Asianet Suvarna News Asianet Suvarna News

Jobs Vacancy: ಭಾರತೀಯ ಐಟಿ ಕ್ಷೇತ್ರದಿಂದ ಭರ್ಜರಿ ನೇಮಕಾತಿ !

ಭಾರತದಲ್ಲಿ ಉದ್ಯೋಗಾವಕಾಶ ಸೃಷ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ (Information Technology)  ವಲಯವೂ ಯಾವತ್ತಿಗೂ ಮುಂದಿದೆ. ಈಗ ವರದಿಯೊಂದರ ಪ್ರಕಾರ, ಮಾಹಿತಿ ತಂತ್ರಜ್ಞಾನ ವಲಯು 4.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎನ್ನಲಾಗಿದೆ. ದೇಶವು ನಿಧಾನವಾಗಿ ಕೋವಿಡ್ ಪೂರ್ವ ಸ್ಥಿತಿಗೆ ಮರಳುತ್ತಿದ್ದು, ನೇಮಕಾತಿ ಚಟುವಟಿಕೆಗಳು ಹೆಚ್ಚಾಗುತ್ತಿವೆ.

IT industry may provide 4 lakh jobs says report
Author
Bengaluru, First Published Nov 27, 2021, 4:39 PM IST

ಕೋವಿಡ್ (Covid-19 ) ಕಾರಣದಿಂದ ಭಾರತವು ಮಾತ್ರವಲ್ಲದೇ ಇಡೀ ಪ್ರಪಂಚವೇ ಸಂಕಟದ ಸ್ಥಿತಿಯನ್ನು ಎದುರಿಸಿ ಈಗ ಚೇತರಿಸಿಕೊಳ್ಳುತ್ತಿದೆ. ಇಷ್ಟಾಗಿಯೂ ಮೂರನೇ ಅಲೆಯ  ಭೀತಿಯ ಇದೆ. ಆದರೂ, ಕೋವಿಡ್ ಪೂರ್ವ ಸ್ಥಿತಿಗೆ ದೇಶ ಮರಳುತ್ತಿದ್ದು, ಉದ್ಯೋಗಿ ನೇಮಕಾತಿಯಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಇದಕ್ಕೆ ಉದಾಹರಣೆ ಎಂದರೆ, ಐಟಿ ಕ್ಷೇತ್ರ. ಈ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಐಟಿ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಐಟಿ ವಲಯವು (IT Industry) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಶೀಘ್ರದಲ್ಲೇ ಐಟಿ ವಲಯವು ಭಾರತದಲ್ಲಿ 4.5 ಲಕ್ಷ ಉದ್ಯೋಗಿಗಳನ್ನು (4.5 lakh employee) ನೇಮಿಸಿಕೊಳ್ಳಲು ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ. ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವು ಇಳಿಮುಖವಾಗುತ್ತಿದ್ದು, ಕೋವಿಡ್-19 ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲಾಗುತ್ತಿದೆ. ಹೀಗಾಗಿ ಐಟಿ ಉದ್ಯಮವು, ಸದ್ಯ ದೊಡ್ಡ ಪ್ರಮಾಣದ ನೇಮಕಾತಿ ಕೈಗೊಳ್ಳಲು ಮುಂದಾಗಿದೆ.

ಐಟಿ ವಲಯದಲ್ಲಿ ಇನ್ನು ನಾಲ್ಕೈದು ತಿಂಗಳಲ್ಲಿ ಲಕ್ಷಾಂತರ ಮಂದಿಗೆ ಉದ್ಯೋಗ ಭಾಗ್ಯ ಸಿಗಲಿದೆ.
ಈಗಾಗಲೇ ನಿಧಾನವಾಗಿ ಐಟಿ ಉದ್ಯೋಗಿಗಳ ನೇಮಕಾತಿ ಶುರುವಾಗಿದ್ದು ಮಾರ್ಚ್ 2022 ರೊಳಗೆ ಭಾರತೀಯ ಐಟಿ ಉದ್ಯಮದಲ್ಲಿ 4.5 ಲಕ್ಷ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು UnearthInsight ವರದಿ ಮಾಡಿದೆ.

2022ರ ಹಣಕಾಸು ವರ್ಷದ ಮೊದಲಾರ್ಧಕ್ಕಿಂತ ದ್ವಿತೀಯಾರ್ಧದಲ್ಲಿ ಶೇಕಡಾ 12 ರಷ್ಟು ಹೆಚ್ಚು ಉದ್ಯೋಗಿಗಳು ಐಟಿ ವಲಯಕ್ಕೆ ಸೇರಲಿದ್ದಾರೆ ಎನ್ನಲಾಗಿದೆ. 2022ರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಶೇ.17-19ರಷ್ಟು ಕುಸಿತದೊಂದಿಗೆ 1.5-1.75 ಲಕ್ಷ ಉದ್ಯೋಗಿಗಳ ಸೇರ್ಪಡೆಯಾಗಬಹುದು ಎಂದು ವರದಿ ಅಂದಾಜಿಸಿದೆ. ಇದರಲ್ಲಿ ಅನುಭವಿ ವೃತ್ತಿಪರರ ನೇಮಕಾತಿಯೂ ಸೇರಿರುತ್ತದೆ.

Job Vacancy: ಎಚ್‌ಪಿಸಿಎಲ್‌ನಲ್ಲಿ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಇಲ್ಲಿಯವರೆಗೆ ಸುಮಾರು 2 ಲಕ್ಷ 50,000 ಫ್ರೆಶರ್ಸ್ ಗಳನ್ನು ಭಾರತದ ರಾಷ್ಟ್ರೀಯ ಮತ್ತು ಬಹು ರಾಷ್ಟ್ರೀಯ ಕಂಪನಿಗಳು ಮತ್ತು ಐಟಿ ಸಂಸ್ಥೆಗಳು ನೇಮಕ ಮಾಡಿಕೊಂಡಿವೆ. ಟಿಸಿಎಸ್ 77,000, ಇನ್ಫೋಸಿಸ್ 45,000, ಕಾಗ್ನಿಜೆಂಟ್ 45,000 ಮತ್ತು ಎಚ್ ಸಿಎಲ್ ಟೆಕ್ 22,000 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ. ಇದೀಗ 2022 ರ ಮಾರ್ಚ್ ವರೆಗೆ ಹೊಸದಾಗಿ 4.5 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಐಟಿ ವಲಯ ಮುಂದಾಗಿದೆ.

ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕೌಶಲ್ಯ ಹೆಚ್ಚಿಸುವ ಕಾರ್ಯಕ್ರಮಗಳ ಮೇಲೆ ಪ್ರಮುಖವಾಗಿ ಗಮನಹರಿಸುತ್ತಿವೆ, ION ಕಲಿಕೆಯ ವೇದಿಕೆಯಲ್ಲಿ TCS ಬಹು ಕಲಿಕಾ ಸಾಧನಗಳನ್ನು ನಿಯಂತ್ರಿಸುತ್ತದೆ ಮತ್ತು ತನ್ನ ಜಾಗತಿಕ ಉದ್ಯೋಗಿಗಳನ್ನು ಮರುಕಳಿಸುವ ಉಪಕ್ರಮಗಳನ್ನು ಹೊಂದಿದೆ ಎಂದು ಅದು ಹೇಳಿದೆ. ಅದೇ ರೀತಿ, 90 ಪ್ರತಿಶತ ಇನ್ಫೋಸಿಸ್ ಉದ್ಯೋಗಿಗಳು LEX ಮೂಲಕ ಕಲಿಯುತ್ತಾರೆ, ಇದು ಸಂಸ್ಥೆಗಳ ವಿಕಸನಗೊಳ್ಳುತ್ತಿರುವ ಅಗತ್ಯತೆಗಳನ್ನು ಪೂರೈಸಲು ಅವರಿಗೆ ಮರುಕೌಶಲ್ಯ ಮತ್ತು ಕೌಶಲ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇನ್ನು ಮುಂದೆ, 2030 ರ ವೇಳೆಗೆ IT ಸೇವೆಗಳ ಉದ್ಯಮಕ್ಕೆ ಕ್ಲೌಡ್ ಸೇವೆಗಳ ಆದಾಯದಲ್ಲಿ $80 ಶತಕೋಟಿಯಿಂದ $100 ಶತಕೋಟಿ ಆದಾಯ ಗಳಿಸಲಿದೆ ಎಂದು UnearthInsight ಅಂದಾಜಿಸಿದೆ. 

Jobs in Konkan Railway: ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟಂಟ್‌ ಹುದ್ದೆಗಳಿಗೆ ವಾಕ್ ಇನ್ ಇಂಟರ್‌ವ್ಯೂ

ಒಟ್ಟಾರೆಯಾಗಿ ಕಳೆದೆರೆಡು ವರ್ಷಗಳಿಂದ ಐಟಿ ವಲಯದ ಕೆಲಸದ ನಿರೀಕ್ಷೆಯಲ್ಲಿದ್ದವರ ಬಾಳಲ್ಲಿ ಈಗ ಕೊಂಚ ಆಶಾಕಿರಣ ಮೂಡಿದಂತಾಗಿದೆ. ಲಾಕ್ ಡೌನ್ ನಿಂದಾಗಿ ಐಟಿ ವಲಯ ಕೂಡ ಭಾರೀ ಆಘಾತಗೊಂಡಿತ್ತು.. ಕೋವಿಡ್ ಕಾರಣದಿಂದಾಗಿ ಅದೆಷ್ಟೋ ಉದ್ಯೋಗಿಗಳು ಕೆಲಸ ತೊರೆದಿದ್ದಾರೆ. ಇದೀಗ ಐಟಿ ವಲಯ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದ್ದು, ಮತ್ತಷ್ಟು ಹೊಸ ಉದ್ಯೋಗ ಸೃಷ್ಟಿಸಲು ಮುಂದಾಗಿರೋದು ಸ್ವಾಗತಾರ್ಹ.

Follow Us:
Download App:
  • android
  • ios