ಸ್ಯಾಲರಿ ಮಾತುಕತೆಗೆ ಅಮ್ಮನ ಕರೆತಂದರೆ ಹೇಗೆ? ಟೆಕ್ಕಿಯ ಪ್ರಶ್ನೆಗೆ ನೆಟ್ಟಿಗರ ಉತ್ತರ

ಯುವಕನೋರ್ವ  ಸ್ಯಾಲರಿ ಕೇಳಿದಾಗ ಇದನ್ನು ನಮ್ಮ ಅಮ್ಮ ನಿರ್ಧರಿಸಬಹುದಾ ಎಂದು ಸಂದರ್ಶನ ಮಾಡುವವರ ಬಳಿ ಕೇಳಿದ್ದು, ಇದರ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

software engineer asked if He Can Bring His Mom For Salary Negotiations akb

ಮಾಲ್‌ಗಳನ್ನು ಹೊರತುಪಡಿಸಿ ಮಾರುಕಟ್ಟೆಗಳಿಗೆ ಹೋದಾಗ ಕೆಲವರು ಬೆಲೆ ಜಾಸ್ತಿ ಹೇಳಿದರೆ ಕಡಿಮೆಗೆ ಕೊಡಿ ಅಂತ ವಾದ ಮಾಡ್ತಾರೆ. ಆ ವಾದ ಮಾಡಲು ಜೊತೆ ಇರುವ ಎಲ್ಲರನ್ನು ಸೇರಿಸ್ತಾರೆ. ಕೊನೆಗೆ ವಿಧಿ ಇಲ್ಲದೇ ಆ ವ್ಯಾಪಾರಿ ಅದನ್ನು ನಾವು ಕೇಳಿದ ಬೆಲೆಗೆ ಕೊಡುವವರೆಗೆ ಬಿಡದೇ ವಾದ ಮಾಡ್ತಾರೆ ಅದೇನೋ ಮಾರುಕಟ್ಟೆ. ಯಾರು ಬೇಕಾದರೂ ವಾದ ಮಾಡಬಹುದು. ಆದರೆ ಉದ್ಯೋಗ ಸಂಸ್ಥೆಯಲ್ಲಿ ಸ್ಯಾಲರಿ ಬಗ್ಗೆ ಹೀಗೆ ವಾದ ಮಾಡಲು ಸಾಧ್ಯನಾ. ಕಡಿಮೆ ಹೇಳಿದರೆ ಎಲ್ಲರೂ ಸೇರಿ ಜಾಸ್ತಿ ಕೊಡಿ ಎಂದು ಕೇಳೋಕ್ಕಾಗಲ್ಲ. ಬಹುತೇಕರಿಗೆ ಎಷ್ಟು ಸ್ಯಾಲರಿ ಕೇಳಬೇಕು ಎಂಬುದೇ ಸಮಸ್ಯೆ. ಜಾಸ್ತಿ ಕೇಳಿದರೆ ಎಲ್ಲಿ ರಿಜೆಕ್ಟ್‌ ಮಾಡ್ತಾರೋ ಕಡಿಮೆ ಕೇಳಿದರೆ ಬದುಕುವುದು ಹೇಗೋ ಎಂಬ ಚಿಂತೆ ಅನೇಕರದ್ದು. 

ಆದರೆ ಒಬ್ಬ ಯುವಕ ಮಾತ್ರ ಸ್ಯಾಲರಿ ಕೇಳಿದಾಗ ಇದನ್ನು ನಮ್ಮ ಅಮ್ಮ ನಿರ್ಧರಿಸಬಹುದಾ ಎಂದು ಸಂದರ್ಶನ ಮಾಡುವವರ ಬಳಿ ಕೇಳಿದ್ದು, ಇದರ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮ್ಮಂದಿರು ಉತ್ತಮ ಸಂಧಾನಕಾರರು. ಇದು ಅವರ ಜೊತೆ ಜೊತೆಯೇ ಬದುಕುವ ನಮಗೆ ಅನೇಕ ಬಾರಿ ಅನುಭವಕ್ಕೆ ಬಂದಿರುತ್ತದೆ. ಆದರೆ ಒಬ್ಬ ಟೆಕ್ಕಿ ಮಾತ್ರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದ. ಇದೇ ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಾಫ್ಟ್‌ವೇರ್‌ ಇಂಜಿನಿಯರ್ ಒಬ್ಬರು, ಕಂಪನಿಯೂ ನಿಮಗೆ ಸಂಬಳ ಕೊಡುವ ಬಗ್ಗೆ ಮಾತುಕತೆ ನಡೆಸುವ ವೇಳೆ ಅಮ್ಮನನ್ನು ಕರೆದುಕೊಂಡು ಬಂದರೆ ಆಕೆ ಸರಿಯಾದ ಒಪ್ಪಂದ ಮಾಡುತ್ತಾಳೆ ಎಂದು ಹೇಳಿದ್ದಾರೆ. ಕೆಲಸದ ಆಯ್ಕೆ ಬಳಿಕ ನಿಮಗೆಷ್ಟು ಸ್ಯಾಲರಿ ಬೇಕು. ನೀವು ಎಷ್ಟು ಸ್ಯಾಲರಿ ಪಡೆಯಲು ಅರ್ಹರು ಎಂಬುದನ್ನು ನೀವು ನಿರ್ಧರಿಸಲಾಗದಿದ್ದರೆ ಈ ಸ್ಯಾಲರಿಯ ಮಾತುಕತೆ ತುಂಬಾ ಕಷ್ಟಕರವೆನಿಸುವುದು ಜೊತೆಗೆ ನಿಮಗೆ ಆರ್ಥಿಕ ಹಾನಿಯನ್ನು ಉಂಟು ಮಾಡುವುದು. 

ಇದ್ದಕ್ಕಿದ್ದಂತೆ ಅಕೌಂಟ್‌ಗೆ ಬಿತ್ತು ಕೋಟಿ ರೂ. ಸ್ಯಾಲರಿ: ಕೆಲಸಕ್ಕೆ ರಾಜೀನಾಮೆ ನೀಡಿ ಉದ್ಯೋಗಿ ಪರಾರಿ

ಸಾಮಾನ್ಯವಾಗಿ ನಾವು ಎಷ್ಟೇ ಸ್ಯಾಲರಿ ಕೇಳಿದರೂ ನಮ್ಮ ಮಾನವ ಸಂಪನ್ಮೂಲ ಅಧಿಕಾರಿಗಳು ನಮಗೆ ಅವರು ನಿರ್ಧರಿಸಿದ ಸ್ಯಾಲರಿಯನ್ನಷ್ಟೇ ಕೊಡುತ್ತಾರೆ. ಈ ಸ್ಯಾಲರಿ ಮಾತುಕತೆ ವೇಳೆ ಅನೇಕರು ಎಡವುತ್ತಾರೆ. ಕೆಲವೊಮ್ಮೆ ಹಿರಿಯರು, ತಜ್ಞರ ಸಲಹೆ ಪಡೆಲು ಬಯಸುತ್ತಾರೆ. ಆದರೆ ಸಾಫ್ಟ್‌ವೇರ್ ಇಂಜಿನಿಯರ್ (software engineer) ಆಗಿರುವ ನಿತೇಶ್ ಯಾದವ್ (Nitesh Yadav) ಅವರು ತಮ್ಮ ವಿನೂತನ ಕಲ್ಪನೆಯಿಂದ ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಈ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ತಮ್ಮ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿರುವ ನಿತೇಶ್, ನಾನು ನನ್ನ ತಾಯಿಯನ್ನು ಸಂಬಳ ಮಾತುಕತೆ ಕರೆಗೆ ಕರೆತರಬಹುದೇ? ಅವಳು ಖಂಡಿತವಾಗಿಯೂ ಉತ್ತಮ ವ್ಯವಹಾರವನ್ನು ಮಾಡಬಹುದು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಬಳಕೆದಾರರು ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ. 

ಪೋರ್ನ್‌ ವೀಕ್ಷಿಸಲು ಪ್ರತಿ ಗಂಟೆಗೆ 1,500 ರೂಪಾಯಿ, 90 ಮಂದಿ ಹಿಂದಿಕ್ಕಿ ಕೆಲಸ ಗಿಟ್ಟಿಸಿದ ಯುವತಿ!

ಅನೇಕರು ನಿತೇಶ್ ಅವರ ಕಲ್ಪನೆ ಸರಿಯಾದುದು ಎಂದು ಹೇಳಿದರೆ ಇನ್ನು ಹಲವರು ತಮ್ಮ ತಂದೆಯನ್ನು ಕರೆತರಲು ಇಷ್ಟಪಟ್ಟರು. ಇನ್ನು ಕೆಲವರು ನಾನು ನನ್ನ ಹೆಂಡತಿ ಹಾಗೂ ತಾಯಿ ಇಬ್ಬರನ್ನು ಮಾತುಕತೆಗೆ ಕರೆತರಲೇ ಎಂದು ಕೇಳಿದರು.  ಇಂತಹ ಸನ್ನಿವೇಶದಲ್ಲಿ ಮಾನವ ಸಂಪನ್ಮೂಲ ನೇಮಕಾತಿ ಮಾಡುವವರ ಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಿಜವಾಗಿಯೂ ತಾಯಿಯಂದಿರು ಉತ್ತಮವಾದ ಕೌಶಲ್ಯವನ್ನು ಹೊಂದಿದ್ದಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಲಿಂಕ್ಡಿನ್ ಪೋಸ್ಟ್‌ನ್ನು (Linkdin) ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 
 

Latest Videos
Follow Us:
Download App:
  • android
  • ios