ಖಾಸಗಿ ಕ್ಷೇತ್ರದಲ್ಲಿ ಲಂಚ, ಕೆಲಸ ಕೊಡಿಸಲು 100 ಕೋಟಿ ರೂ ಪಡೆದ 4 ಟಿಸಿಎಸ್ ಉದ್ಯೋಗಿಗಳು ವಜಾ!
ಸರ್ಕಾರಿ ಉದ್ಯೋಗ, ಸರ್ಕಾರಿ ಕಚೇರಿಯಲ್ಲಿನ ಬಹುತೇಕ ಕೆಲಸಗಳು ಲಂಚ ಇಲ್ಲದೆ ನಡೆಯಲ್ಲ ಅನ್ನೋದು ಅಚ್ಚರಿ ವಿಷಯವಲ್ಲ. ಆದರೆ ಖಾಸಗಿ ಕ್ಷೇತ್ರದಲ್ಲೂ ಲಂಚಾವತಾರ ಭಾರಿ ಪ್ರಮಾಣದಲ್ಲಿದೆ ಅನ್ನೋದು ಬಯಲಾಗಿದೆ. ಪ್ರತಿಷ್ಠಿತ ಟಿಸಿಎಸ್ ಕಂಪನಿಯಲ್ಲಿ ಕೆಲಸ ಕೊಡಿಸಲು ನಾಲ್ವರು ಹಿರಿಯ ಉದ್ಯೋಗಿಗಳು 100ಕೋಟಿ ರೂಪಾಯಿಗೂ ಹೆಚ್ಚು ಲಂಚ ಪಡೆದ ಪ್ರಕರಣ ಬೆಳಕಿಗೆ ಬಂದಿದೆ.
ಮುಂಬೈ(ಜೂ.23) ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಭಾರತದ ಅತೀ ದೊಡ್ಡ ಟೆಕ್ ಕಂಪನಿ. ದೇಶದ ಪ್ರತಿಷ್ಠಿತ ಕಂಪನಿಗಳ ಪೈಕಿ ಟಿಸಿಎಸ್ ಮುಂಚೂಣಿಯಲ್ಲಿದೆ. ಈ ಕಂಪನಿಯಲ್ಲಿ ಕೆಲಸ ಗಿಟ್ಟಿಸಲು ಯುವ ಪ್ರತಿಭೆಗಳು ಹಲವು ಸುತ್ತಿನ ಸಂದರ್ಶನ ಪೂರೈಸಬೇಕು. ಪ್ರತಿಭೆ, ಸಾಮರ್ಥ್ಯವಿದ್ದರೆ ಮಾತ್ರ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯ. ಆದರೆ ಲಂಚ ಪಡೆದು ಬೇಕಾಬಿಟ್ಟಿ ಉದ್ಯೋಗ ನೀಡಿದ ಪ್ರಕರಣ ಇದೀಗ ಟಿಸಿಎಸ್‌ನಲ್ಲಿ ಬೆಳಕಿಗೆ ಬಂದಿದೆ. ಇದು ಬರೋಬ್ಬರಿ 100 ಕೋಟಿ ರೂಪಾಯಿ ಮೊತ್ತದ ಲಂಚ ಪ್ರಕರಣ ಹೊರಬಂದಿದೆ. ಕಳೆದ 3 ವರ್ಷಗಳಿಂದ ಸದ್ದಿಲ್ಲದೆ ಈ ಅಕ್ರಮ ನಡೆಯುತ್ತಿದ್ದು, ಹಲವರು ಇದೇ ರೀತಿ ಲಂಚ ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ . ಈ ಪ್ರಕರಣ ಸಂಬಂಧ ನಾಲ್ವರು ಟಿಸಿಎಸ್ ಹಿರಿಯ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.
ಟಿಸಿಎಸ್ ಕಂಪನಿಯಲ್ಲಿ ಕೆಲಸ ಕೊಡಿಸಲು ಭ್ರಷ್ಟಾಚಾರ ನಡೆಸಿರುವ ಅತೀ ದೊಡ್ಡ ಅಕ್ರಮ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಕಂಪನಿಯ ನೇಮಕಾತಿ ವಿಭಾಗದ ಚೀಫ್ ಎಕ್ಸೂಕೂಟೀವ್ ಆಫೀಸರ್, ಚೀಫ್ ಆಫರೇಟಿಂಗ್ ಆಫೀಸರ್, ರಿಸೋರ್ಸ್ ಮ್ಯಾನೇಜ್ಮೆಂಟ್ ಗ್ರೂಪ್ ಅಧಿಕಾರಿ ಸೇರಿ ನಾಲ್ವರನ್ನು ಟಿಸಿಎಸ್ ವಜಾ ಮಾಡಿದೆ. ನೇಮಕಾತಿ ಮಾಡಲು ಹಣ ಪಡೆದಿದ್ದಾರೆ. ಇಷ್ಟೇ ಅಲ್ಲ ಅಸಮರ್ಥರಿಗೆ ಉದ್ಯೋಗ ನೀಡಿ ಹಣ ಗಿಟ್ಟಿಸಿಕೊಂಡಿದ್ದಾರೆ.
Mandya: ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಾಂಡವಪುರ ತಹಶೀಲ್ದಾರ್ ಸೌಮ್ಯ
ಈ ಪ್ರಕರಣ ಸಂಬಂಧ ಆಂತರಿಕ ತನಿಖೆ ನಡೆಸಲು ಮೂರು ಸದಸ್ಯರ ಸಮಿತಿ ನೇಮಕ ಮಾಡಲಾಗಿದೆ.ಈ ಅಕ್ರಮದ ಮೂಲಕ 100 ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದಾರೆ ಎಂದು ಆಂತರಿಕ ತನಿಖಾ ಸಮಿತಿ ವರದಿ ನೀಡಿದೆ. ಕಂಪನಿಯ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಕಂಪನಿ ಮುಂದಾಗಿದೆ. ಪ್ರತಿಭೆಗಳಿಗೆ ಉದ್ಯೋಗ ನೀಡದೆ, ಹಣ ನೀಡಿದವರಿಗೆ ಉದ್ಯೋಗ ನೀಡಿರುವ ಈ ಘಟನೆ ಟಿಸಿಎಸ್ ಕಂಪನಿಗೆ ತೀವ್ರ ಹಿನ್ನಡೆ ತಂದಿದೆ.
ಕಳೆದ ವರ್ಷದ ಪ್ರಕಾರ ಟಿಸಿಎಸ್ ಭಾರತದಲ್ಲಿ 614,795 ಉದ್ಯೋಗಿಗಳನ್ನು ಹೊಂದಿದೆ. ಇದೀಗ ಹಣ ನೀಡಿ ಉದ್ಯೋಗ ಗಿಟ್ಟಿಸಿಕೊಂಡ ಉದ್ಯೋಗಿಗಳಿಗೂ ಸಂಕಷ್ಟ ಎದುರಾಗಿದೆ. ವಜಾಗೊಂಡಿರುವ ಹಿರಿಯ ಅಧಿಕಾರಿಗಳು ಬಾಯಿಬಿಟ್ಟರೆ ಹಲವರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಟಿಸಿಎಸ್ ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ.
ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಉದ್ಯೋಗಿಗಳಿಗೆ ನೀಡಲಾಗಿದ್ದ ವರ್ಕ್ ಫ್ರಂ ಹೋಮ್ ಅವಕಾಶವನ್ನು ನಿಲ್ಲಿಸಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿದ್ದಕ್ಕೆ ಭಾರತದ ದೈತ್ಯ ಐಟಿ ಕಂಪನಿ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್) ನ ಮಹಿಳಾ ಉದ್ಯೋಗಿಗಳು ಸಾಮೂಹಿಕವಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಒಟ್ಟು 6 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯಲ್ಲಿ ಶೇ.35 ರಷ್ಟುಉದ್ಯೋಗಿಗಳು ಹಾಗೂ ನಾಲ್ಕನೇಯ ಮೂರರಷ್ಟುಉನ್ನತ ಹುದ್ದೆಗಳ ಉದ್ಯೋಗಿಗಳು ಮಹಿಳೆಯರೇ ಆಗಿದ್ದು ದಿಢೀರ್ ರಾಜೀನಾಮೆ ಸಂಸ್ಥೆಯ ಕಾರ್ಯಪ್ರಗತಿಗೆ ಸಂಕಷ್ಟತಂದೊಡ್ಡಿದೆ.
ಬೆಂಗಳೂರು: 10ನೇ ತರಗತಿಗೆ ತೇರ್ಗಡೆಗೆ ಲಂಚ: ಪ್ರಾಂಶುಪಾಲ ಪೊಲೀಸರ ಬಲೆಗೆ
‘ವರ್ಕ್ ಫ್ರಂ ಹೋಮ್ ಅವಕಾಶವನ್ನು ನಿಲ್ಲಿಸಿದ ನಂತರ ಮಹಿಳಾ ಉದ್ಯೋಗಿಗಳ ರಾಜೀನಾಮೆ ಪ್ರಮಾಣ ಭಾರೀ ಏರಿಕೆಯಾಗಿದ್ದು ಹಲವಾರು ಕಾರಣಗಳ ಹೊರತಾಗಿಯೂ ಇದುವೇ ಕ್ಷಿಪ್ರ ರಾಜೀನಾಮೆ ಪ್ರವೃತ್ತಿಗೆ ಕಾರಣವಾಗಿದೆ. ಆದರೆ ಇದು ಯಾವುದೇ ತಾರತಮ್ಯದಿಂದ ಪ್ರೇರಿತವಾಗಿಲ್ಲ. ಅದಾಗ್ಯೂ ಪುರುಷ ಉದ್ಯೋಗಿಗಳ ರಾಜೀನಾಮೆ ಪ್ರಮಾಣಕ್ಕೆ ಹೋಲಿಸಿದರೆ ಮಹಿಳಾ ಉದ್ಯೋಗಿಗಳ ರಾಜೀನಾಮೆ ಕಡಿಮೆ ಪ್ರಮಾಣದಲ್ಲಿದೆ’ ಎಂದು ಕಂಪನಿ ಹೇಳಿಕೊಂಡಿದೆ.