TCS ವರ್ಕ್ ಫ್ರಮ್ ಹೋಮ್ ಅಂತ್ಯ, ವಾರದಲ್ಲಿ 5 ದಿನ ಕಚೇರಿಗೆ ಮರಳಲು ಸೂಚಿಸಿದ ಹಿಂದಿದೆ 1 ಕಾರಣ!

ಟಿಸಿಎಸ್ ಕಂಪನಿ ಕೊರೋನಾ ಸಮಯದಲ್ಲಿ ನೀಡಿದ್ದ ವರ್ಕ್ ಫ್ರಮ್ ಹೋಮ್, ಹೈಬ್ರಿಡ್ ಮಾಡೆಲ್‌ಗೆ ಅಂತ್ಯಹಾಡಿದೆ. ಇದೀಗ ಉದ್ಯೋಗಿಗಳು ವಾರದಲ್ಲಿ 5 ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿದೆ. ಟಿಸಿಎಸ್ ಈ ನಿರ್ಧಾರ ಕೈಗೊಂಡಿದ್ದೇಕೆ?
 

TCS end Work from home policy ask employee to join office to understand company values ckm

ನವದೆಹಲಿ(ಅ.12) ಕೊರೋನಾ ಸಮಯದಲ್ಲಿ ಐಟಿ ಕಂಪನಿಗಳು ಸೇರಿದಂತೆ ಬಹುತೇಕ ಕಂಪನಿಗಳು ಉದ್ಯೋಗಳಿಗೆ ಮನೆಯಿಂದ ಕೆಲಸ ಮಾಡಲು ಅನುವು ಮಾಡಿಕೊಟ್ಟಿತ್ತು. ಕೊರೋನಾ ಬಳಿಕ ಒಂದೊಂದೆ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಿಕೊಂಡಿತ್ತು. ಸುದೀರ್ಘ ದಿನಗಳಿಂದ ವರ್ಕ್ ಫ್ರಮ್ ಹೋಮ್, ಹೈಬ್ರಿಡ್ ಮಾಡೆಲ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿ ಇದೀಗ ಕಚೇರಿಯಿಂದ ಕೆಲಸ ಕಡ್ಡಾಯ ಮಾಡಿದೆ. ಉದ್ಯೋಗಿಗಳು ವಾರದಲ್ಲಿ 5 ದಿನ ಕಚೇರಿಯಿಂದ ಕೆಲಸ ಕಡ್ಡಾಯಗೊಳಿಸಿದೆ. ಇದರ ಹಿಂದೆ ಒಂದು ಮುಖ್ಯ ಕಾರಣವನ್ನೂ ಕಂಪನಿ ನೀಡಿದೆ.

ಇದೀಗ ಕೊರೋನಾಗೂ ಮೊದಲು ಇದ್ದ ಕೆಚೇರಿ ಕೆಲಸದ ನಿಯಮಗಳೇ ಜಾರಿ ಮಾಡಲಾಗಿದೆ. ಕಳೆದ 3 ವರ್ಷದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಪನಿ ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಂಡಿದೆ. ಕಂಪನಿ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಫ್ರೆಶರ್ಸ್, ಜೂನಿಯರ್ಸ್, ಸೀನಿಯರ್ಸ್ ಸೇರಿದಂತೆ ಹಲವರು ಟಿಸಿಎಸ್ ಸೇರಿಕೊಂಡಿದ್ದಾರೆ. ಟಿಸಿಎಸ್ ಕಂಪನಿ ತನ್ನ ಉದ್ದೇಶಿತ ಗುರಿಯನ್ನು ಸುಲಭವಾಗಿ, ಯಾವುದೇ ಒತ್ತಡ, ಅಡೆ ತಡೆ ಇಲ್ಲದೆ ಸಾಧಿಸಬೇಕು. ಹೊಸ ಉದ್ಯೋಗಿಗಳು, ಕಂಪನಿಯಲ್ಲಿ ಹಿರಿಯ ಉದ್ಯೋಗಿಗಳು ಎಲ್ಲರೂ ಸಂಯೋಜನೆಗೊಳ್ಳಲು ಎಲ್ಲರೂ ಕಚೇರಿಗೆ ಬರಬೇಕು. ಜೊತೆಯಾಗಿ ಕೆಲಸ ಮಾಡಬೇಕು ಎಂದು ಟಿಸಿಎಸ್ ಕಂಪನಿ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಹೇಳಿದ್ದಾರೆ.

ಟಾಟಾ ಗ್ರೂಪ್ ಬ್ರ್ಯಾಂಡಿಂಗ್ ಬಳಸಲು ಭಾರತದ ಅತಿದೊಡ್ಡ ಐಟಿ ಕಂಪನಿ ನೀಡೋ ಹಣ ಎಷ್ಟು ನೋಡಿ..

ಟೀಂ ವರ್ಕ್ ಮೂಲಕ ಟಿಸಿಎಸ್ ಗುರಿ ಸಾಧಿಸುತ್ತದೆ. ಟೀಂ ವರ್ಕ್, ಟಿಸಿಎಸ್ ಮೌಲ್ಯ, ಟಿಸಿಎಸ್ ಹಿರಿಯ ಅನುಭವಗಳನ್ನು ಕಿರಿಯರಿಗೆ ಕಲಿಸಿಕೊಡಲು ಎಲ್ಲರೂ ಕಚೇರಿಯಲ್ಲಿ ಕೆಲಸ ಮಾಡಿದರೆ ಮಾತ್ರ ಸಾಧ್ಯ. ಹೊಸಬರಿಗೆ ಕಲಿತುಕೊಳ್ಳುವ, ಅರ್ಥ ಮಾಡಿಕೊಳ್ಳುವ, ಅನುಭವ ಪಾಠಗಳನ್ನು ಹೇಳಿಕೊಡಲು ಕಚೇರಿಯಿಂದ ಕೆಲಸ ಮಾಡಿದರೆ ಮಾತ್ರ ಸಾಧ್ಯ. ಹೀಗಾಗಿ ಎಲ್ಲಾ ಟಿಸಿಎಸ್ ಉದ್ಯೋಗಿಗಳಿಗೆ ವಾರದಲ್ಲಿ 5 ದಿನ ಕಚೇರಿಯಿಂದ ಕೆಲಸ ಮಾಡಲು ಇಮೇಲ್ ಕಳುಹಿಸಲಾಗಿದೆ ಎಂದು ಮಿಲಿಂದ್ ಹೇಳಿದ್ದಾರೆ.

ಅಕ್ಟೋಬರ್ ಆರಂಭದಿಂದಲೇ ಟಿಸಿಎಸ್ ತನ್ನ ಎಲ್ಲಾ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಂಡಿದೆ. ಕೊರೋನಾ ಸಮಯದಲ್ಲಿ ಟಿಸಿಎಸ್ ಕಂಪನಿ, ಹೊಸ ವರ್ಕ್ ಪಾಲಿಸಿ ಪ್ರಕಟಿಸಿತ್ತು. ಇದರ ಪ್ರಕಾರ ಎಲ್ಲರಿಗೂ ವರ್ಕ್ ಪ್ರಮ್ ಹೋಮ್ ನೀಡಲಾಗಿತ್ತು. ಸುರಕ್ಷತೆ, ಸರ್ಕಾರದ ಕ್ವಾರಂಟೈನ್ ಸೇರಿದಂತೆ ಹಲವು ನಿಯಮಗಳಿಂದ ಈ ಪಾಲಿಸಿ ಜಾರಿಗೊಳಿಸಿತ್ತು. 2022ರ ಅಂತ್ಯದಲ್ಲಿ ಟಿಸಿಎಸ್ ಹೈಬ್ರಿಡ್ ಮಾಡೆಲ್ ಪಾಲಿಸಿ ಜಾರಿಗೊಳಿಸಿತ್ತು. ಈ ಪಾಲಿಸಿ ಪ್ರಕಾರ ನಿಗದಿತ ಉದ್ಯೋಗಿಗಳು 3 ದಿನ ಕಚೇರಿಯಿಂದ ಕೆಲಸ ಇನ್ನೆರಡು ದಿನ ಮನೆಯಿಂದ ಕೆಲಸದ ಪಾಲಿಸಿ ಜಾರಿ ಮಾಡಿತ್ತು. ಇದೀಗ ಟಿಸಿಎಸ್ ಮತ್ತೆ ಪಾಲಿಸಿ ಬದಲಾಯಿಸಿದೆ. ವಾರದ 5 ದಿನ ಕಚೇರಿಯಿಂದ ಕೆಲಸದ ಪಾಲಿಸಿ ಜಾರಿಗೊಳಿಸಿದೆ.

 

ಇಂಟರ್ನ್‌ಷಿಪ್‌ಗಾಗಿ 13 ಜಾಬ್‌ ಆಫರ್‌ ತಿರಸ್ಕರಿಸಿದ ಬೆಂಗಳೂರು ಟೆಕ್ಕಿ, ಈಗ ಆಕೆ ಸಂಬಳ ನೋಡಿದ್ರಾ?

Latest Videos
Follow Us:
Download App:
  • android
  • ios