Asianet Suvarna News Asianet Suvarna News

1000ಕ್ಕೂ ಅಧಿಕ ಎಂಜನಿಯರ್ ನೇಮಕಕ್ಕೆ ಮುಂದಾದ ಸ್ಯಾಮ್ಸಂಗ್

ಜಗತ್ತಿನ ಪ್ರಮುಖ ಕಂಪನಿಯಾಗಿರುವ ಸ್ಯಾಮ್ಸಂಗ್ (Samsung India) ಭಾರತದಲ್ಲಿ ಈ ಬಾರಿ ಸಾವಿರಕ್ಕೂ ಅಧಿಕ ಎಂಜಿನಿಯರ್‌ಗಳನ್ನು ನೇಮಕ ಮಾಡಲು ಯೋಜನೆ ರೂಪಿಸಿದೆ. ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳೆನಿಸಿರುವ ಐಐಟಿ ಮತ್ತು ಅತ್ಯುನ್ನತ ಎಂಜಿನಿಯರ್ ಶಿಕ್ಷಣ ಸಂಸ್ಥೆಗಳ ಪದವೀಧರರನ್ನು ಆಯ್ಕೆ ಮಾಡಿಕೊಳ್ಳಲಿದೆ. ಈ ಹಿಂದೆಯೂ ಕಂಪನಿ ಇದೇ ಬೃಹತ್ ಸಂಖ್ಯೆಯಲ್ಲಿ ನೇಮಕಾತಿಯನ್ನು ಮಾಡಿಕೊಂಡಿತ್ತು.

Samsung India is planning to  recruit more than 1000 engineers for IITs and other institution
Author
Bengaluru, First Published Nov 29, 2021, 6:18 PM IST
  • Facebook
  • Twitter
  • Whatsapp

ಸ್ಯಾಮ್ಸಂಗ್ ಇಂಡಿಯಾ (Samsung India), ಸಾಂಕ್ರಾಮಿಕ ಕೊರೊನಾ ಕ್ಷೀಣಿಸಿದ ಬಳಿಕ ಇದೇ ಮೊದಲ ಬಾರಿಗೆ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಕೈಹಾಕಿದೆ. ದೇಶದಲ್ಲಿ ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆಯನ್ನ ಶುರು ಮಾಡಿದೆ.  ಐಐಟಿ (IIT) ಹಾಗೂ ದೇಶದ ಅತ್ಯುನ್ನತ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆ (Engineering Education) ಗಳಲ್ಲಿರುವ 1,000ಕ್ಕೂ ಹೆಚ್ಚು ಇಂಜಿನಿಯರ್ಗಳನ್ನು ನೇಮಕ ಮಾಡಿಕೊಳ್ಳಲು ಸ್ಯಾಮ್ಸಂಗ್  ಇಂಡಿಯಾ ಸಜ್ಜಾಗಿದೆ.  ಬೆಂಗಳೂರು (Bengaluru), ನವದೆಹಲಿ (NewDelhi) ಹಾಗೂ ನೋಯಿಡಾ (Noida) ದಲ್ಲಿರುವ ಸ್ಯಾಮ್ಸಂಗ್‌ ಆರ್‌ & ಡಿ (R & D) ಕೇಂದ್ರಗಳಿಗೆ ಈ ನೇಮಕಾತಿ ಮಾಡಿಕೊಳ್ಳಲಾಗುವುದು. ಭಾರತ ಹಾಗೂ ಜಾಗತಿಕ ಮಾರುಕಟ್ಟೆಗೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಈ ಆರ್‌ & ಡಿ (R & D) ಶಾಖೆಗೆ ಸೇರಲಿರುವ ಯಂಗ್ ಇಂಜಿನಿಯರ್ಸ್, ಕೃತಕ ಬುದ್ಧಿಮತ್ತೆ (artificial intelligence - AI), ಯಂತ್ರ ಕಲಿಕೆ (machine learning - ML), ಅಂತರ್ಜಾಲಾಧರಿತ ವಸ್ತುಗಳು (Internet of Things - IoT), deep learning, ನೆಟ್ವರ್ಕ್ಸ್ (networks), ಚಿತ್ರಗಳ ಸಂಸ್ಕರಣೆಯಂಥ ಅನೇಕ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಅಧ್ಯಯನ ನಡೆಸಲಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಸಾಕಷ್ಟು ಉದ್ಯೋಗಕ್ಕೆ ಹೊಡೆತ ಬಿದ್ದಿತ್ತು. ಇದೀಗ ಕೋವಿಡ್ ಪೂರ್ವ ಸ್ಥಿತಿಗೆ ಎಲ್ಲವೂ ಮರಳುತ್ತಿದ್ದು, ನೇಮಕಾತಿ ಪ್ರಕ್ರಿಯೆಗಳೂ ಕೂಡ ಹೆಚ್ಚಾಗುತ್ತಿವೆ ಎಂಬುದಕ್ಕೆ ಸ್ಯಾಮ್ಸಂಗ್‌ನ ಈ ನೇಮಕಾತಿಯನ್ನ ಉದಾಹರಿಸಬಹುದು.

ಸದ್ಯ ನಮ್ಮಲ್ಲಿ 9,000-10,000 ಮಂದಿ ಟೆಕ್ನಿಷಿಯನ್ಸ್ ಇದ್ದು, ನಮ್ಮ ಮೂರು ಆರ್‌ & ಡಿ (R&D) ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಐಐಟಿಗಳು ಹಾಗೂ ಇತರೆ ಅಗ್ರ ಸಂಸ್ಥೆಗಳಿಂದ 1000 ಪ್ಲಸ್ ತಂತ್ರಜ್ಞರನ್ನು ನೇಮಕ  ಮಾಡಲು ನಾವು ಇಚ್ಛಿಸುತ್ತೇವೆ ಎಂದು ಸ್ಯಾಮ್ಸಂಗ್ ಇಂಡಿಯಾದ ಮಾನವ ಸಂಪನ್ಮೂಲ(Human Resources) ವಿಭಾಗದ ಮುಖ್ಯಸ್ಥ ಸಮೀರ್‌ ವಾಧವನ್ (Sameer Vadhavan) ತಿಳಿಸಿದ್ದಾರೆ.

Jobs Vacancy: ಭಾರತೀಯ ಐಟಿ ಕ್ಷೇತ್ರದಿಂದ ಭರ್ಜರಿ ನೇಮಕಾತಿ !

ಭಾರತದಲ್ಲಿ ತನ್ನ ಮೊದಲ ಆರ್‌ ಆಂಡ್ ಡಿ (R & D) ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸಿರುವ ಸ್ಯಾಮ್‌ಸಂಗ್, ದಕ್ಷಿಣ ಕೊರಿಯಾದ ಹೊರಗೆ ಅತ್ಯಂತ ದೊಡ್ಡ ಆರ್‌ & ಡಿ (R & D) ವ್ಯವಸ್ಥೆಗಳನ್ನು ಹೊಂದಿರೋದು ನಮ್ಮ ದೇಶದಲ್ಲಿ ಮಾತ್ರ. ದಕ್ಷಿಣ ಕೊರಿಯಾದ ಈ ದಿಗ್ಗಜ ಸಂಸ್ಥೆಯು 2020ರಲ್ಲಿ ದೇಶದ ಅಗ್ರ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಂದ 1,200ಕ್ಕೂ ಹೆಚ್ಚಿನ ಇಂಜಿನಿಯರ್‌ಗಳನ್ನು ನೇಮಕಾತಿ ಮಾಡಿಕೊಡಿತ್ತು. ಈ ವರ್ಷ 1,000 ಇಂಜಿನಿಯರ್ಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. 

ದೆಹಲಿ (Delhi), ಕಾನ್ಪುರ (Kanpur), ಮುಂಬೈ (Mumbai), ಚೆನ್ನೈ (Chennai), ಗುವಾಹಟಿ (Guwahati), ಖರಗ್‌ಪುರ (Kharagpur), ಬಿಎಚ್‌ಯು (BHU), ರೂರ್ಕಿ (Roorkee) ಮತ್ತು ಇತರ ಹೊಸ ಐಐಟಿಗಳಲ್ಲಿರುವ ಕ್ಯಾಂಪಸ್‌ಗಳಿಂದ ಸ್ಯಾಮ್‌ಸಂಗ್ ಸುಮಾರು 260 ಇಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲಿದೆ.  ಇತರ ಉನ್ನತ ಎಂಜಿನಿಯರಿಂಗ್ ಕಾಲೇಜುಗಳಾದ ಬಿಐಟಿಎಸ್ ಪಿಲಾನಿ, ಐಐಐಟಿಗಳು ಮತ್ತು ಎನ್‌ಐಟಿಗಳಿಂದ ಉಳಿದ 640 ಇಂಜಿನಿಯರ್ಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. 

ಭಾರತ-ನಿರ್ದಿಷ್ಟ ಸವಾಲುಗಳಿಗೆ ನವೀನ ಪರಿಹಾರಗಳನ್ನು ನಿರ್ಮಿಸುವ ತನ್ನ ಪ್ರಯತ್ನಗಳನ್ನು ಬೆಂಬಲಿಸಲು ಸ್ಯಾಮ್‌ಸಂಗ್ ಇಂಡಿಯಾ (Samsung India) ಕಂಪನಿಯು, ಕಂಪ್ಯೂಟರ್ ವಿಜ್ಞಾನ (computer science), ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ (Electronics and communication), ಎಲೆಕ್ಟ್ರಿಕಲ್ ಎಂಜಿನಿಯರಿಂಗ್ (Electrical Engineering), ಗಣಿತ (mathematics) ಮತ್ತು ಕಂಪ್ಯೂಟಿಂಗ್ (Computing), ಉಪಕರಣ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಅನೇಕ ಸ್ಟ್ರೀಮ್‌ಗಳಿಂದ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳಲು ಪ್ಲಾನ್ ಮಾಡಿದೆ.

Wipro Recruitment: ಎಂಜಿನಿಯರ್ ಪದವೀಧರರಿಗೆ ಉದ್ಯೋಗಾವಕಾಶ

Follow Us:
Download App:
  • android
  • ios