಭದಲ್ಲಿ ಪರಾಗ್ ಅಗರ್ವಾಲ್ ಅವರ ವೇತನವು ಸುಮಾರು 94 ಕೋಟಿ ಮೌಲ್ಯದ ನಿರ್ಬಂಧಿತ ಸ್ಟಾಕ್ ಘಟಕಗಳನ್ನು ಹೊರತುಪಡಿಸಿ ಸುಮಾರು 8 ಕೋಟಿ ರೂ. ಇತ್ತು. ಹೀಗಾಗಿ  ಅವರ ಒಟ್ಟು ವೇತನದ ಪ್ಯಾಕೇಜ್ 100 ಕೋಟಿ ರೂ.ದಾಗಿತ್ತು.

ವರದಿಗಳ ಪ್ರಕಾರ, ಬಾಂಬೆ ಐಐಟಿಯ ಪದವೀಧರನಾದ ಪರಾಗ್ ಅಗರ್ವಾಲ್ ಅವರು ಸುಮಾರು 400 ಕೋಟಿ ರೂ. ಹಣ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ ಟ್ವಿಟ್ಟರ್ ಸಂಸ್ಥೆ ವಿರುದ್ಧ ವಜಾಗೊಂಡ ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಎಲಾನ್‌ ಮಸ್ಕ್ ಅವರ ನಿಯಂತ್ರಣದಲ್ಲಿ ಸಂಸ್ಥೆಯೂ ಕಾನೂನು ಉಲ್ಲಂಘಿಸುತ್ತಿದೆ. ಅಲ್ಲಿನ ಉದ್ಯೋಗಿಗಳಿಗೆ ಭೂಮಾಲೀಕರಿಗೆ, ಮಾರಾಟಗಾರರಿಗೆ ಹಾಗೂ ಇತರರಿಗೆ ಮಸ್ಕ್‌ ವೇತನ ನೀಡುತಿಲ್ಲ, ಜೊತೆಗೆ ಅವರು ತಮ್ಮ ಬಿಲ್‌ಗಳನ್ನು ಪಾವತಿಸುವುದಿಲ್ಲ, ನಿಯಮಗಳು ತನಗೆ ಅನ್ವಯಿಸುವುದಿಲ್ಲ ಎಂದು ಮಸ್ಕ್‌ ಅಂದುಕೊಂಡಿದ್ದಾರೆ.. ತನ್ನೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಯಾರ ಮೇಲೆ ಬೇಕಾದರೂ ತಮ್ಮ ಅಧಿಕಾರ ಹಾಗೂ ಸಂಪತ್ತನ್ನು ಬಳಸಿ ಉದ್ದಟತನ ತೋರುತ್ತಿದ್ದಾರೆ ಎಂದು ಪರಾಗ್ ಅಗರ್ವಾಲ್ ಹಾಗೂ ಸಂಸ್ಥೆಯ ಇತರ ಕಾರ್ಯನಿರ್ವಾಹಕರ ಪರ ಅರ್ಜಿ ದೂರು ದಾಖಲಿಸಿರುವ ವಕೀಲರು ತಮ್ಮ 38 ಪುಟಗಳ ದೂರಿನಲ್ಲಿ ಹೇಳಿದ್ದಾರೆ. 

Twitterನಲ್ಲಿ ಕ್ಷಣಾರ್ಧದಲ್ಲಿ ಮಾಯವಾದ್ರು ಲಕ್ಷಾಂತರ ಫಾಲೋವರ್ಸ್‌, CEO ಪರಾಗ್ ಮೇಲೆ ಬಳಕೆದಾರ ಗರಂ!

77ನೇ ಎಐಆರ್‌ ರಾಂಕ್ ಗಳಿಸಿದ್ದ ಪರಾಗ್

ಮೂಲತಃ ಭಾರತದ ಅಜ್ಮೀರ್‌ನವರಾದ ಪರಾಗ್ ಅವರು 2005ರಲ್ಲಿ ಐಐಟಿ ಬಾಂಬೆಯಿಂದ ಪದವಿ ಪೂರ್ಣಗೊಳಿಸಿದ್ದರು. ಅಖಿಲ ಭಾರತ ಮಟ್ಟದಲ್ಲಿ 77ನೇ ರಾಂಕ್ ಗಳಿಸಿದ್ದ ಅವರು. ಇದಾದ ನಂತರ ಅಮೆರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಪಿಎಚ್‌ಡಿ ಮಾಡಲು ಅಮೆರಿಕಾಗೆ ತೆರಳಿದ್ದರು.
ಇವರ ತಾಯಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿದ್ದು ನಿವೃತ್ತಿ ಹೊಂದಿದ್ದರೆ ತಂದೆ ಭಾರತೀಯ ಪರಮಾಣು ಶಕ್ತಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದರು. 2011ರಲ್ಲಿ ಟ್ವಿಟ್ಟರ್‌ಗೆ ಸೇರುವ ಮೊದಲು ಅಗರ್ವಾಲ್ ಅವರು ಯಾಹೂ ಹಾಗೂ ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನಿ ಆಗಿದ್ದರು. ನಂತರ ಟ್ವಿಟ್ಟರ್ ಸೇರಿದ ಅವರು ಆರು ವರ್ಷಗಳ ಕಾಲ ಅಂದರೆ ಅಡಂ ಮೆಸ್ಸಿಂಜೆರ್‌ ಟ್ವಿಟ್ಟರ್‌ ಕಂಪನಿ ತೊರೆಯುವವರೆಗೂ ಅಗರ್ವಾಲ್ ಅದರ ಉದ್ಯೋಗಿಯಾಗಿದ್ದರು. 

ಈಗೇನ್ ಮಾಡ್ತಿದ್ದಾರೆ ಪರಾಗ್ ಅಗರ್ವಾಲ್‌
ವರದಿಗಳ ಪ್ರಕಾರ, ಪರಾಗ್ ಅಗರ್ವಾಲ್  ಅವರು ಈಗ ಕೃತಕ ಬುದ್ಧಿಮತ್ತೆ ಜಗತ್ತಿಗೆ ಕಾಲಿರಿಸಿದ್ದು, ಅದರಲ್ಲಿ ಈಗಾಗಲೇ ಅವರು 249 ಕೋಟಿಯ ಗಮನಾರ್ಹ ಹಣ ಗಳಿಕೆ ಮಾಡಿದ್ದಾರೆ. ವರದಿಗಳ ಪ್ರಕಾರ ಅಗರ್ವಾಲ್ ನಡೆಸುತ್ತಿರುವ ವ್ಯವಹಾರವೂ ಬೃಹತ್ ಭಾಷಾ ಮಾದರಿಗಳನ್ನು ರಚಿಸುವವರಿಗೆ ಸಾಧನಗಳ ತಯಾರಿ ಮಾಡುತ್ತಿದೆ. ಇದು ಒಪನ್ ಎಐನಿಂದ ಚಾಟ್‌ಜಿಪಿಟಿ ಚಾಟ್‌ಬಾಟ್‌ನಿಂದ ಜನಪ್ರಿಯವಾದ ಮಾರುಕಟ್ಟೆಯಾಗಿದೆ. ಅಗರ್ವಾಲ್‌ ಅವರ ಈ ಹೊಸ ಸ್ಟಾರ್ಟ್‌ಅಪ್‌ನಲ್ಲಿ ಆರಂಭದಲ್ಲೇ ವಿನೋದ್ ಖೋಸ್ಲಾ ನೇತೃತ್ವದ ಖೋಸ್ಲಾ ವೆಂಚರ್ಸ್‌ ಹೂಡಿಕೆ ಮಾಡಿದೆ. ಜೊತೆಗೆ ಫಸ್ಟ್ ರೌಂಡ್ ಕ್ಯಾಪಿಟಲ್ ಮತ್ತು ಇಂಡೆಕ್ಸ್ ವೆಂಚರ್ಸ್ ವಹಿವಾಟಿನಲ್ಲಿಯೂ ಭಾಗವಹಿಸಿದೆ ಎಂದು ತಿಳಿದು ಬಂದಿದೆ.

Latest Videos
Follow Us:
Download App:
  • android
  • ios